" ಕನಸಿನ ಕುದುರೆ ಏರಿ " ಭಾಗ -೧
ಕನಸು ಎಲ್ಲರಿಗೂ ಇರುತ್ತೆ ಆ ಕನಸಲ್ಲಿ ಏನೇನೋ ಇರುತ್ತೆ.. ಕೆಲವು ನನಸಾಗುತ್ತೆ ಇನ್ನು ಕೆಲವು ಹಾಗೆ ಉಳಿಯುತ್ತೆ.. ಮುಗ್ದ ಮನಸು ಕನಸಿನ ಆಸೆಗೆ ಎಡವಿ ಬಿದ್ದು ಬೇರೊಬ್ಬರ ಕನಸಿನಾಸರೆ ಕೇಳಿ ನನಸಾಗಿಸಿಕೊಳ್ಳುವಲ್ಲಿ ಇರುವ ಭಾವನಾಗಳ ಸಂಘರ್ಷವೇ ನನ್ನ "ಕನಸಿನ ಕುದುರೆ ಏರಿ "
ಹದಿ ಹರೆಯದ ವಯಸ್ಸು ಕಳೆದು ಮತಿ ಬೆಳದು ವಿಧಿಯ ಆಣತಿಯಂತೆ ಎಷ್ಟೋ ಕಷ್ಟ ಮತ್ತು ನೋವು -ನಲಿವು , ಏಳು- ಬೀಳು ಕಂಡ ಕುಮಾರ ಇಂದು ಉತ್ತಮ ಮತ್ತು ಉನ್ನತ ಹುದ್ದೆಯಲ್ಲಿ ಇದ್ದಾನೆ ಇವನೆ ನಮ್ಮ ಕಥಾ ನಾಯಕ
ರೂಪ ಸುಂದರ ರೇಷ್ಮೆ ಕೂದಲು ಇದು ನಮ್ಮ ಕನಕಾಳ ಪ್ಲಸ್ ಪಾಯಿಂಟ್.. ನಮ್ ಹೀರೊಯಿನ್ ...
ಅಪ್ಪ ಮಾಡಿಟ್ಟ ಆಸ್ತಿ ಹುಡುಗಿಯರ ಚಪಲ ದುಶ್ಚಟಗಳ ದಾಸ ನಮ್ಮ ಕೀರ್ತಿ.. ನಮ್ಮ ಖಳನಾಯಕ..
ಪ್ರೀತಿ ಯ ಪ್ರತಿರೂಪ ದಂತ ಪಲ್ಲವಿ ಕ್ಯೂಟ್ ಎಂಡ್ ಬಬಲಿ ಗರ್ಲ್ ಕುಮಾರನ ತಂಗಿ (cousin )

ಇದು ಮುಖ್ಯ ಪಾತ್ರ ಪರಿಚಯ...
ಫ್ಲಾಶ್ ಬ್ಯಾಕ್ :
ಹೆಚ್ಚು ಕಡಿಮೆ ಆರರಿಂದ ಏಳು ವರ್ಷದ ಮಕ್ಕಳು ಆಟವಾಡುವ ಸಂದರ್ಭದಲ್ಲಿ ಕುಮಾರ ಮತ್ತು ಕನಕ ಮತ್ತಿತರ ಸ್ನೇಹಿತರು ಇರುವಾಗ ಕುಮಾರ ಮಾಡಿದ ಒಂದು ತಪ್ಪು ಅವರ ಜಿವನದ ದಿಕ್ಕಿನ್ನೆ ಬದಲಿಸಿತು.. ನಮ್ ಕುಮಾರ ಕೊಟ್ಟಿದ್ದು ಒಂದೆ ಮುತ್ತು ಅದು ಆಕಸ್ಮಿಕವಾಗಿ.. ಬೇಕಂತ ಮಾಡಿಲ್ಲ ಅಂತ ಎಷ್ಟೇ ಹೆಳಿದ್ರೂ ಕೆಳದ ಕನಕ ತನಗೆ ಮುಖ ತೋರಿಸಬೇಡ ಅಂದ್ಲು.. ಆವತ್ತೆ ಲಾಸ್ಟ್ ಕುಮಾರ ಮನೆ ಬಿಟ್ಟು ಹೊರಟು ಹೋದ.. ಕನಕ ಮನದಲ್ಲಿ ಕೊಪ ಕುಮಾರನಿಗೆ ಪ್ರೀತಿ ಹೆಚ್ಚಾಗ್ತಾ ಹೋಯಿತು.. ಇತ್ತ ಕುಮಾರನ ತಂದೆ ತಾಯಿ ಮತ್ತು ಮುದ್ದಿನ ತಂಗಿ ( cousin ) ಎಲ್ಲ ಕುಮಾರನ ನೆನಪಲ್ಲಿ ಕಣ್ಣರ ಹೊಳೆ ಹರಿಸಿ ಅವನಿಗೆ ಕಾದಿದ್ದು ಬರೊಬರಿ ಹದಿನಾರು ವರ್ಷ... ಇಷ್ಟರಲ್ಲೆ ತಂದೆ ಹಾಸಿಗೆ ಹಿಡಿದರು ತಾಯಿ ಕೆಲಸ ಮಾಡುವ ಮೂಲಕ ಜೀವನದ ದೋಣಿಯ ಹುಟ್ಟು ಹಿಡಿಯ ಬೆಕಾಯ್ತು.. ಆದ್ರೆ ಈ ಯಾವ ಟೆನ್ಶನ್ ಇಲ್ಲದೆ ರಾಣಿಯಂತೆ ಬೆಳೆದಿದ್ದು ಕನಕ...
ಆದರೆ ೨೨ನೆ ವಯಸ್ಸಿನಲ್ಲಿ ಸಿಕ್ಕಿ ಬಿದ್ದದ್ದು ಕೀರ್ತಿಯ ಮಂತ್ರಜಾಲಕ್ಕೆ..
ಆದರೆ ೨೨ನೆ ವಯಸ್ಸಿನಲ್ಲಿ ಸಿಕ್ಕಿ ಬಿದ್ದದ್ದು ಕೀರ್ತಿಯ ಮಂತ್ರಜಾಲಕ್ಕೆ..
ಹದಿನಾರು ವರ್ಷಗಳ ನಂತರ
ಒಳ್ಳೆ ಉದ್ಯೋಗ ವೆಲ್ ಸೆಟಲ್ ಕುಮಾರ ಈಗ ಪಾರೆನ್ ರಿಟರ್ನ್.. ಎಲ್ಲಾ ಇದ್ರು ಅವನಿಗೆ ಕೊರಗು ಇದೆ ಚಿಕ್ಕ ವಯಸ್ಸಲ್ಲೆ ಬಿಟ್ಟೊದ ತಂದೆ ತಾಯಿ ಹಾಗೂ ಕನಕ.. ನೆನಪು ಹೆಚ್ಚಾಗಿ ಸ್ವಿಸ್ ನಲ್ಲಿ ಕೆಲಸಾ ಮಾಡೊಕಾಗ್ದೆ ವಾಪಸ್ ಬರೋವಂತಾಯ್ತು.. ಇದೆಲ್ಲಾ ಬಿಟ್ಟು ಕುಮಾರನನ್ನ ಕಾಡ್ತಾ ಇರೊ ಇನ್ನೊಂದು ವಿಷಯ ಆಮೇಲೆ ಹೆಳ್ತೀನಿ.. ಪ್ಲೈಟ್ ಲ್ಯಾಂಡ್ ಆದ ಕೂಡಲೆ ಹೊರಟುದ್ದು ಕಡಲಂಚಿಗೆ ... ( ಮುತ್ತು ಕೊಟ್ಟು ಊರು ಬಿಟ್ಟ ಜಾಗಕ್ಕೆ..) ಎಷ್ಟೋ ಕನಸು ಅಷ್ಟೇ ಕೊರಗು.. ಮುತ್ತಿಟ್ಟ ಜಾಗಕ್ಕೆ ಮತ್ತೆ ಬಂದಾಗ ಮತ್ತೊಂದು ಶಾಕ್.. ಪ್ರಿತಿಯ ಕನಸು ಕಟ್ಟಿ ನೂರಾರು ಆಸೆ ಹೊತ್ತು ಬಂದಿದ್ದ ಕುಮಾರನ ಮನಸ್ಸು ಒಡೆದು ಹೋಯಿತು... ತನ್ನ ಪ್ರೀತಿ ಬೇರೊಬ್ಬರ ತೋಳತೆಕ್ಕೆಯಲ್ಲಿ ಕಚಗುಳಿಯಾಡುತ್ತಿರುವುದು ಕಣ್ಣೀರು ಸುರಿಸುವಂತೆ ಮಾಡಿತು.. ಕನಕ ಇದ್ದದ್ದು ಕೀರ್ತಿ ಜೊತೆ...
ಅಪರಿಚಿತನಂತೆ ಪ್ರತೀ ದಿನ ಕನಕಾಳನ್ನು ಹಿಂಬಾಲಿಸಿ ಕೀರ್ತಿಯ ಬಾಡಿಗೆ ಗೂಂಡಾಗಳಿಂದ ಒದೆ ತಿನ್ನುತ್ತಾನೆ.. ಕುಂಟುತ್ತಾ ಎದುರು ನಿಂತು ತನ್ನ ಮಾನಸಿನ ಮಾತು ಹೇಳುತ್ತಾನೆ..ಆಗಲೂ ತಾನು ಯಾರೆಂಬ ಸತ್ಯ ಹೆಳಲ್ಲ.. ಪ್ರತೀ ದಿನ ಪ್ರಪೋಸ್ ಮಾಡ್ತಾ ಒಂದು ತಿಂಗಳು ಕಳೆಯುತ್ತೆ.. ಸಭ್ಯ ನಡವಳಿಕೆಯಿಂದ ಕನಕಾಳ ಸ್ನೆಹ ಸಂಪಾದಿಸಿ ಮೊದಲ ಹೆಜ್ಜೆ ಇಡುತ್ತಾನೆ.. ಒಳ್ಳೆಯ ಸ್ನೇಹಿತರ ಹಾಗೆ ಇಬ್ಬರೂ ಇರುತ್ತಾರೆ.. ಆದ್ರೆ ಈ ಬಾರಿ ಕಿರ್ತಿಯ ದಂಡೋಪಾಯದಿಂದ ಇಬ್ಬರಿಗೂ ಶಾಕ್.. ಏನಿಲ್ಲ ಕುಮಾರ ಯಾರಂತ ಕನಕಾಗೆ ಗೊತ್ತಾಗೋಹಾಗೆ ಮಾಡ್ತನೆ..
ಕನಕಾಗೆ ವಿಷ್ಯ ಗೊತ್ತಗಿದ್ದೇ ಕುಮಾರನಿಗೆ ಕಾಲ್ ಮಾಡಿ ಸಿಗೋಕೆ ಹೇಳ್ತಾಳೆ...
ಕನಕಾಗೆ ವಿಷ್ಯ ಗೊತ್ತಗಿದ್ದೇ ಕುಮಾರನಿಗೆ ಕಾಲ್ ಮಾಡಿ ಸಿಗೋಕೆ ಹೇಳ್ತಾಳೆ...
ಇಬ್ಬರು ಎದುರು ಬದುರು:
ಕನಕಾ : ಯಾಕ್ ಹೀಗ್ ಮಾಡ್ದೆ .. ಒಂದು ಮುತ್ತು ಕೊಟ್ಟು ಹದಿನಾರು ವರ್ಷ ನಾಪತ್ತೆಯಾಗಿ ಮತ್ತೆ ನನ್ ಲೈಪಲ್ಲಿ ಯಾಕ್ ಬಂದೆ ? ಫ್ರೆಂಡ್ ಅಂತ ಹೇಳ್ಕೊಂಡ ನಿನ್ ಚಪಲ ತೀರ್ಸ್ಕೊಳ್ಳೊಕೆ ನಾಚಿಕೆ ಅಗಲ್ವಾ.. ತಪ್ಪು ನಂದೆ ಹಿಂದೆ ಮುಂದೆ ನೋಡದೆ ಸಲಿಗೆ ಕೊಟ್ಟೆ .. ಮನಸಲ್ಲಿ ನೂರಾರು ಆಸೆ ಇಟ್ಟ್ಕೊಂಡ ಪ್ರೀತ್ಸೋಕ್ ಶುರು ಮಾಡ್ದೆ.. ಎಲ್ಲಾ ನಂದೆ ತಪ್ಪು ಸ್ವಿಸ್ ಇಂದ ನೀನ್ ಬಂದಿದ್ ನನ್ ಮೇಲಿನ್ ಆಸೆಗೆ ಅಂತ ನಂಗ ಇವಾಗ್ ಗೊತ್ತಾಯ್ತು ಪ್ಲೀಸ್ ಗೊ ಔಟ್ ಆಪ್ ಮೈ ಲೈಪ್...

ಕುಮಾರ : ನಿನ್ನ ಮನಸಾರೆ ಇಷ್ಟಪಟ್ಟೆ .. ಆದರೆ ನೀನು ಬೇರೆಯವರ ಮೋಸದ ಬಲೆಯಲ್ಲಿ ಇರೋದು ನಾನ್ ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು ವಾಪಸ್ ಹೋಗೊಕು ಆಗದಿರೋ ಪರೀಸ್ತಿತಿಲಿ ನಾನಿದ್ದೆ..ಸೋ
ಕನಕ : ಸಾಕು ನಿಲ್ಸು ನಿನ್ ಪುರಾಣ ಕೆಳ್ಕೊಂಡ್ ಇರೋಕ್ ಟೈಂ ಇಲ್ಲ ನಂಗೆ.. ನನಗೋಸ್ಕರ ಬಂದೆ ಅಂತ ಒಪ್ಕೊಂಡ್ಬಿಡು ಪಾಪ ಅಂತ ಕ್ಷಮಿಸ್ತೀನಿ ಮತ್ತೆ ಯಾವತ್ತೂ ನಿನ್ ಮುಖ ನಂಗೆ ತೋರಿಸ್ಬೇಡ ...
ಕುಮಾರ : ಮುಖ ತೋರಿಸ್ಬೇಡ ಅಂತ ಎಷ್ಟ್ ಸುಲಭವಾಗ್ ಹೇಳ್ಬಿಟ್ಯಲ್ಲ.. ನಿನಗೋಸ್ಕರ ಬಂದೆ ಅಂತ ನೀನ್ ಅಂದ್ಕೋಂಡಿರೋದು ಆದ್ರೆ ಪ್ಯಾಕ್ಟ್ ಬೇರೆ ಇದೆ..ನಾನ್ ಬಂದಿದ್ ನಿನಾಗೋಸ್ಕರ ಅಲ್ಲ.. ನನ್ನನ್ನೇ ನಂಬಿರೋ ಇನ್ನೊಂದ್ ಜೀವಕ್ಕಾಗಿ ಐ ಮೀನ್ ನನ್ ತಂಗಿಗಾಗಿ.....ನೊಂದು ಸಾಯೋಕ್ ಹೊರಟಿದ್ದ ಅವಳಿಗಾಗಿ.. ಅವಳಿಗಾಗಿನೆ ಸ್ವಿಸ್ ಇಂದ ಬಂದಿದ್ದು .. ಅವಳಿಗಾಗಿ ನಿನ್ನ ಟ್ರಾಪ್ ಮಾಡಿದ್ದು.. ಆದ್ರೆ ನಿನ್ ಪ್ರೀತ್ಸಿದ್ದು ಮಾತ್ರ ಸತ್ಯ ..
ಮುಂದುವರಿಯುವುದು..
ಕನಸಿನ ಕುದುರೆ ಏರಿ ಭಾಗ - ೨
ನಾನ್ ಬಂದಿದ್ ನಿನಗೋಸ್ಕರ ಅಲ್ಲ ನನ್ ತಂಗಿಗೋಸ್ಕರ ಅಂತ ಕುಮಾರ ಹೇಳಿದ್ ಕೇಳಿ ಕನಕ ಒಂದ್ ಕ್ಷಣ ಶಾಕ್ ಆದ್ಲು. ಚೇತರಿಸಿಕೊಂಡು ನಿಜವಾಗಿನೂ ನೀನ್ ಬಂದಿದ್ ತಂಗಿಗೋಸ್ಕರನಾ ಅಂದ್ಲು ಅದಕ್ಕೆ ಕುಮಾರ : ದಿನೇ ದಿನೇ ಕಣ್ಣೀರು ಸುರಿಸ್ತಾ ಹುಚ್ಚಾಸ್ಪತ್ರೇಲಿ ಇರೋಕ್ ಕಾರಣ ನೀನು...
ಕನಕ : ನಿನ್ ತಂಗಿ ಲೈಪ್ ನನ್ನಿಂದ ಹಾಳಾಯ್ತಾ ಯಾರ್ ನಿನ್ ತಂಗಿ ?
ಕುಮಾರ : ಅವಳ ಪಾಡಿಗ್ ಅವಳಿದ್ಲು ಪ್ರೀತಿ ಗೀತಿ ಅಂತ ತಲೆ ಕೆಡಿಸಿ ಅವಳು ಎಡವಿ ಬೀಳೋ ಹಾಗೆ ಮಾಡಿದ್ದು ನೀನು..ಯಾವ ಪಲ್ಲವಿ ಬಾಳಿನ ಚರಣ ನೀನ್ ಹಾಳ್ ಮಾಡಿದ್ಯೋ ಅದೆ ಪಲ್ಲವಿ ನನ್ ತಂಗಿ..

ಪ್ಲಾಶ್ ಬ್ಯಾಕ್ :
ಎರಡು ವರ್ಷದ ಹಿಂದೆ
ಎರಡು ವರ್ಷದ ಹಿಂದೆ
ಅದೊಂದು ಸುಂದರ ಮುಂಜಾನೆ.. ಇಬ್ಬನಿಯ ಮುತ್ತಿನ ಹನಿಗಳು ಸೂರ್ಯರಷ್ಮಿಯನ್ನ ಚುಂಬಿಸುವ ಸಮಯ..ಹೂವಿನ ದಳಗಳಿಂದ ಮೆಲ್ಲನೆ ಜಾರುವ ಹಿಮಮಣಿಗಳು..ಕೆಂಪೇರಿದ ಆಗಸದಂಚಿನಲಿ ಮೋಡಗಳ ಮಾರೆಯಿಂದ ಆಗೊಮ್ಮೆ ಈಗೊಮ್ಮೆ ಇಣುಕಿ ನೋಡುವ ಸೂರ್ಯ. ಹಕ್ಕಿಗಳ ಕಲರವಕೆ ದನಿ ಗೂಡಿಸಿ ಹಾಡುತ್ತಾ ಪುಟ್ಟ ದೇವಾಲಯದ ಪೂಜೆಗೆ ಅಣಿ ಮಾಡುತಿರುವ ಪಲ್ಲವಿ ಸಾಕ್ಷಾತ್ ದೆವಕನ್ಯೆಯಂತೆ ಕಾಣ್ತಾ ಇದ್ದಳು... ಅತ್ತಿಂದಿತ್ತ ಇತ್ತಿಂದತ್ತ ಓಡಾಡುವಾಗ ಗೆಜ್ಜೆ ಸದ್ದು ಕರೆದದ್ದು ರಾಜೀವನನ್ನು... ರಾಜೀವ ಕನಕಾಳ ಅಣ್ಣ.. ನೋಡಿದಾಕ್ಷಣ ಪಲ್ಲವಿ ನನ್ನವಳು ಅಂತ ನಿರ್ದರಿಸಿ ಈ ವಿಷಯ ಮೊದಲು ತಿಳಿಸಿದ್ದು ಕನಕಾಳಿಗೆ.. ಕನಕಾ ಪಲ್ಲವಿ ಚಿಕ್ಕಂದಿನಿಂದಲೇ ಪ್ರೆಂಡ್ಸ್ .. ಕನಕ ಮತ್ತು ರಾಜು ಇಬ್ಬರೂ ಸೇರಿ ಪಲ್ಲವಿಯ ಬಾಳಿನಲ್ಲಿ ಪ್ರೇಮ ಚರಣ ಬರೆದರು.. ಮುಗ್ದ ಹುಡುಗಿ ರಾಜು ನಾ ನಂಬಿದ್ಲು.. ಮನೆಯಲ್ಲಿ ವಿಷಯ ಹೇಳಿದ್ಲು.. ಅವಳ ಆಸೆಗೆ ಮನೆಯವರೂ ಬೇಡ ಅನ್ನಲಿಲ್ಲ.. ರಾಜೀವನಿಗೆ ಮನೆಗ್ ಬಂದು ಮಾತಾಡೋಕೆ ಹೆಳಿದ್ರು.. ಆದರೆ ಹೇಳಿದ ದಿನ ರಾಜೀವನಿಗೆ ಬರೋಕೆ ಆಗಿಲ್ಲ.. ಎಲ್ಲರ ದೃಷ್ಟಿ ಲಿ ಮೋಸಗಾರ ಆಗೋದ ರಾಜೀವ..ಆದ್ರೆ ಸತ್ಯ ಬೇರೇನೆ ಇತ್ತು ಅದನ್ನ ತಿಳ್ಕೊಳೊ ಸೌಜನ್ಯ ಇಲ್ಲದೇ ಪಲ್ಲವಿ ಹುಚ್ಚಾಸ್ಪತ್ರೆ ಸೇರಿದ್ಲು..
ಎರಡು ವರ್ಷದ ನಂತರ ( ಕನಕಾ ಮತ್ತು ಕುಮಾರ ಮಾತಾಡ್ತಾ ಇದ್ದಾರೆ .. )
ಕನಕಾ : ಪಲ್ಲವಿ ನನ್ ಜೀವ ಅಂತ ಇದ್ದ ರಾಜೀವ ಅವನು ಮೋಸ ಮಾಡಿಲ್ಲ.. ಆದರೆ ಕೀರ್ತಿ ಮಾಡಿದ್ ಮೋಸ. ಅವನಿಗ್ ಪಲ್ಲವಿ ಮೇಲೆ ಆಸೆ ಇತ್ತು.. ಪಲ್ಲವಿಗೆ ಈ ತರ ಆಗಿರೋದು ನಂಗೆ ಗೊತ್ತಿಲ್ಲ.. ಆದರೆ ಇದಕ್ಕೆಲ್ಲ ಕಾರಣ ಕೀರ್ತಿ..
ಕನಕಾ : ಪಲ್ಲವಿ ನನ್ ಜೀವ ಅಂತ ಇದ್ದ ರಾಜೀವ ಅವನು ಮೋಸ ಮಾಡಿಲ್ಲ.. ಆದರೆ ಕೀರ್ತಿ ಮಾಡಿದ್ ಮೋಸ. ಅವನಿಗ್ ಪಲ್ಲವಿ ಮೇಲೆ ಆಸೆ ಇತ್ತು.. ಪಲ್ಲವಿಗೆ ಈ ತರ ಆಗಿರೋದು ನಂಗೆ ಗೊತ್ತಿಲ್ಲ.. ಆದರೆ ಇದಕ್ಕೆಲ್ಲ ಕಾರಣ ಕೀರ್ತಿ..
ಕುಮಾರ: ಕೀರ್ತಿ ನಾ ಅವನೆನ್ ಮಾಡ್ದಾ ? ನೀನ್ ತಪ್ಪಿಸ್ಕೊಳ್ಳೊಕೆ ಅವನ ಹೆಸರು ಹೆಳ್ತಿದಿಯ ಅಂತ ನಂಗ್ ಗೊತ್ತು ನಿಜಾ ಹೇಳು..
ಕನಕ : ರಾಜೀವ ಮೋಸ ಮಾಡ್ದ ಅಂತ ಹೇಳ್ತಿಯಲ್ಲ ಅವನೀಗ ಎಲ್ ಇದಾನೆ ಗೊತ್ತಾ
ಕುಮಾರ : ಗೊತ್ತಿದ್ರೆ ಸಾಯಿಸ್ ಬಿಡ್ತಿದ್ದೆ
ಕನಕ : ಸತ್ತವರನ್ನ ಮತ್ತೇನ್ ಸಾಯಿಸ್ತೀಯ ?
ಕುಮಾರ : ರಾಜೀವ ಸತ್ತೋದ್ನಾ
ಕನಕ : ಅವನು ಪಲ್ಲವಿನ ನೋಡೋಕೆ ಅಂತಾನೆ ಹೊರಟಿದ್ದ.. ಹೋಗಿ ಮುಟ್ಟಲಿಲ್ಲ ಅದ್ಕೆ ನೀವೆಲ್ಲ ಅವನನ್ನ ಮೋಸಗಾರ ಅಂತಿದೀರ ಆದ್ರೆ ಅವನ ಕೊನೆ ಉಸಿರು ಹೋಗೋವರೆಗೂ ಪಲ್ಲವಿ ಹೆಸರು ಹೇಳ್ತಿದ್ದ
ಕುಮಾರ : ಏನಾಯ್ತು ಅಂತ ಬಿಡಿಸಿ ಹೇಳು
ಕನಕ : ಪಲ್ಲವಿ ಮನೆಗ್ ಬಾ ಅಂತ ಹೇಳಿದ್ಲು ಅದ್ಕೆ ರೆಡಿ ಆಗಿ ರಾಜು ಹೊರಟಿದ್ದ ಆದ್ರೆ ದಾರೀಲಿ ಅವನನ್ ಸಾಯಿಸ್ ಬಿಟ್ರು ( ಅಂತ ಹೇಳಿ ಕುಮಾರನನ್ನ ಅಪ್ಪಿಕೊಳ್ತಾಳೆ )
ಮುಂದಿನ ಭಾಗ ನಿರೀಕ್ಷಿಸಿ
ಕನಸಿನ ಕುದುರೆ ಏರಿ - ೩
ಮಳೆ ಜೀವನದ ದಿಕ್ಕನ್ನೇ ಬದಲಿಸುತ್ತೆ ಅನ್ನೋದು ಎಷ್ಟು ಸತ್ಯ ಗೊತ್ತಿಲ್ಲ ಆದ್ರೆ ಇಲ್ಲಿ ಮಳೆ ಜೀವನವನ್ನ ಬದಲಿಸಿದ್ದು ಮಾತ್ರ ಸತ್ಯ.. ಪ್ರೀತಿಗೆ ಮಳೆಗೆ ಹತ್ತಿರದ ಸಂಬಂಧ.. ಎಷ್ಟೋ ಪ್ರೀತಿನ ಸೇರಿಸಿರೋದು ಮಳೆ.. ಇಲ್ಲಿ ಮಳೆಯ ಆಟ ಸಲ್ಪ ವಿಚಿತ್ರ.. ಇಲ್ಲಿ ವರುಣದೇವನ ಲೆಕ್ಕಾಚಾರದ ಲೆಕ್ಕ ಸಿಗ್ತಿಲ್ಲ...
Flash Back :
ರಾಜೀವ ಪಲ್ಲವಿ ಮನೆಗೆ ಹೊರಟಿದ್ದ.. ನವ ವಸಂತದ ನೆನಪಿನಲ್ಲಿ ಪ್ರೇಮಕಥೆಯ ಪುಟಗಳನ್ನು ತಿದ್ದಿತೀಡಿ ಹೊಸ ಕವಿತೆಯ ಪಲ್ಲವಿ ಬರೆಯಲು ಕನಸಕಾಣುತ ಹೊರಟಿದ್ದ.. ಇತ್ತ ಪಲ್ಲವಿ ವದುವಂತೆ ಸಿಂಗಾರ ಮಾಡಿಕೊಂಡು ರಾಜೀವನಿಗಾಗಿ ಕಾಯುತ್ತಿದ್ದಳು... ಆದರೆ ರಾಜೀವ ಬರಲಿಲ್ಲ.. ರಾಜೀವ ಮೋಸ ಮಾಡಿದ ಅಂತ ತಿಳಿದು ಹುತ್ತಿಯಾದಳು.. ಆದರೆ ರಾಜೀವ ಮೋಸ ಮಾಡಿರಲಿಲ್ಲ.. ಮೋಸ ಮಾಡಿದ್ದು ವಿಧಿ.. ಜಾಲಿಯಾಗಿ ಕಾರಲ್ಲಿ ಬರ್ತಿದ್ದ ರಾಜೀವನಿಗೆ ಎಲ್ಲಿಂದಲೋ ಬಂದ ಲಾರಿ ಗುದ್ದಿ ಕಾರು ಪ್ರಪಾತಕ್ಕೆ ಬಿತ್ತು.. ರಾಜು ಸತ್ತಿದಾನೆ ಅಂದ್ಕೊಂಡು ಹೊರಟ ಕೊಲೆಗಾರರು ನೇರವಾಗಿ ಹೋಗಿದ್ದು ಕನಕಾಳ ಮನೆಗೆ... ಕನಕಾಳ ತಂದೆ ಬಳಿ ಹೋಗಿ ನಿನ್ ಮಗಳನ್ನ ಕೀರ್ತಿಗೆ ಕೊಟ್ಟು ಮದವೆ ಮಾಡಬೇಕು ಇಲ್ಲ ಅಂದ್ರೆ ನಿನ್ ಮಗ ಹೋದ ಜಾಗಕ್ಕೆ ನಿನ್ನನ್ನು ಕಳಿಸ್ತಿವಿ ಅಂತ ಹೇಳಿ ಹೋಗ್ತಾರೆ.. ಆದ್ರೆ ಮಳೆ ಬದುಕನ್ನ ಬದಲಿಸುತ್ತೆ .. ಮಗ ಸತ್ತ ಅಂತ ಅಳೋದ ಅಥವಾ ಮಗಳ ಬಾಳು ಹಾಳಾಗುತ್ತೆ ಅಂತ ಚಿಂತಿಸೋದ ಗೋತ್ತಾಗ್ತಿಲ್ಲ ಕನಕಾಳ ತಂದೆಗೆ.. ಕೀರ್ತಿ ಕನಕಾಳನ್ನ ಮದುವೆಯಾಗೊ ಉದ್ದೇಶ ಮಾತ್ರ ಭಯಂಕರ.. ಮದುವೆಯಾಗಿ ಮೊದಲ ರಾತ್ರಿಯಲ್ಲೆ ಅಕೆಯನ್ನ ಯಕ್ಷಿಣಿ ದೇವತೆಗೆ ಬಲಿ ಕೊಟ್ಟು ಅಪಾರ ನಾಗ ನಿಧಿ ಪಡೆವ ಆಸೆ ಅವನದ್ದು.. ಆದರೆ ಪಕ್ಕಾ ಕಾಮುಕ ಕೀರ್ತಿ ಸ್ಪುರದ್ರೂಪಿ ಕನಕಾಳನ್ನ ಪಡೆಯದೇ ಬಲಿ ಕೊಡ್ತಾನಾ ಅನ್ನೋದು ಯಕ್ಷಪ್ರಶ್ನೆ..
Now :
ಕುಮಾರ : ರಾಜೀವ ಸತ್ತಿರೋದು ಪಲ್ಲವಿಗೆ ಗೊತ್ತಿಲ್ಲ ಗೊತ್ತಾದರೆ ಅವಳು ಉಳಿಯಲ್ಲ ಏನ್ ಮಾಡೋದು ಅರ್ಥ ಆಗ್ತಿಲ್ಲ...
ಕನಕ : ಕೀರ್ತಿ ಜೊತೆನೆ ಇದ್ದು ಅವನನ್ನ ಸಾಯಿಸ್ತಿನಿ .. ಅಣ್ಣನ ಕೊಂದವರನ್ನ ನಾನಂತು ಬಿಡಲ್ಲ..
ಕುಮಾರ : ನಿನ್ನ ಬಗ್ಗೆ ತಪ್ಪಾಗಿ ತಿಳ್ಕೊಂಡಿದ್ದೆ .. ನಿನ್ ಜೊತೆ ನಾನಿರ್ತಿನಿ.. Sorry ಕಣೆ...
ಕನಕ : ನಾನ್ ಪಲ್ಲವಿನ ನೋಡ್ಬೇಕು
ಕುಮಾರ : ಸರಿ ಬಾ
ಅಂತ ಹೇಳಿ ಹುಚ್ಚಾಸ್ಪತ್ರೆಗೆ ಕರ್ಕೊಂಡು ಬರ್ತಾನೆ..
ಜೋರಾಗಿ ಮಳೆ ಸುರಿತಾ ಇರುತ್ತೆ.. ಹುಚ್ಚಾಸ್ಪತ್ರೆಯಿಂದ ಪೋನ್ ಪಲ್ಲವಿ ಪರಿಸ್ಥಿತಿ ಸರಿ ಇಲ್ಲ ಅಂತ.. ಹೋಗಿ ನೋಡೊವಷ್ಟರಲ್ಲಿ ಅಣ್ಣಾ ಅಂತ ಕರೆ ಕುಮಾರ ನನ್ನ ಆಶ್ಚರ್ಯಗೊಳಿಸುತ್ತೆ.. ಪಲ್ಲವಿ ಸರಿ ಹೋದ್ಲು ಅನ್ನೋ ಸಂತೋಷ ಎದ್ದು ಕಾಣ್ತಿತ್ತು ಕುಮಾರನ ಮುಖದಲ್ಲಿ.. ಆದರೆ ವಿಧಿ ಬರೆದದ್ದೆ ಬೇರೆ.. ಮುಖ ಪೂರ್ತಿ ಸುಟ್ಟು ನೆನಪಿನ ಶಕ್ತಿ ಸಂಪೂರ್ಣವಾಗಿ ಕಳೆದುಕೊಂಡ ಒಬ್ಬ ವ್ಯಕ್ತಿಯನ್ನ ತೋರಿಸಿ ಅವನೇ ನನ್ನ ರಾಜೀವ ಅಂತ ಹೇಳೊ ಪಲ್ಲವಿ ಮಾತನ್ನ ನಂಬೊಕೆ ಆಗ್ತಿಲ್ಲ ಕನಕಾ ಕುಮಾರ್ ಗೆ... ಒಮ್ಮೆ ಬೇರಾಗಿಸಿ ಒಮ್ಮೆ ಒಗ್ಗೂಡಿಸಿ ಮೆರೆವ ಆ ವಿಧಿಯ ಆಟಕ್ಕೆ ಸಾತ್ ಕೊಟ್ಟಿದ್ದು ಮಳೆ.. ಯಾವುದೋ ಅಪರಿಚಿತ ವ್ಯಕ್ತಿಯ ಕೈ ಹಿಡಿದು ಎಳೆಯುತ್ತಾ ರಾಜು ಮಾತಾಡೋ ಪ್ಲೀಸ್ ಮಾತಾಡೊ ಅಂತ ಗೋಗರೆಯುವ ಪಲ್ಲವಿ.. ಅಣ್ಣ ಸತ್ತು ಮೂರು ತಿಂಗಳಾಯ್ತು ಇವನು ನನ್ ಅಣ್ಣ ಆಗೋಕೆ ಚಾನ್ಸೇ ಇಲ್ಲ ಅನ್ನೋ ಕನಕ... ಟೋಟಲ್ ಕನ್ಪ್ಯೂಷನ್ ನಲ್ಲಿರೊ ಕುಮಾರ..
ನಿಜವಾಗಿಯೂ ರಾಜಿವ ಬದುಕಿದ್ದಾನಾ ? ಕನಕಾ ಕೀರ್ತಿಯ ಸಂಚಿಗೆ ಬಲಿಯಾಗ್ತಾಳಾ ? ಪಲ್ಲವಿಯ ಪ್ರೀತಿ ಗೆಲ್ಲುತ್ತಾ ? ಕುಮಾರ ಕನಕ ಒಂದಾಗ್ತಾರಾ ? ಯಾರ ಕನಸು ನನಸಾಗುತ್ತೆ ನಿರೀಕ್ಷಿಸಿ...
ಕೀರ್ತಿಗೆ ನಾಗ ನಿಧಿಯ ಕನಸು
ಕುಮಾರನಿಗೆ ಬಾಲ್ಯದ ಪ್ರೀತಿಯ ಕನಸು
ಕನಕಾಳಿಗೆ ಸೇಡಿನ ಕನಸು
ಪಲ್ಲವಿಗೆ ರಾಜೀವನ ಪ್ರೇಮದ ಕನಸು
ಮುಂದುವರಿಯುವುದು...