Tuesday, 7 June 2016
ಕನಸಿನ ಕುದುರೆ ಏರಿ ಭಾಗ ೪ಕನಸಿನ ಮಾತು ನಾವ್ ಕೇಳ್ಬಾರ್ದು ನಮ್ ಮಾತು ಕೇಳೋತರ ಕನಸು ಇರಬೇಕು.. Lets start....
ನಾಗನಿಧಿಯ ಗುಂಗಲ್ಲಿ ಪುಲ್ ಟೈಟ್ ಆಗೋವಷ್ಟು ಕುಡಿದು ಕಾರಲ್ಲಿ ಜೋರಾಗಿ ಹೋಗ್ತಾ ಇದ್ದ ಕೀರ್ತಿ ಎದುರು ಅಚಾನಕ್ ಆಗಿ ವಿಚಿತ್ರ ಘಟನೆಗಳು ನಡೆಯೋಕೆ ಶುರುವಾಯ್ತು.. ಇದ್ದಕ್ಕಿದ್ದಂತೆ ಗಾಳಿ ಮತ್ತು ಸಿಡಿಲು ಏನೋ ವಿಚಿತ್ರವಾದ ಕೂಗು.. ಭಯವಾಗಿ ಇನ್ನೂ ಜೋರಾಗಿ ಕಾರು ಓಡಿಸೋಕೆ ಶುರುಮಾಡ್ದ.. ಕಾರಿನ ಗ್ಲಾಸ್ ಗೆ ಮಂಜು ಕಟ್ಟೋಕೆ ಶುರುವಾಯ್ತು.. ದಾರಿ ಕಾಣದೇ ನೇರ ಪ್ರಪಾತಕ್ಕೆ ಕಾರು ಬಿತ್ತು.. ಅದೃಷ್ಟವಶಾತ್ ಕೀರ್ತಿ ಬಚಾವ್.. ಇದೆಲ್ಲ ಹೇಗಾಯ್ತು ಅನ್ನೋಕೆ ಒಂದು


ಪ್ಲಾಶ್ ಬ್ಯಾಕ್...


ತಂಗಿ ಮಾತನ್ನ ನಂಬಿ ಆಸ್ಪತ್ರೆಯಿಂದ ರಾಜೀವನನ್ನ ಪಲ್ಲವಿಯನ್ನ ಕರೆದುಕೊಂಡು ನ್ಯೂಯಾರ್ಕ್ ಗೆ ಹೊರಡ್ತಾನೆ.. ಕನಕ ಈಗ ಒಂಟಿ.. ನಾಗನಿಧಿಯ ದುರಾಸೆ ಕೀರ್ತಿಯನ್ನ ಆವರಿಸಿಬಿಟ್ಟಿದೆ.. ಅದಕ್ಕಾಗಿ ವಷೀಕರಣ ಮಾಡಿಸಿ ಕನಕಾಳನ್ನ ತನ್ನ ತಾಳಕ್ಕೆ ಕುಣಿಯೋ ಗೊಂಬೆಯನ್ನಾಗಿ ಮಾಡ್ಕೋತಾನೆ.. ಕನಕ ಈಗ ಕೀರ್ತಿಯ ಕೈಗೊಂಬೆ.. ನಾಗ ನಿಧಿ ಪಡೆಯೋಕೆ ಮಹಾ ಶುಕ್ರ ಗ್ರಹಣ ಸಮಯದಲ್ಲಿ ಕನಕಾಳನ್ನ ಮದುವೆಯಾಗಿ ಬಲಿ ಕೊಟ್ಟರೆ ನಾಗದೇವತೆ ವಷೀಕರಣಗೊಂಡು ನಿಧಿಯನ್ನು ಕೊಡುತ್ತಾಳೆ.. ಆದರೆ ಕನಕ ಕನ್ಯೆಯಾಗಿದ್ದರೆ ಮಾತ್ರ.. ಆಕೆ ಕನ್ಯೆ ಅಲ್ಲದಿದ್ದರೆ ಬಲಿಪೀಠದಲ್ಲಿ ಕನಕಾ ಸಾಯಲ್ಲ ಮತ್ತು ಕನಕಾಳನ್ನ ಕೂಡಿದವನಿಗೆ ನಾಗನಿಧಿಯ ಭಾಗ್ಯ ಲಭಿಸುತ್ತೆ... ಆದರೆ ಸಂಜೀವಿನಿ ಬೆಟ್ಟದಿಂದ ಬ್ರಹ್ಮಕಮಲ ತಂದು ಆ ಹೂವಿನ ಮಂಟಪದಲ್ಲಿ ಕನಕಾಳನ್ನ ವರಿಸಬೇಕು ಎಂಬ ಕರಾರಿದೆ.. ಸುಮ್ನೆ ಸಾಯಿಸೋದಕ್ಕಿಂತ ಅನುಭವಿಸೋದೆ ಬೆಟರ್ ಅಂತ ಕೀರ್ತಿ ಹೊರಟಿದ್ದು ಸಂಜೀವಿನಿ ಪರ್ವತಕ್ಕೆ... ಆದರೆ ನಾಗನಿಧಿಯನ್ನ ಕಾಯ್ತಾ ಇರೋದು ಬೃಹತ್ ಗಾತ್ರದ ಗಂಡಬೇರುಂಡ ಪಕ್ಷಿ...


ಗಂಡಭೇರುಂಡ ಬರೋ ರಭಸಕ್ಕೆ ಗಾಳಿ ಜೋರಾಗಿ ಬೀಸೋಕೆ ಶುರುವಾಯ್ತು.‌. ಮೋಡವನ್ನ ರೆಕ್ಕೆಯಿಂದ ತಳ್ಳಿ ಬರೋವಾಗ ಸಿಡಿಲು ಸಿಡಿಯೋಕೆ ಶುರುವಾಯ್ತು.. ಭಯದಿಂದ ಬೆವರಿ ಸೆಕೆ ಅಂತ ಅಂದ್ಕೊಂಡು ac ಜಾಸ್ತಿ ಮಾಡಿದ್ರಿಂದ ಗ್ಲಾಸ್ ಗೆ ಮಂಜು ಕಟ್ಟಿ ರೋಡ್ ಕಾಣಿಸಲಿಲ್ಲ.. ಕಾರು ಪ್ರಪಾತಕ್ಕೆ ಬಿತ್ತು...


ಕೀರ್ತಿ ಅಲ್ಲಿಂದ ಹೇಗೋ ಬದುಕಿ ಬಂದು ಊರು ಸೇರಿಕೊಂಡ.. ಇತ್ತ ನ್ಯೂಯಾರ್ಕ್ ನಲ್ಲಿ ಪಲ್ಲವಿ ಮಿಸ್ಸಿಂಗ್.. ಅದು ಆಕಸ್ಮಿಕ.. ಆದರೆ ರಿಸಲ್ಟ್ ಭಯಂಕರ.. ಉಗ್ರಗಾಮಿಗಳ ಕಪಿಮುಷ್ಟಿಯಲ್ಲಿ ಪಲ್ಲವಿ ... ಒಂದು ಕಡೆ ಪ್ರೀತಿ ಇನ್ನೊಂದು ಕಡೆ ತಂಗಿ ಇಬ್ಬರನ್ನ ಕಳೆದುಕೊಂಡ ಕುಮಾರ ಕಣ್ಣೀರ ಸಾಗರದಲ್ಲೆ ಹರಸಾಹಸ ಪಟ್ಟು ರಾಜೀವನನ್ನ ಸರಿಪಡಿಸ್ತಾನೆ.. ರಾಜೀವ ಸರಿಯಾದ ತಕ್ಷಣ ಪಲ್ಲವಿ ಮಿಸ್ಸಿಂಗ್ ಹಿಂದೆ ಯಾರ ಕೈವಾಡ ಇದೆ ಅಂತ ಗೊತ್ತಾಗುತ್ತೆ.. ಆದರೆ ಬಿಡಿಸಿ ಕರೆತರೋದು ಸುಲಭದ ಮಾತಲ್ಲ.. ಆದರೂ ಇಬ್ಬರೂ ಸೇರಿ ಒಂದು ಮಾಸ್ಟರ್ ಪ್ಲಾನ್ ಮಾಡ್ತಾರೆ..


ಪ್ಲಾನ್ ಪ್ರಕಾರ ಮೊದಲು ಇಂಡಿಯಾ ಗೆ ವಾಪಸ್ ಬರ್ತಾರೆ.. ಮೊದಲು ವಶಿಕರಣದಿಂದ ನರಳುತ್ತಿರೋ ಕನಕಾಳ ರಕ್ಷಣೆ ಮಾಡೋಕೆ ಟ್ರೈ ಮಾಡ್ತಾರೆ.. ಅದರೆ ಆ ಮಂತ್ರವಾದಿ ಮಾಡಿರೋ ವಶೀಕರಣ ಅಷ್ಟು ಸುಲಭಕ್ಕೆ ಬಿಡಿಸುವಂತದಲ್ಲ.. ಅಷ್ಟೆ ಅಲ್ಲ ಬದುಕಿರುವ ರಾಜೀವನ ಮೇಲೂ ವಾಮಾಚಾರದ ಕ್ರೂರ ಶಕ್ತಿಯಾದ ಶಖೋಚಿ ವಿದ್ಯೆ ಪ್ರಯೋಗ ಮಾಡ್ತಾರೆ.. ಶಖೋಚಿ ಕ್ರೂರಿ ಪ್ರತೀ ದಿನ ರಕ್ತ ಕುಡಿಯುತ್ತೆ .‌. ಅಂತಿಮ ಘಟ್ಟ ತಲುಪೋವರೆಗೆ ಅದರ ಪ್ರಯೋಗ ಆಗಿದೆ ಅಂತ ಗೊತ್ತಾಗೋದು ಕಡಿಮೆ.. ಇನ್ನೊಂದು ಇವರ ಪ್ಲಾನ್ ಪ್ರಕಾರ ಪಲ್ಲವಿ ಇಂಡಿಯಾದಲ್ಲಿ ಇದಾಳೆ.. ಆದರೆ ವಾಸ್ತವ ಬೇರೆ.. ಪಲ್ಲವಿ ಇರೋದು ಬ್ಯಾಂಕಾಕ್ ನಲ್ಲಿ..
To be continued...

ಮುಂದಿನ ಭಾಗದಲ್ಲಿ ನಿರೀಕ್ಷಿಸಿ

ಉಗ್ರಗಾಮಿಗಳಿಂದ ಪಲ್ಲವಿ ಪಾರಾಗಿದ್ದು ಹೇಗೆ ?
ಶಕೋಚಿ ಪ್ರಯೋಗ ಆದರೂ ರಾಜೀವ ಬದುಕುತ್ತಾನಾ ?
ಕನಕ ಕೀರ್ತಿಯ ಮಾಸ್ಟರ್ ಪ್ಲಾನ್ ಇಂದ ಬಚಾವ್ ಆಗ್ತಾಳಾ ?
ಕನಸಿನ ಕುದುರೆ ಏರಿ ....
ಕನಸಿನ ಕುದುರೆ ಏರಿ - ೫


ಕನಸು ಹಾದಿ ತಪ್ಪುತ್ತೆ ಆದ್ರೆ ಕನಸು ಕಾಣೋರು ಹಾದಿ ತಪ್ಬಾರ್ದು..


ಪ್ಲಾನ್ ಪ್ರಕಾರ ಇಂಡಿಯಾ ಗೆ ಬಂದ ಕುಮಾರ ರಾಜೀವ ಮೊದಲು ಹೋಗಿದ್ದು ಜೂಜುಕೋರರ ಸ್ವರ್ಗ ಗೋವಾ ಕ್ಕೆ.. Casino ಬೋಟೊಂದರ ಮಾಲೀಕ ಕುಮಾರನಿಗೆ ಪರಿಚಯ.. ಅಲ್ಲಿ ಹೋದಾಕ್ಷಣ ರಾಜ ಮಾರ್ಯಾದೆಯ ಸ್ವಾಗತ ಬೋಟೊಳಗೆ ಕಾಲಿಡುತ್ತಿದ್ದಂತೆ ಸ್ವರ್ಗದಂತ ಸೌಂದರ್ಯಕಂಡು casual ಆಗಿ ಬೋಟ್ ನ ರೇಟ್ ಕೇಳ್ತಾರೆ.. (ರಘು ಬೋಟ್ ಓನರ್.) ಅದಕ್ಕೆ ರಘು 32 ಕೋಟಿ ಅಂತಾನೆ.. ಇಬ್ಬರು ಮುಖಮುಖ ನೋಡಿಕೊಳ್ತಾರೆ..

ಬಂದ ವಿಷಯ ಹೇಳ್ತಾರೆ.. ಅದಕ್ಕೆ ರಘು ಉತ್ತರ ಶಾಕಿಂಗ್ ಆಗಿರುತ್ತೆ.. ರಘು ಉತ್ತರ ಹೀಗಿತ್ತು : 22 casino boat ಗಳಿಗೆ ಮಾಲೀಕರಾಗಿದ್ದದ್ದು ಕನಕಾಳ ತಂದೆ ಐ ಮೀನ್ ರಾಜೀವನ ತಂದೆ ಜಯರಾಜ್ ಅದಕ್ಕೆ ವಿಷಕಂಟ ಕುಲಕರ್ಣಿ ಅಲಿಯಾಸ್ V K partner .. ದಿನದ ಸಂಪಾದನೆ 13 ಕೋಟಿ.. ಎಲ್ಲಾ pure ಬ್ಲಾಕ್ ಮನಿ..

ವಿಷಕಂಟನ ಮಗ ಚಕ್ರಿ ಪಲ್ಲವಿನ ಇಷ್ಟಪಟ್ಟಿದ್ದ ಆದರೆ ರಾಜೀವ ಅವನ ದಾರಿಗೆ ಮುಳ್ಳಾಗಿದ್ದ ಅದಕ್ಕೆ ಅವನನ್ನ ಸಾಯಿಸಿ ಕೀರ್ತಿ ಮೇಲೆ ಆಪಾದನೆ ಹೊರಿಸಿದ್ದ ರಾಜೀವ ಬದುಕಿರೋದು ಗೊತ್ತಾಗಿ ಈಗ ಪಲ್ಲವೀನ ಕಿಡ್ನಾಪ್ ಮಾಡಿರೋದು ಅಂತ ರಘು ಹೇಳಿದ್ ಕೇಳಿ ಇಬ್ಬರು ಶಾಕ್ ಆಗ್ತಾರೆ.. ಈಗ ಪಲ್ಲವಿ ಎಲ್ಲಿ ಅಂತ ಕೇಳ್ತಾರೆ ಅದಕ್ಕೆ ರಘು ಚಕ್ರಿಯ right hand ನಾಗನ್ನ ಕೇಳಿದ್ರೆ ಗೊತ್ತಾಗುತ್ತೆ ಅಂತ ಹೇಳಿ ಕರಕೊಂಡು ಹೋಗ್ತಾನೆ..


ಅದು ಕಿಕ್ ಬಾಕ್ಸಿಂಗ್ ಅಡ್ಡ.. ಮನುಷ್ಯರಿಗೆ ಬೆಲೆ ಇಲ್ಲ ಹೊಡಿ ಬಡಿ ಹಣ ಪಡಿ ಅನ್ನೋ ಮೂಲಮಂತ್ರ ಜಪಿಸೋ ಜಾಗ.. ನಾಗ marshal art specialist.. ಆದ್ರೆ ಅವರು ಕಲಿತಿರೋ ವಿದ್ಯೆಗಿಂತ ನಮ್ ಕುಮಾರನ ಎಮೋಶನ್ ಗೆ ಹೆಚ್ಚು ಪವರ್ 5 ನಿಮಿಷದಲ್ಲಿ ಇಡಿ ಬಾಕ್ಸಿಂಗ್ ಕ್ಲಬ್ ನ ಎಲ್ಲ ಫಂಟರು ಕಾಲಡಿಯಲ್ಲಿ.. ಒಂದು ಕೈ ಇಂದ ನಾಗನ ಕತ್ತು ಹಿಡಿದು ಮೇಲೆತ್ತಿ ಎಲ್ಲೋ ನನ್ ತಂಗಿ ಅಂದಾಗ ನಾಗ ಹೇಳ್ತಾನೆ : ನಾವ್ ಪ್ಲಾನ್ ಮಾಡಿದ್ ಹೌದು ಬಟ್ ಕರೀಂ ಖಾನ್ ಕಡೆಯವರು ನಮ್ ಹುಡುಗರನ್ನ ಹೊಡದು ಆ ಹುಡ್ಗಿನ ಎತ್ಕೊಂಡ್ ಹೋದ್ರು ಅಂದಾಗ ಕುಮಾರ ಇವಾಗ್ ಎಲ್ಲಿ ಇದಾಳೆ ನನ್ ತಂಗಿ ಅಂತ ಕೇಳ್ತಾನೆ.. ಅದಕ್ಕೆ ಬಂದ ಉತ್ತರ ಅಫ್ಘಾನಿಸ್ತಾನ... ಹೊರಡೋಣ ಅನ್ನೊವಷ್ಟರಲ್ಲಿ ರಾಜೀವ ರಕ್ತ ವಾಂತಿ ಮಾಡ್ಕೊಂಡು ಬಿಳ್ತಾನೆ.. ಇದನ್ನ ನೋಡಿ ರಘು ಇದು ಶಕೋಚಿ ನೀನ್ ಹೋಗಿ ಪಲ್ಲವೀನ ಕಾಪಾಡು ನಾನ್ ಇವನನ್ನ ನೋಡ್ಕೋತೀನಿ ಅಂತಾನೆ.. ಕುಮಾರ ಕರೀಂ ಖಾನ್ ಅಡ್ಡಕ್ಕೆ ಹೋಗಲ್ಲ ಅದರ ಬದಲು ಬ್ಯಾಂಕಾಕ್ ಹೋಗ್ತಾನೆ.. ನಾಗ ಮಾಡಿರೋ ಪ್ಲಾನ್ ಕುಮಾರನಿಗೆ ಡೌಟ್ ಬಂದಿರುತ್ತೆ ಅದಕ್ಕೆ ನೇರವಾಗಿ ಚಕ್ರಿ ಇರೋ ಜಾಗಕ್ಕೆ ಹೊರಡ್ತಾನೆ..


ಇತ್ತ ಮಹಾ ಶುಕ್ರ ಗ್ರಹಣ ಹತ್ತಿರ ಬರ್ತಾ ಇದೆ.. ಕೀರ್ತಿಗೆ ಕನಕಾ ಕೈ ಗೊಂಬೆಯಾಗಿರೋದ್ರಿಂದ ಆಗೊಮ್ಮೆ ಈಗೊಮ್ಮೆ ಮೈಕೈ ಸವರುತ್ತಾ ತನ್ನ ಕ್ಷಣಿಕ ಚಪಲ ತೀರಿಸಿ ಕೊಳ್ತಾ ಇರ್ತಾನೆ.. ಹಾಗೆ ಬ್ರಹ್ಮ ಕಮಲ ತರೋಕೆ 4೦೦ ಜನರ ತಂಡವನ್ನ ಕಳಿಸಿದ್ದಾನೆ.. ಈ ಭಾರಿ ಖಳನಾಯಕರ ಮೇಲುಗೈ.. ಬ್ರಹ್ಮ ಕಮಲ ಕೂಗಳತೆಯ ದೂರದಲ್ಲಿ .. ಇನ್ನೊಂದೆಡೆ ಉಗ್ರಗಾಮಿಗಳ ಕೈವಷ ವಾಗಿದ್ದ ಪಲ್ಲವಿ ಚಕ್ರಿಯ ಬುಟ್ಟಿಗೆ.. ಉಗ್ರಗಾಮಿ ಕರಿಂ ಖಾನ್ ಇನ್ನಿಲ್ಲ.. ಕರಿಂ ಖಾನ್ ಅಂಡರ್ ಕವರ್ ಆಪಿಸರ್ ಶರತ್ ನಿಂದ ಸತ್ತಿದಾನೆ.. 300 ಜನರ ಚಕ್ರವ್ಯೂಹ ಭೆದಿಸಿ ಕರೀಂ ಭಾಯ್ ನನ್ನ ಸಾಯಿಸೋದು ಸಣ್ಣ ವಿಷಯ ಅಲ್ಲ.. ಆದರೆ 88 ಎನ್ಕೌಂಟರ್ ಮಾಡಿರೋ ಶರತ್ ಗೆ ಇದು ನೀರು ಕುಡಿದಷ್ಟೇ ಸುಲಭ.. ಪಲ್ಲವಿ ನ ಕರಿಂ ನಿಂದ ಬಿಡಿಸಿ ಶರತ್ ಕರೆತರ್ತಾನೆ.. ಆದರೆ ‌‌...


ಪಲ್ಲವಿ ಇರೋದು ಚಕ್ರಿಯ ಬಳಿ..
ಬ್ಯಾಂಕಾಕ್ ತೆರಳಿದ್ದ ಕುಮಾರನ ಎದುರು ಗನ್ ಹಿಡಿದಿರುವ ಶರತ್..
ಸಾವಿನೊಂದಿಗೆ ಆಟವಾಡ್ತಿರೋ ರಾಜೀವ..
ನಾಗ ನಿಧಿ ಮತ್ತು ಕನಕಾಳ ಗುಂಗಿನಲ್ಲಿ ಕೀರ್ತಿ
ಕೀರ್ತಿಯ ಕೈಗೊಂಬೆಯಾಗಿ ಕನಕ


ಕನಸಿಗು ಒಂದು ಮಿತಿ ಇದೆ ಕನಸು ಅದೇ ನನಸಾದರೆ ಚಂದ.. ಅದನ್ನ ನನಸಾಗಿಸಿಕೋಳ್ಳೊಕೆ ಪ್ರಯತ್ನಿಸಿದ್ರೆ ವಿಧಿಯ ಮೇಲೆ ಸವಾರಿ ಮಾಡಿದಂತೆ..


ಸದ್ಯಕ್ಕೆ ವಿಧಿಗೆ ಸೆಡ್ಡು ಹೊಡೆಯುತ್ತಿರುವ ಕೀರ್ತಿ ಚಕ್ರಿ ಆಟಕ್ಕೆ ವಿಧಿಯ ಉತ್ತರ ಮುಂದಿನ ಭಾಗದಲ್ಲಿ...


ಈ ಐದು ಭಾಗಗಳಿಗೆ ಪ್ರತಿಕ್ರಿಯಿಸಿ ಬರೆಯುವ ಆಸೆ ಹೆಚ್ಚಿಸಿದ ಎಲ್ಲರಿಗೂ ಧನ್ಯವಾದಗಳು..
ಇನ್ನೂ ಹೆಚ್ಚಿನ ಪ್ರೋತ್ಸಾಹದ ನಿರೀಕ್ಷೆಯಲ್ಲಿ...
ಕನಸಿನ ಕುದುರೆ ಏರಿ...Wednesday, 11 May 2016

ಕನಸಿನ ಕುದುರೆ ಏರಿ

" ಕನಸಿನ ಕುದುರೆ ಏರಿ " ಭಾಗ -೧
ಕನಸು ಎಲ್ಲರಿಗೂ ಇರುತ್ತೆ ಆ ಕನಸಲ್ಲಿ ಏನೇನೋ ಇರುತ್ತೆ.. ಕೆಲವು ನನಸಾಗುತ್ತೆ ಇನ್ನು ಕೆಲವು ಹಾಗೆ ಉಳಿಯುತ್ತೆ.. ಮುಗ್ದ ಮನಸು ಕನಸಿನ ಆಸೆಗೆ ಎಡವಿ ಬಿದ್ದು ಬೇರೊಬ್ಬರ ಕನಸಿನಾಸರೆ ಕೇಳಿ ನನಸಾಗಿಸಿಕೊಳ್ಳುವಲ್ಲಿ ಇರುವ ಭಾವನಾಗಳ ಸಂಘರ್ಷವೇ ನನ್ನ "ಕನಸಿನ ಕುದುರೆ ಏರಿ "
ಹದಿ ಹರೆಯದ ವಯಸ್ಸು ಕಳೆದು ಮತಿ ಬೆಳದು ವಿಧಿಯ ಆಣತಿಯಂತೆ ಎಷ್ಟೋ ಕಷ್ಟ ಮತ್ತು ನೋವು -ನಲಿವು , ಏಳು- ಬೀಳು ಕಂಡ ಕುಮಾರ ಇಂದು ಉತ್ತಮ ಮತ್ತು ಉನ್ನತ ಹುದ್ದೆಯಲ್ಲಿ ಇದ್ದಾನೆ ಇವನೆ ನಮ್ಮ ಕಥಾ ನಾಯಕ
ರೂಪ ಸುಂದರ ರೇಷ್ಮೆ ಕೂದಲು ಇದು ನಮ್ಮ ಕನಕಾಳ ಪ್ಲಸ್ ಪಾಯಿಂಟ್.. ನಮ್ ಹೀರೊಯಿನ್ ...
ಅಪ್ಪ ಮಾಡಿಟ್ಟ ಆಸ್ತಿ ಹುಡುಗಿಯರ ಚಪಲ ದುಶ್ಚಟಗಳ ದಾಸ ನಮ್ಮ ಕೀರ್ತಿ.. ನಮ್ಮ ಖಳನಾಯಕ..
ಪ್ರೀತಿ ಯ ಪ್ರತಿರೂಪ ದಂತ ಪಲ್ಲವಿ ಕ್ಯೂಟ್ ಎಂಡ್ ಬಬಲಿ ಗರ್ಲ್ ಕುಮಾರನ ತಂಗಿ (cousin )
ಇದು ಮುಖ್ಯ ಪಾತ್ರ ಪರಿಚಯ...
ಫ್ಲಾಶ್ ಬ್ಯಾಕ್ :
ಹೆಚ್ಚು ಕಡಿಮೆ ಆರರಿಂದ ಏಳು ವರ್ಷದ ಮಕ್ಕಳು ಆಟವಾಡುವ ಸಂದರ್ಭದಲ್ಲಿ ಕುಮಾರ ಮತ್ತು ಕನಕ ಮತ್ತಿತರ ಸ್ನೇಹಿತರು ಇರುವಾಗ ಕುಮಾರ ಮಾಡಿದ ಒಂದು ತಪ್ಪು ಅವರ ಜಿವನದ ದಿಕ್ಕಿನ್ನೆ ಬದಲಿಸಿತು.. ನಮ್ ಕುಮಾರ ಕೊಟ್ಟಿದ್ದು ಒಂದೆ ಮುತ್ತು ಅದು ಆಕಸ್ಮಿಕವಾಗಿ.. ಬೇಕಂತ ಮಾಡಿಲ್ಲ ಅಂತ ಎಷ್ಟೇ ಹೆಳಿದ್ರೂ ಕೆಳದ ಕನಕ ತನಗೆ ಮುಖ ತೋರಿಸಬೇಡ ಅಂದ್ಲು.. ಆವತ್ತೆ ಲಾಸ್ಟ್ ಕುಮಾರ ಮನೆ ಬಿಟ್ಟು ಹೊರಟು ಹೋದ.. ಕನಕ ಮನದಲ್ಲಿ ಕೊಪ ಕುಮಾರನಿಗೆ ಪ್ರೀತಿ ಹೆಚ್ಚಾಗ್ತಾ ಹೋಯಿತು.. ಇತ್ತ ಕುಮಾರನ ತಂದೆ ತಾಯಿ ಮತ್ತು ಮುದ್ದಿನ ತಂಗಿ ( cousin ) ಎಲ್ಲ ಕುಮಾರನ ನೆನಪಲ್ಲಿ ಕಣ್ಣರ ಹೊಳೆ ಹರಿಸಿ ಅವನಿಗೆ ಕಾದಿದ್ದು ಬರೊಬರಿ ಹದಿನಾರು ವರ್ಷ... ಇಷ್ಟರಲ್ಲೆ ತಂದೆ ಹಾಸಿಗೆ ಹಿಡಿದರು ತಾಯಿ ಕೆಲಸ ಮಾಡುವ ಮೂಲಕ ಜೀವನದ ದೋಣಿಯ ಹುಟ್ಟು ಹಿಡಿಯ ಬೆಕಾಯ್ತು.. ಆದ್ರೆ ಈ ಯಾವ ಟೆನ್ಶನ್ ಇಲ್ಲದೆ ರಾಣಿಯಂತೆ ಬೆಳೆದಿದ್ದು ಕನಕ...
ಆದರೆ ೨೨ನೆ ವಯಸ್ಸಿನಲ್ಲಿ ಸಿಕ್ಕಿ ಬಿದ್ದದ್ದು ಕೀರ್ತಿಯ ಮಂತ್ರಜಾಲಕ್ಕೆ..
ಹದಿನಾರು ವರ್ಷಗಳ ನಂತರ
ಒಳ್ಳೆ ಉದ್ಯೋಗ ವೆಲ್ ಸೆಟಲ್ ಕುಮಾರ ಈಗ ಪಾರೆನ್ ರಿಟರ್ನ್.. ಎಲ್ಲಾ ಇದ್ರು ಅವನಿಗೆ ಕೊರಗು ಇದೆ ಚಿಕ್ಕ ವಯಸ್ಸಲ್ಲೆ ಬಿಟ್ಟೊದ ತಂದೆ ತಾಯಿ ಹಾಗೂ ಕನಕ.. ನೆನಪು ಹೆಚ್ಚಾಗಿ ಸ್ವಿಸ್ ನಲ್ಲಿ ಕೆಲಸಾ ಮಾಡೊಕಾಗ್ದೆ ವಾಪಸ್ ಬರೋವಂತಾಯ್ತು.. ಇದೆಲ್ಲಾ ಬಿಟ್ಟು ಕುಮಾರನನ್ನ ಕಾಡ್ತಾ ಇರೊ ಇನ್ನೊಂದು ವಿಷಯ ಆಮೇಲೆ ಹೆಳ್ತೀನಿ.. ಪ್ಲೈಟ್ ಲ್ಯಾಂಡ್ ಆದ ಕೂಡಲೆ ಹೊರಟುದ್ದು ಕಡಲಂಚಿಗೆ ... ( ಮುತ್ತು ಕೊಟ್ಟು ಊರು ಬಿಟ್ಟ ಜಾಗಕ್ಕೆ..) ಎಷ್ಟೋ ಕನಸು ಅಷ್ಟೇ ಕೊರಗು.. ಮುತ್ತಿಟ್ಟ ಜಾಗಕ್ಕೆ ಮತ್ತೆ ಬಂದಾಗ ಮತ್ತೊಂದು ಶಾಕ್.. ಪ್ರಿತಿಯ ಕನಸು ಕಟ್ಟಿ ನೂರಾರು ಆಸೆ ಹೊತ್ತು ಬಂದಿದ್ದ ಕುಮಾರನ ಮನಸ್ಸು ಒಡೆದು ಹೋಯಿತು... ತನ್ನ ಪ್ರೀತಿ ಬೇರೊಬ್ಬರ ತೋಳತೆಕ್ಕೆಯಲ್ಲಿ ಕಚಗುಳಿಯಾಡುತ್ತಿರುವುದು ಕಣ್ಣೀರು ಸುರಿಸುವಂತೆ ಮಾಡಿತು.. ಕನಕ ಇದ್ದದ್ದು ಕೀರ್ತಿ ಜೊತೆ...
ಅಪರಿಚಿತನಂತೆ ಪ್ರತೀ ದಿನ ಕನಕಾಳನ್ನು ಹಿಂಬಾಲಿಸಿ ಕೀರ್ತಿಯ ಬಾಡಿಗೆ ಗೂಂಡಾಗಳಿಂದ ಒದೆ ತಿನ್ನುತ್ತಾನೆ.. ಕುಂಟುತ್ತಾ ಎದುರು ನಿಂತು ತನ್ನ ಮಾನಸಿನ ಮಾತು ಹೇಳುತ್ತಾನೆ..ಆಗಲೂ ತಾನು ಯಾರೆಂಬ ಸತ್ಯ ಹೆಳಲ್ಲ.. ಪ್ರತೀ ದಿನ ಪ್ರಪೋಸ್ ಮಾಡ್ತಾ ಒಂದು ತಿಂಗಳು ಕಳೆಯುತ್ತೆ.. ಸಭ್ಯ ನಡವಳಿಕೆಯಿಂದ ಕನಕಾಳ ಸ್ನೆಹ ಸಂಪಾದಿಸಿ ಮೊದಲ ಹೆಜ್ಜೆ ಇಡುತ್ತಾನೆ.. ಒಳ್ಳೆಯ ಸ್ನೇಹಿತರ ಹಾಗೆ ಇಬ್ಬರೂ ಇರುತ್ತಾರೆ.. ಆದ್ರೆ ಈ ಬಾರಿ ಕಿರ್ತಿಯ ದಂಡೋಪಾಯದಿಂದ ಇಬ್ಬರಿಗೂ ಶಾಕ್.. ಏನಿಲ್ಲ ಕುಮಾರ ಯಾರಂತ ಕನಕಾಗೆ ಗೊತ್ತಾಗೋಹಾಗೆ ಮಾಡ್ತನೆ..
ಕನಕಾಗೆ ವಿಷ್ಯ ಗೊತ್ತಗಿದ್ದೇ ಕುಮಾರನಿಗೆ ಕಾಲ್ ಮಾಡಿ ಸಿಗೋಕೆ ಹೇಳ್ತಾಳೆ...
ಇಬ್ಬರು ಎದುರು ಬದುರು:
ಕನಕಾ : ಯಾಕ್ ಹೀಗ್ ಮಾಡ್ದೆ .. ಒಂದು ಮುತ್ತು ಕೊಟ್ಟು ಹದಿನಾರು ವರ್ಷ ನಾಪತ್ತೆಯಾಗಿ ಮತ್ತೆ ನನ್ ಲೈಪಲ್ಲಿ ಯಾಕ್ ಬಂದೆ ? ಫ್ರೆಂಡ್ ಅಂತ ಹೇಳ್ಕೊಂಡ ನಿನ್ ಚಪಲ ತೀರ್ಸ್ಕೊಳ್ಳೊಕೆ ನಾಚಿಕೆ ಅಗಲ್ವಾ.. ತಪ್ಪು ನಂದೆ ಹಿಂದೆ ಮುಂದೆ ನೋಡದೆ ಸಲಿಗೆ ಕೊಟ್ಟೆ .. ಮನಸಲ್ಲಿ ನೂರಾರು ಆಸೆ ಇಟ್ಟ್ಕೊಂಡ ಪ್ರೀತ್ಸೋಕ್ ಶುರು ಮಾಡ್ದೆ.. ಎಲ್ಲಾ ನಂದೆ ತಪ್ಪು ಸ್ವಿಸ್ ಇಂದ ನೀನ್ ಬಂದಿದ್ ನನ್ ಮೇಲಿನ್ ಆಸೆಗೆ ಅಂತ ನಂಗ ಇವಾಗ್ ಗೊತ್ತಾಯ್ತು ಪ್ಲೀಸ್ ಗೊ ಔಟ್ ಆಪ್ ಮೈ ಲೈಪ್...
ಕುಮಾರ : ನಿನ್ನ ಮನಸಾರೆ ಇಷ್ಟಪಟ್ಟೆ .. ಆದರೆ ನೀನು ಬೇರೆಯವರ ಮೋಸದ ಬಲೆಯಲ್ಲಿ ಇರೋದು ನಾನ್ ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು ವಾಪಸ್ ಹೋಗೊಕು ಆಗದಿರೋ ಪರೀಸ್ತಿತಿಲಿ ನಾನಿದ್ದೆ..ಸೋ
ಕನಕ : ಸಾಕು ನಿಲ್ಸು ನಿನ್ ಪುರಾಣ ಕೆಳ್ಕೊಂಡ್ ಇರೋಕ್ ಟೈಂ ಇಲ್ಲ ನಂಗೆ.. ನನಗೋಸ್ಕರ ಬಂದೆ ಅಂತ ಒಪ್ಕೊಂಡ್ಬಿಡು ಪಾಪ ಅಂತ ಕ್ಷಮಿಸ್ತೀನಿ ಮತ್ತೆ ಯಾವತ್ತೂ ನಿನ್ ಮುಖ ನಂಗೆ ತೋರಿಸ್ಬೇಡ ...
ಕುಮಾರ : ಮುಖ ತೋರಿಸ್ಬೇಡ ಅಂತ ಎಷ್ಟ್ ಸುಲಭವಾಗ್ ಹೇಳ್ಬಿಟ್ಯಲ್ಲ.. ನಿನಗೋಸ್ಕರ ಬಂದೆ ಅಂತ ನೀನ್ ಅಂದ್ಕೋಂಡಿರೋದು ಆದ್ರೆ ಪ್ಯಾಕ್ಟ್ ಬೇರೆ ಇದೆ..ನಾನ್ ಬಂದಿದ್ ನಿನಾಗೋಸ್ಕರ ಅಲ್ಲ.. ನನ್ನನ್ನೇ ನಂಬಿರೋ ಇನ್ನೊಂದ್ ಜೀವಕ್ಕಾಗಿ ಐ ಮೀನ್ ನನ್ ತಂಗಿಗಾಗಿ.....ನೊಂದು ಸಾಯೋಕ್ ಹೊರಟಿದ್ದ ಅವಳಿಗಾಗಿ.. ಅವಳಿಗಾಗಿನೆ ಸ್ವಿಸ್ ಇಂದ ಬಂದಿದ್ದು .. ಅವಳಿಗಾಗಿ ನಿನ್ನ ಟ್ರಾಪ್ ಮಾಡಿದ್ದು.. ಆದ್ರೆ ನಿನ್ ಪ್ರೀತ್ಸಿದ್ದು ಮಾತ್ರ ಸತ್ಯ ..
ಮುಂದುವರಿಯುವುದು..

ಕನಸಿನ ಕುದುರೆ ಏರಿ ಭಾಗ - ೨
ನಾನ್ ಬಂದಿದ್ ನಿನಗೋಸ್ಕರ ಅಲ್ಲ ನನ್ ತಂಗಿಗೋಸ್ಕರ ಅಂತ ಕುಮಾರ ಹೇಳಿದ್ ಕೇಳಿ ಕನಕ ಒಂದ್ ಕ್ಷಣ ಶಾಕ್ ಆದ್ಲು. ಚೇತರಿಸಿಕೊಂಡು ನಿಜವಾಗಿನೂ ನೀನ್ ಬಂದಿದ್ ತಂಗಿಗೋಸ್ಕರನಾ ಅಂದ್ಲು ಅದಕ್ಕೆ ಕುಮಾರ : ದಿನೇ ದಿನೇ ಕಣ್ಣೀರು ಸುರಿಸ್ತಾ ಹುಚ್ಚಾಸ್ಪತ್ರೇಲಿ ಇರೋಕ್ ಕಾರಣ ನೀನು...
ಕನಕ : ನಿನ್ ತಂಗಿ ಲೈಪ್ ನನ್ನಿಂದ ಹಾಳಾಯ್ತಾ ಯಾರ್ ನಿನ್ ತಂಗಿ ?
ಕುಮಾರ : ಅವಳ ಪಾಡಿಗ್ ಅವಳಿದ್ಲು ಪ್ರೀತಿ ಗೀತಿ ಅಂತ ತಲೆ ಕೆಡಿಸಿ ಅವಳು ಎಡವಿ ಬೀಳೋ ಹಾಗೆ ಮಾಡಿದ್ದು ನೀನು..ಯಾವ ಪಲ್ಲವಿ ಬಾಳಿನ ಚರಣ ನೀನ್ ಹಾಳ್ ಮಾಡಿದ್ಯೋ ಅದೆ ಪಲ್ಲವಿ ನನ್ ತಂಗಿ..
ಪ್ಲಾಶ್ ಬ್ಯಾಕ್ :
ಎರಡು ವರ್ಷದ ಹಿಂದೆ
ಅದೊಂದು ಸುಂದರ ಮುಂಜಾನೆ.. ಇಬ್ಬನಿಯ ಮುತ್ತಿನ ಹನಿಗಳು ಸೂರ್ಯರಷ್ಮಿಯನ್ನ ಚುಂಬಿಸುವ ಸಮಯ..ಹೂವಿನ ದಳಗಳಿಂದ ಮೆಲ್ಲನೆ ಜಾರುವ ಹಿಮಮಣಿಗಳು..ಕೆಂಪೇರಿದ ಆಗಸದಂಚಿನಲಿ ಮೋಡಗಳ ಮಾರೆಯಿಂದ ಆಗೊಮ್ಮೆ ಈಗೊಮ್ಮೆ ಇಣುಕಿ ನೋಡುವ ಸೂರ್ಯ.‌ ಹಕ್ಕಿಗಳ ಕಲರವಕೆ ದನಿ ಗೂಡಿಸಿ ಹಾಡುತ್ತಾ ಪುಟ್ಟ ದೇವಾಲಯದ ಪೂಜೆಗೆ ಅಣಿ ಮಾಡುತಿರುವ ಪಲ್ಲವಿ ಸಾಕ್ಷಾತ್ ದೆವಕನ್ಯೆಯಂತೆ ಕಾಣ್ತಾ ಇದ್ದಳು... ಅತ್ತಿಂದಿತ್ತ ಇತ್ತಿಂದತ್ತ ಓಡಾಡುವಾಗ ಗೆಜ್ಜೆ ಸದ್ದು ಕರೆದದ್ದು ರಾಜೀವನನ್ನು... ರಾಜೀವ ಕನಕಾಳ ಅಣ್ಣ.. ನೋಡಿದಾಕ್ಷಣ ಪಲ್ಲವಿ ನನ್ನವಳು ಅಂತ ನಿರ್ದರಿಸಿ ಈ ವಿಷಯ ಮೊದಲು ತಿಳಿಸಿದ್ದು ಕನಕಾಳಿಗೆ.. ಕನಕಾ ಪಲ್ಲವಿ ಚಿಕ್ಕಂದಿನಿಂದಲೇ ಪ್ರೆಂಡ್ಸ್ .. ಕನಕ ಮತ್ತು ರಾಜು ಇಬ್ಬರೂ ಸೇರಿ ಪಲ್ಲವಿಯ ಬಾಳಿನಲ್ಲಿ ಪ್ರೇಮ ಚರಣ ಬರೆದರು.. ಮುಗ್ದ ಹುಡುಗಿ ರಾಜು ನಾ ನಂಬಿದ್ಲು.. ಮನೆಯಲ್ಲಿ ವಿಷಯ ಹೇಳಿದ್ಲು.. ಅವಳ ಆಸೆಗೆ ಮನೆಯವರೂ ಬೇಡ ಅನ್ನಲಿಲ್ಲ.. ರಾಜೀವನಿಗೆ ಮನೆಗ್ ಬಂದು ಮಾತಾಡೋಕೆ ಹೆಳಿದ್ರು.. ಆದರೆ ಹೇಳಿದ ದಿನ ರಾಜೀವನಿಗೆ ಬರೋಕೆ ಆಗಿಲ್ಲ.. ಎಲ್ಲರ ದೃಷ್ಟಿ ಲಿ ಮೋಸಗಾರ ಆಗೋದ ರಾಜೀವ..ಆದ್ರೆ ಸತ್ಯ ಬೇರೇನೆ ಇತ್ತು ಅದನ್ನ ತಿಳ್ಕೊಳೊ ಸೌಜನ್ಯ ಇಲ್ಲದೇ ಪಲ್ಲವಿ ಹುಚ್ಚಾಸ್ಪತ್ರೆ ಸೇರಿದ್ಲು..
ಎರಡು ವರ್ಷದ ನಂತರ ( ಕನಕಾ ಮತ್ತು ಕುಮಾರ ಮಾತಾಡ್ತಾ ಇದ್ದಾರೆ .. )
ಕನಕಾ : ಪಲ್ಲವಿ ನನ್ ಜೀವ ಅಂತ ಇದ್ದ ರಾಜೀವ ಅವನು ಮೋಸ ಮಾಡಿಲ್ಲ.. ಆದರೆ ಕೀರ್ತಿ ಮಾಡಿದ್ ಮೋಸ. ಅವನಿಗ್ ಪಲ್ಲವಿ ಮೇಲೆ ಆಸೆ ಇತ್ತು.. ಪಲ್ಲವಿಗೆ ಈ ತರ ಆಗಿರೋದು ನಂಗೆ ಗೊತ್ತಿಲ್ಲ.. ಆದರೆ ಇದಕ್ಕೆಲ್ಲ ಕಾರಣ ಕೀರ್ತಿ..
ಕುಮಾರ: ಕೀರ್ತಿ ನಾ ಅವನೆನ್ ಮಾಡ್ದಾ ? ನೀನ್ ತಪ್ಪಿಸ್ಕೊಳ್ಳೊಕೆ ಅವನ ಹೆಸರು ಹೆಳ್ತಿದಿಯ ಅಂತ ನಂಗ್ ಗೊತ್ತು ನಿಜಾ ಹೇಳು..
ಕನಕ : ರಾಜೀವ ಮೋಸ ಮಾಡ್ದ ಅಂತ ಹೇಳ್ತಿಯಲ್ಲ ಅವನೀಗ ಎಲ್ ಇದಾನೆ ಗೊತ್ತಾ
ಕುಮಾರ : ಗೊತ್ತಿದ್ರೆ ಸಾಯಿಸ್ ಬಿಡ್ತಿದ್ದೆ
ಕನಕ : ಸತ್ತವರನ್ನ ಮತ್ತೇನ್ ಸಾಯಿಸ್ತೀಯ ?
ಕುಮಾರ : ರಾಜೀವ ಸತ್ತೋದ್ನಾ
ಕನಕ : ಅವನು ಪಲ್ಲವಿನ ನೋಡೋಕೆ ಅಂತಾನೆ ಹೊರಟಿದ್ದ.. ಹೋಗಿ ಮುಟ್ಟಲಿಲ್ಲ ಅದ್ಕೆ ನೀವೆಲ್ಲ ಅವನನ್ನ ಮೋಸಗಾರ ಅಂತಿದೀರ ಆದ್ರೆ ಅವನ ಕೊನೆ ಉಸಿರು ಹೋಗೋವರೆಗೂ ಪಲ್ಲವಿ ಹೆಸರು ಹೇಳ್ತಿದ್ದ
ಕುಮಾರ : ಏನಾಯ್ತು ಅಂತ ಬಿಡಿಸಿ ಹೇಳು
ಕನಕ : ಪಲ್ಲವಿ ಮನೆಗ್ ಬಾ ಅಂತ ಹೇಳಿದ್ಲು ಅದ್ಕೆ ರೆಡಿ ಆಗಿ ರಾಜು ಹೊರಟಿದ್ದ ಆದ್ರೆ ದಾರೀಲಿ ಅವನನ್ ಸಾಯಿಸ್ ಬಿಟ್ರು ( ಅಂತ ಹೇಳಿ ಕುಮಾರನನ್ನ ಅಪ್ಪಿಕೊಳ್ತಾಳೆ )
ಮುಂದಿನ ಭಾಗ ನಿರೀಕ್ಷಿಸಿ
ಕನಸಿನ ಕುದುರೆ ಏರಿ  - ೩

ಮಳೆ ಜೀವನದ ದಿಕ್ಕನ್ನೇ ಬದಲಿಸುತ್ತೆ ಅನ್ನೋದು ಎಷ್ಟು ಸತ್ಯ ಗೊತ್ತಿಲ್ಲ ಆದ್ರೆ ಇಲ್ಲಿ ಮಳೆ ಜೀವನವನ್ನ ಬದಲಿಸಿದ್ದು ಮಾತ್ರ ಸತ್ಯ.. ಪ್ರೀತಿಗೆ ಮಳೆಗೆ ಹತ್ತಿರದ ಸಂಬಂಧ.. ಎಷ್ಟೋ ಪ್ರೀತಿನ ಸೇರಿಸಿರೋದು ಮಳೆ.. ಇಲ್ಲಿ ಮಳೆಯ ಆಟ ಸಲ್ಪ ವಿಚಿತ್ರ.. ಇಲ್ಲಿ ವರುಣದೇವನ ಲೆಕ್ಕಾಚಾರದ ಲೆಕ್ಕ ಸಿಗ್ತಿಲ್ಲ...Flash Back :
ರಾಜೀವ ಪಲ್ಲವಿ ಮನೆಗೆ ಹೊರಟಿದ್ದ.. ನವ ವಸಂತದ ನೆನಪಿನಲ್ಲಿ ಪ್ರೇಮಕಥೆಯ  ಪುಟಗಳನ್ನು ತಿದ್ದಿತೀಡಿ ಹೊಸ ಕವಿತೆಯ ಪಲ್ಲವಿ ಬರೆಯಲು ಕನಸಕಾಣುತ ಹೊರಟಿದ್ದ.. ಇತ್ತ ಪಲ್ಲವಿ ವದುವಂತೆ ಸಿಂಗಾರ ಮಾಡಿಕೊಂಡು ರಾಜೀವನಿಗಾಗಿ ಕಾಯುತ್ತಿದ್ದಳು... ಆದರೆ ರಾಜೀವ ಬರಲಿಲ್ಲ.. ರಾಜೀವ ಮೋಸ ಮಾಡಿದ ಅಂತ ತಿಳಿದು ಹುತ್ತಿಯಾದಳು.. ಆದರೆ ರಾಜೀವ ಮೋಸ ಮಾಡಿರಲಿಲ್ಲ.. ಮೋಸ ಮಾಡಿದ್ದು ವಿಧಿ.. ಜಾಲಿಯಾಗಿ ಕಾರಲ್ಲಿ ಬರ್ತಿದ್ದ ರಾಜೀವನಿಗೆ ಎಲ್ಲಿಂದಲೋ ಬಂದ ಲಾರಿ ಗುದ್ದಿ ಕಾರು ಪ್ರಪಾತಕ್ಕೆ ಬಿತ್ತು.. ರಾಜು ಸತ್ತಿದಾನೆ ಅಂದ್ಕೊಂಡು ಹೊರಟ ಕೊಲೆಗಾರರು ನೇರವಾಗಿ ಹೋಗಿದ್ದು ಕನಕಾಳ ಮನೆಗೆ... ಕನಕಾಳ ತಂದೆ ಬಳಿ ಹೋಗಿ ನಿನ್ ಮಗಳನ್ನ ಕೀರ್ತಿಗೆ ಕೊಟ್ಟು ಮದವೆ ಮಾಡಬೇಕು ಇಲ್ಲ ಅಂದ್ರೆ ನಿನ್ ಮಗ ಹೋದ ಜಾಗಕ್ಕೆ ನಿನ್ನನ್ನು ಕಳಿಸ್ತಿವಿ ಅಂತ ಹೇಳಿ ಹೋಗ್ತಾರೆ.. ಆದ್ರೆ ಮಳೆ ಬದುಕನ್ನ ಬದಲಿಸುತ್ತೆ .. ಮಗ ಸತ್ತ ಅಂತ ಅಳೋದ ಅಥವಾ ಮಗಳ ಬಾಳು ಹಾಳಾಗುತ್ತೆ ಅಂತ ಚಿಂತಿಸೋದ ಗೋತ್ತಾಗ್ತಿಲ್ಲ ಕನಕಾಳ ತಂದೆಗೆ.. ಕೀರ್ತಿ ಕನಕಾಳನ್ನ ಮದುವೆಯಾಗೊ ಉದ್ದೇಶ ಮಾತ್ರ ಭಯಂಕರ.. ಮದುವೆಯಾಗಿ ಮೊದಲ ರಾತ್ರಿಯಲ್ಲೆ ಅಕೆಯನ್ನ ಯಕ್ಷಿಣಿ ದೇವತೆಗೆ ಬಲಿ ಕೊಟ್ಟು ಅಪಾರ ನಾಗ ನಿಧಿ ಪಡೆವ ಆಸೆ ಅವನದ್ದು.. ಆದರೆ ಪಕ್ಕಾ ಕಾಮುಕ ಕೀರ್ತಿ ಸ್ಪುರದ್ರೂಪಿ ಕನಕಾಳನ್ನ ಪಡೆಯದೇ ಬಲಿ ಕೊಡ್ತಾನಾ ಅನ್ನೋದು ಯಕ್ಷಪ್ರಶ್ನೆ..
Now :ಕುಮಾರ : ರಾಜೀವ ಸತ್ತಿರೋದು ಪಲ್ಲವಿಗೆ ಗೊತ್ತಿಲ್ಲ ಗೊತ್ತಾದರೆ ಅವಳು ಉಳಿಯಲ್ಲ ಏನ್ ಮಾಡೋದು ಅರ್ಥ ಆಗ್ತಿಲ್ಲ...
ಕನಕ : ಕೀರ್ತಿ ಜೊತೆನೆ ಇದ್ದು ಅವನನ್ನ ಸಾಯಿಸ್ತಿನಿ .. ಅಣ್ಣನ ಕೊಂದವರನ್ನ ನಾನಂತು ಬಿಡಲ್ಲ..
ಕುಮಾರ : ನಿನ್ನ ಬಗ್ಗೆ ತಪ್ಪಾಗಿ ತಿಳ್ಕೊಂಡಿದ್ದೆ .. ನಿನ್ ಜೊತೆ ನಾನಿರ್ತಿನಿ.. Sorry ಕಣೆ...
ಕನಕ  : ನಾನ್ ಪಲ್ಲವಿನ ನೋಡ್ಬೇಕು‌‌
ಕುಮಾರ : ಸರಿ ಬಾ 
ಅಂತ ಹೇಳಿ ಹುಚ್ಚಾಸ್ಪತ್ರೆಗೆ ಕರ್ಕೊಂಡು ಬರ್ತಾನೆ.‌.


ಜೋರಾಗಿ ಮಳೆ ಸುರಿತಾ ಇರುತ್ತೆ.. ಹುಚ್ಚಾಸ್ಪತ್ರೆಯಿಂದ ಪೋನ್ ಪಲ್ಲವಿ ಪರಿಸ್ಥಿತಿ ಸರಿ ಇಲ್ಲ ಅಂತ.. ಹೋಗಿ ನೋಡೊವಷ್ಟರಲ್ಲಿ ಅಣ್ಣಾ ಅಂತ ಕರೆ ಕುಮಾರ ನನ್ನ ಆಶ್ಚರ್ಯಗೊಳಿಸುತ್ತೆ.‌. ಪಲ್ಲವಿ ಸರಿ ಹೋದ್ಲು ಅನ್ನೋ ಸಂತೋಷ ಎದ್ದು ಕಾಣ್ತಿತ್ತು ಕುಮಾರನ ಮುಖದಲ್ಲಿ‌‌..  ಆದರೆ ವಿಧಿ ಬರೆದದ್ದೆ ಬೇರೆ.. ಮುಖ ಪೂರ್ತಿ ಸುಟ್ಟು ನೆನಪಿನ ಶಕ್ತಿ ಸಂಪೂರ್ಣವಾಗಿ ಕಳೆದುಕೊಂಡ ಒಬ್ಬ ವ್ಯಕ್ತಿಯನ್ನ ತೋರಿಸಿ ಅವನೇ ನನ್ನ ರಾಜೀವ ಅಂತ ಹೇಳೊ ಪಲ್ಲವಿ ಮಾತನ್ನ ನಂಬೊಕೆ ಆಗ್ತಿಲ್ಲ ಕನಕಾ ಕುಮಾರ್ ಗೆ... ಒಮ್ಮೆ ಬೇರಾಗಿಸಿ ಒಮ್ಮೆ ಒಗ್ಗೂಡಿಸಿ ಮೆರೆವ ಆ ವಿಧಿಯ ಆಟಕ್ಕೆ ಸಾತ್ ಕೊಟ್ಟಿದ್ದು ಮಳೆ.. ಯಾವುದೋ ಅಪರಿಚಿತ ವ್ಯಕ್ತಿಯ ಕೈ ಹಿಡಿದು ಎಳೆಯುತ್ತಾ ರಾಜು ಮಾತಾಡೋ ಪ್ಲೀಸ್ ಮಾತಾಡೊ ಅಂತ ಗೋಗರೆಯುವ ಪಲ್ಲವಿ.. ಅಣ್ಣ ಸತ್ತು ಮೂರು ತಿಂಗಳಾಯ್ತು ಇವನು ನನ್ ಅಣ್ಣ ಆಗೋಕೆ ಚಾನ್ಸೇ ಇಲ್ಲ ಅನ್ನೋ ಕನಕ... ಟೋಟಲ್ ಕನ್ಪ್ಯೂಷನ್ ನಲ್ಲಿರೊ ಕುಮಾರ..

ನಿಜವಾಗಿಯೂ ರಾಜಿವ ಬದುಕಿದ್ದಾನಾ ? ಕನಕಾ ಕೀರ್ತಿಯ ಸಂಚಿಗೆ ಬಲಿಯಾಗ್ತಾಳಾ ? ಪಲ್ಲವಿಯ ಪ್ರೀತಿ ಗೆಲ್ಲುತ್ತಾ ? ಕುಮಾರ ಕನಕ ಒಂದಾಗ್ತಾರಾ ? ಯಾರ ಕನಸು ನನಸಾಗುತ್ತೆ  ನಿರೀಕ್ಷಿಸಿ...

ಕೀರ್ತಿಗೆ  ನಾಗ ನಿಧಿಯ ಕನಸು
ಕುಮಾರನಿಗೆ ಬಾಲ್ಯದ ಪ್ರೀತಿಯ ಕನಸು
ಕನಕಾಳಿಗೆ ಸೇಡಿನ ಕನಸು
ಪಲ್ಲವಿಗೆ ರಾಜೀವನ ಪ್ರೇಮದ ಕನಸು

 ಮುಂದುವರಿಯುವುದು..‌.

Tuesday, 11 September 2012

1. ಸಾವು ಅಕ್ರಾಳ ಅಂತಕನ ಆಸ್ಥಾನ ಕಂಡಿರಲು ಅಗಾಧ ಅಕ್ರಮ ನೆನಪಿಗೆ ಬಂದಿರಲು ಜೀವಕ್ಕೆ ರಿಪುವಾಗಿ ಯಮಬಂದು ನಿಂತಿರಲು ಧರ್ಮದೂತ ಅಟ್ಟಹಾಸದಿ ನಿಂತು ನಗುತಿರಲು ನೆನಪಿಸಿತದು ಸಾವನ್ನು ಪ್ರೀತಿ ಮನಸನು ಅಳಿಸುತ ಮನಸನು ಆಳುತ ಮನವನು ಸೆಳೆಯುತ ಬಾವನೆ ಕೊಲ್ಲುತ ಮರೆಯಲಾಟವನಾಡುತ ಮನದ ನೆಮ್ಮದಿ ಕೊಲ್ಲುತ ಇರುವುದು ಪ್ರೀತಿ ನಮ್ಮೊಡನಾಡುತ 2. ಮೈತ್ರಿ ಹಂದರದಿ ಪ್ರೀತಿ ಹಂಬಲ ಪ್ರೇಮದುಳಿವಿಗೆ ನೆನಪಿನ ಮುಚ್ಚಳ ಪ್ರೇಮ ತಲ್ಪಕೆ ನಂಬಿಕೆಯ ಪಂಜರ ಹೃದಯ ಜನಿತ ಪ್ರೀತಿಗೆ ಎದೆಯ ಗೂಡೆ ಆದಾರ 3. ಪಾಲಿಸು ಜಗದೊಡೆಯ ಹೇ ಮಂಜುನಾಥ ಬಕುತರ ಪಾಲಿಪ ನೀ ಸೌಖ್ಯಧಾತ.. ಆದಿ ನೀನೆ ಅಂತ್ಯ ನೀನೆ ಜೀವ ನೀನೆ ಜನುಮನೀನೆ ಜೀವಾ ಕೊಟ್ಟು ಕಣ್ಣಾಕಿತ್ತು ನಿನ್ನಾ ನೋಡೋ ಆಸೆಯಿತ್ತು ಎಲ್ಲಿ ಅಡಗಿಹೇ.. ಮಂಜುನಾಥ.. ಬದುಕಿನ ವೀಣೆಯ ತಂತಿಯು ನೀನೆ ನಾದದಿ ಹೊಮ್ಮುವ ಸ್ವರನಿನಾದ ನೀನೆ ಕುರುಡಾ ನಾನು ಗುರುವು ನೀನು ದೇವಾ ತೋರೋ ದಾರಿಯ ಮಂಜುನಾಥ..

Tuesday, 31 January 2012

ದ್ವೀಪದಲ್ಲಿ ದೀಪಧರ ಭಾಗ 4

ಜೈ ಬಜರಂಗ ಭಲಿ ಜಯ ಗಣೇಶಾಯ ನಮಃ ಶಿವನೇ ಭಯಹರನೇ ಗಂಗಾಧರನೇ

ಏನಿಲ್ಲ ಶಾಕ್ ಆಗೋದೇನು ಬೇಡ ಭೂತದ ಕಥೆ ಅಲ್ವಾ ಅದಕ್ಕೆ ದೇವರ ನೆನಪುಮಾಡ್ಕೊಳೋಣ ಅಂತ ನೀವು ರೆಡಿ ನಾ ಕಥೆ ಓದೋಕೆ ಹ ಹ ಅರ್ಥ ಆಯ್ತು ಮುಂದುವರಿಸ್ತೀನಿ.

ಮೊಬೈಲ್ ಕಾಲ್ ಗಳಿಗೆ ದಿಕ್ಬಂದನ ಹಾಕೋಕಾಗಲ್ಲ ಅಂತ ಅದಕ್ಕೆ ಮೋಡರ್ನ ಭೂತಗಳು ಫೋನ್ ಮತ್ತು ಕಂಪ್ಯೂಟರ್ ನ ಬಳಸಿಕೊಳ್ತಾ ಇದೆ

ದಿಕ್ಬಂಧನ ಹಾಕಿದ ಮಂತ್ರವಾದಿ ಹಳೇ ಕಾಲದ ಕಿತ್ತೋಗಿರೊ ಯಮಃ ಗಾಡಿ ಡುರ್ ಗುರ್ ಅನ್ನೋತರ ಏನೇನೋ ಬಯ್ಯೋಕೆ ಶುರು ಮಾಡ್ದ ಬಯ್ಯೋಕೆ ಅಂದ್ರೆ ಮಂತ್ರ ಹೇಳೋಕೆ ಅಂತ ನಾನು ಪ್ರೀತಿಯಿಂದ ಇಟ್ಟ ಹೆಸರು ಈ ಪ್ರೀತಿ ಯಾರು ಅಂತಾ ಕೇಳ್ಬೇಡಿ ನಂಗೂ ಗೊತ್ತಿಲ್ಲ. ಮಂತ್ರ ಹೇಳ್ತಾಇದ್ದ ಮಂತ್ರವಾದಿ ಮೊಬೈಲ್ ನೋಡಿ ಕೊಡೋಕೆ ಹೇಳ್ದಾ ಅಷ್ಟರಲ್ಲಿ ಫೋನ್ ಬಂತು ಯಾಕೊ ಗೊತ್ತಿಲ್ಲ ಶ್ರೀ ಗೆ ಧೈರ್ಯ ಬಂದುಬಿಟ್ಟಿತ್ತು ಅದೇ ಉತ್ಸಾಹದಿಂದ ಫೋನ್ ರಿಸೀವ್ ಮಾಡ್ದ " HAI ಮಚ್ಚಾ ಹೌ ಆರ್ ಯು ಓ ಮಂತ್ರವಾದಿ ಕರೆಸಿದೀಯಾ ಯಾರ್ ಬಂದ್ರೂ ನಂಗೆ ನೋ ಪ್ರೊಬ್ಲೆಮ್ ನಾನು ಸೇಡು ತೀರಿಸಿಕೊಂಡೇ ಹೋಗೋದು ನನ್ನ ಕೆಲಸಕ್ಕೆ ಯಾವನ್ ಮೂಗು ತೋರೀಸಿದ್ರೂ ಕೆಲಸ ಆಗೇ ಆಗುತ್ತೆ ನೀನು ರೆಡಿಯಾಗು ಹ ಹೇಳೋಕೆ ಮರ್ತಿದ್ದೆ ಇನ್ನ 4 ದಿನ ನಿನ್ನ ಬರ್ತ್ ಡೆ ಇದ್ಯಲ್ಲಾ ಅದೇ ದಿನಾ ನಿನ್ನ ಸಾಯಿಸ್ತೀನಿ ಅದು ಹೇಗೆ ಬಚಾವಾಗ್ತೀಯೋ ನೋಡೆಬಿಡೋಣ I WILL KILL U ಹಹಹಹಹ" ಅಂತ ವಿಕಾರವಾಗಿ ನಗ್ತಾ ಫೋನ್ ಕಟ್ ಆಯ್ತು. ಸ್ವಲ್ಪ ಟೆನ್ಸ್ ಆದ್ರೂ ಸುದಾರಿಸ್ಕೊಂಡ ಶ್ರೀ ಮೊಬೈಲ್ ನ ಮಂತ್ರವಾದಿಗೆ ಕೊಟ್ಟ ಮಂತ್ರವಾದಿ ಮಂತ್ರಹೇಳ್ತಾ ಅದಕ್ಕೆ ಕುಂಕುಮ ಅರಿಶಿನ ಹಚ್ಚಿ ಮೇಕಪ್ ಮಾಡೋಕೆ ಶುರು ಮಾಡ್ದ..

ಆದರೆ ಆ ಮಂತ್ರವಾದಿಗೆ ಒಂದು ವಿಷ್ಯ ಗೊತ್ತಿರಲಿಲ್ಲ ಅನ್ಸುತ್ತೆ ಮೊಬೈಲ್ ಗೆ ಪೂಜೆ ಮಾಡೋ ಬದರು ಬ್ಯಾಟರಿ ಸಿಮ್ ತೆಗೆದು ಬಿಸಾಕಿದ್ರೆ ಸಾಕಾಗಿತ್ತು ಅಂತ ಹೋಗ್ಲಿ ಬಿಡಿ ನಮಗ್ಯಾಕೆ ಪೇಮೆಂಟ್ ಕೊಡೋದು ಶ್ರೀ ನ ತಂದೆ ನಾವಲ್ಲವಲ್ಲ. ಕುಂಕುಮ ಇಟ್ಟ ಫೋರ್ಸ್ ಅಂತ ಕಾಣುತ್ತೆ 2 ನಿಮಿಷಕ್ಕೆ 100 ಮೆಸೆಜ್ ಬಂತು ಒಂದು ಕ್ಷಣ ಮಂತ್ರವಾದಿ ಕೂಡ ಶಾಕ್ ಆದ ನಂತರ ಚೇತರಿಸಿಕೊಂಡು ಇದು ಸಾಮಾನ್ಯ ಭೂತ ಅಲ್ಲ ಅದು ಭಾರಿ ಫವರ್ ಪುಲ್ ಅಂತ ಹೇಳಿ ನಿಮ್ಮ ಮನೆಯ ಎಲ್ಲಾ ಬಾಗಿಲು ತೋರಿಸಿ ಅಂತ ಮನೆ ನೋಡೋಕೆ ಹೋದ ಅಲ್ಲಿ 1 ಬಾಗಿಲು ನೋಡಿ ಇದು ಇಲ್ಲಿ ಇರಬಾರದಿತ್ತು ಅಲ್ಲಿ ಇರಬೇಕಿತ್ತು ಅಂತ ಒಳ್ಳೆ ಮೇಸ್ತ್ರಿ ( ಸಣ್ಣ ಮನೆ ಕಟ್ಟೋ ಇಂಜಿನಿಯರ್ ) ತರ ಕುಯ್ಯೋಕೆ ಶುರು ಮಾಡಿದ.. ಹಾಗೇ ಮುಂದೆ ಹೋಗಿ ಮನೆಯ ಹೊರಗಡೆ ಎಂಟೂ ದಿಕ್ಕಿಗೆ ನಿಂಬೆ ಹಣ್ಣನ್ನ ಹೂತು ಹಾಕಿ ಮನೆ ಬಾಗಿಲುತಳಿಗಳಿಗೆ ಮೆಣಸಿನ ಕಾಯಿ ಕಟ್ಟಿದ ಮೋಸ್ಟಲಿ ದೆವ್ವಕ್ಕೆ ಖಾರ ಅಂದ್ರೆ ಭಯ ಇರುತ್ತೋ ಏನೊ.. ಹಾಗೇ ದೇವರ ಕೋಣೆಗೆ ಬಂದು ನಾನು ಇಲ್ಲಿ ಜಪ ಮಾಡ್ತಾ ಇರ್ತೀನಿ ಅಗತ್ಯ ಇದ್ರೆ ಕರೀರಿ ಅಂತ ಜಪ ಮಾಡ್ತಾ ಕೂತ..

ಇತ್ತ ಶ್ರೀ ಸ್ಟಾರ್ಟ ಮಾಡಿ ಸಮುದ್ರದಲ್ಲಿ ಬಿಟ್ಟಿದ್ದ ಬೊಟು ಅಂಡಮಾನ್ ಪೋಲೀಸರು ಹಿಂಬಾಲಿಸಿ ಪುಷ್ಕರಣಿ ತಲುಪಿದರು ಅಲ್ಲಿ ಸಿಕ್ಕ ಪ್ರದಿ ಯ ಪಾಸ್ ಪೋರ್ಟ ನೋಡಿ ಬೆಂಗಳೂರಿನ ಪೋಲೀಸರಿಗೆ ತನಿಕೆಯನ್ನ ವರ್ಗಾಯಿಸಿದರು ಆದರೆ ಪ್ರದಿ ಶವ ಅವರಿಗೆ ಸಿಗಲಿಲ್ಲ 24 ಹವಳಗಳು ಫೋಲೀಸರ ವಶವಾಯಿತು...

ವಶಪಡಿಸಿಕೊಂಡ ಹವಳಗಳನ್ನ ಪೋಲೀಸರೇ ಲಪಟಾಯಿಸಲು ಹೊಂಚುಹಾಕಿದ್ರು. ಆದರೆ ಈ ಭಾರಿ ಹವಳಗಳನ್ನ ಕಾಯುತ್ತಾ ಇರೋದು ಹಾವಲ್ಲ ಹಾವಿನ ಬದಲಾಗಿ ಹವಳ ಕಾಯ್ತಾ ಇರೋದು ನಮ್ಮ ಪ್ರದೀ...

ಇತ್ತ ಕನ್ನಡ ಸಿನಿಮಾದಲ್ಲಿ ಆವಿಶ್ಕಾರಿ ನಿರ್ದೇಶಕ ಎಂದು ಬಿರುದು ಪಡೆದಿದ್ದ ಕುಮಾರ್ ಪುಷ್ಕರಣಿಯಲ್ಲಿ ಶೂಟಿಂಗ್ ಮಾಡೋ ಪ್ಲೇನ್ ಹಾಕಿಕೊಂಡು ಅಲ್ಲಿಗೆ ಹೋದ ಆದರೆ ಅದು ಈ ಭಾರಿ ನಿರ್ಜನವಾಗಿರಲಿಲ್ಲ ಅಲ್ಲಿ ನಮ್ಮ ಪ್ರದಿ ಒಂದು ಚಿಂಪಾಜಿ ಜೊತೆ ಮರಕೋತಿ ಆಟ ಆಡ್ತಾ ಇದ್ದ ಅಂಡಮಾನ್ ಭಾಷೆ ಅಲ್ಪಸ್ವಲ್ಪ ಕಲಿತಿದ್ದ ಕುಮಾರ್ ದೀಪು ಬಳಿಹೊಗಿ ಏನೋ ಅಂದ ಅದು ಅವನಿಗೆ ಅರ್ಥವಾಗದೇ ಅಂದರೆ ಏನು ಅಂತ ಕೇಳಿದ ಕನ್ನಡ ಭಾಷೆನ ದೀಪು ಬಾಯಲಿ ಕೇಳಿದಾಗ ಕುಮಾರ್ ಗೆ ಮೈ ಎಲ್ಲ ಒಂದು ಕ್ಷಣ ರೋಮಾಂಚನ ಆಯಿತು ಸುದಾರಿಸಿಕೊಂಡು ವಿವರ ಕೇಳೋಕೆ ಶುರು ಮಾಡ್ದ ದೀಪು a to z plash back ಹೇಳ್ದ ಕುಮಾರ್ ಗೆ ವಿಷಯ ತಿಳಿದು ಕರ್ನಾಟಕ ಕ್ಕೆ ಕರಕೊಂಡು ಹೋಗೋದಾಗಿ ಹೇಳ್ದ 2 ದಿನ ಶೂಟಿಂಗ್ ಮುಗಿಸಿ ಅಲ್ಲಿಂದ ಹೊರಟರು...ನಿಮಗೆ ಕಾಡುತ್ತಿರುವ ಕೆಲ ಅನುಮಾನಗಳು

1 ಫೋನ್ ಮಾಡಿ ಹೆದರಿಸಿದವರು ಯಾರು ?

2 ಪ್ರದಿ ಬದುಕಿದ್ದು ಹೇಗೆ ?

3 ಸಾಯೋ ಸ್ಥಿತಿಯಲ್ಲಿದ್ದ ಪ್ರದಿ ನ ಶ್ರೀ ಹಾಗೆ ಬಿಟ್ಟು ಬಂದಿದ್ದು ಏಕೆ ?

4 ಫೋನ್ ಮಾಡುತ್ತಿದ್ದ ಹುಡುಗಿ ಯಾರು ?


ಇತ್ಯಾದಿಗಳಿಗೆ ಉತ್ತರ ಮುಂದಿನ ಭಾಗದಲ್ಲಿ ಕಾಯುತ್ತಿರಿ....

@ " ಅರ್ಪಣೆ " @

ದೇಶ ಕಾಯೋ ಯೋದರು
ನಮ್ಮ ಕಾಯೋ ದೇವರು
ಅವರನು ಹೆತ್ತ ತಂದೆ ತಾಯಂದಿರು
ದೇವರಿಗಿಂತಾ ದೊಡ್ಡವರು ||

ಎಷ್ಟೋ ಜನರ ಬಾಳು
ಇಂತಹುದೇ ಗೋಳು
ಇಂತಹ ದುಖಃದಿ ನೊಂದು ಬೆಂದವರಿಗೆ
ಈ ಕವನಾರ್ಪಣೆ ಮಾಡುವ ಬಯಕೆಯು ||


ತಪ್ಪಿದ್ದರೆ ತಿಳಿಸಿ.....


ಸುತ್ತಿ ಸುತ್ತಿ ಬರುತಲಿದೆ ಕಾಲಚಕ್ರವು
ಮತ್ತೆ ಮತ್ತೆ ಕಾಡುತಿದೆ ಪುತ್ರ ಶೋಕವು
ಅತ್ತು ಅತ್ತು ಸೋತಿದೆ ಹೆತ್ತ ಜೀವವು
ಎತ್ತ ಎತ್ತ ಸಾಗಿದರು ನೆನಪುಗಳು ಕಾಡುವವು ||

ಸ್ವತಂತ್ರ ಭಾರತ ಸುಭದ್ರ ದೇಶವು
ಶತ್ರು ರಾಷ್ಟ್ರಕೆ ನಮ್ಮಲಿ ಕೋಪವು
ನಮ್ಮಲಿ ಇರದ ಧರ್ಮ ಬೇಧವು
ಅವರಿಗೆ ಇಂದು ಬೇಕಿಹುದು ||

ದೇಶದ ಮೇಲಿನ ಭಕ್ತಿಯು ಹೆಚ್ಚಿ
ದೇಶವ ಕಾಯುವ ಕೆಲಸವ ಮೆಚ್ಚಿ
ಮಗನನು ಯೋಧನ ಕೆಲಸಕೆ ಹಚ್ಚಿ
ಕಾಡಿಹುದಿಂದು ನೆನಪುಗಳು ಮನವನು ಚುಚ್ಚಿ ||

ಅರಿಯ ರಾಷ್ಟ್ರದ ಕಪಟವ ಅರಿಯದೆ
ಗಡಿಯ ಕಾಯುತ ಮಡಿದನು ಅಂದೇ
ಇನಿಯನ ನೆನಪಲಿ ಇರುವಳವನ ಮಡದಿ
ರಾಷ್ಟ್ರದಿ ಸಿಗದಾಗಿದೆ ಸಾವಿಗೂ ಸಿಂಪತಿ ||

ದೇಶ ಭಕುತಿಯು ದೇಶಕೇ ಬೇಡವೇ ?
ಬ್ರಷ್ಟಾಚಾರವೇ ನಿಮ್ಮಯ ಊಟವೇ ?
ಜನರನು ಕಾಡುವ ಅಧಿಕಾರದ ತಾಪವೇ ?
ಇದು ನಿಜವಾಗಿಯೂ ಗಾಂದಿ ಜನಿಸಿದ ರಾಷ್ಟ್ರವೇ ? ||

ಇದನ್ನ ಹೇಳುತಿಹುದು ಹಣದಾಸೆಗೆಂದಲ್ಲ
ನಿಮ್ಮ ಮೊಸಳೆಗಣ್ಣಿನ ಸಂತಾಪವೂ ಬೇಕಿಲ್ಲ
ಸತ್ತ ಮಗನ ಶವವ ಕೊಡದ ನಿಮಗೆಲ್ಲ
ನಮ್ಮ ದುಗುಡದ ಮಾತು ಮನ ಮುಟ್ಟಲ್ಲ ||

Monday, 30 January 2012

ದ್ವೀಪದಲ್ಲಿ ದೀಪಧರ ಭಾಗ 3

ಇಷ್ಟೊತ್ತು ಓದಿದ್ದು ಬರೀ ಪರಿವಿಡಿ ಮಾತ್ರ ಮುಂದೆ ಓದೋದು ರಕ್ತಕಾರೋ ಯುದ್ದಕಾಂಡದ ಒಂದೊಂದು ಪುಟಗಳನ್ನ

ಓ ಶಾಕ್ ಆದ್ರಾ ಸುಮ್ನೆ ಪಿಲ್ಮ ಡೈಲಾಗ್ ನೆನಪಾಯಿತು ಹೇಳದೆ ಅಷ್ಟೆ. ಇರಿ ವಿಷ್ಯಕ್ಕೆ ಬರ್ತೀನಿ

ದೊಡ್ಡ ಹಾವು ಕಂಡಾಗ ಉಸಿರೇ ನಿಂತಿತ್ತು ನಮ್ಮ ದೀಪು ಶ್ರೀ ಇಬ್ರಿಗೂ. ಏನು ಮಾಡೋದು ಅಂತಾ ಗೊತ್ತಾಗ್ಲಿಲ್ಲ. ಆದರೆ ಹಾವು ಒಳ್ಳೆ ಮೂಡ್ ನಲ್ಲಿ ಇತ್ತು ಅನ್ಸುತ್ತೆ ಅಲ್ಲೆ ಪಕ್ಕದಲ್ಲಿ ಇದ್ದ ಬಂಡೆ ಸಂದಿಯಲ್ಲಿ ನುಸುಳಿ ಹೋಯಿತು. ಒಂದೆಡೆ ಆಶ್ಚರ್ಯ ಇನ್ನೊಂದೆಡೆ ಆತಂಕ ಅಂತೂ ಬದುಕಿದ್ವಿ ಅನ್ನೋ ಸಣ್ಣ ಸಂತೋಷ ಕೂಡ ಕಾಣಿಸ್ತು ಇಬ್ಬರಲ್ಲಿ. ಅಷ್ಟರಲ್ಲಿ ಮತ್ತೆ ಮೋಹಿನಿ ಫೋನ್ ಬಂತು. ಮೋಹಿನಿ ಅಂತ ಯಾಕೆ ಹೇಳ್ತಾಇದೀನಿ ಅಂತ ಯೋಚನೆ ಮಾಡ್ತಿದೀರ ಅಲ್ಲಿ ಸಿಗ್ನಲ್ ಇಲ್ಲದೇ ಫೋನ್ ಬರುತ್ತೆ ಸೋ ಮೋಹಿನಿ ಅಂತ ಹೇಳ್ದೆ ಅಷ್ಟೆ. ಫೋನ್ ಬಡ್ಕೊಂಡ ನಂತರ ಇಬ್ಬರೂ ಗಾಬರಿಯಿಂದ ಫೋನ್ ರಿಸೀವ್ ಮಾಡಿ ಸ್ಪೀಕರ್ ಆನ್ ಮಾಡ್ತಾರೆ ಆಗ ಅಲ್ಲಿಂದ " ಹಾಯ್ ಶ್ರಿ ಹಾಯ್ ದೀಪು ಅದು ನಿಗೂಡ ಗುಹೆ ಅಲ್ಲಿಂದ ತಪ್ಪಿಸ್ಕೋಬೇಕೆಂದ್ರೆ ಆ ಹಾವು ಹೋದ ದಾರೀಲಿ ಹೋಗಿ" ಅಂತ ಫೋನ್ ಕಟ್ ಆಯಿತು. ಫೊನ್ ಕಾಲ್ ನ ಸೂಚನೆಯಂತೆ ಅಲ್ಲಿನ ಬಂಡೆ ಸರಿಸಿ ಒಳಗೆ ಹೋಗೋಣ ಅಂತ ಇಬ್ಬರೂ ಮಾತಾಡಿಕೊಂಡು ಬಂಡೆನ ಸರಿಸಿಸೋಕೆ ಶುರುಮಾಡಿದ್ರು. ಹಾಗೇ ಯಶಸ್ವಿಯಾಗಿ ಬಂಡೆನ ಸರಿಸಿ ಗುಹೆಯ ಒಳಗೆ ಹೋದರು. ದಟ್ಟ ಕತ್ತಲು ಕಪ್ಪು ಗುಹೆ ಆಗಿದ್ದರಿಂದ ಮೊಬೈಲ್ ಟಾರ್ಚ ಆನ್ ಮಾಡಿದರು ಮೊಬೈಲ್ ನ ಮಂದಬೆಳಕಿನಲ್ಲೆ ಮುಂದೆನಡೆದರು. ಸಾಗುತ್ತಾ ಸಾಗುತ್ತಾ 2 ಕಿಲೋಮೀಟರ್ ಗಳಷ್ಟು ದೂರ ಬಂದರು ಅಲ್ಲಿ ಎದುರಿಗೊಂದು ನದಿ ಹರಿಯುತ್ತು ನದಿಯಲ್ಲಿ ಕೇವಲ ಮೊಣಕಾಲಷ್ಟು ಮಾತ್ರ ನೀರಿತ್ತು. ನೀರು ಸ್ಪೀಡಾಗಿ ಕೂಡ ಹರಿಯುತ್ತಿರಲಿಲ್ಲ. ಅಲ್ಪ ಸ್ವಲ್ಪ ಅಂಜುತ್ತಾ ಇಬ್ಬರೂ ನದಿ ದಾಟಿದರು. ಆಶ್ಚರ್ಯ ಏನಂದ್ರೆ ಮೈ ಕೊರೆಯುವ ಚಳಿ ಇದ್ದರೂ ನದಿಯಲ್ಲಿ ಸ್ನಾನಕ್ಕೆ ಕಾಯಿಸಿಟ್ಟ ಹದದಲ್ಲಿ ಬಿಸಿನೀರು ಹರಿತಾ ಇತ್ತು ಅದನ್ನ ಗಮನಿಸಿ ಇಬ್ಬರೂ ಒಮ್ಮೆ ದಂಗಾದರು. ಚೇತರಿಸಿಕೊಂಡು ಮುಂದಕ್ಕೆ ಸಾಗಿದರು. ಮುಂದೆ ಹೋದರೆ ದಾರಿ ಎರಡು ಕವಲಾಗಿತ್ತು. ಹಾಗೇ ಒಂದು ದಾರಿ ಸ್ವಲ್ಪ ಒದ್ದೆ ಇತ್ತು ನದಿ ನೀರಲ್ಲಿ ಒದ್ದೆಯಾದ ಹಾವು ಇದೇ ದಾರಿಲಿ ಹೋಗಿದೆ ಅಲ್ಲೆ ದಾರಿ ಸಿಗಬಹುದು ಅಂತ ಇಬ್ಬರೂ ಅದೇ ದಾರಿಲಿ ಮುಂದೆ ಹೊದರು. ಆದರೆ ಗುಹೆ ಸ್ವಲ್ಪ ದೂರ ಮಾತ್ರ ಇತ್ತು ಮುಂದೆ ದಾರಿ ಕಾಣದೆ ಚಿಂತಿಸತೊಡಗಿದರು ಆಗ ಶ್ರಿ ಹೇಳಿದ "ಹುಡುಕು ಏನಾದ್ರು ದಾರಿ ಇದ್ದೇ ಇರುತ್ತೆ ಯಾಕಂದ್ರೆ ಹಾವು ಇಲ್ಲಿಂದ ವಾಪಸ್ ಹೋಗಿಲ್ಲ ಸೊ ಟ್ರೈ ಮಾಡೋಣ ಸ್ವಲ್ಪ ಹುಡುಕೋಣ" ಓಕೆ ಅಂದ ಪ್ರದಿ. ಇಬ್ರೂ ಹುಡುಕೋಕೆ ಶುರು ಮಾಡಿದ್ರು ಅಷ್ಟರಲ್ಲಿ ಮೊಬೈಲ್ ಬ್ಯಾಟರಿ ಕಾಲಿಆಗಿ ಸ್ವಿಚ್ ಆಪ್ ಆಯಿತು ಸುತ್ತಲೂ ದಟ್ಟ ಕತ್ತಲು. ದಾರಿ ಹುಡುಕೋಣ ಅಂದರೂ ಗ್ರಹಚಾರ ಕೈ ಕೊಟ್ಟಿತು ಪಾಪ ನಮ್ಮ ಹುಡ್ಗರಿಗೆ ಆದರೆ ಕತ್ತಲಲ್ಲೂ ದಾರಿ ದೀಪ ಕಂಡಂತೆ ಒಂದು ಕಡೆ ಏನೋ ಬೆಳಕು ಕಂಡಿತು. ಹತ್ತಿರ ಹೋದ ಇಬ್ಬರೂ ಸ್ವಲ್ಪ ಮಣ್ಣು ಸರಿಸಿ ನೋಡಿದರೆ ಅದು ಅವರು ಹುಡುಕಿಕೊಂಡು ಬಂದಿದ್ದ ಹವಳವಾಗಿತ್ತು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಅಂತ ಖುಷಿ ಪಡ್ತಾ ಸಿಕ್ಕ 11 ಹವಳಗಳನ್ನೂ ಜೋಬಿಗಿಳಿಸಿ ಒಂದೊಂದು ಹವಳವನ್ನು ದಾರಿ ಕಾಣಲು ಕೈಲಿ ಹಿಡಿದು ಹಿಂದಕ್ಕೆ ಬರತೊಡಗಿದರು ಕವಲಾದ ದಾರಿಯ ಇನ್ನೊಂದು ಬದಿಗೆ ಸಾಗಿದಂತೆ ಬೆಳಕು ಕಾಣಲಾರಂಭಿಸಿತು. ಸೂರ್ಯ ಎಲ್ಲರಿಗೂ ಹಾಯ್ ಅಂತ ಮೇಲೆ ಬರುತ್ತಿದ್ದಿದ್ದೂ ಕಂಡಿತು.

ಅಸಾಧ್ಯವಾದದ್ದನ್ನ ಸಾಧಿಸಿ ಬಿಟ್ವಿ ಅಂತ ಇಬ್ರೂ ಖುಷಿಲಿ ಮೆರಿತಾ ಇದ್ರು ನೇರವಾಗಿ ತಮ್ಮ ಮುರಿದು ಬಿದ್ದಿದ್ದ ಟೆಂಟ್ ಬಳಿ ಹೋಗಿ ಬಟ್ಟೆ ಪ್ಯಾಕ್ ಮಾಡೋಕೆ ಶುರುಮಾಡಿದ್ರು. ಆಗ ಖುಷಿಯಿಂದ ಶ್ರಿ ಡೇರಿಮಿಲ್ಕ ಚಾಕ್ಲೇಟ್ ಕೊಟ್ಟು ಪ್ರದಿ ಅಂದ ಪ್ರದಿ ತಕೊಂಡು ತಿನ್ನೋಕೆ ಶುರುಮಾಡ್ದ "ನಾನು ಬೋಟ್ ಹತ್ರ ಇರ್ತೀನಿ" ಅಂತ ಶ್ರೀ ಅಲ್ಲಿಂದ ಹೊರಟ. ಇತ್ತ ಯಾಕೋ ಉಸಿರು ಕಟ್ಟಿದಂತಾಗಿ ಎದೆ ಹಿಡ್ಕೊಂಡು ಪ್ರದಿ ಕೆಳಗೆ ಬಿದ್ದ. ಶ್ರೀ ಬಂದು ನೋಡೋವಷ್ಟರಲ್ಲಿ ಉಸಿರು ನಿಂತಿತ್ತು. ಪ್ರದಿ is no more......

ಶ್ರೀ ಏನಾಯಿತು ಅಂತ ಗೊತ್ತಾಗದೇ ಬೋಟ್ ಗೆ ಹೋಗಿ ಬೋಟ್ ಸ್ಟಾರ್ಟ ಮಾಡಿ ಹೊರಟ ಸುಮಾರು ಅಂಡಮಾನ್ ಬಳಿ ಬಂದಿದ್ದ ಶ್ರಿ ಒಮ್ಮ ತಿರುಗಿ ಬೋಟ್ ನ ಡೆಕ್ ನೋಡಿದಾಗ ಶಾಕ್ ಆದ ಯಾಕಂದ್ರೆ ಡೆಕ್ ನ ಮೇಲೆ ನಮ್ಮ ಹಾವುಸ್ವಾಮಿ ಗೊರಕೆ ಹೊಡಿತಾ ಇತ್ತು. ಆದರೆ ಇವನ ಪುಣ್ಯ ಅಂತ ಕಾಣುತ್ತೆ ಅದಕ್ಕೆ ಎಚ್ಚರ ಆದ್ರೆ ಇವನ ಗತಿ.... ಅಂತೂ ಇಂತೂ ಜೀವ ಕೈಲಿ ಹಿಡ್ಕೊಂಡು ಸಮುದ್ರ ದಾಟಿ ಅಂಡಮಾನ್ ಗೆ ಬಂದು ಮುಟ್ಟಿದ. ಹಾವು ಎದ್ದರೆ ಕಷ್ಟ ಅಂತ ಬೋಟ್ ಸ್ಟಾರ್ಟ ಮಾಡಿ ಸಮುದ್ರಕ್ಕೆ ಬಿಟ್ಟ ಶ್ರೀ ಏರ್ ಪೋರ್ಟಕಡೆ ಧಾವಿಸಿದ. ಆದರೆ ತಾನು ತಂದ ಹವಳಗಳನ್ನ ಹೇಗೋ ಬೋಟ್ ನಲ್ಲೆ ಬಿಟ್ಟು ಬಿಟ್ಟಿದ್ದ.. ವಾಪಸ್ ಹೋಗೋಕೆ ಭಯ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬೆಂಗಳೂರಿಗೆ ಹೊರಟ. ಬೆಂಗಳೂರಿಗೆ ಬಂದು ಮನೆಯಲ್ಲಿ ಯಾರ್ ಜೊತೆನು ಮಾತಾಡದೇ ತಾರಸಿ ಮೇಲೆ ಹೋಗಿ ಉಯ್ಯಾಲೆ ಮೇಲೆ ಮಲಗಿದ. ಏನೇನೊ ಕಲ್ಪಿಸಿಕೊಂಡು ಸುಮ್ಮ ಸುಮ್ಮನೆ ಚೀರುತ್ತಾ ಇದ್ದ ಶ್ರೀ ನ ನೋಡಿ ಅವನ ತಂದೆ ದೆವ್ವ ನೋಡಿ ಹೆದರಿಕೊಂಡು ಬಂದಿರಬೇಕು ಮಂತ್ರವಾದಿ ಕರಸೋಣ ಅಂತ ಮಂತ್ರವಾದಿಗೆ ಫೋನ್ ಮಾಡಿದ್ರು. ಮಂತ್ರವಾದಿ 2 ದಿನ ಬಿಟ್ಟು ಬರ್ತೀನಿ ಅಂದ. ಆದರೆ ಇಲ್ಲಿ ವಿಷಯ ಗಂಭೀರವಾಗಿತ್ತು..

ಏನಂದ್ರೆ ಆಗ ಫೋನ್ ರಿಂಗ್ ಆಯಿತು. ಫೋನ್ ನೋಡಿ ಶ್ರೀ ಹೆದರಿ ಮೂಲೆ ಸೇರದ. ಶ್ರೀ ತಾಯಿ ಫೋನ್ ರಿಸೀವ್ ಮಾಡಿ ಶ್ರೀ ಗೆ ಕೊಟ್ಟಳು. ಅಲ್ಲಿಂದ " ಲೇ ಮಚ್ಚಾ ಏನೊ ಗಡತ್ತಾಗಿ ಪೋಟ್ ಕೊಂಡು ( ತಿಂದು ಕೊಂಡು ) ಮನೆಲಿ ಪಾಚ್ಕೊಂಡಿದೀಯಾ ಲೋ ಮಾತಾಡೋ ಮಗಾ" ಆ ದ್ವನಿ ಇನ್ನಷ್ಟು ಭಯ ಪಡಿಸ್ತು. ಅಷ್ಟರಲ್ರ ಶ್ರೀ ತಾಯಿ "ಶ್ರೀಗೆ ಏನೋ ಆಗಿದೆ ಬಂದಾಗಿಂದ ಗರ ಬಡಿದೋರ ತರ ಕೂತಿದಾನೆ ಏನ್ ನೋಡಿದ್ರೂ ಹೆದರಿಕೊಳ್ತಾನೆ ಏನ್ ಮಾಡೋದು ಅಂತಾನೆ ಗೊತ್ತಾಗ್ತಾ ಇಲ್ಲ"ಫೋನ್ ನಲ್ಲಿ ಹೇಳಿದ್ಲು. ಆಗ ಆ ವ್ಯಕ್ತಿ " ಹೆದರ್ಕೋಬೇಡಿ ಅಮ್ಮ ಎಲ್ಲಾ ಸರಿ ಹೋಗುತ್ತೆ ಏನೂ ತಲೆಗೆ ಹಚ್ಕೋಬೇಡಿ" ಅಂತ ಫೋನ್ ಕಟ್ ಮಾಡಿದ..
ಕಂಗಾಲಾಗಿದ್ದ ಶ್ರೀ ನ ಸಮಾಧಾನ ಪಡಿಸುತ್ತಾ ಅವನ ತಾಯಿ "ಯಾಕೊ ನಿನ್ನ ಫ್ರೆಂಡ್ ಕಾಲ್ ಗೆ ಇಷ್ಟೊಂದು ಹೆದರ್ತಾ ಇದಿಯಾ ಏನಾಯ್ತು ಅಂತ ಹೇಳೊ" ಅಂತ ಕೇಳಿದ್ಲು ಆದರೆ ಶ್ರೀ ಏನೂ ಮಾತಾಡ್ದೆ ತನ್ನ ರೂಮ್ ಗೆ ಹೋಗಿ ಬಾಗಿಲು ಹಾಕಿ ಚಿಲಕ ಹಾಕಿಕೊಂಡ.. ಹೀಗೆ ಎರಡು ದಿನ ಕಳೆದು ಮಂತ್ರವಾದಿ ಶ್ರೀ ಗೆ ಹಿಡಿದಿರೋ ಭೂತ ಬಿಡಿಸೋಕೆ ಶ್ರೀ ನ ತಂದೆ ಕರೆದುಕೊಂಡು ಬಂದ. ಮಂತ್ರವಾದಿ ಶ್ರೀ ನ ಬಳಿ ಬಂದು ನೀನು ಯಾರು ಅಂದ
ಅದಕ್ಕೆ ಉತ್ತರವಾಗಿ ಶ್ರೀ ತನ್ನ ಫೋನ್ ನಲ್ಲಿ ಇದ್ದ ಪ್ರದಿ ಫೋಟೋನ ತೋರಿಸ್ದ. ಯಾಕೆ ಬಂದಿದೀಯ ಅಂತ ಮಂತ್ರವಾದಿ ಕೇಳ್ದಾ. ಅದಕ್ಕೆ ಶ್ರಿ ತನ್ನ ಫೋನ್ ಗೆ ಪ್ರದಿ ಸೆಲ್ ನಿಂದ ಬಂದ ಮೆಸೇಜ್ ನ ತೋರಿಸ್ದ ಅದರಲ್ಲಿ I WILL KILL U ಅಂತ ಬರೆದಿತ್ತು. ಮೆಸೇಜ್ ಬಂದಿದ್ದ ಹತ್ತು ನಿಮಿಷದ ಹಿಂದೆ ಮಾತ್ರ. ಪುಷ್ಕರಣಿ ಎಂಬ ಪ್ರೇತಗಳ ಆವಾಸ ದ್ವೀಪದಲ್ಲಿ ಪ್ರದಿ ಸತ್ತು ಈಗಾಗಲೆ 2 ದಿನ ಕಳೆದಿದೆ ಅನ್ನೋದು ನೆನಪಿರಲಿ. ಮಂತ್ರವಾದಿ ಇದೆಲ್ಲ ಭೂತ ಅಲ್ಲ ಯಾರೋ ಹೆದರಿಸೋಕೆ ಮಾಡಿದಾರೆ ಅಂತ ಹೇಳ್ದ. ಅದಕ್ಕೆ ಶ್ರಿ ಪ್ರದಿ ಸತ್ತೋಗಿದಾನೆ ಅಂದ. ಆಗ ಶ್ರೀ ನ ತಂದೆ ಅವರು ಪುಷ್ಕರಣಿಗೆ ಹೋಗಿದ್ದ ವಿಷಯ ಹಾಗೂ ತಾನು ಮಗನಿಗೆ ತಾಯತ ಕಟ್ಟಿ ಕಳಿಸಿದ್ದೆ ಅದಕ್ಕೆ ಆತ ಬದುಕಿ ಬಂದ ಅಂತ ಹೇಳಿದ್ದು ಕೇಳಿ ಸ್ವಲ್ಪ ಅನುಮಾನ ಬಂತು ಪ್ರದಿ ಭೂತ ಆಗಿ ಶ್ರೀ ನ ಕಾಡ್ತಾ ಇರಬೇಕು ಅಂತ ಅಂದ್ಕೊಂಡು ಶ್ರೀ ಹಾಗೂ ಅವನ ಮನೆಗೆ ಅಷ್ಟದಿಗ್ಬಂದನ ಹಾಕಿದ ಆದರೆ ಆತನಿಗೇನು ಗೊತ್ತು ಪಾಪ...

ಮುಂದುವರಿಯುವುದು...

Sunday, 29 January 2012

ಕನಸೊಂದರಲ್ಲಿ

ಕಂಡೆ ನಾ ಕನಸೊಂದರಲಿ ಕನಸನ್ನ
ಅರಿಯೆ ನಾ ಬಣ್ಣಿಸಲಿ ಆ ಕನಸನ್ನ
ಊಹಿಸಲಾರೆನಾ ಪದತೋಚದೇ ಪರದಾಡೊ ಸ್ಥಿತಿಯನ್ನ
ಕನಸು ವಿನಾ ಕಾರಣ ಸೆಳುವುದೇತಕೆ ಮನಸನ್ನ

ಕನಸಲ್ಲಿ ಸುಳಿದವನೇಕ ನೆನಪುಗಳು ಸುತ್ತ
ಕಾಡುವುದಿಲ್ಲಿ ಕನಸುಗಳು ನೆನಪನ್ನ ಹೊತ್ತು
ಸಾಗುತಿದೆ ಆಸೆಗಳು ಕನಸಿನೂರಿನತ್ತ

ಒಂದೇ ಬಾವದ ನೆನಪುಗಳ ಕಂತೆ ಪೋಣಿಸುವಾಗ
ಸಂತೆಗಳಲಿ ಹೊಂಚು ಹಾಕಿದಂತೆ ಕನಸುಗಳಿರುವಾಗ
ನೆನಪಿನ ಆಸೆಗಳ ಮೂಟೆ ಹಂಚುವುದೇತಕೆ ಜೊತೆಗೆ
ಬರುವೆ ನಾ ನೆನಪಿನ ಕನಸಿನೂರಿಗೆ

Saturday, 28 January 2012

ಒಂದರಿಂದ ಹತ್ತು

ಒಂದುದಿನ ನಾನು
ಒಂದು ಸುಂದರಿಯ ಕಂಡೆ
ಒಂದು ಮಾತೂ ಆಡದೆ
ಒಂದೇ ನೊಟಕೆ ಸೋತೆ

ಎರಡು ಕಣ್ಣನು ತುಂಬುತ
ಎರಡು ಕಿವಿಯಲಿ ಗುಂಯ್ಗುಟ್ಟುತ
ಎರಡು ಕೈಯನು ಕೊಟ್ಟು ಹೋದೆಯಾ?
ಎರಡು ನಾಲಿಗೆಯಂತ ಮಾತು ಸರಿಯಾ?

ಮೂರು ಹೊತ್ತು ನಿನ್ನ ಸ್ಮರಣೆಯು
ಮೂರು ಶಬ್ದವ ಹೇಳೋ ಬಯಕೆಯು
ಮೂರು ಗಂಟನು ಕಟ್ಟುವಿಚ್ಚೆಯು
ಮೂರು ಅಕ್ಷರದ ಜೀವನ ಸಾಗಿಸುವಾಸೆಯು

ನಾಲ್ಕು ವೇದದ ಆಣೆ ಮಾಡದೆ
ನಾಲ್ಕು ಮಾತನೂ ಆಡದೆ
ನಾಲ್ಕು ಸಾಲಿನ ಪದ್ಯ ಬರೆದು
ನಾಲ್ಕು ಜನಮೆಚ್ಚುವಂತೆ ವರಿಸುವೆ

ಪಂಚ ಕೋಟಿ ತಾರೆಯಂದದಿ
ಪಂಚ ಇಂದ್ರಿಯವನ್ನ ಸೆಳೆಯುತ
ಪಂಚಾಂಮೃತದಂತ ಮಾತ
ಹೇಳಲು
ಪಂಚಾಂಗವ ಏತಕೆ ನೊಡುವೆ?

ಆರು ಋತುಗಳು ಎದುರು ನಿಂತರು
ಆರು ಜನರನು ಕರೆದು ತಂದರು
ಆರು ಅರಗಿನ ಮನೆಯ ಸುಟ್ಟರು
ಆರದಿರುವ ಪ್ರೇಮಜ್ಯೋತಿ ಕೊಡುವೆಯಾ

ಏಳು ಸಾಗರದಾಚೆ ನೀನಿರಲು
ಏಳು ಲೋಕದಿ ಯಾರು ತಡೆದರು
ಏಳು ಬಾರಿ ಭೂಮಿ ಬಿರಿದರು
ಏಳು ಹೆಜ್ಜೆಯ ತುಳಿಯುವಿಚ್ಚೆಯು

ಎಂಟು ಅಕ್ಷರ ಪ್ರೀತಿ ಮಾತನು
ಎಂಟು ಗಳಿಗೆ ಮೊದಲು ಹೇಳಲು
ಎಂಟು ದಿಕ್ಕುಗಳ ಕಣ್ಣ ತಪ್ಪಿಸಿ
ಎಂಟುದಳದ ಪುಷ್ಪವ ನಾ ಕೊಡುವೆ

ನವ ಶಕ್ತಿಯರ ಹಾರೈಕೆಯಿರಲು
ನವ ಗ್ರಹಗಳು ಕಾಟ ಕೊಟ್ಟರೂ
ನವ ವರುಷ ಬರುವ ಮೋದಲೆ
ನವರಸದಿ ರಂಜಿಸಿ ಮನದಿ ಅರ್ಚಿಸಿದೆ

ಹತ್ತು ಸುಂದರ ಕನಸ ಕಂಡೆನು
ಹತ್ತು ಸಾರಿ ಹೇಳಿ ಸೋತೆನು
ಹತ್ತು ಚರಣದ ಕವಿತೆ ಬರೆದೆನು
ಹತ್ತು ಬಾರಿ ಅತ್ತು ಕೂತೆನು

ನಿಲ್ಲದೋಡಿದ ಚಲುವೆ ನೀನು
ನಿನ್ನ ಹುಡುಕುತಿಹ ಪ್ರೇಮಿ ನಾನು


ಸಹಾಯ ಪ್ರದೀಪ ಹೆಗಡೆ

ಪ್ರೇಯಸಿ

ಸೊಂಪಾದ ನಿನ್ನ ಹೆರಳು
ತಂಪಾನಿಲ ಬೀಸಲು
ಮೆಲ್ಲನತ್ತಿತ್ತ ಹಾರಿತು
ನನ್ನ ಮನವದನ್ನ ಕಂಡಿತು
ಆಗ ಅದು ಪ್ರೀತಿಯಲಿ ಬಿತ್ತು

ನಯನದಿ ಮಂದಹಾಸ ಬೀರುತ
ಕುಡಿಗಣ್ಣ ನೋಟದಲೆ ನನ್ನ ಕೊಲ್ಲುತ
ತಿರುಗದೆ ಎಲ್ಲಿ ಸಾಗುತಿರುವೆ ಓಡುತಾ

ಮನದಲಿ ನೆನೆದಾಗ ನೆನಪಿನ ಮಯೂರ
ನನಗೆ ನೀ ಸಿಗದಾದಾಗ ಬಾಳೇ ಕಠೋರ
ಏನೇ ಆದರು ನನ್ನ ಪ್ರೀತಿ ಎಂದೂ ಅಮರ

Thursday, 26 January 2012

ಕಾಡುತಿರುವೆ ಹೀಗೆಕೆ

ಮನದ ನೆನಪಲ್ಲೇ ಉಸಿರಾಡಿ
ಬದುಕೆಲ್ಲವೂ ಬರಗಾಲಮಾಡಿ
ನೀ ಕಾಡುತಿರುವೆ ಹೀಗೆಕೆ

ಮನದಿ ಪ್ರೀತಿಯು ಅಲೆಯೆಬ್ಬಿಸಿ
ಎದೆಯೆಲ್ಲಿ ಕೊಲಾಹಲ ಸೃಷ್ಟಿಸಿ
ನೀ ಕಾಡುತಿರುವೆ ಹೀಗೆಕೆ

ತಂಗಾಳಿಯೇ ಬಿಸಿಯಾಗಿದೆ
ನೋವಿಂದು ಅತಿಯಾಗಿದೆ
ನೀ ಕಾಡುತಿರುವೆ ಹೀಗೇಕೆ

ಪಾನಿಪುರಿಯಂಗಡಿ

ದಾರಿಯಲ್ಲಿ ಕಂಡಿತು ತಳ್ಳುವ ಗಾಡಿ
ಅದು ಮಾಡಿತು ಏನೋಮೋಡಿ
ನೀರೂರಿತು ಅದನ್ನ ನೋಡಿ
ಯಾಕಂದರೆ ಅದು ಪಾನಿಪುರಿಯಂಗಡಿ

ಬಳಿಗೆ ಹೋಗಿ ನಿಂತೆ ನಾನು
ಏಷ್ಟು ಬೇಕೆಂದು ಕೇಳಿದ ಅವನು
ಮಾಡಲು ಹೇಳಿದೆ ಬಟ್ಟಲು ಎರಡುನ್ನು
ತಯಾರಿಸಿದ ಬಿಸಿಬಿಸಿಯಾಗಿ ಅವನು

ನೋಡುವಾಗಲೆ ಬಾಯಲ್ಲಿ ಬಂತು ನೀರು
ತಿಂದಾಗ ಕಣ್ಣಲ್ಲೂ ಬಂತು ನೀರು
ಆಗಿತ್ತು ಅದು ತುಂಬಾ ಖಾರ
ಮಾಡಿತು ಅದು ನನ್ನೊಂದಿಗೆ ಸಮರ

ಸಹಿಸಲಾಗದೆ ಸ್ವಲ್ಪ ಸಿಹಿಯ ಹಾಕಿಸಿಕೊಂಡೆ
ಸಿಹಿಯಾದ ಪಾನಿಪುರಿ ಬಾಯೊಳು ನಗುವುದಕಂಡೆ
ಎರಡು ಬಟ್ಟಲ ಗಬಗಬನೆ ತಿಂದೆ
ಅವನಲ್ಲಿ ಮತ್ತೊಂದು ಬೇಕು ಎಂದೆ

ನನ್ನಲಿ ಹಣದ ಕೊರತೆ ಅಂದು ಇತ್ತು
ಹಿಂತಿರುಗಿ ಬಂದೆ ಆತನಿಗೆ ಇಪ್ಪತ್ತು ರೂಪಾಯಿಯಿತ್ತು
ನೆನಪಾಗುತ್ತಲೇ ಇತ್ತು ಪಾನಿಪುರಿ ಗಮ್ಮತ್ತು
ಇಂದು ಏರಿತು ಅದರ ನೆನಪಿನ ಮತ್ತು

ನೆನಪುಗಳು

ನೀನು ದೂರ ಹೋದಾಗ
ಜೇನು ಕಚ್ಚಿ ಹಾರಿದಂತೆ
ನಿನು ಕನಸಲಿ ಬಂದಾಗ
ತುಂಟ ಲಜ್ಜೆ ಕೆಣಕುವಂತೆ
ನಿನ್ನ ನೆನಪುಗಳು ಕವಿದಾಗ
ತುಟಿಯ ಬಿಚ್ಚಿ ಹಾಡಿದಂತೆ
ನೀನು ಮೆಲ್ಲನೆ ನಡೆವಾಗ
ಕಾಲ ಹೆಜ್ಜೆ ಕುಣಿಯುವಂತೆ

ನೀನು ಮಾತನಾಡುವಾಗ
ವಸಂತದ ಕೋಗಿಲೆಂತೆ
ನೀನು ಓಡುವುದು ಕಂಡಾಗ
ಮಯೂರವು ನಾಚಿತಂತೆ
ನೀನು ನಗುತಿರುವಾಗ
ಮುಗಿಲುಕರಗಿ ಮಳೆಯಾಯಿತಂತೆ
ನೀ ಮುಂದೆ ಸಾಗುವಾಗ
ಹಿಂತೆ ಬರುವರು ಎಲ್ಲ ಹುಚ್ಚರಂತೆ
ಒಮ್ಮೆ ನೋಡೆಯಾ ತಿರುಗಿ
ಎಂಬುದೇ ನನ್ನ ಚಿಂತೆ

ಹೆಣ

ಶ್ವೇತ ವಸ್ತ್ರವ ಹೊದೆಸಿರಲು
ನಾಸಿಕದೊಳು ಹತ್ತಿ ಇಟ್ಟಿರಲು
ಕರೆವರು ಅದನ್ನು ಹೆಣವೆಂದು

ಎದುರಲಿ ಮಡಿಕೆಯೊಳು ಕೆಂಡ ತುಂಬಿರಲು
ಬಿದಿರ ರಥದೊಳು ಹಾಯಾಗಿ ಮಲಗಿರಲು
ಕರೆವರು ಅದನ್ನು ಹೆಣವೆಂದು

ಅಕ್ಕಿಯ ಕಾಳು ಬಾಯೊಳು ಇರಲು
ಹೆಕ್ಕಲು ಚಿಲ್ಲರೆ ಬದಿಯಲಿ ಚೆಲ್ಲಿರಲು
ಕರೆವರು ಅದನ್ನು ಹೆಣವೆಂದು

ಬೆರಳನು ಜೋಡಿಸಿ ದಾರವ ಕಟ್ಟಿರಲು
ಸಂಬಂಧಿಗಳು ಅಳುತ ಕುಳಿತಿರಲು
ಕರೆವರು ಅದನ್ನು ಹೆಣವೆಂದು

ಸುಡಲೆಂದು ಅಗ್ನಿದೇವನು ಕಾದಿರಲು
ಗಂಗೆಯು ಶುದ್ಥವ ಮಾಡಿರಲು
ಭಸ್ಮವಾಗುತಿರುವ ಅದನ್ನು ಹೆಣವೆನ್ನುವರು

Wednesday, 25 January 2012

ಊಟ

ಊಟಕ್ಕೆ ಕೂತಾಗ
ಸಾಂಬಾರು ತಂದಾಗ
ಬಿಸಿಯಾಗಿ ಇದ್ದಾಗ
ಬಾಯ್ಸಟ್ಟು ಹೋಯಿತೀಗ||

ಅಡುಗೆಯ ನೋಡುವಾಗ
ವಿಧ ವಿಧ ತರ ಇರುವಾಗ
ಸಿಹಿತಿನಿಸು ಕಂಡಾಗ
ಬಾಯ್ನೀರು ಬಂದಾಗ
ಜಾಮೂನು ಕರೆದಾಗ
ರುಚಿನೋಡ ಹೋದಾಗ
ಮನತಡೆಯದೆ ಇರುವಾಗ
ತಿನಲು ಬಾಯೀ ತೆರೆದಾಗ
ಬಂದೆಯ ತಿನ್ನಲು ಜಾಂಗೀರ||

ಜೇನಂತ ಜಾಂಗೀರಲ್ಲಿ
ಸಿಹಿಯಾದ ತಿಂಡಿಲಿ
ಸವಿತಿನ್ನೋ ಆಸೇಲಿ
ಶುಗರಿರೋದು ನೆನಪಿರಲಿ
ಊಟವಿದು ಹಗಲಲ್ಲಿ
ಇರುವುದೇ ತಿನಿಸು ರಾತ್ರೀಲಿ
ಇಲ್ಲವಾದಲ್ಲಿ ನೋವೆಲ್ಲಿ ನಲಿವೆಲ್ಲಿ
ಹೇಳಬಾರದಿತ್ತು ಈ ವಿಷಯ ನಿನ್ನಲ್ಲಿ
ಬಾಬಾರೊ ಮಿತ್ರ ನಾನಿರೋದು ಛತ್ರ||

ಮದ್ವೇಯ ಛತ್ರದಲ್ಲಿ
ಮದ್ಯಾನ್ಹ ಊಟದಲ್ಲಿ
ಸಿಹಿತಿನಿಸು ಸಿಹಿಯಾಗಿ
ಅಡುಗೇಯು ರುಚಿಯಾಗಿ
ತಿನಿಸೆಲ್ಲ ಬರಿದಾಗಿ
ಮತ್ತೊಮ್ಮೆ ರೆಡಿಯಾಗಿ
ಕನಸಲ್ಲು ನೆನಪಾಗಿ
ನಿದ್ರೇಯು ಬರದಾಗಿ
ಬಿಸಿಯಿರಲಿ ತಂಪಿರಲಿ
ಸಿಹಿಯಿರಲಿ ಕಹಿಯಿರಲಿ
ತಿನ್ನುವಷ್ಟು ತಿನ್ನೋಣ ಬಾರಾ||

ಊಟಕ್ಕೆ ಕೂತಾಗ
ಸಾಂಬಾರು ತಂದಾಗ
ಬಿಸಿಯಾಗಿ ಇದ್ದಾಗ
ಬಾಯ್ಸಟ್ಟು ಹೋಯಿತೀಗ||

ನಿನಗಂದು ಮರುಳಾದೆನು

ಜುಮು ಜುಮು ಚಳಿಯಲಿ
ಬಿಸಿ ಬಿಸಿ ಬಯಕೆಯಲಿ
ಹಸಿ ಹಸಿ ಕನಸುಗಳಲಿ
ಮಾಸಿ ಹೋಗದ ನಿನ್ನ ನೆನಪಲಿ
ಬರೆಯುತಿರುವೀ ಕವೆತೆಯಲಿ

ಮುಂದೆ ಬಾಗುತ ಅತ್ತಿತ್ತ ಹಾರುತ
ಆಗಾಗ ನಾಚುತ ಪುನಃ ಪುನಃ ನೋಡುತ
ಬಂದು ಬಂದು ಮುತ್ತನು ಕೊಡುತಿಹ
ನಿನ್ನ ಮುಂಗುರುಳಾಂದಕೆ ನಾ
ನಿನಗಂದು ಮರುಳಾದೆನು

ಚಿಲಿಪಿಲಿ ಕಲರವದ ನಡುವಲಿ
ಬೆಚ್ಚನೆಯ ಬಿಸಿಯುಸಿರ ಜೊತೆಯಲಿ
ಮನದಿಚ್ಚೆಯಂತೆ ನೀ ಹಾಡುತಿರುವ
ಮೌನರಾಗವನು ಕೇಳುತಲಿ ನಾನು
ನಿನಗಂದು ಮರುಳಾದೆನು

ಬೆಳ್ಳಂಬೆಳಗ್ಗೆ ಬಾನಂಚಲ್ಲಿ
ಮುಗಿಲ ಸಾಲನು ಸೀಳಿ ಬರುತಿಹ
ಸೂರ್ಯರಷ್ಮಿಯ ಬೆಳಕಂತಾ
ನಿನ್ನ ನಗುವ ಕಂಡು ನಾನು
ನಿನಗಂದು ಮರುಳಾದೆನು

ಲತೆಗಳೆಲ್ಲ ಗಾಳಿಗಲುಗಾಡಿದಂತೆ
ನಿನ್ನ ನಡಿಗೆಯ ಕಂಡೆ ನಾನು
ಮುಂಗಾರಲ್ಲಿ ಕಾರ್ಮೋಡ ಕವಿದಾಗ
ಸುರಿವ ಮಳೆಯಂದೆ ಸುರಿಸು ನೀ
ನನಗಿಂದು ಪ್ರೇಮಾಮೃತವನು

ಒಮ್ಮೆ ಬಾರೆ

ಮಿಂಚಿ ಮರೆಯಾಗುವ ಚೆಲುವೆ ನಿನ್ನ
ಅಂಚೆ ವಿಳಾಸವನಾದರೂ ತಿಳಿಸೆ
ಮುಂಚಿನಿಂದಲೂ ಹೇಳ ಬಯಸಿಹೆ
ಕೊಂಚ ಕಡಿಮೆ ಧೈರ್ಯ ನನಗೆ

ಹೃದಯ ವೀಣೆಯೊಳು
ಮೌನರಾಗ ಮೀಟಿದೆ
ಇಂಪಾದ ರಾಗಕ್ಕೆ
ತಂಪಾಗಿ ಒಮ್ಮೆ ಬಾರೆ

ಸೊಂಪಾದ ಕಂಠದಿಂದ
ಮಂಪರು ಬರಿಸಿದ
ಕಂಪನು ಸೂಸುತ ಪ್ರೇಮದಿ
ಚಂಪಾ ನೀ ಬಾರೆ

ನನ್ನಾ ಕವನಕೆ ಪಲ್ಲವಿಯಾದಂತೆ
ಚರಣಕೊಂದು ಪ್ರೀತಿ ಭಾವ ನೀಡೆ
ತಾಳ ತಪ್ಪುವುದರೊಳಗೆ ನನ್ನ ತಪ್ಪ ತಿಳಿಸೆ
ಹಾಳು ಮನಸಿನ ಪ್ರೇಮದಾಸೆಯ ಉಳಿಸೆ

ಪ್ರೇಮ ಜ್ಯೊತಿ

ಬಾಳ ಪಯಣದಿ ಕೈಯ ಹಿಡಿಯದೆ
ಹಾಳು ಹೃದಯದಿ ಪ್ರೀತಿ ತುಂಬಿದೆ
ಆಳು ಎನ್ನುತ ದೂರ ತಳ್ಳಿದೆ
ಹೇಳು ನಿನ್ನಲಿ ಕರುಣೆ ಇಲ್ಲವೆ

ಉಸಿರು ನೀನೆಂದು ತಿಳಿದ ಪ್ರೇಮವ
ಹಸಿರು ಮಾಡು ಓ ನನ್ನ ಚಲುವೆ
ಕೆಸರಲ್ಲೆ ಕಮಲ ಬೆಳೆವುದು
ಪೆಸರ ಪೇಳಿ ಪ್ರೇಮ ಬೆಳೆಸೆ

ಕೋಟಿ ತಾರೆಯ ಅಂದವು ನಿನ್ನದು
ಸಾಟಿ ಯಾರೂ ಇಲ್ಲದಂದವು
ಸಹಪಾಠಿಯಾಗು ಬಾ ನಿ ಬಾಳಲಿ
ದೀವಟಿಯಾಗಿ ಪ್ರೀತಿ ಬೆಳಗೆಲೆ

ನನ್ನ ಕಲ್ಪನೆ

ಭೂರಮೆಯ ರಮಿಸಲೆಂದು
ನೇಸರನು ಭಾನರಥವೇರಿ ಬಂದು
ಭುವಿಗೆ ತಲೆಭಾಗಿ ನಿಂದು
ಪ್ರೇಮ ಭಿಕ್ಷೆಯ ಕೋರಲು
ನಗುನಗುತಾ ಇಳೆ ಒಲ್ಲೆಯೆಂದಳು

ಮನನೊಂದ ದಿನಕರನು ಸೋದರನ ಕರೆದು
ನಡೆದ ವಿಷಯವನರುಹಿ ಅಳಲು
ಅಗ್ರಜನ ಸಂತೈಸಿ ಹೇಳಿದ ಚಂದಿರ
"ಪ್ರೀತಿ ಪ್ರೇಮವ ನಂಬದಿರು ಸೋದರ
ಅದು ಕಳೆದುಕೊಂಡಿದೆ ನೈಜ ಆಕಾರ"

ಇತ್ತ ಅತ್ತಿತ್ತ ನೋಡುತ್ತಿದ್ದ ಇಳೆಯು
ಶಶಿಯ ರೂಪರಾಶಿಯನು ಕಂಡಳು
ತಿಂಗಳಾಂದಕೆ ಮನಸೋತು ಕೂಗಿ ಕೇಳಿದಳು
"ನಿನ್ನ ಪ್ರೇಮವ ಬಯಸುತಿರುವೆನು ನಾ
ನಿನ್ನ ಉತ್ತರಕೆ ಉತ್ತರದಿ ಕಾದಿರುವೆನು ನಾ"

ಒಮ್ಮೆ ಚಂದಿರನತ್ತಿತ್ತ ನೋಡಲು
ರವಿಯ ಕಣ್ಣೀರಿಂದ ತುಂಬಿತ್ತು ಕಡಲು
ಪ್ರೀತಿ ಬೇಡವೆಂದಿತು ಮನದ ಒಡಲು
ಆದರೂ ಕೇಳದೆ ಸಿಡಿಯಿತು ಪ್ರೀತಿಯಾ ಸಿಡಿಲು
ಸೇರಬೇಕೆನಿಸಿತು ಧರೆಯಾ ಮಡಿಲು

ಉತ್ತರವ ತಿಳಿಸದೇ ಉಳಿದನು ಚಂದಿರ
ಸೋದರನ ಮೆಚ್ಚಿದನು ಧಿನಕರ
ಸ್ನೇಹಿತೆಯಾಗೆ ಉಳಿದಳು ವಸುಂಧರ
ತುಂಬುತಿದೆ ಇಂದಿಗೂ ಅವರ ಸ್ನೇಹ ಭಂಡಾರ
ಇದನ್ನ ಕಲ್ಪನೆಯೊಳು ಕಂಡ ನಾನು 'ಭಾಸ್ಕರ'

Tuesday, 3 January 2012

ಭಾಗ 2 ದ್ವೀಪದಲ್ಲಿ ದೀಪಧರರಾತ್ರಿ ಇಬ್ಬರೂ ಗಡಗಡ ನಡುತ್ತಾ ಇದ್ರು ಎಷ್ಟು ಚಳಿ ಇತ್ತು ಅಂದರೆ ಹಿಮದಮೇಲೆ ಮಲಗಿದ ಹಾಗೆ ಇತ್ತು. ಚಳಿಲೂ ನಡುಗುತ್ತಾ ಸುಖನಿದ್ರೆನ ಕಷ್ಟಪಟ್ಟು ಮಾಡ್ತಾ ಇದ್ರು. ಆಗ ಇದ್ದಂತೆ ಚಳಿ ಜಾಸ್ತಿ ಆಯಿತು. ನಮ್ಮ ದೀಪು ಎದ್ದು ಬೆಂಕಿಬಳಿ ಹೋಗಿ ಕುತ್ಕೊಂಡ. ಗಡಗಡ ನಡುಗುತ್ತಾ ಇದ್ದಾಗ ಇದ್ದಕ್ಕಿದ್ದಂತೆ ಮೊಬೈಲ್ ಜೋಬಿನಲ್ಲಿ ಡಾನ್ಸಮಾಡೋಕೆ ಶುರು ಮಾಡ್ತು. ಹೇಳೋಕೆ ಮರ್ತಿದ್ದೆ ದೀಪುಗೆ ಮೊಬೈಲ್ ನ ವೈಬ್ರೇಷನ್ ನಲ್ಲಿ ಇಡೋ ದೊಡ್ಡ ಕಾಯಿಲೆ ಇತ್ತು. ಇದ್ದಕ್ಕಿದ್ದಂತೆ ಮೊಬೈಲ್ ಕರೆಯುತ್ತಾ ಇರೋದು ನೋಡಿ ದೀಪು ಜೋಬಿಂದ ಎತ್ತಿ ನೋಡ್ತಾನೆ ಒಂದು ಫೋನ್ ಬರ್ತಿದೆ. ಸಿಗ್ನಲ್ ಇಲ್ಲ ಒಂದುಕ್ಷಣ ಗಾಬರಿಯಾದ ದೀಪು ಚೇತರಿಸ್ಕೊಂಡು ಕಾಲ್ ರಿಸೀವ್ ಮಾಡ್ದಾ ಅಲ್ಲಿಂದ ಒಂದು ಇಂಪಾದ ಹುಡುಗಿಯ ದ್ವನಿ "hai sweet heart how r u? ಓ ಚೆನ್ನಾಗಿದ್ದೀಯ ಅಂತ ಗೊತ್ತು ಆದರೆ ಮುಂದೆ ಇರೋಕೆ ಆಗಲ್ಲ ನಿನಗೆ ನೀನೇ ಶತ್ರು ನೆನಪಿರಲಿ ಆದಷ್ಟು ಬೇಗ ಇಲ್ಲಿಂದ ಹೊರಟುಹೋಗು ಇಲ್ಲಾಂದ್ರೆ ನಿನ್ನ ಸಾಯಿಸಿಬಿಡ್ತಾರೆ i want to help u but i cant because" ಅಂತ ಕಾಲ್ ಕಟ್ ಆಯಿತು ಗಡಗಡ ಚಳಿಲೂ ಕಾವೇರಿ ನೀರಿನ ತರ ಬೆವರು ದೀಪು ಮೈನಿಂದ ಹರಿಯೋಕೆ ಶುರುವಾಯ್ತು. ನಂಬರ್ ಗೆ ತಿರುಗಿ ಕಾಲ್ ಮಾಡೋಣ ಅಂದ್ರೆ ನೆಟ್ ವರ್ಕ್ ಇಲ್ಲ ಬಾಯಿ ತೊದಲೋಕೆ ಶುರವಾಯಿತು ಶ್ರೀ ಅಂತ ಜೋರಾಗಿ ಕಿರುಚಿದ ನಿದ್ದೆ ಮಾಡ್ತಿದ್ದ ಶ್ರಿ ನಿದಾನ ಎದ್ದ.
ಕಣ್ಣುಜ್ಜಿಕೊಳ್ಳುತ್ತಾ "ಏನೋ ನಿನ್ ಕಾಟ ನಿದ್ರೆ ಮಾಡೋಕು ಬಿಡಲ್ವಲ್ಲೊ" ಅಂದ ದೀಪು ಆಗ ಕಾಲ್ ಸಮರಿ ತೋರಿಸಿ ವಿಷ್ಯ ಎಲ್ಲಾ ಹೇಳ್ದಾ. ಶ್ರೀಗೂ ಭಯ start ಆಯಿತು ಆದ್ರೂ ದೈರ್ಯ ತಂದಕೊಂಡು "network ಇಲ್ಲದೇ ಕಾಲ್ ಹೇಗೊ ಬರುತ್ತೆ ಸುಮ್ನೆ ಹೆದರ್ಕೊಬೇಡ ಸುಮ್ನಿರು ಅಂದ" ಅಷ್ಟರಲ್ಲಿ ಇವರು ಮಲಗಿದ್ದ ಜಾಗದ ಮೇಲೆ ಮರ ಮುರಿದು ಬಿತ್ತು. ಆಗ ದೀಪು "oh my god ಲೇ ನೋಡು ಅಲ್ಲಿ ನಾವೇನಾದ್ರು ಮಲಗಿದ್ರೆ ಏನಾಗ್ತಿತ್ತು ಅಂತ ಪುಣ್ಯ ಬಚಾವಾದ್ವಿ ಜೈ ಮಂಕಾಳಮ್ಮ" ಅಂದ ಆಗ ಸರಿಯಾಗಿ 12 ಗಂಟೆ ಟೈಂ. ಹುಣ್ಣಿಮೆ ಚಂದ್ರ ಪಳಪಳ ಹೊಳಿತಾ ಇದ್ದ ಹಾಗಾಗಿ ಬೆಳಕು ಬೇಕಾಡಷ್ಟು ಇತ್ತು. ಮರ ಎತ್ತಿ ಟೆಂಟ್ ಸರಿಮಾಡ್ಬೇಕು ಅಂತ ಹೋಗಿ ಮರ ಎತ್ತೋಕೆ ಶುರುಮಾಡಿದ್ರು. ಆಗ ಮರದಲ್ಲಿದ್ದ ಜೇನುಹುಳ ಕಚ್ಚೋಕೆ ಬಂತು. ಅದನ್ನ ನೋಡಿ ಇಬ್ಬರೂ ಓಡೋಕೆ ಶುರು ಮಾಡಿದ್ರು ಇಬ್ಬರೂ ಬೇರೆ ಬೇರೆಕಡೆ ಓಡಿದ್ರು. ಓಡ್ತಾ ಓಡ್ತಾ ಶ್ರಿ ಒಂದು ಹೊಂಡದೊಳಗೆ ಬಿದ್ದ. ಇತ್ತ ದೀಪು ಒಂದು ಗಾರ್ಡನ್ ಗೆ ಬಂದ. ಗಾರ್ಡನ್ ನಲ್ಲಿ ಬೇಕಾಡಷ್ಟು ಹೂ ಹಣ್ಣಿನ ಗಿಡ ಇತ್ತು. ನೋಡ್ತಾ ನೋಡ್ತಾ ಒಂದು ಅಣಬೆ ( ನಾಯಿಕೊಡೆ ) ಮೇಲೆ ಕಾಲಿಟ್ಟ. ಆಗ ಕರಂಟ್ ಶಾಕ್ ತರ ಶಾಕ್ ಹೊಡಿತು ಒಂದು ಸಲ ಮೈ ಕೊಡವಿಕೊಂಡು ಮತ್ತೆ ಆ ಅಣಬೆ ಹತ್ರ ಹೋಗಿ ಕೈಲಿ ಮುಟ್ಟಿದ ಆಗ್ಲೂ ಶಾಕ್ ಹೊಡಿತು. ಏನಪ್ಪಾ ಆಶ್ಚರ್ಯ ಅಣಬೆ ಶಾಕ್ ಹೊಡೆಯುತ್ತೆ ಅಂತ ಯೋಚನೆ ಮಾಡ್ತಾ ಇದ್ದಾಗ ಮತ್ತೆ ಪೋನ್ ಜುಮ್ ಜುಮ್ ಅನ್ನೋಕೆ ಶುರುವಾಯ್ತು.
ಮತ್ತೆ ಭಯದಿಂದ ಕಾಲ್ ರಿಸೀವ್ ಮಾಡ್ದ ಆಗ "hello dear ಆ ಅಣಬೆನಲಿ ಇಲೆಕ್ಟ್ರಾನ್ಸ ಇದೆ ಹಾಗಾಗಿ ನೀನು ಮುಟ್ಟಿದ್ರೆ ಶಾಕ್ ಹೊಡೆಯುತ್ತೆ. ನೀನು ಮೋದಲನೇದಾಗಿ ಈ ದ್ವೀಪಕ್ಕೆ ಬಂದು ತಪ್ಪು ಮಾಡ್ದೆ ಇಲ್ಲಿ ಎಲ್ಲಾ ಇದೆ ಆದ್ರೆ ಮಾನವರಿಲ್ಲ ಹಾಗೆ ನಿನ ಎಡಗಡೆ ಕಾಣ್ತಾಇರೊ ಮಾವಿನ ಮರ ನರಭಕ್ಷಕ ಅದು ಅದು" ಅಂತ ಪೋನ್ ಕಟ್ ಆಯಿತು ಅಷ್ಟರಲ್ಲಿ ಗಾಳಿಗೆ ಆ ಮಾವಿನ ಮರ ಅಲ್ಲಾಡೋಕೆ ಶುರುವಾಯ್ತು. ಅದನ್ನ ನೋಡಿ ಭಯಪಟ್ಟ ದೀಪು ಅಲ್ಲಿಂದ ಓಡೋಕೆ ಶುರು ಮಾಡ್ದ. ಓಡ್ತಾ ಓಡ್ತಾ ಶ್ರೀ ಬಿದ್ದಿದ್ದ ಹೊಂಡದಲ್ಲಿ ಬಂದು ಬಿದ್ದ. ಶ್ರೀ ಹೇಳ್ದ "ನೀನು ಬಿದ್ಯಾ ಮೇಲಕ್ಕೆ ಹೋಗೋಕೆ ದಾರಿನೇ ಇಲ್ಲ ಏನೊ ಮಾಡೋದು ಇವಾಗ" ಅಂದ ಜೋರಾಗಿ ಉಸಿರು ಬಿಡುತ್ತಾ ದೀಪು ಹೇಳ್ದಾ "ಏನಾದ್ರೂ ದಾರಿ ಇದ್ದೇ ಇರುತ್ತೆ ಕಣೋ" ಅಂತ ಹೇಳ್ತಾ ಇದ್ದಾಗ ಒಂದು ನಾಗರಹಾವು ಬುಸ್ ಅಂತು 12 ಅಡಿ ಉದ್ದ ಅಗಲ ಆಳ ಇರೋ ಹೊಂಡದಲ್ಲಿ 10 ಅಡಿ ಉದ್ದದ ಹಾವು ಕಂಡು ಇಬ್ಬರ ಉಸಿರು ನಿಲ್ಲೋದು ಮಾತ್ರ ಬಾಕಿ ಇತ್ತು ಹಾವು ಆಪ್ತರಕ್ಷಕ ಪಿಲ್ಮನಲ್ಲಿ ಇರೊ ಹಾವಿನ ತರ ಇತ್ತು. ಇವರ ಪುಣ್ಯಾನೊ ಅಥವಾ ಆ ಹಾವಿಗೆ ಒಳ್ಳೆ ಬುದ್ದಿ ಇತ್ತೋ ಗೊತ್ತಿಲ್ಲ ಅಲ್ಲೆ ಪಕ್ಕದ ಬಂಡೆ ಒಳಗೆ ನುಸುಳಿ ಹೊಯಿತು ಬರೋಬರಿ 5 ಅಡಿ ಅಷ್ಟು ದಪ್ಪದ ಹಾವು ಏನೂ ಮಾಡದೆ ಬಿಟ್ಟಿದ್ದು ಆಶ್ಚರ್ಯಕರವಾಗಿತ್ತು ಇಬ್ಬರಿಗೂ ನಾವೇನ್ ಕನಸು ಕಾಣ್ತಾಇದ್ದೀವೇನೋ ಅನ್ನೊವಷ್ಟು ಆಶ್ಚರ್ಯ ಅಷ್ಟರಲ್ಲಿ ಮತ್ತೆ ಪೋನು ಜಿಂಗ್ ಚಕ್ ಜಿಂಗ್ ಚಕ್ ಅಂತ ದೀಪುಮತ್ತೆ ಭಯದಿಂದ ಕಾಲ್ ರಿಸೀವ್ ಮಾಡ್ದ ಆಗ "hello dear ಆ ಅಣಬೆನಲಿ ಇಲೆಕ್ಟ್ರಾನ್ಸ ಇದೆ ಹಾಗಾಗಿ ನೀನು ಮುಟ್ಟಿದ್ರೆ ಶಾಕ್ ಹೊಡೆಯುತ್ತೆ. ನೀನು ಮೋದಲನೇದಾಗಿ ಈ ದ್ವೀಪಕ್ಕೆ ಬಂದು ತಪ್ಪು ಮಾಡ್ದೆ ಇಲ್ಲಿ ಎಲ್ಲಾ ಇದೆ ಆದ್ರೆ ಮಾನವರಿಲ್ಲ ಹಾಗೆ ನಿನ ಎಡಗಡೆ ಕಾಣ್ತಾಇರೊ ಮಾವಿನ ಮರ ನರಭಕ್ಷಕ ಅದು ಅದು" ಅಂತ ಪೋನ್ ಕಟ್ ಆಯಿತು ಅಷ್ಟರಲ್ಲಿ ಗಾಳಿಗೆ ಆ ಮಾವಿನ ಮರ ಅಲ್ಲಾಡೋಕೆ ಶುರುವಾಯ್ತು. ಅದನ್ನ ನೋಡಿ ಭಯಪಟ್ಟ ದೀಪು ಅಲ್ಲಿಂದ ಓಡೋಕೆ ಶುರು ಮಾಡ್ದ. ಓಡ್ತಾ ಓಡ್ತಾ ಶ್ರೀ ಬಿದ್ದಿದ್ದ ಹೊಂಡದಲ್ಲಿ ಬಂದು ಬಿದ್ದ. ಶ್ರೀ ಹೇಳ್ದ "ನೀನು ಬಿದ್ಯಾ ಮೇಲಕ್ಕೆ ಹೋಗೋಕೆ ದಾರಿನೇ ಇಲ್ಲ ಏನೊ ಮಾಡೋದು ಇವಾಗ" ಅಂದ ಜೋರಾಗಿ ಉಸಿರು ಬಿಡುತ್ತಾ ದೀಪು ಹೇಳ್ದಾ "ಏನಾದ್ರೂ ದಾರಿ ಇದ್ದೇ ಇರುತ್ತೆ ಕಣೋ" ಅಂತ ಹೇಳ್ತಾ ಇದ್ದಾಗ ಒಂದು ನಾಗರಹಾವು ಬುಸ್ ಅಂತು 12 ಅಡಿ ಉದ್ದ ಅಗಲ ಆಳ ಇರೋ ಹೊಂಡದಲ್ಲಿ 10 ಅಡಿ ಉದ್ದದ ಹಾವು ಕಂಡು ಇಬ್ಬರ ಉಸಿರು ನಿಲ್ಲೋದು ಮಾತ್ರ ಬಾಕಿ ಇತ್ತು ಹಾವು ಆಪ್ತರಕ್ಷಕ ಪಿಲ್ಮನಲ್ಲಿ ಇರೊ ಹಾವಿನ ತರ ಇತ್ತು.

ಮುಂದುವರಿಯುವುದು