Saturday 28 January 2012

ಒಂದರಿಂದ ಹತ್ತು

ಒಂದುದಿನ ನಾನು
ಒಂದು ಸುಂದರಿಯ ಕಂಡೆ
ಒಂದು ಮಾತೂ ಆಡದೆ
ಒಂದೇ ನೊಟಕೆ ಸೋತೆ

ಎರಡು ಕಣ್ಣನು ತುಂಬುತ
ಎರಡು ಕಿವಿಯಲಿ ಗುಂಯ್ಗುಟ್ಟುತ
ಎರಡು ಕೈಯನು ಕೊಟ್ಟು ಹೋದೆಯಾ?
ಎರಡು ನಾಲಿಗೆಯಂತ ಮಾತು ಸರಿಯಾ?

ಮೂರು ಹೊತ್ತು ನಿನ್ನ ಸ್ಮರಣೆಯು
ಮೂರು ಶಬ್ದವ ಹೇಳೋ ಬಯಕೆಯು
ಮೂರು ಗಂಟನು ಕಟ್ಟುವಿಚ್ಚೆಯು
ಮೂರು ಅಕ್ಷರದ ಜೀವನ ಸಾಗಿಸುವಾಸೆಯು

ನಾಲ್ಕು ವೇದದ ಆಣೆ ಮಾಡದೆ
ನಾಲ್ಕು ಮಾತನೂ ಆಡದೆ
ನಾಲ್ಕು ಸಾಲಿನ ಪದ್ಯ ಬರೆದು
ನಾಲ್ಕು ಜನಮೆಚ್ಚುವಂತೆ ವರಿಸುವೆ

ಪಂಚ ಕೋಟಿ ತಾರೆಯಂದದಿ
ಪಂಚ ಇಂದ್ರಿಯವನ್ನ ಸೆಳೆಯುತ
ಪಂಚಾಂಮೃತದಂತ ಮಾತ
ಹೇಳಲು
ಪಂಚಾಂಗವ ಏತಕೆ ನೊಡುವೆ?

ಆರು ಋತುಗಳು ಎದುರು ನಿಂತರು
ಆರು ಜನರನು ಕರೆದು ತಂದರು
ಆರು ಅರಗಿನ ಮನೆಯ ಸುಟ್ಟರು
ಆರದಿರುವ ಪ್ರೇಮಜ್ಯೋತಿ ಕೊಡುವೆಯಾ

ಏಳು ಸಾಗರದಾಚೆ ನೀನಿರಲು
ಏಳು ಲೋಕದಿ ಯಾರು ತಡೆದರು
ಏಳು ಬಾರಿ ಭೂಮಿ ಬಿರಿದರು
ಏಳು ಹೆಜ್ಜೆಯ ತುಳಿಯುವಿಚ್ಚೆಯು

ಎಂಟು ಅಕ್ಷರ ಪ್ರೀತಿ ಮಾತನು
ಎಂಟು ಗಳಿಗೆ ಮೊದಲು ಹೇಳಲು
ಎಂಟು ದಿಕ್ಕುಗಳ ಕಣ್ಣ ತಪ್ಪಿಸಿ
ಎಂಟುದಳದ ಪುಷ್ಪವ ನಾ ಕೊಡುವೆ

ನವ ಶಕ್ತಿಯರ ಹಾರೈಕೆಯಿರಲು
ನವ ಗ್ರಹಗಳು ಕಾಟ ಕೊಟ್ಟರೂ
ನವ ವರುಷ ಬರುವ ಮೋದಲೆ
ನವರಸದಿ ರಂಜಿಸಿ ಮನದಿ ಅರ್ಚಿಸಿದೆ

ಹತ್ತು ಸುಂದರ ಕನಸ ಕಂಡೆನು
ಹತ್ತು ಸಾರಿ ಹೇಳಿ ಸೋತೆನು
ಹತ್ತು ಚರಣದ ಕವಿತೆ ಬರೆದೆನು
ಹತ್ತು ಬಾರಿ ಅತ್ತು ಕೂತೆನು

ನಿಲ್ಲದೋಡಿದ ಚಲುವೆ ನೀನು
ನಿನ್ನ ಹುಡುಕುತಿಹ ಪ್ರೇಮಿ ನಾನು


ಸಹಾಯ ಪ್ರದೀಪ ಹೆಗಡೆ

No comments:

Post a Comment