Monday 30 January 2012

ದ್ವೀಪದಲ್ಲಿ ದೀಪಧರ ಭಾಗ 3

ಇಷ್ಟೊತ್ತು ಓದಿದ್ದು ಬರೀ ಪರಿವಿಡಿ ಮಾತ್ರ ಮುಂದೆ ಓದೋದು ರಕ್ತಕಾರೋ ಯುದ್ದಕಾಂಡದ ಒಂದೊಂದು ಪುಟಗಳನ್ನ

ಓ ಶಾಕ್ ಆದ್ರಾ ಸುಮ್ನೆ ಪಿಲ್ಮ ಡೈಲಾಗ್ ನೆನಪಾಯಿತು ಹೇಳದೆ ಅಷ್ಟೆ. ಇರಿ ವಿಷ್ಯಕ್ಕೆ ಬರ್ತೀನಿ

ದೊಡ್ಡ ಹಾವು ಕಂಡಾಗ ಉಸಿರೇ ನಿಂತಿತ್ತು ನಮ್ಮ ದೀಪು ಶ್ರೀ ಇಬ್ರಿಗೂ. ಏನು ಮಾಡೋದು ಅಂತಾ ಗೊತ್ತಾಗ್ಲಿಲ್ಲ. ಆದರೆ ಹಾವು ಒಳ್ಳೆ ಮೂಡ್ ನಲ್ಲಿ ಇತ್ತು ಅನ್ಸುತ್ತೆ ಅಲ್ಲೆ ಪಕ್ಕದಲ್ಲಿ ಇದ್ದ ಬಂಡೆ ಸಂದಿಯಲ್ಲಿ ನುಸುಳಿ ಹೋಯಿತು. ಒಂದೆಡೆ ಆಶ್ಚರ್ಯ ಇನ್ನೊಂದೆಡೆ ಆತಂಕ ಅಂತೂ ಬದುಕಿದ್ವಿ ಅನ್ನೋ ಸಣ್ಣ ಸಂತೋಷ ಕೂಡ ಕಾಣಿಸ್ತು ಇಬ್ಬರಲ್ಲಿ. ಅಷ್ಟರಲ್ಲಿ ಮತ್ತೆ ಮೋಹಿನಿ ಫೋನ್ ಬಂತು. ಮೋಹಿನಿ ಅಂತ ಯಾಕೆ ಹೇಳ್ತಾಇದೀನಿ ಅಂತ ಯೋಚನೆ ಮಾಡ್ತಿದೀರ ಅಲ್ಲಿ ಸಿಗ್ನಲ್ ಇಲ್ಲದೇ ಫೋನ್ ಬರುತ್ತೆ ಸೋ ಮೋಹಿನಿ ಅಂತ ಹೇಳ್ದೆ ಅಷ್ಟೆ. ಫೋನ್ ಬಡ್ಕೊಂಡ ನಂತರ ಇಬ್ಬರೂ ಗಾಬರಿಯಿಂದ ಫೋನ್ ರಿಸೀವ್ ಮಾಡಿ ಸ್ಪೀಕರ್ ಆನ್ ಮಾಡ್ತಾರೆ ಆಗ ಅಲ್ಲಿಂದ " ಹಾಯ್ ಶ್ರಿ ಹಾಯ್ ದೀಪು ಅದು ನಿಗೂಡ ಗುಹೆ ಅಲ್ಲಿಂದ ತಪ್ಪಿಸ್ಕೋಬೇಕೆಂದ್ರೆ ಆ ಹಾವು ಹೋದ ದಾರೀಲಿ ಹೋಗಿ" ಅಂತ ಫೋನ್ ಕಟ್ ಆಯಿತು. ಫೊನ್ ಕಾಲ್ ನ ಸೂಚನೆಯಂತೆ ಅಲ್ಲಿನ ಬಂಡೆ ಸರಿಸಿ ಒಳಗೆ ಹೋಗೋಣ ಅಂತ ಇಬ್ಬರೂ ಮಾತಾಡಿಕೊಂಡು ಬಂಡೆನ ಸರಿಸಿಸೋಕೆ ಶುರುಮಾಡಿದ್ರು. ಹಾಗೇ ಯಶಸ್ವಿಯಾಗಿ ಬಂಡೆನ ಸರಿಸಿ ಗುಹೆಯ ಒಳಗೆ ಹೋದರು. ದಟ್ಟ ಕತ್ತಲು ಕಪ್ಪು ಗುಹೆ ಆಗಿದ್ದರಿಂದ ಮೊಬೈಲ್ ಟಾರ್ಚ ಆನ್ ಮಾಡಿದರು ಮೊಬೈಲ್ ನ ಮಂದಬೆಳಕಿನಲ್ಲೆ ಮುಂದೆನಡೆದರು. ಸಾಗುತ್ತಾ ಸಾಗುತ್ತಾ 2 ಕಿಲೋಮೀಟರ್ ಗಳಷ್ಟು ದೂರ ಬಂದರು ಅಲ್ಲಿ ಎದುರಿಗೊಂದು ನದಿ ಹರಿಯುತ್ತು ನದಿಯಲ್ಲಿ ಕೇವಲ ಮೊಣಕಾಲಷ್ಟು ಮಾತ್ರ ನೀರಿತ್ತು. ನೀರು ಸ್ಪೀಡಾಗಿ ಕೂಡ ಹರಿಯುತ್ತಿರಲಿಲ್ಲ. ಅಲ್ಪ ಸ್ವಲ್ಪ ಅಂಜುತ್ತಾ ಇಬ್ಬರೂ ನದಿ ದಾಟಿದರು. ಆಶ್ಚರ್ಯ ಏನಂದ್ರೆ ಮೈ ಕೊರೆಯುವ ಚಳಿ ಇದ್ದರೂ ನದಿಯಲ್ಲಿ ಸ್ನಾನಕ್ಕೆ ಕಾಯಿಸಿಟ್ಟ ಹದದಲ್ಲಿ ಬಿಸಿನೀರು ಹರಿತಾ ಇತ್ತು ಅದನ್ನ ಗಮನಿಸಿ ಇಬ್ಬರೂ ಒಮ್ಮೆ ದಂಗಾದರು. ಚೇತರಿಸಿಕೊಂಡು ಮುಂದಕ್ಕೆ ಸಾಗಿದರು. ಮುಂದೆ ಹೋದರೆ ದಾರಿ ಎರಡು ಕವಲಾಗಿತ್ತು. ಹಾಗೇ ಒಂದು ದಾರಿ ಸ್ವಲ್ಪ ಒದ್ದೆ ಇತ್ತು ನದಿ ನೀರಲ್ಲಿ ಒದ್ದೆಯಾದ ಹಾವು ಇದೇ ದಾರಿಲಿ ಹೋಗಿದೆ ಅಲ್ಲೆ ದಾರಿ ಸಿಗಬಹುದು ಅಂತ ಇಬ್ಬರೂ ಅದೇ ದಾರಿಲಿ ಮುಂದೆ ಹೊದರು. ಆದರೆ ಗುಹೆ ಸ್ವಲ್ಪ ದೂರ ಮಾತ್ರ ಇತ್ತು ಮುಂದೆ ದಾರಿ ಕಾಣದೆ ಚಿಂತಿಸತೊಡಗಿದರು ಆಗ ಶ್ರಿ ಹೇಳಿದ "ಹುಡುಕು ಏನಾದ್ರು ದಾರಿ ಇದ್ದೇ ಇರುತ್ತೆ ಯಾಕಂದ್ರೆ ಹಾವು ಇಲ್ಲಿಂದ ವಾಪಸ್ ಹೋಗಿಲ್ಲ ಸೊ ಟ್ರೈ ಮಾಡೋಣ ಸ್ವಲ್ಪ ಹುಡುಕೋಣ" ಓಕೆ ಅಂದ ಪ್ರದಿ. ಇಬ್ರೂ ಹುಡುಕೋಕೆ ಶುರು ಮಾಡಿದ್ರು ಅಷ್ಟರಲ್ಲಿ ಮೊಬೈಲ್ ಬ್ಯಾಟರಿ ಕಾಲಿಆಗಿ ಸ್ವಿಚ್ ಆಪ್ ಆಯಿತು ಸುತ್ತಲೂ ದಟ್ಟ ಕತ್ತಲು. ದಾರಿ ಹುಡುಕೋಣ ಅಂದರೂ ಗ್ರಹಚಾರ ಕೈ ಕೊಟ್ಟಿತು ಪಾಪ ನಮ್ಮ ಹುಡ್ಗರಿಗೆ ಆದರೆ ಕತ್ತಲಲ್ಲೂ ದಾರಿ ದೀಪ ಕಂಡಂತೆ ಒಂದು ಕಡೆ ಏನೋ ಬೆಳಕು ಕಂಡಿತು. ಹತ್ತಿರ ಹೋದ ಇಬ್ಬರೂ ಸ್ವಲ್ಪ ಮಣ್ಣು ಸರಿಸಿ ನೋಡಿದರೆ ಅದು ಅವರು ಹುಡುಕಿಕೊಂಡು ಬಂದಿದ್ದ ಹವಳವಾಗಿತ್ತು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಅಂತ ಖುಷಿ ಪಡ್ತಾ ಸಿಕ್ಕ 11 ಹವಳಗಳನ್ನೂ ಜೋಬಿಗಿಳಿಸಿ ಒಂದೊಂದು ಹವಳವನ್ನು ದಾರಿ ಕಾಣಲು ಕೈಲಿ ಹಿಡಿದು ಹಿಂದಕ್ಕೆ ಬರತೊಡಗಿದರು ಕವಲಾದ ದಾರಿಯ ಇನ್ನೊಂದು ಬದಿಗೆ ಸಾಗಿದಂತೆ ಬೆಳಕು ಕಾಣಲಾರಂಭಿಸಿತು. ಸೂರ್ಯ ಎಲ್ಲರಿಗೂ ಹಾಯ್ ಅಂತ ಮೇಲೆ ಬರುತ್ತಿದ್ದಿದ್ದೂ ಕಂಡಿತು.

ಅಸಾಧ್ಯವಾದದ್ದನ್ನ ಸಾಧಿಸಿ ಬಿಟ್ವಿ ಅಂತ ಇಬ್ರೂ ಖುಷಿಲಿ ಮೆರಿತಾ ಇದ್ರು ನೇರವಾಗಿ ತಮ್ಮ ಮುರಿದು ಬಿದ್ದಿದ್ದ ಟೆಂಟ್ ಬಳಿ ಹೋಗಿ ಬಟ್ಟೆ ಪ್ಯಾಕ್ ಮಾಡೋಕೆ ಶುರುಮಾಡಿದ್ರು. ಆಗ ಖುಷಿಯಿಂದ ಶ್ರಿ ಡೇರಿಮಿಲ್ಕ ಚಾಕ್ಲೇಟ್ ಕೊಟ್ಟು ಪ್ರದಿ ಅಂದ ಪ್ರದಿ ತಕೊಂಡು ತಿನ್ನೋಕೆ ಶುರುಮಾಡ್ದ "ನಾನು ಬೋಟ್ ಹತ್ರ ಇರ್ತೀನಿ" ಅಂತ ಶ್ರೀ ಅಲ್ಲಿಂದ ಹೊರಟ. ಇತ್ತ ಯಾಕೋ ಉಸಿರು ಕಟ್ಟಿದಂತಾಗಿ ಎದೆ ಹಿಡ್ಕೊಂಡು ಪ್ರದಿ ಕೆಳಗೆ ಬಿದ್ದ. ಶ್ರೀ ಬಂದು ನೋಡೋವಷ್ಟರಲ್ಲಿ ಉಸಿರು ನಿಂತಿತ್ತು. ಪ್ರದಿ is no more......

ಶ್ರೀ ಏನಾಯಿತು ಅಂತ ಗೊತ್ತಾಗದೇ ಬೋಟ್ ಗೆ ಹೋಗಿ ಬೋಟ್ ಸ್ಟಾರ್ಟ ಮಾಡಿ ಹೊರಟ ಸುಮಾರು ಅಂಡಮಾನ್ ಬಳಿ ಬಂದಿದ್ದ ಶ್ರಿ ಒಮ್ಮ ತಿರುಗಿ ಬೋಟ್ ನ ಡೆಕ್ ನೋಡಿದಾಗ ಶಾಕ್ ಆದ ಯಾಕಂದ್ರೆ ಡೆಕ್ ನ ಮೇಲೆ ನಮ್ಮ ಹಾವುಸ್ವಾಮಿ ಗೊರಕೆ ಹೊಡಿತಾ ಇತ್ತು. ಆದರೆ ಇವನ ಪುಣ್ಯ ಅಂತ ಕಾಣುತ್ತೆ ಅದಕ್ಕೆ ಎಚ್ಚರ ಆದ್ರೆ ಇವನ ಗತಿ.... ಅಂತೂ ಇಂತೂ ಜೀವ ಕೈಲಿ ಹಿಡ್ಕೊಂಡು ಸಮುದ್ರ ದಾಟಿ ಅಂಡಮಾನ್ ಗೆ ಬಂದು ಮುಟ್ಟಿದ. ಹಾವು ಎದ್ದರೆ ಕಷ್ಟ ಅಂತ ಬೋಟ್ ಸ್ಟಾರ್ಟ ಮಾಡಿ ಸಮುದ್ರಕ್ಕೆ ಬಿಟ್ಟ ಶ್ರೀ ಏರ್ ಪೋರ್ಟಕಡೆ ಧಾವಿಸಿದ. ಆದರೆ ತಾನು ತಂದ ಹವಳಗಳನ್ನ ಹೇಗೋ ಬೋಟ್ ನಲ್ಲೆ ಬಿಟ್ಟು ಬಿಟ್ಟಿದ್ದ.. ವಾಪಸ್ ಹೋಗೋಕೆ ಭಯ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬೆಂಗಳೂರಿಗೆ ಹೊರಟ. ಬೆಂಗಳೂರಿಗೆ ಬಂದು ಮನೆಯಲ್ಲಿ ಯಾರ್ ಜೊತೆನು ಮಾತಾಡದೇ ತಾರಸಿ ಮೇಲೆ ಹೋಗಿ ಉಯ್ಯಾಲೆ ಮೇಲೆ ಮಲಗಿದ. ಏನೇನೊ ಕಲ್ಪಿಸಿಕೊಂಡು ಸುಮ್ಮ ಸುಮ್ಮನೆ ಚೀರುತ್ತಾ ಇದ್ದ ಶ್ರೀ ನ ನೋಡಿ ಅವನ ತಂದೆ ದೆವ್ವ ನೋಡಿ ಹೆದರಿಕೊಂಡು ಬಂದಿರಬೇಕು ಮಂತ್ರವಾದಿ ಕರಸೋಣ ಅಂತ ಮಂತ್ರವಾದಿಗೆ ಫೋನ್ ಮಾಡಿದ್ರು. ಮಂತ್ರವಾದಿ 2 ದಿನ ಬಿಟ್ಟು ಬರ್ತೀನಿ ಅಂದ. ಆದರೆ ಇಲ್ಲಿ ವಿಷಯ ಗಂಭೀರವಾಗಿತ್ತು..

ಏನಂದ್ರೆ ಆಗ ಫೋನ್ ರಿಂಗ್ ಆಯಿತು. ಫೋನ್ ನೋಡಿ ಶ್ರೀ ಹೆದರಿ ಮೂಲೆ ಸೇರದ. ಶ್ರೀ ತಾಯಿ ಫೋನ್ ರಿಸೀವ್ ಮಾಡಿ ಶ್ರೀ ಗೆ ಕೊಟ್ಟಳು. ಅಲ್ಲಿಂದ " ಲೇ ಮಚ್ಚಾ ಏನೊ ಗಡತ್ತಾಗಿ ಪೋಟ್ ಕೊಂಡು ( ತಿಂದು ಕೊಂಡು ) ಮನೆಲಿ ಪಾಚ್ಕೊಂಡಿದೀಯಾ ಲೋ ಮಾತಾಡೋ ಮಗಾ" ಆ ದ್ವನಿ ಇನ್ನಷ್ಟು ಭಯ ಪಡಿಸ್ತು. ಅಷ್ಟರಲ್ರ ಶ್ರೀ ತಾಯಿ "ಶ್ರೀಗೆ ಏನೋ ಆಗಿದೆ ಬಂದಾಗಿಂದ ಗರ ಬಡಿದೋರ ತರ ಕೂತಿದಾನೆ ಏನ್ ನೋಡಿದ್ರೂ ಹೆದರಿಕೊಳ್ತಾನೆ ಏನ್ ಮಾಡೋದು ಅಂತಾನೆ ಗೊತ್ತಾಗ್ತಾ ಇಲ್ಲ"ಫೋನ್ ನಲ್ಲಿ ಹೇಳಿದ್ಲು. ಆಗ ಆ ವ್ಯಕ್ತಿ " ಹೆದರ್ಕೋಬೇಡಿ ಅಮ್ಮ ಎಲ್ಲಾ ಸರಿ ಹೋಗುತ್ತೆ ಏನೂ ತಲೆಗೆ ಹಚ್ಕೋಬೇಡಿ" ಅಂತ ಫೋನ್ ಕಟ್ ಮಾಡಿದ..
ಕಂಗಾಲಾಗಿದ್ದ ಶ್ರೀ ನ ಸಮಾಧಾನ ಪಡಿಸುತ್ತಾ ಅವನ ತಾಯಿ "ಯಾಕೊ ನಿನ್ನ ಫ್ರೆಂಡ್ ಕಾಲ್ ಗೆ ಇಷ್ಟೊಂದು ಹೆದರ್ತಾ ಇದಿಯಾ ಏನಾಯ್ತು ಅಂತ ಹೇಳೊ" ಅಂತ ಕೇಳಿದ್ಲು ಆದರೆ ಶ್ರೀ ಏನೂ ಮಾತಾಡ್ದೆ ತನ್ನ ರೂಮ್ ಗೆ ಹೋಗಿ ಬಾಗಿಲು ಹಾಕಿ ಚಿಲಕ ಹಾಕಿಕೊಂಡ.. ಹೀಗೆ ಎರಡು ದಿನ ಕಳೆದು ಮಂತ್ರವಾದಿ ಶ್ರೀ ಗೆ ಹಿಡಿದಿರೋ ಭೂತ ಬಿಡಿಸೋಕೆ ಶ್ರೀ ನ ತಂದೆ ಕರೆದುಕೊಂಡು ಬಂದ. ಮಂತ್ರವಾದಿ ಶ್ರೀ ನ ಬಳಿ ಬಂದು ನೀನು ಯಾರು ಅಂದ
ಅದಕ್ಕೆ ಉತ್ತರವಾಗಿ ಶ್ರೀ ತನ್ನ ಫೋನ್ ನಲ್ಲಿ ಇದ್ದ ಪ್ರದಿ ಫೋಟೋನ ತೋರಿಸ್ದ. ಯಾಕೆ ಬಂದಿದೀಯ ಅಂತ ಮಂತ್ರವಾದಿ ಕೇಳ್ದಾ. ಅದಕ್ಕೆ ಶ್ರಿ ತನ್ನ ಫೋನ್ ಗೆ ಪ್ರದಿ ಸೆಲ್ ನಿಂದ ಬಂದ ಮೆಸೇಜ್ ನ ತೋರಿಸ್ದ ಅದರಲ್ಲಿ I WILL KILL U ಅಂತ ಬರೆದಿತ್ತು. ಮೆಸೇಜ್ ಬಂದಿದ್ದ ಹತ್ತು ನಿಮಿಷದ ಹಿಂದೆ ಮಾತ್ರ. ಪುಷ್ಕರಣಿ ಎಂಬ ಪ್ರೇತಗಳ ಆವಾಸ ದ್ವೀಪದಲ್ಲಿ ಪ್ರದಿ ಸತ್ತು ಈಗಾಗಲೆ 2 ದಿನ ಕಳೆದಿದೆ ಅನ್ನೋದು ನೆನಪಿರಲಿ. ಮಂತ್ರವಾದಿ ಇದೆಲ್ಲ ಭೂತ ಅಲ್ಲ ಯಾರೋ ಹೆದರಿಸೋಕೆ ಮಾಡಿದಾರೆ ಅಂತ ಹೇಳ್ದ. ಅದಕ್ಕೆ ಶ್ರಿ ಪ್ರದಿ ಸತ್ತೋಗಿದಾನೆ ಅಂದ. ಆಗ ಶ್ರೀ ನ ತಂದೆ ಅವರು ಪುಷ್ಕರಣಿಗೆ ಹೋಗಿದ್ದ ವಿಷಯ ಹಾಗೂ ತಾನು ಮಗನಿಗೆ ತಾಯತ ಕಟ್ಟಿ ಕಳಿಸಿದ್ದೆ ಅದಕ್ಕೆ ಆತ ಬದುಕಿ ಬಂದ ಅಂತ ಹೇಳಿದ್ದು ಕೇಳಿ ಸ್ವಲ್ಪ ಅನುಮಾನ ಬಂತು ಪ್ರದಿ ಭೂತ ಆಗಿ ಶ್ರೀ ನ ಕಾಡ್ತಾ ಇರಬೇಕು ಅಂತ ಅಂದ್ಕೊಂಡು ಶ್ರೀ ಹಾಗೂ ಅವನ ಮನೆಗೆ ಅಷ್ಟದಿಗ್ಬಂದನ ಹಾಕಿದ ಆದರೆ ಆತನಿಗೇನು ಗೊತ್ತು ಪಾಪ...

ಮುಂದುವರಿಯುವುದು...

No comments:

Post a Comment