Wednesday 25 January 2012

ನನ್ನ ಕಲ್ಪನೆ

ಭೂರಮೆಯ ರಮಿಸಲೆಂದು
ನೇಸರನು ಭಾನರಥವೇರಿ ಬಂದು
ಭುವಿಗೆ ತಲೆಭಾಗಿ ನಿಂದು
ಪ್ರೇಮ ಭಿಕ್ಷೆಯ ಕೋರಲು
ನಗುನಗುತಾ ಇಳೆ ಒಲ್ಲೆಯೆಂದಳು

ಮನನೊಂದ ದಿನಕರನು ಸೋದರನ ಕರೆದು
ನಡೆದ ವಿಷಯವನರುಹಿ ಅಳಲು
ಅಗ್ರಜನ ಸಂತೈಸಿ ಹೇಳಿದ ಚಂದಿರ
"ಪ್ರೀತಿ ಪ್ರೇಮವ ನಂಬದಿರು ಸೋದರ
ಅದು ಕಳೆದುಕೊಂಡಿದೆ ನೈಜ ಆಕಾರ"

ಇತ್ತ ಅತ್ತಿತ್ತ ನೋಡುತ್ತಿದ್ದ ಇಳೆಯು
ಶಶಿಯ ರೂಪರಾಶಿಯನು ಕಂಡಳು
ತಿಂಗಳಾಂದಕೆ ಮನಸೋತು ಕೂಗಿ ಕೇಳಿದಳು
"ನಿನ್ನ ಪ್ರೇಮವ ಬಯಸುತಿರುವೆನು ನಾ
ನಿನ್ನ ಉತ್ತರಕೆ ಉತ್ತರದಿ ಕಾದಿರುವೆನು ನಾ"

ಒಮ್ಮೆ ಚಂದಿರನತ್ತಿತ್ತ ನೋಡಲು
ರವಿಯ ಕಣ್ಣೀರಿಂದ ತುಂಬಿತ್ತು ಕಡಲು
ಪ್ರೀತಿ ಬೇಡವೆಂದಿತು ಮನದ ಒಡಲು
ಆದರೂ ಕೇಳದೆ ಸಿಡಿಯಿತು ಪ್ರೀತಿಯಾ ಸಿಡಿಲು
ಸೇರಬೇಕೆನಿಸಿತು ಧರೆಯಾ ಮಡಿಲು

ಉತ್ತರವ ತಿಳಿಸದೇ ಉಳಿದನು ಚಂದಿರ
ಸೋದರನ ಮೆಚ್ಚಿದನು ಧಿನಕರ
ಸ್ನೇಹಿತೆಯಾಗೆ ಉಳಿದಳು ವಸುಂಧರ
ತುಂಬುತಿದೆ ಇಂದಿಗೂ ಅವರ ಸ್ನೇಹ ಭಂಡಾರ
ಇದನ್ನ ಕಲ್ಪನೆಯೊಳು ಕಂಡ ನಾನು 'ಭಾಸ್ಕರ'

No comments:

Post a Comment