Tuesday 31 January 2012

@ " ಅರ್ಪಣೆ " @

ದೇಶ ಕಾಯೋ ಯೋದರು
ನಮ್ಮ ಕಾಯೋ ದೇವರು
ಅವರನು ಹೆತ್ತ ತಂದೆ ತಾಯಂದಿರು
ದೇವರಿಗಿಂತಾ ದೊಡ್ಡವರು ||

ಎಷ್ಟೋ ಜನರ ಬಾಳು
ಇಂತಹುದೇ ಗೋಳು
ಇಂತಹ ದುಖಃದಿ ನೊಂದು ಬೆಂದವರಿಗೆ
ಈ ಕವನಾರ್ಪಣೆ ಮಾಡುವ ಬಯಕೆಯು ||


ತಪ್ಪಿದ್ದರೆ ತಿಳಿಸಿ.....


ಸುತ್ತಿ ಸುತ್ತಿ ಬರುತಲಿದೆ ಕಾಲಚಕ್ರವು
ಮತ್ತೆ ಮತ್ತೆ ಕಾಡುತಿದೆ ಪುತ್ರ ಶೋಕವು
ಅತ್ತು ಅತ್ತು ಸೋತಿದೆ ಹೆತ್ತ ಜೀವವು
ಎತ್ತ ಎತ್ತ ಸಾಗಿದರು ನೆನಪುಗಳು ಕಾಡುವವು ||

ಸ್ವತಂತ್ರ ಭಾರತ ಸುಭದ್ರ ದೇಶವು
ಶತ್ರು ರಾಷ್ಟ್ರಕೆ ನಮ್ಮಲಿ ಕೋಪವು
ನಮ್ಮಲಿ ಇರದ ಧರ್ಮ ಬೇಧವು
ಅವರಿಗೆ ಇಂದು ಬೇಕಿಹುದು ||

ದೇಶದ ಮೇಲಿನ ಭಕ್ತಿಯು ಹೆಚ್ಚಿ
ದೇಶವ ಕಾಯುವ ಕೆಲಸವ ಮೆಚ್ಚಿ
ಮಗನನು ಯೋಧನ ಕೆಲಸಕೆ ಹಚ್ಚಿ
ಕಾಡಿಹುದಿಂದು ನೆನಪುಗಳು ಮನವನು ಚುಚ್ಚಿ ||

ಅರಿಯ ರಾಷ್ಟ್ರದ ಕಪಟವ ಅರಿಯದೆ
ಗಡಿಯ ಕಾಯುತ ಮಡಿದನು ಅಂದೇ
ಇನಿಯನ ನೆನಪಲಿ ಇರುವಳವನ ಮಡದಿ
ರಾಷ್ಟ್ರದಿ ಸಿಗದಾಗಿದೆ ಸಾವಿಗೂ ಸಿಂಪತಿ ||

ದೇಶ ಭಕುತಿಯು ದೇಶಕೇ ಬೇಡವೇ ?
ಬ್ರಷ್ಟಾಚಾರವೇ ನಿಮ್ಮಯ ಊಟವೇ ?
ಜನರನು ಕಾಡುವ ಅಧಿಕಾರದ ತಾಪವೇ ?
ಇದು ನಿಜವಾಗಿಯೂ ಗಾಂದಿ ಜನಿಸಿದ ರಾಷ್ಟ್ರವೇ ? ||

ಇದನ್ನ ಹೇಳುತಿಹುದು ಹಣದಾಸೆಗೆಂದಲ್ಲ
ನಿಮ್ಮ ಮೊಸಳೆಗಣ್ಣಿನ ಸಂತಾಪವೂ ಬೇಕಿಲ್ಲ
ಸತ್ತ ಮಗನ ಶವವ ಕೊಡದ ನಿಮಗೆಲ್ಲ
ನಮ್ಮ ದುಗುಡದ ಮಾತು ಮನ ಮುಟ್ಟಲ್ಲ ||

No comments:

Post a Comment