Friday 30 December 2011

ದ್ವೀಪದಲ್ಲಿ ದೀಪಧರ

ಆಕಾಶದ ಬುಡ ತುದಿ ನೋಡ್ತಾ boat ಚಲಿಸಲು ಡ್ರೈವರ್ ಶ್ರೀದರ ಮುಂದಾದ. ಅಷ್ಟರಲ್ಲಿ ದೂರದಲ್ಲ ಯಾರೊ ಕಿರುಚಿದಂತೆ ಭಾಸವಾಗಲು boat ನಲ್ಲಿದ್ದ ಶ್ರೀಧರ ಹಾಗೂ ಪ್ರದೀಪ ಇಬ್ಬರೂ ತಿರುಗಿ ನೋಡಿದರು ಆಗ ನೌಕೆಯ ಚಾಲಕ ಶ್ರೀಧರನ ತಂದೆ ಒಂದು ತಾಯತವನ್ನ ಕೈಗೆ ಕಟ್ಟಿ ಎಚ್ಚರ ನೀವು ಹೋಗುತ್ತಿರುವ ಪುಷ್ಕರಣೀ ದ್ವೀಪ ಸಂಚಾರೀ ಆತ್ಮಗಳ ಆವಾಸ ಸ್ತಾನ ಏನೇ ಕಂಡರೂ ಅದು ಕೇವಲ ಮಾಯೆ ಕೇವಲ ಕ್ಷಣಿಕ ಅದೊಂದು ಮಾಯಾಬಜಾರ್ ಇಂದ್ದಂತೆ ಅಂತ ಫಿಟಿಂಗ್ ಇಟ್ರು ಆದ್ರೆ ಶ್ರೀಧರ ಮತ್ತು ಪ್ರದೀಪ ಅಂತ ಮಾತಿಗೆಲ್ಲ ತಲೆಕೆಡಿಸಿಕೊಳ್ಳೊ ಜಾಯಮಾನದವರಲ್ಲ ಏನೇ ಬಂದರೂ ಜಗ್ಗದೇ ಕುಗ್ಗದೇ ತಮ್ಮ ಮನದಾಳದಲ್ಲಿ ಅಡಗಿರುವ ಕನಸಿನಲ್ಲಿ ಉತ್ತುಂಗಕ್ಕೇರಿದ ಆಸೆಯೊಂದರ ಹುಡುಕಾಟಕ್ಕೆ ಪುಷ್ಕರಣಿ ಎನ್ನುವ ಕುಖ್ಯಾತ ದ್ವೀಪವೊಂದಕ್ಕೆ ತೆರಳುತ್ತಿದ್ದಾರೆ. ಹೇಳೋಕೆ ಮರ್ತಿದ್ದೆ ಬೆಂಗಳೂರಿಂದ ಹೊರಟ ಇವರು ಅಂಡಮಾನ್ ಗೆ ಬಂದು ಅಲ್ಲಿ ಬೊಟ್ ತಗೊಂಡು ಪುಷ್ಕರಣೀ ದ್ವೀಪಕ್ಕೆ ಹೊರಟಿದ್ದಾರೆ. ಹಸಿರು ಬಣ್ಣದ ಹವಳವೊಂದು 20 ಕೋಟಿ ಬೆಲೆಬಾಳುತ್ತೆ ಅದು ಕೇವಲ ಪುಷ್ಕರಣೀ ದ್ವೀಪದಲ್ಲಿ ಸಿಗುತ್ತೆ ಅಂತ ವಿದೇಶಿ ವ್ಯಾಪಾರ ಕಂಪನಿಯೊಂದು ಆಸೆ ಹುಟ್ಟಿಸಿದ ಹಿನ್ನೆಲೆಯಲ್ಲಿ ಇವರೀರ್ವರೂ ನೌಕಾಯಾನ ಮಾಡಬೇಕಾಗಿ ಬಂದಿದೆ.

boat ಮುಂದಕ್ಕೆ ಸಾಗಿದಂತೆ ಪ್ರದೀಪ ಟೈಂ ಪಾಸ್ ಗೆ you tube ನಲ್ಲಿ ಏನೊ ನೋಡ್ತಾ ಯರ್ರಾಬಿರ್ರಿ ನಗ್ತಾ ಇದ್ದ. ಏನು ಅಂತ ಶ್ರೀಧರ ಕೇಳ್ದಾಗ smile ಕೊಡ್ತಾ ಟಾಮೆಂಜರಿ ಅಂದ ಶ್ರೀಧರ್ ಗೆ ನಗು ತಡಿಯೋಕೆ ಅಗದೇ "ಪಾಪಾ ಚಿಕ್ಕ ಮಗು ಅಲ್ವಾ ನೋಡು ನೋಡು ಮಾಡೋಕ್ ಬೇರೆ ಕೆಲಸ ಇಲ್ಲ ಇಲಿ ಬೆಕ್ಕಿನಾಟ ನೋಡ್ತಾನಂತೆ" ಅಂದ. ಸುಮಾರು ದೂರ ಹೊದ ನೌಕೆ ಇದ್ದಕ್ಕಿದ್ದಂತೆ stop ಆಯಿತುಅಲ್ಲಿ ಮೊಬೈಲ್ ಸಿಗ್ನಲ್ ಕೈಕೊಟ್ಟಿತು. ಇತ್ತ ಪ್ರದೀಪಂಗೆ ಟಾಮೆಂಜರಿ ನೋಡೋಕೆ ಆಗದೆ ಚಡಪಡಿಸುತ್ತಿದ್ದ ಅವನನ್ನ ನೋಡಿದ ಶ್ರೀಧರ ಕೋಪಗೊಂಡು "ಅಯ್ಯೊ ಲೆ ಇಲ್ಲಿ ನಮ್ ಗಾಡಿ ಕೆಟ್ಟು ನಿಂತಿದೆ ನಿನ್ ನೋಡಿದ್ರೆ ಹಾಳಾದ್ ಬೆಕ್ ಇಲಿ ಹಿಡಿತಿರೊ ಆಟ ನೋಡ್ತಿಯಾ" ಅದಕ್ಕೆ ಪ್ರದೀಪ " ಏನ್ ಮಾಡ್ಬೇಕು ಅಂತೀಯ ಕೆಳಗಿಳಿದು ತಳ್ಳಬೇಕಾ" ಅದಕ್ಕೆ ಶ್ರೀಧರ "ನಿನ್ನ ಕರಕೊಂಡು ಬರೋ ಬದ್ಲು ನಮ್ ಅಪ್ಪನ್ನ ಕರಕೊಂಡು ಬಂದ್ರೆ ನಾಲ್ಕು ಮಂತ್ರ ಉದರಿಸಿ ಗಾಡಿ ಸರಿ ಮಾಡ್ತಿದ್ರೋ ಏನೊ" ಪ್ರದೀಪ "ನಂಬರ್ ಕೊಡು ಪೋನ್ ಮಾಡಿ ಕರಸ್ತೀನಿ" ಶ್ರೀಧರ "ಹೂ ಬೆನ್ನಿಗೆ ಕಟ್ಟಕೊಂಡು ಬಂದಿದ್ದೀಯ ನೋಡು ಮೊಬೈಲ್ ಸಿಗ್ನಲ್ ಟವರ್ ನ ಪೋನ್ ಮಾಡ್ತಾನಂತೆ ಪೋನು" ಪ್ರದೀಪ " ಸ್ವಲ್ಪ ಸೈಡಿಗ್ ಜರಗು ನಾನೊಂದ್ ಕೈ ನೋಡ್ತೀನಿ " ಇದ್ದಕ್ಕಿದ್ದಂತೆ boat ( ನೌಕೆ ) ಸ್ಟಾರ್ಟ್ ಆಯಿತು ಪ್ರದೀಪ "ನೋಡು ಹೇಂಗೆ ನಾವ್ ಎಲ್ಲಾ ಕೆಲಸಾನು ಗೊತ್ತು ಬೆಂಗಳೂರ್ ಏರ್ ಪೊರ್ಟನಲ್ಲಿ ಹೊರಡೋವಾಗ ಹೇಳಿದ್ದು ನೆನಪಿದ್ಯಾ ನಾನೊಂತರ ಸಕಲ ಕಲಾ ವಲ್ಲಭ ಇದ್ದಂಗೆ"

ಶ್ರೀದರ "ಆಯಿತಪ್ಪಾ ಮಹಾನುಭಾವ ಕವಿ ಮಹೋದಯ ಅಲ್ಲಿ ಸೂರ್ಯ ಮುಳಗೋ ಟೈಂ ಆಯಿತು ಹೋಗಿ ಏನಾದ್ರೂ ಗೀಚ್ಕೊಳ್ತಾ ಕೂತ್ಕೊ" ಅದಕ್ಕೆ ಪ್ರದೀಪ good evening ಅಂತ ವಿಷ್ ಮಾಡಿ ಪ್ಲಾಸ್ಕ್ ನಲ್ಲಿ ಇದ್ದ ಕಾಫಿಯನ್ನ ಕಫ್ ಗೆ ಹಾಕಿ ಪೇನ್ ಪೇಪರ್ ತಕೊಂಡು ಡೆಕ್ ಗೆ ಬಂದ ನಮ್ ಪ್ರದೀಗೆ ಕವಿತೆ ಬರೆಯೋ ಹವ್ಯಾಸ ಇತ್ತು. ಇದ್ದಕ್ಕಿದ್ದಂತೆ ವಾಯುದೇವ ತನ್ನ ಹೆಂಡತಿ ಜೊತೆ ಜಗಳಮಾಡ್ಕೊಂಡು ಬಂದನೊ ಅನ್ನೋತರ ಜೋರಾಗಿ ತನ್ನ ಪ್ರಥಾಪ ತೋರಿಸೋಕೆ start ಮಾಡಿದ. ಸಮುದ್ರದ ಅಲೆಗಳು ನಾಹೆಚ್ಚು ನಾಹೆಚ್ಚು ಅನ್ನೋತರ ಹೈಜಂಪ್ ಮಾಡ್ತಾ ಶೋಯೆಬ್ ಅಕ್ತರ್ ನ ಬೌಲಿಂಗ್ ನ ಬಾಲ್ ಸ್ಪೀಡ್ ನಲ್ಲಿ boatಗೆ ಬಡಿಯೀತು. control ತಪ್ಪಿ ಕೆಳಕ್ಕೆ ಬಿದ್ದ ನಮ್ಮ ಶ್ರೀಧರ ಸಮುದ್ರದ ಉಪ್ಪುನೀರಿನ ಟೇಸ್ಟ್ ನೋಡಿ ಕೂಗಿದ ಪ್ರದೀ help. ಅದನ್ನ ನೋಡಿದ ಪ್ರದೀಪ ಹಗ್ಗ ತಂದು ಕೆಳಕ್ಕೆ ಹಾಕಿದ ಆದರೆ ಗಾಳಿ ಸ್ಪೀಡ್ ಗೆ ಅಲೆಗಳು ಬಟ್ಟೆ ಒಗೆಯೋ ತರ ಶ್ರೀದರನನ್ನ boat ಡಿಕ್ಕಿ ಹೊಡಿಸ್ತಾ ಇತ್ತು. ಇದರಿಂದ ಅವನ ಮೈಮೇಲೆ ಅಲ್ಲಲ್ಲಿ ನಾಯಿಕಚ್ಚಿದ ತರ ಮೈಪರಚಿ ಹೋಗಿ ರಕ್ತ ಡ್ಯಾಮ್ ನಲ್ಲಿ ಬಿಟ್ಟ ನೀರನಂತೆ ಸಮುದ್ರಕ್ಕೆ ಬೀಳ್ತಾಇತ್ತು. ಹಾಗಾಗಿ ಹಗ್ಗ ಹಿಡ್ಕೊಳ್ಳೊ power ನಮ್ ಶ್ರೀ ಗೆ ಇರಲಿಲ್ಲ ಅದಕ್ಕೆ ಪ್ರದಿ ದೊಡ್ಡ ಮನಸ್ಸುಮಾಡಿ ಬೋಟ್ ನ ಕಂಬವೊಂದಕ್ಕೆ ಹಗ್ಗ ಕಟ್ಟಿ ತಾನೇ ನಿಧಾನವಾಗಿ ಕೆಳಗಿಳಿದ. ಕೈ ಕೊಟ್ಟು ಹೇಗೋ ಸರ್ಕಸ್ ಮಾಡಿ ಶ್ರೀನ ಕರಕೊಂಡು ಬೋಟ್ ಮೊಲೆ ತಂದ. ಶ್ರೀಗೆ ಮಾತಾಡೋ ಶಕ್ತಿನೂ ಇರಲಿಲ್ಲ. ಆದರೆ ವಾಯುದೇವನ ಗಾಳಿ ಸ್ಪೀಡ್ ಗೆ ಬೋಟ್ ತಂತಾನೆ ಪುಷ್ಕರಣಿ ಬಳಿ ಬಂದಿತ್ತು ಕೆಲದೂರ ಮಾತ್ರ ಬಾಕಿ ಇತ್ತು ಪ್ರದಿ "ಅಂತೂ ಕತ್ತಲಾಗೋದ್ರೊಳಗೆ ನೆಲ ಸಿಕ್ತಾ ಇದೆ ನಮ್ ಪುಣ್ಯ ಶ್ರೀ ನೋಡೋ ಸಕ್ಕತ್ತಾಗಿದೆ ಕಣೋ ದ್ವೀಪ" ಅಂದ ಅದಕ್ಕೆ ಶ್ರೀ "ನಾನಿಲ್ಲಿ ಯಮನ ಜೊತೆ ಜೂಟಾಟ ಆಡ್ತಿದಿನಿ ನಿಂಗೆ ಆದ್ವೀಪನೆ ಹೆಚ್ಚಾಯಿತಾ ಮೊದ್ಲು ಆ ಮೆಡಿಕಲ್ ಕಿಟ್ ಕೊಡು ಪ್ರಾಣ ಹೋಗ್ತಿದೆ" ಅಂದ ಅಂತೂ ನಮ್ಮ BOAT ಪುಷ್ಕರಣಿಗೆ ಬಂದು ಸೇರ್ತು. ಅದೇ ಟೈಂಗೆ ಸರಿಯಾಗಿ ನಮ್ಮ ರವಿಮಾಮ ಟಾಟಾ ಮಾಡ್ತಾ ನಾಳೆ ಸಿಕ್ತೀನಿ ಅಂತ ಹೇಳ್ತಾ ಇದ್ದಾಗ್ಲೇ ಚಂದಾಮಾಮ ಶರಪಂಜರ ಕಲ್ಪನಾ ಸ್ಟೈಲ್ ನಲ್ಲಿ ನಾಬಂದೆ ನಾಬಂದೆ ಅಂತ ಹೇಳ್ತಾ ಬೆಳ್ಳಿಬಟ್ಟಳಂತೆ ಕಾಣಿಸ್ಕೊಂಡ.. ಇಬ್ಬರೂ 1 ಮರಕ್ಕೆ ಟೆಂಟ್ ಕಟ್ಟಿ ಮಲಗೊ ಸ್ಕೆಚ್ ಹಾಕಿ ಬೋಟ್ ನಿಂದ ಇಳಿದರು. ದ್ವೀಪ ನೋಡ್ತಾ ನೋಡ್ತಾ ಪ್ರದಿ "ಭೂಮಿಗಿಳಿದ ಸ್ವರ್ಗವೋ ದೇವಲೋಕದ ಇಂದ್ರನಾಸ್ತಾನ ಅಮರಾವತಿಯೋ" ಅಂತ ಕುಯ್ಯೋಕೆ ಸ್ಟಾರ್ಟ್ ಮಾಡಿದ್ದನ್ನ ನೋಡಿ ಶ್ರೀ ಸಿಟ್ಟಿನಿಂದ "ಹಾಗೇ ಆ ಸ್ವರ್ಗದಲ್ಲಿ ರಂಬೆ ಊರ್ವಶಿ ಯಾರಾದ್ರೂ ಇದಾರ ನೋಡಿ ಅವ್ರಿಗೆ ಕಾಳ ಹಾಕು ಆರಾಮಾಗಿ ಸ್ವರ್ಗದಲ್ಲೇ ಜೀವನ ಪೂರ್ತಿ ಇರಬಹುದು ಮೊದ್ಲು ಆ ಹಗ್ಗ ತಗೊ ಟೆಂಟ್ ಕಟ್ಟಬೇಕು ರಾತ್ರಿ ಮಲಗೋದು ನಂಗೆ ಅಭ್ಯಾಸ" ಅಂದ ಇಬ್ಬರೂ ಸೇರಿ ಟೆಂಟ್ ಕಟ್ಟಿದ್ರು. ಬೆಂಗಳೂರಿನ MTR ಹೊಟೆಲ್ ನಿಂದ ತಂದಿದ್ದ ಚಪಾತಿ ಒಳ್ಳೆ ಮರದ ತುಂಡಿನ ತರ ಆಗಿತ್ತು. ಬೇರೆ ಏನು ಇಲ್ಲಾಂತ ಅದನ್ನೇ ತಿಂದರು ಮಲಗಬೇಕು ಅನ್ನೋವಷ್ಟರಲ್ಲಿ ದೂರದಲ್ಲಿ ಒಂದು ಬಾಳೆಮರ ಕಂಡಿತು ಪ್ರದಿ ಜೋರಾಗಿ ಓಡಿಹೋಗಿ ಬಾಳೆಗೊನೆ ಕಟ್ ಮಾಡಿ ತಗೊಂಡ್ ಬಂದು ಅಂದ "ಪುಣ್ಯ ಬಟ್ರಕೈನ ಒಣಕಲು ಚಪಾತಿ ಮಾತ್ರ ಅಂದ್ಕೊಂಡಿದ್ದೆ ಸ್ಪೆಶಲ್ ಬನಾನಾ ಸಿಕ್ತು ಬೇಕೇನೊ ಶ್ರೀ" ಅಂದ ಅದಕ್ಕೆ ಶ್ರೀಧರ "ಏನ್ ಕಣಿ ಕೇಳ್ತೀಯಾ ಒಂದ್ 10 ಹಣ್ಣ ಕೊಡು ಚಪಾತಿ ಹೊಟ್ಟೆ ಒಳಗೆ ಡಾನ್ಸಮಾಡ್ತಿದೆ" ಅಂದ. ಇಬ್ಬರೂ ಬಾಳೆ ಹಣ್ಣನ್ನ ತಿಂದು ನಾಳೆ ಹವಳ ಹುಡ್ಕಬೇಕು ಅಂತ ಮಾತಾಡ್ಕೊಂಡು ಹಾಸಿಗೆಹಾಕ್ಕೊಂಡು ಮರದಡಿ ಕಟ್ಟಿದ್ದ ಟೆಂಟ್ ನಲ್ಲಿ ಮಲಗಿದ್ರು. ಚಳಿ ಸ್ವಲ್ಪ ಜಾಸ್ತಿ ಇತ್ತು ಅದಕ್ಕೆ ಎದುರಿಗೆ ಬಿದ್ದಿದ್ದ ನಾಲ್ಕು ಕಟ್ಟಿಗೆ ತಕೊಂಡು ಬೆಂಕಿ ಹಾಕಿ ಮಲಗಿದ್ರು ಸುಖವಾಗಿ ಮಲಗಿದ್ದ ಇವರಿಗೇನ ಗೊತ್ತು ಮುಂದೆ ಬರೊ ಆಪತ್ತು ಅದು ಪುಷ್ಕರಣೀ ದ್ವೀಪ ಅಂತ ಅವರು ಮರತಿದ್ರೋ ಅಥವಾ ಮೊಂಡು ದೈರ್ಯವೊ ಬಿಸಿರಕ್ತದ ಉತ್ಸಾಹವೊ ಗೊತ್ತಿಲ್ಲ. ಆದರೆ ಅವರ ನಿದ್ರೆ ಕೇವಲ ಕ್ಷಣಿಕ ಆಗಿತ್ತು

ಮುಂದುವರೆಯುವುದು

Thursday 29 December 2011

ಪ್ರೇಮಗೀತೆ

ಮನವನು ಕಾಡುವ
ಚೆಲುವೆಯ ನೋಟವು
ಸೆಳೆಯಿತು ನನ್ನೆದೆ ಪ್ರೀತಿಯನು
ಎದೆಯಲಿ ಮೂಡಿತು
ಪ್ರೀತಿಯ ಸ್ವಪ್ನವು
ಹಾತೊರೆದೆ ಕಾಣಲು ನಾ ನಿನ್ನನು

ಆಸೆಯ ಭಾವವು
ನಿನ್ನಯ ಮೋಹವು
ತೆರೆಯಿತು ಮನಸಿನ ನಯನವನು
ಹೇಳಲಿ ಯಾರಿಗೆ
ನನ್ನಯ ಈ ಪರಿ
ಸುಮದುರ ಪ್ರೀತಿಯ ಯಾತನೆಯ

ನಿನ್ನಲಿ ಏನೋ
ಮೋಹವನು ಕಾಣೆ
ನೀಗು ನನ್ನ ಮನದ ಬಯಕೆಯನು
ಆಡುವೆ ಏತಕೆ
ಕಣ್ಣಾ ಮುಚ್ಚಾಲೆ
ತಿಳಿಸು ಮನದಾಸೆಯನು ಒಂದುಸಲ

ಚಿಟಪಟ ಚಿಟಪಟ
ಮಳೆಹನಿ ನೋಡುತ
ಪಟಪಟ ಪ್ರೀತಿಯ ನೆನಪಾಯ್ತು
ಜುಮುಜುಮು ಜುಮುಜುಮು
ಚಳಿಯಲಿ ನನ್ನಯ
ಪ್ರೀತಿಯ ಹುಡುಗಿಯ ನೆನಪಾಯ್ತು

ಕಾಡುತ ಇದ್ದಳು
ಆಕೆಯು ನನ್ನನು
ಬೇಡಿದೆ ಅವಳಲಿ ಪ್ರೀತಿಯನು
ಹಾಡುತ ಇದ್ದರೆ
ಕೋಗಿಲೆ ಕಂಟವು
ಮಾಟವ ಮಾಡಿಹಳವಳಿಂದು

ಪಟಪಟ ನಿರ್ದಾರ
ಸರಸರ ಮಾತಿನ
ಆಕೆಯ ಪ್ರೀತಿಯು ಕನಸಾಯ್ತು
ಚಿಟಪಟ ಬೀಳುವ
ಮಳೆಹನಿಯ ನೋಡಿ
ನನಗಿಂದು ಅವಳ ನೆನಪಾಯ್ತು

ಮೋಸವ ಅರಿಯದ
ಕಪಟವ ತಿಳಿಯದ
ನನ್ನಯ ಮುಗ್ದತೆ ಮುಳುವಾಯ್ತು
ದನಿಯನು ಕೇಳುತ
ರೂಪವ ನೋಡುತ
ಅಂದು ನನ್ನ ಮನ ಸೆರೆಯಾಯ್ತು

ಮನವನು ಸೆಳೆದಿಹ
ರೂಪಸಿಗೆ ಪ್ರೀತಿಯ
ಪಾಠವ ಹೇಳಿಕೊಡೊ ಆಸೆಯಾಯಿತು
ಎಲ್ಲಿ ಹುಡುಕಿದರು
ಸಿಗದೆ ನನ್ನಾಕೆಯು
ನನ್ನಯ ಮನಸ್ಸು ಚೂರಾಯ್ತು

ಮನದಲಿ ಮೂಡಿತು
ಸುಂದರ ಕಾವ್ಯವು
ಸುಂದರಿ ನಿನ್ನನು ಕಂಡಿರಲು
ಮಾತಲಿ ತೊದಲಿಕೆ
ಏತಕೊ ಹೆದರಿಕೆ
ನಿನ್ನಯ ಪ್ರೀತಿಯನು ಬೇಡಲು

ಮನದಲಿ ತವಕವು
ಒಂಥರ ಅವಸರ
ನಿನ್ನನು ಬಹುಬೇಗ ಸೇರಲು
ಏತಕೊ ಕಾತರ
ಚಿತ್ತದಿ ಆತುರ
ಆಸೆಯ ಕೊಲ್ಲದಿರೆ ಓ ನಲ್ಲೆ

ಕನಸು ಕನವರಿಸೆ
ಮನ ತವತವಕಿಸೆ
ಎದೆಯಲಿ ಇಹುದೆನಗೆ ನೂರಾಸೆ
ಹೇಳೇ ಮನಸೇ
ಪ್ರೀತಿಯ ಕನಸೇ
ಮಾಡದಿರು ನಿರಾಸೆಯ ಮನಸೆ

ಮನಸಿನ ಮನೆಯಲಿ
ಕನಸಿನ ತೆರೆಯಲಿ
ಮೂಡಿದೆ ಒಂದು ಹನಿಗವನವು
ಪ್ರೀತಿಯಲಿ ಸೋತು
ಬಳಲುತಲಿ ನಾನು
ಕಾಲನ ಆಗಮನ ಕಾಯುವೆ

ದೇವರ ಬಳಿ ನಾ
ಬೇಡಿದೆ ಅವಳನು
ಮಾಯವೆ ಆದನು ಅವನಂದು
ಆದರೆ ಪ್ರೀತಿಯು
ಸೋಲದು ಎನ್ನವ
ಮಾತನು ನಂಬಿಹೆ ಎಂದಿಗು ನಾ

ಆಕೆಯ ಪ್ರೇಮವು
ಕಾಡುತ ಎಂದಿಗೂ
ನನ್ನಯ ಮನವನು ಚುಚ್ಚಿರಲು
ಚಿತ್ತದಿ ನೋವನು
ಮರೆಯಲು ಏನನು
ಮಾಡಲಿ ನಾನಿಂದು ಅರಿಯೆನು

ಪ್ರೇಮದ ಪಾಠವ
ಹೇಳಿ ಕೊಟ್ಟಿರುವ
ನಿನಗೆ ಪ್ರೀತಿಯ ಅರಿವಿಲ್ಲವೆ
ಮೋಸವ ಏತಕೆ
ಮಾಡಿದೆ ಎನ್ನುವ
ಕಾರಣವನು ಅರಿಯೆ ನಾ ಚಲುವೆ

Tuesday 27 December 2011

ಸಿಗುವುದೆಂದು ಸ್ವಾತಂತ್ರ್ಯ

ಶರಧಿಗೆ ನೌಕೆಯನಿಳಿಸಿ
ನೌಕೆಗೆ ನಾವಿಕರ ನೇಮಿಸಿ
ನಾವಿಕರಿಂದ ದಾರಿ ಹುಡುಕಿಸಿ
ದೇಶವಿದೇಶದಿ ವ್ಯಾಪಾರ ನಡೆಸಿ
ದೋಚುತ ಇದ್ದರು ನಮ್ಮನ್ನ

ಪರವಾನಿಗೆಯಿವರೊಳು ರಾಜರು ಕೇಳೇ
ಅವರೊಡು ಇವರು ಯುದ್ದವ ಸಾರೇ
ಅಲ್ಲಿ ಹರಿಯಿತು ನೆತ್ತರಿನ ಹೊನಲು
ಗೆಲುವನು ಪಡೆದರು ಕುತಂತ್ರಿಗಳು ಅಲ್ಲಿ
ದೋಚುತ ಹೋದರು ನಮ್ಮನ್ನ

ಕಡಲಾ ಆಚೆಯಿಂದ ಬಂದು
ಬಂದರವರು ವ್ಯಾಪಾರಕೆಂದು
ಅಸ್ತಿತ್ವ ಸ್ತಾಪಿಸಿದ್ದರು ಅಂದು
ಕರೆದೆವು ಅವರನು ಬ್ರಿಟೀಶರೆಂದು
ದೋಚುತ ಹೊದರು ನಮ್ಮನ್ನ

ಕಾಲವು ಸರಿಯೆ ಎಚ್ಚೆತ್ತ ಜನರು
ಸತ್ಯಾಗ್ರಹವ ಮಾಡಿದರು
ನೆತ್ತರ ಜೊತೆಯಲಿ ಆಟವನಾಡುತ
ದೇಶಕ್ಕಾಗಿ ಮಡಿದರು ಹುತಾತ್ಮರಾದರು
ಆದರೂ ಇವರು ದೋಚುತ ಇದ್ದರು ನಮ್ಮನ್ನ

ಬಂದರು ಗಾಂಧಿ ಬೋಸರು
ಹೋರಾಟವನಿವರು ಮಾಡಿದರು
ಬೋಸರು ಪ್ರಾಣವ ತೆತ್ತರು
ಆಂಗ್ಲರು ಸ್ವಾತಂತ್ರವನಿತ್ತರು
ಹರಿದಿತ್ತದಕೆ ಎಷ್ಟೋ ಜನರ ನೆತ್ತರು

ಪ್ರಜೆಗಳೇ ಪ್ರಭುಗಳು ಎಂದರು
ಅನರ್ಹರೂ ಮಂತ್ರಿಗಳಾದರು
ತಮ್ಮದೇ ರಾಜ್ಯ ಎನ್ನುತ ಇರುವರು
ಪ್ರಜೆಗಳ ಕಷ್ಟವ ಅರಿಯದ ಇವರು
ದೋಚುತ ಇರುವರು ನಮ್ಮನ್ನ

Monday 26 December 2011

ಒಂದು ದಿನ

ಅದೊಂದು ಸುಂದರ ಮುಂಜಾನೆಯಾಗಿತ್ತು
ಚಳಿಯಲಿ ಹೆದರಿದ ಇಬ್ಬನಿಯೊಂದು
ಈ ಧರೆಯ ಸೇರುವ ಸಮಯದಿ
ಮೂಡಣದಿ ದಿನಕರನು ಮೂಡಿ ಬಂದನು
ಬೆಳ್ಳಿಬೆಳಕನು ರವಿಯು ತಂದನು

ಬೆಳಕು ಎಲ್ಲೆಡೆ ಪಸರಿಸಲು
ಪಕ್ಷಿಗಳು ನಿದ್ರೆಯನು ಮುಗಿಸಿ
ಇಳಾದೇವಿಯ ಏಳಿಸಲೆಂದವು
ಚಿಲಿಪಿಲಿ ಸದ್ದನು ಮಾಡಿದವು
ನಲಿದಾಡುತ ಬಲು ಸಂಭ್ರಮಿಸಿದವು

ಓಡಲು ರವಿಯು ಪಡುವಣದೆಡೆಗೆ
ದಿನಕರ ಮೇಲಕೆ ಏರಿದ್ದಂತೆ
ಮರಗಳ ಎಲೆಮೇಲಿದ್ದಂತಾ
ಇಬ್ಬನಿಗಳು ಒಂದೊದಾಗಿ
ಜಾರಿ ಬಿದ್ದವು ಇಳೆಯ ಮೇಲೆ

ಮಲಗಿದ್ದಾಕೆಯ ಏಳಿಸಲು
ನೆಲದಮೇಲೆ ಹರಡಿದ್ದಂತಹ
ಜೇಡರ ಬಲೆ ಒಂದು ಇದನ್ನ ಕಂಡು
ಬೀಳಲು ಬಿಡೆನು ನಾ ಹನಿಗಳನು
ಎಂದು ಹಿಡಿಯಿತು ಕೆಲ ಹನಿಗಳನು

ಎಚ್ಚರಗೊಂಡ ಬೂಮಾತೆ
ಅವಸರದಿಂದಲಿ ಹಸಿರ ಸೀರೆಯನುಟ್ಟು
ಕಂದು ಬಣ್ಣದ ಕುಪ್ಪಸವನ ತೊಟ್ಟು
ಅಂದಗಾತಿಯು ತಾನೆಂದು
ಆನಂದದಿ ಬಂದದಳು ನಗುನಗುತ

ಓಡು ಆಟವನು ಆಡಿದರು
ಓಡಿ ಓಡಿ ನಲಿದಾಡಿದರು
ಭೂದೇವಿಯು ಸೋತು ಕಡೆಕಡೆಗೆ
ಬಳಲಿ ಬೆಂಡಾಗಿ ಓಡೋ ಆಟದಲಿ
ಹಿಡಿಯದಾದಳು ದಿನಕರನನ್ನ

ಸೋತೆನೆಂದು ತಾ ಒಪ್ಪಿದಳು
ಇಳೆಯೆ ನೀನಿನ್ನು ವಿಶ್ರಮಿಸು
ನಾಳೆ ಬರುವೆನು ಬೇಗನೆ ಎಂದು
ಪಡುವಣವನು ಸೇರಿದನು
ಲೋಕಕೆ ನಿದ್ರೆಯ ಉಣಿಸಿದನು

ಆಗಸದಿ ಕಪ್ಪು ಕವಿದಿಹುದು
ಹಾರುತಿಹುದು ಬೆಳ್ಳಕ್ಕಿ ದಂಡು
ಶಾಲೆ ಪೋರರು ಉತ್ಸಾಹದಿಂದಿರಲು
ಮತ್ತೆ ಸುರಿಯಲಾರಂಭಿಸಿತ್ತಂದು
ಸಂಜೆಯ ಮುಂಗಾರಿನ ಮಳೆ

ಮೂಡಣದಿ ಮೂಡಿಹುದು ಸಪ್ತವರ್ಣದಿ
ಮದನನ ಬಿಲ್ಲು ಬರುತಿಹ ವರ್ಷೆಯ ಸ್ವಾಗತಕೆ
ಕಪ್ಪೆಗಳು ಕರಕರ ಸದ್ದಲಿ ಮಾಡುತಿಹುದು ಭಾಷಣವ
ಭವ್ಯ ಸ್ವಾಗತದ ಬಳಿಕ ಮಳೆಯು
ಹನಿ ಹನಿಯಾಗಿ ಇಳೆಗೆ ಬೀಳಲಾರಂಬಿಸಿತು

ಗೋಧೂಳಿಯ ಸಮಯದಿ
ನಾಸಿಕವನು ಹೊಕ್ಕು
ತನುಮನವನು ಪುಳಕಿಸುವಂತೆ
ಬರುತಿತ್ತು ಧೂಳಿನಾ ಕಂಪು
ಹೊರಟವು ಭುವಿಯೊಡಲಿಂದ ಹಾತೆಗಳ ಗುಂಪು

ಸುತ್ತ ದೀಪಗಳ ಬೆಳಕಲಿ ಗರಿಗೆದರುತ್ತ
ಕುಣಿದಿಹುದು ನವಿಲುಗಳ ಒಡೆಯ
ಸಂತಸದಲಿ ನಲಿಯುತ್ತಿದೆ
ಮೃಗಖಗಗಳ ಪಡೆಯು
ಪಡೆಯುತ ಮಳೆರಾಯನ ಮುತ್ತಿನ ಮತ್ತನ್ನು

ಭುವಿ ತಾನೂ ಸಂತಸದೊಳು
ಮೈಮನ ಮರೆಯುತಲಿಹಳು
ಕಣಿಕಾಲುವೆಗಳಲಿ ಕೆಂಬಣ್ಣದ ನೀರು
ಧುಮುಕುತ್ತಲೆ ಸಾಗುತ್ತಿದೆ ತನ್ನ ಗುರಿಯೆಡೆಗೆ
ಮುತ್ತಿನಂತೆ ಕಂಗೊಳಿಸುತ್ತಿತ್ತು ಹನಿ ಕೆಸುವಿನೆಲೆಮೇಲೆ

ದಿನವದು ಮುಗಿದಿತ್ತು
ಬಾನಲಿ ತಿಂಗಳು ಮೂಡಿತ್ತು
ಊಟವ ಮಾಡಿ ಆಗಿತ್ತು
ನಿದ್ದೆಯು ನನ್ನನು ಕರೆದಿತ್ತು
ನಾನೋಡಿದ ದಿನವೊಂದು ಹೀಗಿತ್ತು

ಕವಿತೆಗೊಂದು ಕವನ

ಕಾಯುತ ನಾನು ಕುಳಿತಿಹೆನು
ಮುಂಜಾನೆಯ ಇಬ್ಬನಿಯ ಮೈಕೊರೆವ ಚಳಿಯಲಿ
ಮನಸೆಳೆವ ಸುಂದ ಹಸಿರು ಹುಲ್ಲುನೆದುರಲಿ
ಕಾದಿರುವೆ ಕವಿತೆ ಬರೆಯ ಬೇಕೆನ್ನುತಲಿ
ಕವಿತೇ ನೀನೆಲ್ಲಿ ಅವಿತಿರುವೆ

ಇಬ್ಬನಿ ದುಃಖದ ಕಂಬನಿಗಳಂತೆ ಕಂಡರೂ
ಮನಸ್ಸಿನಲ್ಲಿ ದುಗುಡ ಕೈ ನಡುಗಿಲು
ಬರೆಯಲಾಗದಾಯಿತೆನ್ನಿಂದ ಕವಿತೆಯ
ತೋಚದಾಯಿತೆನಗೆ ಪದಗಳು ಕೂಡ
ಕವಿತೇ ನೀನೆಲ್ಲಿ ಅವಿತಿರುವೆ

ಎಳ ಬಿಸಿಲ ಹೊಂಗಿರಣ ನೋಡುತ
ಜಿನುಗುವ ತುಂತುರು ಮಳೆಯ ನೋಡುತ
ಬರೆಯ ಬೇಕೆನಿಸಿತು ಕವಿತೆ ಮತ್ತೊಮ್ಮೆ
ಈಗಲೂ ಮತ್ತೆ ಅದೇ ತೊಂದರೆ
ಕವಿತೇ ನೀನೆಲ್ಲಿ ಅವಿತಿರುವೆ

ಅದೇ ಯೋಚನೆ ಮುಸ್ಸಂಜೆಗೆ
ಮುದುಡಿ ಹೋಗುವ ಈ ಸುಮದ ಬದುಕಂತೆ
ಮತ್ತೆ ನಡುಕವೆಂದೆನಿಸಿತು ಕವಿತೆ ಬರೆಯಲೇನು?
ಮತ್ತೆ ಬರೆಯೋಣ ಅಂದು ಕೊಂಡರೆ
ಕವಿತೇ ನೀನೆಲ್ಲಿ ಅವಿತಿರುವೆ

ಉರಿಯುವ ಮಧ್ಯಾಹ್ನದ ಬೇಗೆಯಂತೆ
ಮನದಾಳದ ಯಾತನೆ ಮುಸ್ಸಂಜೆಯಲಿ
ಬಿರಿಯುವ ಮಲ್ಲಿಗೆಯ ಹೂವಿನಂತೆ
ಗೂಡು ಸೇರುವ ಹಕ್ಕಿಚುಕ್ಕಿಯಂತೆ
ಕಾದರೂ ಬಾರದೇ ಕವಿತೇ ನೀನೆಲ್ಲಿ ಅವಿತಿರುವೆ

ನಭದಿ ಚಂದ್ರಮನು ಕಾಣುತಿರಲು
ಕವಿತೆಗೆ ಹುಡುಕಿದರೆ ಪದ ಪುಂಜಗಳು ಸಿಗದಿರಲು
ಏನ ಬರೆಯಲಿ ನಾ ಖಾಲಿ ಪುಟದಲಿ
ಕವಿತೆ ಬರೆವುದು ಇಂದೆನಗೆ ಕನಸಾಯ್ತೆ
ಕವಿತೆ ನೀನೆಲ್ಲಿ ಅವಿತು ಕುಳಿತಿಹೆ

ಬಾನಂಗಳದಿ ನಸುನಗುವ ಚಂದಿರನ
ಇಕ್ಕೆಲಗಳಲ್ಲಿ ಕಣ್ಣು ಮಿಟುಕಿಸುವ ತಾರೆಗಳ
ನೋಡುತಿರೆ ಮನದಿ ಮಿಂಚಂತೆ ಸಾಲೊಂದು
ನೆನಪಾದರೂ ಬರೆಯಲಾಗದಾಯಿತು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಆಗೊಮ್ಮೆ ಈಗೊಮ್ಮೆ ಬೀಳುವತಿರುವ
ಉಲ್ಕೆಗಳಂತೆ ಜೀವನದಿ ಕಷ್ಟ ಸುಖಗಳದ್ವಂದ್ವ
ಒಂದೆರಡು ಸಾಲು ಬರೆಯಲೂ ತಡಕಾಟ
ಮುನಿಸೇತಕೆ ನಿನಗೆ ಕವಿತೇ ನೀ ಬರುವುದೆಂದು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಬರೆಯಲೆಂದು ಲೇಖನಿ ಹಿಡಿದು ಕುಳಿತಾಗ
ಶಬ್ದಗಳಿಗೆ ತಡಕಾಡಿ ಭಾವಗಳಿಗೆ ಹುಡುಕಾಡಿ
ಪ್ರಾಸಕ್ಕೆ ಸಾಲುಗಳಿಗೆ ತಿಣುಕಾಡಿ
ಕಷ್ಟ ಪಟ್ಟರೂ ಬರೆಯಲಾಗದಾಗಿದೆಯಿಂದು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ವಿಷಯದ ಆಳ ಹೊಕ್ಕಿ ಕೆದಕಿ ತೆಗೆವ
ಪಾಂಡಿತ್ಯವಂತೂ ನನ್ನಲಿಲ್ಲ
ಅರಿಯದೆ ಸುಮ್ಮನಿರುವ ಮುಗ್ದನೂ ಅಲ್ಲ
ಕೆದಕಿ ಬರೆಯಲೂ ಸಾದ್ಯವಾಗದಾಗಿದೆಯಿಂದು
ಕವಿತೇ ನೀನೆಲ್ಲಿ ಅವಿತು ಕುಳಿತೆ

ಕವಿತೆಯಲಿ ಪ್ರತೀ ಪದವು ಹೊಸತೆಂದೆನಿಸುವುದು
ಹೊಸ ಕಾರಣವನು ಹುಡುಕುವುದು
ಗೊತ್ತು ಗೊತ್ತಿಲ್ಲಗಳ ಬಡಿದಾಟದಿ
ಬರೆಯಲು ಹೊರಟ ನನಗಿಂದು ಅಸಾದ್ಯವಾಗಿದೆ
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಮನಸಿನಲಿ ಕನಸೆಂಬ ಕಲ್ಪನೆಯುಲಿ
ಕಾಣದ ಪದಗಳ ದಾರಿಯ ಹುಡುಕುತ
ಕಳೆಯುತ್ತಾ ಆಯುಷ್ಯವೆಂಬ ಸಮಯವ
ಕಾದು ಕುಳಿತೆ ಕವಿತೆ ನಾ ಬರೆಯಲೆಂದು
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ನೋವಿಗೆ ನಲಿವಿಗೆ ಯೋಚನೆಗೆ
ಸದಾ ತೋಚುತ್ತಿದ್ದ ಪದಗಳಿಂದು
ತನ್ನದೇ ಬಳಗವ ಬೆಳೆಸಿಕೊಂಡು
ನನ್ನಿಂದ ದೂರಕೆ ಸರಿಸುತ್ತಿದೆ
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಎಷ್ಟು ಕರೆದರೂ ನಿನಗೆ ಕರುಣೆ ಬಾರದೆ
ಚಿತ್ತ ಚುಚ್ಚಿ ನಿ ಎತ್ತ ಓಡುತಿರುವೆ
ಬಾವನೆಗಳ ಭಾಷೆಯರಿತ ನೀನೇ
ನನಗಿಂದೇಕೆ ಹೀಗೆ ಕಾಡುತಿರುವೆ
ಕವಿತೇ ನೀನೆಲ್ಲಿ ಅವಿತು ಕುಳಿತಿರುವೆ

ಕೂಲಿ

ದಿನವಿಡಿ ದುಡಿವ
ಬೆವರ ಸುರಿಸುವ
ಮೈಯನು ಮುರಿವ
ಕಷ್ಟವ ಪಡುವ
ಇವರು ಕೂಲಿಯವರು

ಬಳಲಿ ಬೆಂದಿರುವ
ಎದೆಗೂಡನುಬ್ಬಿಸಿರುವ
ಮೂಳೆಮುರಿವಂತೆ ಭಾರ ಹೊರುವ
ಬೇಸತ್ತು ಸತ್ತಂತಿರುವ
ಇವರು ಕೂಲಿಯವರು

ಚಿತ್ರವಿಚಿತ್ರ ಛಾಯೆ ಮೈಯಲಿ ಮೂಡಿರುವ
ಅಸ್ಪಷ್ಟ ಬದುಕ ಚಿತ್ರಣ ಇರುವ
ಬಾಳಿನ ಕಷ್ಟದ ಚಿತ್ತಾರವ
ಚಿತ್ತದಿ ಬರೆಸಿಕೊಂಡಿರುವ
ಇವರು ಕೂಲಿಯವರು

ಬದುಕು-ಬವಣೆಯ ನಡುವಿನಲಿ
ಹರಿದ-ಕರಿದ ಬೆಂದ ರೊಟ್ಟಿಗಳ
ಒಳಗೆ ರಕ್ತ ಮಡುಗಟ್ಟಿತ್ತಿದ್ದರೂ
ಎದೆಗುಂದದೆ ಈಸಿ ಜೈಸುವ
ಇವರು ಕೂಲಿಯವರು

ಬಂದು ಕೊಂದು ತಿಂದ ಜನರೆಡೆಯಲಿ
ರಕ್ತದೋಕುಳಿಯ ಮಾಸದಾ ಹೆಜ್ಜೆಯಲಿ
ನಾತ ಬೀರುವ ಕೊಳೆತಂತಿರುವ
ಅಸ್ಥಿಪಂಜರದೊಂದಿಗೆ ದುಡಿವ
ಇವರು ಕೂಲಿಯವರು

ಹಬ್ಬ ದಿಬ್ಬಣದಲ್ಲೂ
ಹಿಟ್ಟಿರದ ಬರಿ ಹೊಟ್ಟೆಯಲಿ
ಮುರುಕಲು ಗುಡಿಸಲ ಹಳೆಮಂಚದಲಿ
ನಿದ್ದೆ ಬಾರದೇ ನಡುರಾತಿಯಲಿ
ಮಬ್ಬು ಕತ್ತಲೆಯಲಿ ಕಣ್ಣು ಮಿಟುಕಿಸುವ
ಇವರು ಕೂಲಿಯವರು

ಗೆದ್ದಲು ಕೆಡವಿ ಬಣ್ಣಹೋದ
ಹರಿದ ಉಡು ಬಟ್ಟೆ
ಆದ್ರೂ ಗಟ್ಟಿಯಿದೆ ಇವರ ರಟ್ಟೆ
ಬುತ್ತಿ ರೊಟ್ಟಿಯಲಿ ಬದುಕುವ
ಇವರು ಕೂಲಿಯವರು

ಕನಸುಗಳ ಹೆಣೆಯುವ
ಒಣದೇಹದಿ ಬತ್ತಿದಾ
ಎದೆಯಲಿನ ಆಸೆ ಮುದ್ದಿಸಿ
ಅವಕಾಶವ ಸದಾ ಬಯಸುವ
ಇವರು ಕೂಲಿಯವರು

ಇವರು ಅಳುವುದಿಲ್ಲ ಅತ್ತಿಲ್ಲ
ದಿನಾ ಅಳುವವರಿಗೆ ಎಲ್ಲಿಂದ
ಪೂರ್ತಿಜೀವನವು ಗೋಳು
ಗೊಳೆಂಬ ಈದ್ ಹೋಳಿಯಾಚರಿಸುವ
ಇವರು ಕೂಲಿಯವರು

Sunday 25 December 2011

ಸಂಗಾತಿಯಾಗು ಬಾ

ನಿಲ್ಲು ನಿಲ್ಲೆಲೆ ನಲ್ಲೆ ಓ ಚೆಲುವೆ ಪಂಚಮಿ
ಒಮ್ಮ ತಿರುಗಿ ಬಾರೆ ನಾನೊಬ್ಬ ಬಡಪ್ರೇಮಿ
ನಿ ನನ್ನ ಮನವ ಕದ್ದ ಗೆದ್ದ ಪೌರ್ಣಮಿ
ನಿನ್ನ ದನಿಯ ಇಂಚರ ಕೇಳುವಾಸೆ ನಂಗೆ ಮಾನಿನಿ
ನಿನ್ನ ಕಡೆಯ ನಿರ್ದಾರವ ತಿಳಿಸು ಒಮ್ಮೆ ಯಾಮಿನಿ

ನಿನ್ನ ಅಂದವ ಕಾಣುತ
ಬಾನ ಶಶಿಯು ಇಂದು
ಮರೆಯಾದನು ಮೋಡದಲಿ
ಮುಖ ಮರೆಸಿ ನಾಚುತ
ನಗುತಿರುವೆನಾ ಕನಸ ಕಾಣುತ

ಕಂಠ ನಿನ್ನದು ಕೋಗಿಲೆಯಂತೆ
ನಿಂತೆ ನಾ ನಿನ್ನ ಗಾನ ಕೇಳುತ
ಕೋಗಿಲೆ ಮಂಕಾಯಿತು ನಾಚುತ
ಕೇಳುತ ಅದು ಮೌನವ ತಾಳಿತು
ಬಂದು ಹಾಡಲಾರೆನೆಂದು ಹೇಳಿತು

ನಿಲ್ಲು ನಿಲ್ಲೆಲೆ ನೀಲವೇಣಿ
ಕನಸಲಿ ಕಾಡೊ ಕಾಮಿನಿ
ನನ್ನ ಬಾಳ ಬೆಳಗುವ ರಾಣಿ
ಬಾರೆ ಬೇಗ ಓ ಮಾನಿನಿ
ಬಾ ನನ್ನ ಮಂದಾಕಿನಿ

ಮಿಂಚತೆ ನೀ ಕಾಣುತ ನನ್ನ ಕಾಡುತ
ಬಳ್ಳಿಯಂತೆ ನೀ ಬಾಗುತ
ನಡೆಯಲಿ ಬೆಡಗಿ ನೀ ಬಳುಕುತ
ಗೆಜ್ಜೆಯಾ ಹೆಜ್ಜೆಯಲಿ ಕೇಳುತಿಹುದು
ನನಗಿಲ್ಲಿ ಪ್ರೀತಿಯ ಪ್ರಣಯನಾದ

ಓರೆಗಣ್ಣಿನ ಕುಡಿ ನೋಟದಿ
ನನ್ನ ನೀ ನೋಡಿದಂದು
ಬಾಳಲಿ ಬೀಸಿತು ತಂಪು ತಂಗಾಳಿ
ಮೋಸದಾಟವಾಡೆ ನೀ ಪ್ರೇಮದಿ
ತಂಗಾಳಿ ಬಿಸಿಯಾಗಿ ಆಯಿತು ಬಿರುಗಾಳಿ

ಪ್ರೇಮದ ನೆನಪು ಮನ ಕೊರೆದಿದೆ
ಕಾಣದ ಜ್ವಾಲೆ ಕಾಡುತಿದೆ
ನಡುಗುತ ನಾ ಹಾಡಿದೆ
ಏಕೆ ನೀ ನನ್ನೊಡನಾಡಿದೆ
ಪ್ರೇಮದ ಕಣ್ಣುಮುಚ್ಚಾಲೆ

ಪ್ರೀತಿ ಸಿಂಹಾಸನ ಏರಿ ಕುಳಿತ ನಿನಗೆ
ಪ್ರೇಮದ ಸೇವಕನು ನಾನಾಗಿಹೆ
ಆದರೆ ನರಕದ ನಾಯಕಿಯೇಕೆ ನೀನಾಗಿಹೆ
ಕಾರ್ಕೋಟಕ ವಿಷವನು ನೀಡದೇ
ಬಾಳಲಿ ಅಮೃತವಾಹಿನಿಯಾಗಿ ಸಿಗುವೆಯಾ

ಪ್ರೀತಿ ಉಸಿರು ಕಟ್ಟಿದೆ ಇಲ್ಲಿ
ವಿನಾಶದ ಸುಳಿಗೆ ಸಿಲುಕಿಹೆ ನಾ
ವಿಷದ ಕೂಪಕೆ ತಳ್ಳದೆ ಬಾ
ವಿವೇಕದ ಗಡಿಯ ಮೀರಹೆ ನೀ
ವಿವಾಹ ಜೀವನ ಪೂಜೆಗೆ ಬಾ

ನನ್ನಾಕೆ ನೆನಪಲ್ಲಿ

ಅಂದೆನ್ನ ಬದುಕಲಿ
ನಿಶ್ಚಯದ ದಿನದಲಿ
ನೋಡಿದ ನಿನ್ನ ರೂಪವು
ಚಿರವಾಗಿ ಚಿತ್ತದಿ ಉಳಿದಿದೆ
ಬಂದು ಸೇರೇ ಭಾವಿ ಸಂಗಾತಿ

ಬಾಯೆನ್ನ ಮನದನ್ನೆ
ಬಾಇಲ್ಲಿ ಮುದ್ದಿನ ಕನ್ಯೆ
ಬಾಬೇಗ ಓ ಸುಮತಿ
ಬಾರೆ ಉಷೆಯ ಗೆಳತಿ
ಬಾ ಭಾವಿ ಸಂಗಾತಿ

ಬಾರೆ ಮುತ್ತಿನ ಚಂಡೆ
ಬಾಇಲ್ಲಿ ಮಲ್ಲಿಗೆ ದಂಡೆ
ಬಾ ಮದನನ ಬಿಲ್ಲೆ
ಬಾ ಸೌಂದರ್ಯದ ಮಾಟಗಾತಿ

ಬಾರೆ ಭಾವಿ ಸಂಗಾತಿ

ಬಾಯೆನ್ನ ಕಲ್ಯಾಣಿ
ಬಾ ಬೇಗೆನ್ನ ರಾಣಿ
ಬಂದು ತೋರೆ ಕರುಣೆ
ಕಾದಿರುವೆ ಬಾಯೆನ್ನ ರತಿ
ಬಾ ಬಾರೆ ಭಾವಿ ಸಂಗಾತಿ

ಮೂಡಣದ ತುದಿಯಲ್ಲಿ
ರವಿರಷ್ಮಿಯ ಬೆಳಕಲ್ಲಿ
ಮೂಡುತಿಹುದು ನಿನ್ನಬಿಂಬವು
ಚಡಪಡಿಕೆಯೆನ್ನ ಪರಿಸ್ತಿತಿ
ಬಾಬಾರೆ ಭಾವಿ ಸಂಗಾತಿ

ಶಶಿಯ ಕಳೆಯಲಿ ರವಿಯ ಹೊಳಪಂತೆ
ಪಳಪಳನೆ ಹೊಳೆಯುವಂತಿಹುದು ನಿನ್ನ ವದನವು
ಚಿಟಪಟ ಬೀಳುವ ಇಬ್ಬನಿಯ ಸ್ಪರ್ಷವು
ನಿನ್ನ ನೆನಪ ಮೆಲಕು ಮಾಡುತಿಹುದು
ಕಾಯುತಿರುವೆ ಬಾಬಾರೆ ಭಾವಿ ಸಂಗಾತಿ

Saturday 24 December 2011

ನನಗೆ ತೋಚಿದ್ದು ಇಲ್ಲಿ ಗೀಚಿದ್ದು

ಇಬ್ಬನಿಯ ತಬ್ಬಿದ ಮಂಜನು
ಸೀಳಿ ಧರೆಗಿಳಿದ ಬೆಳ್ಳಿಕಿರಣ
ಅರಳಿನಿಂತ ಹೂವನು ತಬ್ಪಿ
ಇಬ್ಬನಿಯಿತ್ತ ಮುತ್ತು ಪ್ರೇಮ

ಬಿಸಿಲಿಗೆ ಬೆಂದು ಕೆಂಪಾಗಿ
ಧರೆಗೆ ತಂಪೆರೆವ ವರ್ಷಧಾರೆಯ
ಹನಿ ನೀರಿಂದೊಮ್ಮಿದ
ಮಣ್ಣಿನ ಘಮ ಪ್ರೇಮ

ಹಸುವಿನ ಕೇಚ್ಚಲಲ್ಲಿ ಕರು ಹಾಲುಣ್ಣುತಿರಲು
ಆಗಾಗ ತಿರುಗಿ ನೋಡುವ
ಆಕಳ ಕಣ್ಣಲ್ಲಿಚಿಮ್ಮುವ
ಮಮತೆ ವಾತ್ಸಲ್ಯ ಪ್ರೇಮ

ಪೂರ್ತಿ ಮಾತುಬಾರದ ಹಸುಳೆ
ಕಿಲಕಿಲನೆ ನಗುತಲಿ
ತನ್ನ ತೊದಲ ಮಾತಲಿ ಕರೆವ
ಅಮ್ಮನೆಂಬ ಕೂಗುಪ್ರೇಮ

ಅಕ್ಷಿ ನೋಟಗಳು ಬೆರೆತಾಗ
ತುಟಿಯಂಚಲಿ ಮಿಂಚಿ
ವಿನಿಮಯವಾದ ಒಲವಿನ
ಮುಗುಳ್ನಗೆ ಪ್ರೇಮ

ಪದಪುಂಜಗಳಿಗೆ ನಿಲುಕದೆ
ಎದೆಯಲ್ಲಿಯೇ ಉಳಿದ
ನೂರಾರು ಮಾತುಗಳು
ಬೆಚ್ಚನೆ ಬಾವದ ಲಹರಿಯುಪ್ರೇಮ

ಗೆಳತಿಯ ಬಯಸಿದ ನನ್ನಯ
ಮನದ ಪ್ರೇಮವನ್ನಾಕೆಯು
ತಿರಸ್ಕರಿಸೆ ಮೂಡಿದವು ನನ್ನಲಿ
ಈ ಕೆಳಗಿನ ಸಾಲುಗಳು

ನಿನ್ನಂದಕಿಲ್ಲ ನನ್ನಲೇನೂ ಮಾತು
ಪರಿಪರಿಯಾದ ನಿನ್ನಮಾತಿಗೆ ಸೋತು
ಸಪ್ನದಿ ಕಾಣೊ ನಿನ್ನೀಪರಿಯ ರೂಪ
ಆದರೆನ್ನ ಮನವೇನು ಮಾಡಿತ್ತೆ ಪಾಪ

ಬೆಟ್ಟ ಸುತ್ತಿ ಗಿರಿಯ ಬಳಸಿ
ಬಂದೆ ನಾನಿನ್ನ ಸೇರಲು
ಸೆರಲಿಲ್ಲ ಮನಸು ನಿನ್ನಲಿ
ಮರೆತೆಯ ನನ್ನ ಪ್ರೀತಿಯ

ಹಗಲನಾರಿಸಿ ಇರುಳು ನೆನೆಸಿ
ನಿನ್ನ ಹೃದಯ ನಾ ಮುಟ್ಟಲು
ಬಿಸಿಲಿನಲ್ಲಿ ಬಿರುಗಾಳಿ ಸಿಕ್ಕಿ
ಸಿಗದಾಯಿತಲ್ಲೆ ಪ್ರೀತಿ ಮೆಟ್ಟಿಲು

ಅಂದವೊಂದಿರುವ ಕಲ್ಲುಮನದ ಅಂಗನೆಯು
ನೀನೆಂದು ನನಗಿಂದು ಅರ್ಥವಾಯಿತು
ಒಲ್ಲದಾಕೆ ಮನಸಿನ ಕುರೂಪವೆ
ಮರೆಯಲವಳನು ದಾರಿಯಾಯಿತು

Thursday 22 December 2011

ಹೊಸ ಪ್ರಯತ್ನ

ಮಾತೆಂಬುದು ಎರಡುಅಕ್ಷರ
ಮೌನವೆಂಬ ಎರಡುಅಕ್ಷರ
ದೀಪವೆಂಬ ಎರಡುಅಕ್ಷರ
ಗಾಳಿಯೆಂಬ ಎರಡುಅಕ್ಷರ
ಪ್ರೀತಿಯೆಂಬ ಎರಡುಅಕ್ಷರ

ಪ್ರೇಮದಿಂದ ಮಾತನಾಡಿದೆ
ವಿರಹದಿಂದ ಮೌನವಾಗಿಹೆ
ಪ್ರೇಮದೀಪ ನೀನುಬೆಳಗಿಹೆ
ಗಾಳಿಬಂದು ಅದಾರಿಹೋಯಿತೆ
ನಿನಗೆಇಂದು ಪ್ರೀತಿಸೋತಿತೆ

ಪಾಪವೆಂಬ ಎರಡುಅಕ್ಷರ
ತಾಪವೆಂಬ ಎರಡುಅಕ್ಷರ
ಜಪವೆಂಬುದು ಎರಡುಅಕ್ಷರ
ಕೋಪವಿದೂ ಎರಡುಅಕ್ಷರ
ರಂಪವಿದೂ ಎರಡುಅಕ್ಷರ

ಪಾಪವೇನು ಮಾಡಿದೆನೆಂದು
ಪ್ರೇಮದಿ ತಾಪವನೀಡಿದೆ
ಜಪವುನಿನ್ನದೆ ನೋಡೆ ಬಾಲೆ
ಕೋಪವನುನಿ ಬಿಟ್ಟುಬಾರೆಲೆ
ರಂಪವಮಾಡದೆ ನನ್ನಲ್ಲಿರೆ

ಆದಿಯಿದೂ ಎರಡುಅಕ್ಷರ
ಅಂತ್ಯವಿದೂ ಎರಡುಅಕ್ಷರ
ಆಸ್ತಿಎಂಬುದು ಎರಡಕ್ಷರ
ಅಸ್ತಿಯು ಕೂಡಎರಡಕ್ಷರ
ಬಾಳೆಂಬುದು ಎರಡುಅಕ್ಷರ

ನನ್ನಪ್ರೀತಿಗೆ ಆದಿನೀನೆ
ಮಾಡದಿರು ಪ್ರೀತಿಅಂತ್ಯನೀ
ಆಸ್ತಿಯು ನಿನ್ನಪ್ರೀತಿನನಗೆ
ಪ್ರೀತಿಯಸ್ತಿಬಿಡಲಿಚ್ಚೆಯೇನೆ ?
ಪ್ರೀತಿಯಿರದ ಬಾಳುಬಾಳೆ ?

ಶೂಲವೆಂಬ ಎರಡುಅಕ್ಷರ
ಚಿತ್ತವೆಂಬುದು ಎರಡಕ್ಷರ
ಸೋಲೆಂಬುದು ಎರಡುಅಕ್ಷರ
ನೀತಿಯೆಂಬುದು ಎರಡಕ್ಷರ
ಪಾಠವೆಂಬುದು ಎರಡಕ್ಷರ

ಶೂಲದಿ ಎದೆಗೆ ಚುಚ್ಚಿದೆಯಾ
ಚಿತ್ತದಿನೋವಿಟ್ಟು ಹೋದೆಯ
ಪ್ರೀತಿಗೆ ಸೋಲನು ಇಟ್ಟೆಯಾ
ಪ್ರೀತಿಯ ನೀತಿಯ ಮೀರಿದೆಯಾ
(ಪ್ರೀತಿ)ಮಾಯೆಯೆಂದು ಹೇಳಿಕೊಟ್ಟೆಯ

Wednesday 21 December 2011

ಸೊಲ್ಲ ನೀ ಕೇಳೆ

ನಿಲ್ಲು ನಿಲ್ಲೆಲೆ ಸಲ್ಪ
ಸೊಲ್ಲ ನಿ ಕೇಳೆ
ಇಲ್ಲಿ ನಿ ಬಂದು
ಬೆಲ್ಲದಂತ ಮಾತಾಡೆ
ನಲ್ಲ ನಾನಿನಗಾಗಿ
ಎಲ್ಲೆಲ್ಲಿ ಹುಡುಕಿದೆ
ಮೆಲ್ಲ ನಿ ಬಂದು
ಸೊಲ್ಲ ನಿ ಕೇಳೆ

ಭವ್ಯ ಪ್ರೆಮ ಮಂಟಪದಿ
ದಿವ್ಯ ಜ್ಯೋತಿ ನಿ
ಕಾವ್ಯ ಬರೆಸುವ ಕಾಮಿನಿ
ಸುಶ್ರಾವ್ಯ ಕಂಟದಿ
ಪ್ರಿಯಕರ ನನ್ನ ಕರೆಯೆ
ಹಿತಕರ ನುಡಿಯ ನೀನಾಡದಿರೆ
ಸಂಚಕಾರ ನನ್ನೀ ಹೃದಯಕೆ
ಕೊಂಚ ಪ್ರೀತಿಯ ಸೊಲ್ಲ ನಿ ಕೇಳೆ

ರವಿ ನಿನ್ನ ಕಂಡನಂತೆ
ಕವಿಯಾಗಿ ಹೋದನಂತೆ
ಸವಿಯಾದ ನಿನ್ನ ಮಾತಕೇಳಿದಂದೆ
ಸೆರೆಯಾಗಿ ಹೋದನಂತೆ
ಉರಿಯೇಕೊ ಎದೆಯಲೆಂದು
ಮರಿಪ್ರೇಮ ಅಳುತಿದೆಯಿಂದು
ಅರಿತು ನೀನಿಲ್ಲಿ ಬಂದು
ಸಲ್ಪ ಸೊಲ್ಲ ನೀ ಕೇಳೇ

Sunday 18 December 2011

ಕೇಳೆ ಪಂಚಮಿ

ಕೇಳೆ ಚಲುವೆ ಪಂಚಮಿ

ಉಸಿರೇ ಉಸಿರೆ ಪ್ರಾಣದಾ ಮೂಲವೆ
ಉಸಿರೆ ಉಸಿರೆ ಜೀವದಾ ಜಾಲವೆ
ನಂಗೆ ನೀಕೊಟ್ಟ ಹೃದಯವೇ
ನನ್ನುಸಿರಿನಾ ಮೂಲವೆ

ಕೇಳೆ ಚಲುವೆ ಪಂಚಮಿ

ಪ್ರೀತಿಯ ಸುಂದರ ಪ್ರಪಂಚದಲಿ
ಕನಸಿನ ಮೆಲಕಿನ ಸಾಗರದೊಳು
ಪ್ರಿಯೆನಿನ್ನ ನೆನಪಿನ ನಾವೆಯಲಿ
ನಾನೊಂದು ಸ್ವಪ್ನ ಕಂಡಿರಲು

ಕೇಳೆ ಚಲುವೆ ಪಂಚಮಿ

ನನ್ನದೊಂದು ಮೂಕ ಮನಸು
ಇಂದಿಲ್ಲಿ ಮೌನಗಿತೆ ಹಾಡಿದೆ
ಏಕೊ ಏನೋ ಮಾತಿನಲ್ಲಿ
ನನ್ನ ನೀನಂದು ಕಾಡಿದೆ

ಕೇಳೆ ಚಲುವೆ ಪಂಚಮಿ

ನನ್ನ ಪ್ರೀತಿ ನಿನಗಿರಲಿ
ನಿನ್ನ ನೋವು ನನಗಿರಲಿ
ನೀನಾಡೋ ಒಂದುಪ್ರೀತಿ ಮಾತಲಿ
ನನ್ನ ಬಾಳಲಿ ಕನಸೊಂದು ಚಿಗುರಲಿ

ಕೇಳೆ ಚಲುವೆ ಪಂಚಮಿ

ನನ್ನ ಎದೆಯ ಸುಡುತಿಹುದು
ನಿನ್ನ ಪ್ರೇಮದಾ ತಾಪ
ತಿಳಿಯೆಯಾ ನೀನು ದುಗುಡವಾ
ಪೇಳೇ ನನ್ನಬಾಳ ನಂದಾದೀಪ


ಕೇಳೆ ಚಲುವೆ ಪಂಚಮಿ

ಈ ಪ್ರೇಮ ಕವಿತೆಯಲಿ
ನಿನ್ನ ನೆನಪು ತುಂಬಿರಲಿ
ಪ್ರೇಮಕೆ ಅರಿ ಯಾರಿರಲಿ
ಬಂದು ಜೊತೆಸೇರೆ ಜಯ ಪ್ರೇಮಕಿರಲಿ

ಕೇಳೆ ಚಲುವೆ ಪಂಚಮಿ

Saturday 17 December 2011

ನನಗೆ ತೋಚಿದ ಸಾಲುಗಳು

ಎರಡು ಕಣ್ಣಿಗೂ
ನೂರಾರೂ ಕನಸಿಗೂ
ಉಸಿರಾ ನೀಡಲು ಓಮ್ಮೆ
ಒಲಿದು ನೀ ಬಾರೆಯಾ

ನನ್ನಾ ಆತ್ಮದಿ
ನಿನ್ನಾ ನೆನಪಿದೆ
ನೂರು ಆಸೆಯಾ
ನಾ ತುಂಬಿಕೊಂಡಿಹೆ

ಬಾಳಿನೊಳು ಬಾಬಾರೇ
ಪ್ರಣಯಾನುಭಾವ ಬೀರೆ
ಕವಿತೆಯೊಳು ಕವಿದ
ಆ ಬಾವವು ನೀನಾಗೆ

ನೆನಪಲ್ಲಿ ಮಳೆಬಿಲ್ಲ ಛಾಯೆ
ನಾನಿನ್ನು ನಿನಗಾಗಿ ಕಾಯೆ
ನನ್ನಲಿ ಪೂರ್ತಿ ನಿನ್ನ ಪ್ರೀತಿಯೇ
ಬಾಬಾರೆ ಓನನ್ನ ಪ್ರಿಯೆ

ನನ್ನ ಒಳಗೊಳಗೆ
ನಾನಾಗಿ ಇರುವವಳೆ
ಸುತ್ತೇಳು ಲೋಕದಲ್ಲಿ
ಎಲ್ಲೆಲು ನನ್ನವಳೆ

ಸುಡು ಬಿಸಿಲಲೂ ತಂಪಾಗಿಹುದಿ
ನಿನ್ನ ಪ್ರೀತಿ ಪನ್ನೀರ ಜೀವನದೀ
ಸಪ್ತ ಸಾಗರದಾಚೆ ನಿಂತು ಏಕೆ
ಮನ ಕಾಡುತಿರುವ ನಿನಗೇನು ಬೇಕೆ

Monday 28 November 2011

ಒಂದು ಕನಸು

ಮನದೊಡತಿ ನೆನಪಲಿ ಮರುಗಿರಲು
ಭುವಿಯಲ್ಲಿ ಅಂಬರಾಗಿ ಮಲಗಿರಲು
ಬಾನಲ್ಲಿ ಅಂತಕನು ಕಂಡಿರಲು
ಈಳ್ಯವಿತ್ತು ಯನ್ನನವನು ಕರೆದಿರಲು

ರಾಹುಕಾಲವು ಶುರುವಾಗಿರಲು
ಕಾಲ ನನ್ನೆದುರು ನಿಂತಿರಲು
ಕಬರ ತೆಗೆಯಲು ಕಬಲ ಕೇಳುತಿರಲು
ಮೈನಡುಗುತ ಸೀತಾಳ ಹರಿಯಲು

ಕಾಲ ಸೋಲ ಪಿಡಿದಿರಲು
ಯನ್ನ ಸನಿಹ ಬಂದಿರಲು
ಕೊರಳಲಿ ಹಲಗಹರಿದಂತಾಗಲು
ಕಾಲಹೌರರ ಹುಡದಿ ಕೇಳಿರಲು

ಮನದಿ ನಡುಕ ಹುಟ್ಟಿರಲು
ಉಳಿವು ಅಗಾಯವಾಗಿರಲು
ದೃಡಮನದಿ ಇಳೆಗೆನಾ ಹಾರಿರಲು
ಮಂಚದಿಂದ ನಾಕೆಳಗೆ ಬಿದ್ದಿರಲು

ಇದು ಕನಸೆಂದು ನಾನರಿಯಲು
ನನ್ನ ಗೆಳೆಯನಿಗೆ ಪೇಳಲು
ಆತ ಮುಸಿಮುಸಿ ನಕ್ಕಿರಲು
ಇದ ಬರೆವ ಹಂಬಲ ಹೆಚ್ಚಿರಲು

ಈ ಪರಿಯಲಿ ನಾ ಬರೆದಿರುವೆ
ಓದುವಿರೆಂದು ಭಾವಿಸಿರುವೆ
ಸಲಹೆಗಳಿಗಾಗಿ ಕಾದಿರುವೆ
ತಪ್ಪುಗಳಿದ್ದರೆ ತಿದ್ದುವೆ

Friday 25 November 2011

ನನಗೆ ತೋಚಿದ ಸಾಲುಗಳು

ಚಿತ್ತದಿ ಚಿತ್ರಬರೆದ ಚಲುವೆ ನೀನಾರೆ
ಎತ್ತ ನೊಡಿದರತ್ತ ಕಾಣುವ ಸ್ವಪ್ನ ನೀನಾರೆ
ಖಗಳೆಂದುಕೊಂಡೆ ನಿನ್ನನಾ ಅಪ್ಸರೆ
ಚಿತ್ತದಿ ನೊವು ನೀ ಖಗವಾಗಿ ಚುಚ್ಚಿರೆ
ಮತ್ತೆ ಏಕೋ ನಿನ್ನ ನೋಡೊತವಕ ಹೆಚ್ಚಿರೆ
ಸತ್ತೆ ಎಂದುಕೊ ನನ್ನಾಸೆಗೆ ನೀ ಕಿಚ್ಚು ಹಚ್ಚಿರೆ

ಗಗನದ ತಿಂಗಳಂತಿಹುದು ನಿನ್ನಯಾ ಸಿಂಧೂರ
ಮದನನೇ ತಂದಿಟ್ಟ ನೀ ಸೌಂದರ್ಯದ ಆಗರ
ಧರಣಿಯಲಿ ಸರಿಸಮರಿಲ್ಲ ನೀಸುಂದರ ತಾವರೆ
ಜಗದೇಕ ಸುಂದರಿ ನಿನ್ನಂದಕಂದೇ ಮರುಳಾಗಿಹೆ
ಮನಕಲುಕಿದ ನಿನಗಿಂದು ಮನದಾಸೆ ಪೇಳುವೆ
ಈ ಸುಮದ ಬೆಂಬಿದ್ದ ನಾ ಪ್ರೀತಿಯಾ ಬ್ರಮರವೆ

ಕೋಪದಿ ನೀನು ನನ್ನಲಿ ಮುನಿದಿರೆ
ತಾಪವು ಮನದಿ ಚುಚ್ಚುತ ಕಾಡಿರೆ
ಶಾಪವೊ ಏನೊ ಎಂದುನಾ ಅರಿಯೆ
ಛಾಪನು ಒತ್ತಿದ ನೀಮನದಿ ಸೆಳೆಯೆ
ಜಪವೆ ನಿನ್ನದು ಒಡಲಲಿ ಚಲುವೆ
ಪಾಪವೇನು ತಿಳಿಯೆನಾ ನನ್ನಾ ಒಲವೆ
ವ ಸಂ ತ
ವರುಣ್ ಸಂಜನಾ ತರುಣ್ ಎಂಬವರ ತ್ರಿಕೋನ ಪ್ರೇಮಕಥೆ

ಕಾಲೇಜ್ ಲೈಪ್ ಇಸ್ ಗೋಲ್ಡನ್ ಲೈಪ್ ಅಂತ ಯಾರೋ ಮಹಾನುಭಾವರು ಹೇಳಿದ್ದಾರೆ.. ಹಾಗಂತ ನಾನೀಗ ಹೇಳೋ ಕಥೆ ಕಾಲೇಜ್ ಲವ್ ಸ್ಟೊರಿ ಅಲ್ಲ.. ಇದು ಕ್ಯೂಟ್ ಲವ್ ಸ್ಟೋರಿ.. smsgupshup.com ನ ಶುರುಮಾಡಿದ ಪುಣ್ಯಾತ್ಮ ಯಾರಂತ ಗೊತ್ತಿಲ್ಲ.. ಅದೊಂದು ಸ್ನೇಹಿತರ ಸಂದೇಶಗಳ ಕೊಂಡಿ. ಇದರಲ್ಲಿ ಎನಿದೆ ಏನಿಲ್ಲ ಅಂತ ಒಂದೇ ಮಾತಲ್ಲಿ ಹೇಳಬೇಕಂದರೆ ಅಪರಿಚಿತರನ್ನ ಪರಿಚಿತರನ್ನಾಗಿಸಿ ಅವರನ್ನು ಆಪ್ತರನ್ನಾಗಿಸೊ ಸೊಶಿಯಲ್ ನೆಟವರ್ಕಗಳ ತರ ಕೇವಲ SMSಗಳ ಮಾದ್ಯಮ.. ಇಲ್ಲಿ ಅನೇಕ ಸ್ನೇಹಜೀವಿಗಳಿದ್ದಾರೆ. ಅನೇಕ ಪ್ರೇಮಕಾವ್ಯಗಳಿವೆ.. ಕೆಲವು ಅಸೂಯೆ ಮತ್ಸರಗಳಿದೆ.. ಒಂದೇ ಒಂದು Mobile number ದುರ್ಬಳಕೆಗೆ ರಕ್ಷಣೆ ಮಾತ್ರ ಇಲ್ಲ.. ಇದನ್ನು ಉಪಯೋಗಿಸುವವರು ತಮ್ಮ ಬುದ್ದಿ ಹಿಡಿತದಲ್ಲಿಟ್ಟುಕೊಳ್ಳಬೇಕು..

ಇದನ್ನ ಬಳಸಿ ಸಂಪೂರ್ಣ ಪಳಗಿದ್ದ ನಮ್ಮ ಕಥಾನಾಯಕ ತರುಣ್ ಗೆ ನಾಯಕಿ ಸಂಜನಾ ಪರಿಚಯವಾಗುತ್ತದೆ..ಪರಿಚಯವಾಗುತ್ತದೆ ಇಬ್ಬರೂ ಬಹುಬೇಗ ಆತ್ಮೀಯರಾದರು. ಸಾಹಿತ್ಯಗಾರನಾದ ತರುಣ್ ಗಾಯಕಿಯಾದ ಸಂಜನಾ ಉತ್ತಮ ಗೆಳೆಯರಾದ್ರು. ಇತ್ತ ನಮ್ಮ ಇನ್ನೊಬ್ಬ ಕಥಾನಾಯಕ ವರುಣ್ ನಮ್ಮ ತರುಣ್ ನ ಆಪ್ತಮಿತ್ರ. ಹಾಗೂ ಬಾಲ್ಯ ಸ್ನೇಹಿತ. ಮಿತ್ರರೆಂದರೆ ಹೀಗಿರಬೇಕು ಅಂತ ಬೆಟ್ಟುಮಾಡಿ ತೋರಿಸುವಂತಿತ್ತು ಇವರ ಸ್ನೇಹ.ಅಂತರ್ಜಾಲದಲ್ಲಿ ನಿಪುಣನಾಗಿದ್ದ ವರುಣ್ ಗೆ ಇಮೆಲ್ ಮೂಲಕ ಸಂಜನಾ ಪರಿಚಯವಾಗಿದ್ದಳು. ಮಾತುಗಾರರಾಗಿದ್ದ ಇಬ್ಬರೂ ಆತ್ಮೀಯರಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ.ಇತ್ತ ಗಾಯಕಿಯ ದ್ವನಿಮಾಧುರ್ಯ ಕೇಳುತ್ತ ತರುಣ್ ಸಂಜನಾಗೆ ಮನಸೋತಿದ್ದ. ಒಂದು ದಿನ ಅವಳಲ್ಲಿ ಮಾತನಾಡುವ ಸಂದರ್ಬದಲ್ಲಿ ಆಕೆ ಹೇಳಿದ ಮಾತಿಗೆ ಪ್ರೋತ್ಸಾಹಿತಗೊಂಡು ತರುಣ್ ತನ್ನ ಪ್ರೇಮನಿವೇದನೆ ಮಾಡಿದ. ಆಕೆ ಹೇಳಿದ ಮಾತು "ನಿನ್ನ ಮದುವೆ ಆಗೋ ಹುಡುಗಿ ತುಂಬಾ ಅದ್ರುಷ್ಟಮಾಡಿದಾಳೆ"ಅಂತ. ನಮ್ಮ ತರುಣ್ "ಆಕೆ ನೀನೆ ಯಾಕೆ ಆಗಬಾರದು" ಅಂತ ಕೇಳಿದ..ಆಕೆ ಏನೂ ಉತ್ತರಿಸದೇ ದೂರವಾಣಿ ಸಂಪರ್ಕ ಖಡಿತಗೊಳಿಸಿದಳು..



ಮುಂದುವರಿಯುವುದು..................

Thursday 24 November 2011

ನನಗೆ ತೋಚಿದ ಸಾಲುಗಳು

ನನ್ನಾಕೆಯಾ ನೆನಪು

ನೀಲಿಯ ಬಾನಲಿ ನಲಿವ ಸಾರಂಗ ನೀ..
ಶಶಿಯ ಮನಸ ಸೂರೆಗೈದ ಚಕೋರಿ ನೀ..
ಕಡಲ ಒಡಲ ಆಳದಿ ಅವಿತ ಮುತ್ತು ನೀ..
ಮನದಿ ಮುದವ ನೀಡುವ ಪ್ರೀತಿ ನೀ..

ಮದನ ಮೂರುತಿ ನೋಡಿ ನಾಚುವಂತ ಚಂದವು..
ನಿನ್ನ ನೋಡಿದಂದು ಆಯಿತು ಮನವು ಮಂದವು..
ರತಿ ರೂಪಿಣಿ ನಿನ್ನದು ಅಪ್ಸರೆಯಂತಾ ರೂಪವು..
ಜನುಮ ಜನುಮದಲ್ಲೂ ಕಾಣೆ ಇಂತಹ ಚಲುವು..

ಗೀಚೋ ರೇಗೆಗೆ ಕಾವ್ಯರೂಪ ನೀಡಿದೇ..
ಬಾಳಿನಲ್ಲಿ ಬಂದು ನನ್ನನೇಕೆ ಕಾಡಿದೆ..
ಭೂತದಲ್ಲಿ ಕಂಡು ಭವಿಷ್ಯವನ್ನೇ ಮರೆತೆನಾ..
ಪ್ರೇಮಾಂಮೃತವ ನೀಡಿ ಉಳಿಸು ಪ್ರೀತಿನಾ..

ಮನು ಚರಿತ್ರೆ ಭಾಗ 1

ಮನು ಈ ಕಥೆಯ ಕಥಾನಾಯಕ ಅದಕ್ಕೆ ಮನು ಚರಿತ್ರೆ ಎಂಬ ಶೀರ್ಷಿಕೆ

ನಗುನಗುತಾ ನಲಿ ನಲಿ ಎಂಬಂತೆ ನಲಿಯುವ ಸಮಯ ಬಾಲ್ಯ.. ಅರಿಯದ ಎರಡಂಕಿ ದಾಟದ ವಯಸ್ಸು ಮೋಜು ಮಸ್ತಿಗಳ ಆವಾಸತಾಣ ಎಂಬಂತಿರುತ್ತದೆ.. ಖುಷಿ ಸಂತೋಷ ಪಡುವ ಈ ವಯಸ್ಸಿನಲ್ಲಿ ಮಾನಸಿಕ ಕಷ್ಟ ಅಂದರೇನು ಎಂದು ತಿಳಿಯದ ವಯಸ್ಸಿನಲ್ಲ ನಡೆದ ನೈಜ ಘಟನೆ ತಿಳಿಸಲಿಚ್ಚಿಸುತ್ತೇನೆ..

ಬೋಜನ ಪ್ರಿಯರೆಂಬ ಖ್ಯಾತಿಯ ಹವ್ಯಕರು ಕಲಹಗಳಿಗೂ ಏನೂ ಕಡಿಮೆ ಇಲ್ಲ.. ಆಂತರಿಕ ಕಲಳ ದಾಯಾದಿ ಕದನಗಳ ಅರಿವು ನಿಮಗೆಲ್ಲ ಇದ್ದೇ ಇರುತ್ತದೆ.. ಅಂತಹ ಒಂದು ದಾಯಾದಿ ಕದನದ ವಿವರ ಇಲ್ಲಿದೆ..

ಅದೊಂದು ಮಳೆಗಾಲ. ವರುಣದೇವ ತನ್ನ ಮಡದಿಯೊಂದಿಗೆ ಕಿತ್ತಾಡಿ ಆಕೆ ಮೇಲಿನ ಕೋಪ ನಮ್ಮ ಮೇಲೆ ತೋರಿಸುತ್ತಿದ್ದಾನೊ ಅನ್ನುವ ರೀತಿಯಲ್ಲಿ ಧೋ ಎಂದು ಮಳೆ ಸುರಿಸುತ್ತಿದ್ದ.. ಶರಾವತಿ ನದಿ ಕುರುಕ್ಷೇತ್ರದಿಂದ ಹರಿಯುತಿದೆಯೋ ಎಂಬಂತೆ ಕೆಂಪು ನೀರಿಂದ ತುಂಬಿ ಹರಿಯುತ್ತಿತ್ತು.. ಅದೊಂದು ಪುಟ್ಟ ಗ್ರಾಮ. ಅಲ್ಲಿ 1೦ ಹವ್ಯಕರ ಮನೆಗಳಿವೆ.. ಹೊರ ನೋಟಕ್ಕೆ ಆಪ್ತಮಿತ್ರರಂತೆ ಕಾಣುವ ವ್ಯಕ್ತಿಗಳೂ ಹಿತಶತ್ರುಗಳಾಗಿರುತ್ತಾರೆ.. ವಿಷಯ ಹೇಳೋಕೆ ಇಷ್ಟೆಲ್ಲ ಪೀಟಿಕೆ ಬೇಕಾ ಅಂತ ನೀವೆಲ್ಲ ಯೋಚಿಸುತ್ತಿದ್ದಿರೆಂದು ನನಗೆ ಗೊತ್ತು.. ಆದರೆ ವಿಷಯಕ್ಕೆ ಪೀಟಿಕೆ ಬೇಡವೇ..??

ಊರಿಗೊಂದು ಚೌಡೇಶ್ವರಿ ದೇಗುಲ. ಅಲ್ಲಿ ಪ್ರತೀ ಮನೆಯವರೂ ಪೂಜೆಸಲ್ಲಿಸುವುದಲ್ಲಿನ ಪದ್ದತಿ.. ಅದೊಂದು ಕರಾಳ ಭಾನುವಾರ. ಪೂಜೆಗೆ ದಾಯಾದಿ ಎರಡು ಮನೆಯವರೂ ಕೂಡಿಬಂದಿದ್ದರು.. ಪೂಜೆಯೇನೋ ಸಾಂಘವಾಗಿ ನೆರವೇರಿತು. ಪ್ರಸಾದ ಮೊದಲು ತಮಗೆ ಬೇಕೆಂದು ಜಗಳ ಶುರುವಾಯಿತು.. ಹೊಡೆದಾಟವಾಗಿ ಕಲವರಿಗೆ ಗಾಯಗಳಾದ ನಂತರ ಜಗಳ ನಿಂತಿತು..

ಇದೇ ಸಮಯದಿ ಜಗಳವಾಡಿದ ಒಂದು ಕುಟುಂಬ ನಮ್ಮ ಮನುವಿನದ್ದು.. ಮನೆಯವರೆಲ್ಲ ಆಸ್ತಿಕರಾಗಿದ್ದ ಕಾರಣ ಪೂಜೆಯ ಪ್ರಸಾದ ಇಲ್ಲದೇ ಊಟಮಾಡದೇ ಹಾಗೆ ಕುಳಿತಿದ್ದರು.. ಆಗ ಮನು ಕೇವಲ ಮೂರು ವರ್ಷದ ಬಾಲಕ. ತನ್ನ ತಾಯೀ ಬಳಿ ಹೋಗಿ ಹಸಿವಾಗಿದೆ ಊಟ ಬಡಿಸುವಂತೆ ವಿಜ್ನಾಪಿಸಿದ.. ಆದರೆ ತಾಯಿ ಮನದಲ್ಲೇನಿತ್ತೋ ಗೊತ್ತಿಲ್ಲ ಒಮ್ಮೆಗೆ ಮಗನನ್ನು ಎತ್ತಿಕೊಂಡು ಎಲ್ಲೋ ಹೊರಟಳು.. ಇದನ್ನ ನೋಡಿದ ಮನುವಿನ ಸೋದರತ್ತೆ ಯಾಕೆ ಏನಾಯ್ತು ಅಂತ ತಿಳಿಯಲು ಅವರನ್ನು ಹಿಂಬಾಲಿಸಿದಳು.. ಮನುವಿನ ತಾಯಿ ತುಂಬಿ ಹರಿಯುತ್ತಿದ್ದ ನದಿಯಬಳಿ ಬಂದು ಮಗನನ್ನು ನದಿಗೆ ಎಸೆಯುವ ಕೊನೆ ಕ್ಷಣದಲ್ಲಿ ಮನುವಿನ ಸೊದರತ್ತೆ ಆತನನ್ನು ಕಾಪಾಡಿ ಮನೆಗೆ ಕರೆತಂದಳು...

ಆದರೆ ತಾಯಿಯ ಈ ಕೃತ್ಯಕ್ಕೆ ಇನ್ನೂ ಕಾರಣ ತಿಳಿದಿಲ್ಲ

ಇಂತಾ ತಾಯಂದಿರೂ ಇರುತ್ತಾರಾ..?

Sunday 20 November 2011

ನನಗೆ ತೋಚಿದ ಸಾಲುಗಳು

ಬೇಡಿ ಬೇಡಿನಾ ಪ್ರೀತಿಸಿದೆ
ಕಾಡಿ ಕಾಡಿ ನಾ ಯಾಚಿಸಿದೆ
ಆದರೂ ಆಗದೆ ನಮ್ಮ ಪ್ರೀತಿಯಾ ಸಂಗಮ ||1||

ಹುಡುಗಿ ಬಾರೇ ಬೇಗ ನೀನು
ಮನದಿ ಕೂಗಿ ಕರೆಯುವೆನು
ನೊಟದಿ ಮೋಡಿ ಮಾಡಿ ನೀನು ಮನದೀ ಕಾಡಿದೆ ||2||

ಎಲ್ಲಾ ಮರೆತೆ ಪ್ರೇಮದಿ ತರಳೆ
ಎದೆಯಾ ಬಿಚ್ಚಿ ತೋರಲೇ
ಹಾಡೇ ಮನಸೆ ಎಲ್ಲದಕ್ಕೂ ನೀನೆ ಕಾರಣ ಬೇಲೂರಬಾಲೆ ||3||

ಯಾವುದೊ ಕನಸ ನೆನಪಲಿ
ನೀನನ್ನ ಕಾಡೊ ಪರಿಯಲಿ
ಯಾಕೆ ಹೀಗೆ ಕಾದು ಕೂರುವೆ ತಿಳಿಸು ನನಗೆ ಬಾಲೇ ||4||

ಒಂದು ಕಣ್ಣೀರ ಬಿಂದು
ಜಾರಿ ಬೇಸರದಿ ಇಂದು
ಆಗಿದೆ ಪಂಚಮಿ ನಮ್ಮ ಬಾಳಿಗೆ ಪೌರ್ಣಮಿ ||5||

ಜಂಟಿಯಾಗಿ ಕುಳಿತಿರು ಹಾಗೆ
ಒಂಟಿ ಕನಸ ಕಂಡೆನು ಹೀಗೆ
ಮೆಚ್ಚು ನನ್ನ ಪ್ರೀತಿಯ ಮನಸಕೆಡಿಸಿದಹಾಗೇ ||6||

ನೆನ್ನೆ ಮೊನ್ನೆ ಕಾಣಿಸಲಿಲ್ಲ ಇಂದು ನೀನೆ ಮನದೊಳಗೆಲ್ಲ ನಿನ್ನ ಬಿಟ್ಟು ಬೇರೆ ಯಾರನೆ ಪ್ರೀತಿಸಲಾಗದು ||7||

ಒಮ್ಮ ಕಣ್ಮುಚ್ಚಿಕೊಂಡು
ನಿನ್ನನ್ನಲ್ಲಿ ಕಂಡು
ಮರೆತೇ ನನ್ನೆನಾ ಪ್ರೇಮಿಸೇ ನನ್ನನು ||8||

Sunday 13 November 2011

ನನಗೆ ತೋಚಿದ ಸಾಲುಗಳು

ಓ ಮನಸೇ ಓ ಮನಸೇ
ಬೇರೆ ಏನೂ ಬೇಕಿಲ್ಲ
ಪ್ರಿತಿ ಏಕೆ ಸಿಕ್ಕಿಲ್ಲ
ಹೇಳು ಮನಸೆ ಕಾಡೋ ಕನಸೇ

ಜನುಮ ಜನುಮದಲ್ಲೂ
ಸಂಗಾತಿ ನೀನೆ ಎಲ್ಲೆಲ್ಲೂ
ಮನವೆಂಬ ಅರಮನೆಯಲ್ಲೆ
ಇರು ರಾಣಿಯಂತೆ ನಲ್ಲೆ

ಮನದ ಮುಗಿಲಿನಲ್ಲಿ
ಪ್ರೀತಿ ಬೆಳಕ ಚೆಲ್ಲಿ
ಎದೆಯ ನೋವು ನೂರು
ನೀನಿರದ ಪ್ರೀತಿ ಚೂರು ಚೂರು

Saturday 12 November 2011

ನನಗೆ ತೋಚಿದ ಸಾಲುಗಳು

ಒಂದು ಮಾತಲಿ ಹತ್ತೆಂಟು ನೆನಪಲಿ
ಹತ್ತಿ ಉರಿಯಿತೆ ಪ್ರೇಮವೆಂಬಾ ಜ್ಯೊತಿಯು
ನನ್ನ ಮನದಾ ದುಗುಡ ತಿಳಿಯೆ ನೀನಿಂದು
ಒಂದು ಮಾತಲಿ ಹತ್ತೆಂಟು ನೆನಪಲಿ ||

ಪ್ರೀತಿಸಿದರೆ ಪ್ರೇಮಾನುಭವ
ಪ್ರೀತಿಗೆ ಸಾವೆಂಬುದು ಅಸಂಬವ
ಮನಸೆಂದರೆ ಪ್ರೇಮವೆಂಬ ಮಾಯೆ
ಕನಸಲ್ಲೂ ಕಾಡುವುದು ನಿನ್ನ ಪ್ರೀತಿ ಛಾಯೆ ||

ಜನುಮ ಜನುಮದಲ್ಲೂ ನೀನೆಂದು ನನ್ನವಳೆ
ಮನಸಿನ ಅಂಗಳದಿ ಮಳೆಬಿಲ್ಲಂತೆ ಬಂದವಳೇ
ಏಳೇಳು ಜನ್ಮದಲಿ ನನಗಾಗಿ ಜನಿಸಿದವಳೆ ನನ್ನೊಳಗೆ ನಾನಾಗಿ ಇರುವವಳೇ||

ಓ ಚಲುವೆಯೆ ಪ್ರೇಮಾಂಕುರ ಬೀರಿ ನನ್ನ ಬಾಳ ಜೀವನದಿಯಾಗಿ
ಬಾ ಪ್ರೀತಿಯೇ ಕಾಣದ ಕನಸ ಲೋಕದಿ ಇರುವುದೆಲ್ಲ ನಿನಗಾಗಿ
ಮುಂದಿರುವ ಎಲ್ಲ ಜನುಮ ಜನುಮದಿ ಇರು ನೀ ನನಗಾಗಿ
ಕಾಯುವೇನು ಕೊನೆವರೆಗೂ ಎಂದೆಂದೂ ನಿನ್ನ ಪ್ರೀತಿಗಾಗಿ ||

Thursday 10 November 2011

ನನಗೆ ತೋಚಿದ ಸಾಲುಗಳು

ಕೇಳೇ ಚಲುವೇ ಪಂಚಮಿ

ನಿನೇ ನನಗೆ ಪೌರ್ಣಮಿ
ಪ್ರೀತಿಗೆ ನಾ ಚಿರರುಣಿ
ನೃತ್ಯ ಚಲುವೆ ರೂಪಿಣಿ
ನಲಿಯುತ ಬಾರೇ ಮಾನಿನಿ

ಕೇಳೇ ಚಲುವೇ ಪಂಚಮಿ

ಚಳಿಯಲಿ ಗಡಗಡ
ಮನದಲಿ ದುಗುಡ
ಎದೆಯಲಿ ದಡಬಡ
ಇರಲು ಪ್ರಿಯೆ ಸಂಗಡ

ಕೇಳೇ ಚಲುವೇ ಪಂಚಮಿ

ರವಿ ನಿನ್ನ ಕಂಡನೊ
ಮುದದಿ ಭುವಿಗಿಳಿದನೊ
ಎಂತಾ ಹೊಳಪು ವದನವು
ನೊಡಾಯ್ತು ಹೃದಯದಿ ಕದನವು

ಕೇಳೇ ಚಲುವೇ ಪಂಚಮಿ

ಪಂಚಮದ ಇಂಚರದ ಕೊಗಿಲೆ
ನನ್ನ ಮನವ ಕದ್ದರಿವ ಚಲುವೆ
ನಿನ್ನಯ ಪ್ರೀತಿಯ ಮಾಡಲೆ
ತಿಳಿಸು ಉತ್ತರವ ಚಲುವೆ

ಕೇಳೇ ಚಲುವೇ ಪಂಚಮಿ

Monday 7 November 2011

ನನಗೆ ತೋಚಿದ ಸಾಲುಗಳು

ಏಕೆ ಕಾಡುತಿರುವೆ ಚಲುವೆ
ಮಾಯವಾಗಿದೆ ನನ್ನಾ ಮನವೆ
ಅಂದು ಉರಿಬಿಸಿಲಲು ತಂಪನಿತ್ತ ಚಲುವೆ
ಯಾಕೆ ನನ್ನಮೇಲೆ ಮುನಿಯುತಿರುವೆ ||

ಕೋಟಿ ವರುಷದ ಫಲವೋ ನನಗೆ ನೀ ಸಿಕ್ಕಿದೆ
ಕಾಣೆನಾ ಏನು ಶಾಫವೋ ಮನವ ನೀ ಚುಚ್ಚಿದೆ
ಬಾಳದಾರಿಯಲಿಂದು ನೆನಪುಗಳು ಬರದಾಗಿದೆ
ನಿನ್ನ ಕಾಯುತಲಿ ನನ್ನ ಹೃದಯ ಬರಿದಾಗಿದೆ ||

ಏಕೋ ಏನನೂ ಕಾಣೆ ನಾನು
ಮನದಿ ದುಗುಡವು ಏನೇನೋ
ಕಣ್ಣ ರೆಪ್ಪೆಯಂತೆ ಕಾಯುವೆ ನಿನ್ನನು
ತೆರೆದು ಬಾ ಮನದ ಪುಟ ಪುಟವನು ||

Monday 31 October 2011

ನನಗೆ ತೋಚಿದ ಸಾಲುಗಳು

ನೆನಪುಗಳ ನೆನಪಿಸುವ ಮಂದಗಮನೆಯು ನೀ
ಮರೆಯದೇ ಮರುಗುತಿಹ ಮನಸಿಗೆ ಚೇತನವು ನೀ
ಎದೆಯ ಆಳದಿ ತುಂಬಿ ಚಿಮ್ಮುತಿಹ ಚಿಲುಮೆಯು ನೀ
ಮನದಂಗಳದಿ ಬಿಡಿಸಿ ಬರೆದಿಟ್ಟ ಚಿತ್ತಾರವೇ ನೀ||

ನೀನಾರೇ ಮನಸ ಕದ್ದ ಚೋರಿ
ಚುಚ್ಚಿದೆ ನೀನೇಕೆ ಎದೆಗೆ ಚೂರಿ||೧||

ಅಂದು ನೀಡುತಿದ್ದೆ ನಿನ್ನ ನೆನೆವ ಮನಕೆ ಸಾಂತ್ವನ
ಇಂದು ನಿನ್ನ ನೋಡಲು ಪಡೆಯಬೇಕಾ ಆಮಂತ್ರಣ
ಬಾಳದಾರಿಯಲ್ಲಿ ಕಟ್ಟಿದೆ ಕನಸಿನ ತೋರಣ
ನೀ ದೂರಾಗಲು ಬಾಳಾಯ್ತು ಕತ್ತಲೆಯ ದಟ್ಟ ಕಾನನ||

ನೀನಾರೆ ಪ್ರೀತಿಯ ಹೊಂಬಾಳೆ
ಆಯ್ತಲ್ಲೆ ನಾಷ ನನ್ನಿಡಿ ಬಾಳೆ||೨||

ಕನಸಲಿ ನೆನಪುಗಳಲಿ ನೀನು ನನ್ನನೇಕೆ ಕರೆವೆ
ಮನಸಲ್ಲಿ ವಿರಹತುಂಬಿದೆ ಈಗೇಕೆ ದೂರ ಸರಿವೆ
ದಿನವೆಲ್ಲ ನಿನ್ನ ನೆನಪಲ್ಲೆ ಚಿನ್ನ
ಕರೆದಾಗ ನಿನ್ನ ಬಾಇಲ್ಲಿ ರನ್ನ ||

ನೀನಾರೆ ಮನವ ಕಾಡುವ ಕಾಂತೆ
ನಿನ್ನ ಮನದಾಗೆ ನೆನೆಯಲೇನೊ ಬ್ರಾಂತಿ||೩||

Saturday 29 October 2011

ನನ್ನ ನಲ್ಲೆ

ಮುಂಗಾರಿನ ಮಳೆಯಲ್ಲೆ
ಮಿಂಚಂತೆ ಬಂದ ನಲ್ಲೆ
ಬಾಳೆಂಬ ಪುಟದಲ್ಲಿ
ನೀನು ಬರದಾದೆಯಲ್ಲೆ

ತುಂತುರು ಹನಿಯ
ತಂಪಿನ ಸನಿಹ
ತುಮುಲಮು ಕಾಡಿದೆ
ದುಗುಡವು ಕವಿದಿದೆ

ಮಳೆಯ ಹನಿಯೇ
ನನ್ನಾಕೆ ಬಳಿ ನೀ
ಹೋಗಿ ನನ್ನಯ
ಮನದಾಸೆ ಪೇಳುನೀ

ಕಾರ್ಮೋಡಕೆ ತಂಪಾಗೆ
ಮಳೆಹನಿ ಧರೆಗಿಳಿವ ತೆರದಿ
ಬಿತ್ತರಿಸು ನೀ ನನಗೆ
ಪ್ರೇಮವ ಮಾನಸಾಮ್ರತದಿ

ಸಿಹಿಕನಸಲಿ ನಿನ್ನಯಾ
ರೂಪವ ನನಗೆ ತೋರುತಲಿ
ಮನಸೆಳೆದ ನಿನ್ನಲಿ
ಪ್ರೀತಿಯಾಚನೆ ಮಾಡುತಲಿ

Sunday 16 October 2011

ನನ್ನ ಮೊದಲ ಹಾಸ್ಯ ಕವನ

ಓದು ಒಕ್ಕಾಲು
ಬುದ್ದಿ ಮುಕ್ಕಾಲು
ಎಲ್ಲಾರು ಅಂತಾರೆ ||

ಬೀದೀಲೀ ಆಡ್ತಾರೆ
ಟೆಂಟಲಿ ಮಲಗ್ತಾರೆ
ಏನ್ಮಾಡೋದು ಅಂತಾರೆ ||

ಪಂಚೆ ಉಡ್ತಾರೆ
ತಂಬಾಕು ಹಾಕ್ತಾರೆ
ಸುದ್ದಿಹೇಳ್ತಾ ಚಾಯ್ ಕುಡಿತಾರೆ ||

ಕೆಲಸ ಬಿಟ್ಟು ಬೀದಿಸುತ್ತುತಾರೆ
ಕೇಳಿದ್ರೆ mbbs ಅಂತಾರೆ
ಟೈಂಟುಟೈಂ ತಿಂಡಿತಿಂತಾರೆ ||

ನಿರುದ್ಯೊಗಿ ಅಂದ್ರೆ ಕೊಪಗೊಳ್ತಾರೆ
ಹುಡ್ಗಿ ಕಂಡ್ರೆ ಪ್ರೀತಿ ಅಂತಾರೆ
ಓಕೆ ಅಂದ್ರೆ ಹಿಂದೇ ಓಡ್ತಾರೆ ||

ಓಸಿ ಆಗಾಗ ಆಡ್ತಾರೆ
ಇಸ್ಪೀಟಂದ್ರೆ ಸಾಯ್ತಾರೆ
ಡುಡ್ಡ ಕಂಡ್ರೆ ಪಾರ್ಟಿ ಮಾಡ್ತಾರೆ ||

ಟೀವಿ ನೊಡ್ತಾ ಕುರ್ತಾರೆ
ಬಿಸಿ ಚಾಯ್ ಕುಡಿತಾರೆ
ತಮ್ಮ್ತಮಲ್ಲೆ ಚರ್ಚೆ ಮಾಡ್ತಾರೆ ||

ರಾಜ್ಕೀಯ ನಾಯೀಪಾಡು ಅಂತಾರೆ
ಅವ್ರು ಮಾಡೋದ ಮಾಡ್ತ ಇರ್ತಾರೆ
ಎಲ್ಲ ರಾತ್ರಿ ಉಂಡು ಮಲಗ್ತಾರೆ ||

Thursday 13 October 2011

ನನಗೆ ತೋಚಿದ ಸಾಲುಗಳು

ಕೋಟಿ ತಾರೆ ನಾಚುವಂತ ಅಂದ ನಿನ್ನದು
ಚಂದ್ರ ನೊಡಿ ಓಡುವಂತ ಚಂದ ನಿನ್ನದು
ಬಿಂಬ ನೊಡಿ ಕಾಡುವಂತ ಚಲುವು ನಿನ್ನದು
ನಿನ್ನ ದಾರಿ ಕಾಯುವಂತ ಪಾಳಿ ನನ್ನದು ||


ಚುಕ್ಕಿ ತಾರೆ ಬೆಚ್ಚಿದಾಗ ಕಂಡೆ ನಿನ್ನನು
ಮೆಚ್ಚಿ ನೀನು ಕೂಗಿದಾಗ ಕದ್ದೆ ನನ್ನನು
ಪ್ರೀತಿ ಪಾಠ ಹೇಳಿಕೊಡಲು ಬಾರೆ ಒಚಿನ್ನು
ನೀನು ಕೂಡ ಬಿಟ್ಟೋದರೆ ಗತಿ ಯಾರಿನ್ನು ||


ಪಾಪ ಕೂಪ ಪ್ರೀತಿಯೆಂದರೆ ತಪ್ಪು ಇನ್ನೇನು
ಮಾತ ಕೊಟ್ಟು ಮರೆತೆಯಲ್ಲೆ ನೀನು ಹೀಗೆನು
ಮನದ ಪುಟವ ತೆರೆದುಬಂದೆ ಸುಳ್ಳೆ ಪ್ರೀತಿನು
ಭಾನ ಚಂದ್ರ ದಕ್ಕದೆಂದು ಪಾಠ ಅರಿತೆನು ||

Sunday 9 October 2011

ನನ್ನಾಕೆಯ ಹುಡುಕಾಟ

ಮಾತು ಬಾರದೆ ನಾನು ಮೌನಗೀತೆಯ ಹಾಡಿದೆ
ಗೀತೆ ಕೇಳುತ ನನ್ನ ಮನದೊಡತಿಯಾ ನೋಡಿದೆ ||ಪ||

ನನ್ನಯ ಬಾಳದೋಣಿ ನೀನಾಗಿರೆಂದಳು ಅಂದು
ದೋಣಿಯು ಮಳುಗುತಲಿದೆ ನೀನಾರುಎಂದಳು ಇಂದು
ಕೊಟ್ಟಳು ಕೈಗೆಒಂದು ಕಾಲಿಯಾಗಿರುವಾ ಚೊಂಬು
ನನ್ನಾಕೆ ನಗುನಗುತಲಿ ಕೊರಳುನುಕುಯ್ದಳಾ ಶಂಭು ||೧||

ಮಾತು ಬಾರದೆ ನಾನು ಮೌನಗೀತೆಯ ಹಾಡಿದೆ
ಗೀತೆ ಕೇಳುತ ನನ್ನ ಮನದೊಡತಿಯಾ ನೋಡಿದೆ..

ಕವಿತೆ ಬರೆಯಲವಳು ಸ್ಪೂರ್ತಿಯಾಗಿಹಳು
ಬರೆದೆ ಪ್ರೇಮಪತ್ರವ ಪ್ರಿಯೆನಿನಗಿದೆಂದು
ಓದಿ ಬರುತಿರಲವಳು ಹೃದಯವಕದ್ದಳು
ಮನದ ಮನಸಗೆಳತಿ ನೆನಪನಾಳಿದವಳು ||೨||

ಮಾತು ಬಾರದೆ ನಾನು ಮೌನಗೀತೆಯ ಹಾಡಿದೆ
ಗೀತೆ ಕೇಳುತ ನನ್ನ ಮನದೊಡತಿಯಾ ನೋಡಿದೆ..

ಪ್ರೀತಿ ಇಂಚರವನು ಮನದೊಳಗಡೆಕೇಳಿ
ಪ್ರೇಮ ಅಮೃತವನು ಎದೆಯೊಳಗಡೆಚೆಲ್ಲಿ
ಮನದಿ ಕಾಡುತಿರುವ ನೆನಪಿನಸುಳಿಯಲ್ಲಿ
ಪ್ರೇಮ ಗೀತೆಯೊಂದ ಹಾಡುವಾಸೆಕೇಳಿ ||೩||

ಮಾತು ಬಾರದೆ ನಾನು ಮೌನಗೀತೆಯ ಹಾಡಿದೆ
ಗೀತೆ ಕೇಳುತ ನನ್ನ ಮನದೊಡತಿಯಾ ನೋಡಿದೆ..

ಮನವ ಕಲುಕುತಿರುವ ಮಂದಸ್ಮಿತ ನಿನ್ನವದನವು
ಕಣ್ಣ ಸೂರೆಗೊಳ್ಳೊ ಕಮಲದಂತ ನಿನ್ನಕಂಗಳು
ಎದೆಯು ಜಲ್ಜಲ್ಎಂಬ ನೀನುನಡೆವ ಹೆಜ್ಜೆಶಬ್ದವು
ನಿನ್ನ ಪ್ರೀತಿಕಾಯೊ ಬಡಪ್ರೇಮಿಯು ನಾನುಒಬ್ಬನು ||೪||

ಮಾತು ಬಾರದೆ ನಾನು ಮೌನಗೀತೆಯ ಹಾಡಿದೆ
ಗೀತೆ ಕೇಳುತ ನನ್ನ ಮನದೊಡತಿಯಾ ನೋಡಿದೆ..

Monday 26 September 2011

ನನಗೆ ತೋಚಿದ ಸಾಲುಗಳು.

ನನಗೆ ತೋಚಿದ ಸಾಲುಗಳು

ಪ್ರೀತಿ ಮಾತು ಕೇವಲ ನಿನ್ನ ಮಾತಲಿ
ದ್ರೊಹ ಮಾಡೋ ಬಯಕೆ ನಿನ್ನ ಮನದಲಿ
ಈಟಿ ಇತ್ತೆ ನಿನ್ನ ಮುಗ್ದ ನಗುವಲಿ
ಬೇಯುತಿದೆ ನನ್ನ ಹೃದಯ ನಿನ್ನ ಪ್ರೀತಿಯಲಿ
ಕತ್ತಿಗೆ ಸುತ್ತಿದೆಯಾ ಪ್ರೀತಿಯ ಹಾರ
ಇದೇನ ನಿನ್ನ ನಿರ್ದಾರ
ನಂಬಿದೆ ಪ್ರೀತಿಯೆನ್ನು
ನಾ ಮಾಡಿದ ತಪ್ಪು ಏನು
ಕಾರಣ ಹೇಳದೇ ಹೋದೆಯಾ
ಕತ್ತಿಗೆ ಸುತ್ತಿದೆಯಾ ಪ್ರೀತಿಯ ಹಾರ
ಇದೇನ ನಿನ್ನ ನಿರ್ದಾರ
ಪ್ರೀತಿ ಮಾತು ಕೇವಲ ನಿನ್ನ ಮಾತಲಿ
ದ್ರೊಹ ಮಾಡೋ ಬಯಕೆ ನಿನ್ನ ಮನದಲಿ


ನಿನ್ನ ಪ್ರೀತಿಗಾಗಿ ನಾನು ಕನಸ ಕಾಣುತ್ತಿದ್ದೆ
ಬಂದು ನೀನೇಕೆ ನನ್ನ ಕಣ್ಣ ಕಿತ್ತೆ ನನ್ನ ಪ್ರೀತಿಯಾಳ ತಿಳಿಯದಾದೆಯಲ್ಲೆ
ಪ್ರೀತಿಯ ಮಣ್ಣು ಮಾಡಿದೆಯಲ್ಲೆ
ಕತ್ತಿಗೆ ಸುತ್ತಿದೆಯಾ ಪ್ರೀತಿಯ ಹಾರ
ಇದೇನ ನಿನ್ನ ನಿರ್ದಾರ
ಪ್ರೀತಿ ಮಾತು ಕೇವಲ ನಿನ್ನ ಮಾತಲಿ
ದ್ರೊಹ ಮಾಡೋ ಬಯಕೆ ನಿನ್ನ ಮನದಲಿ


ಸಾವಲ್ಲಿ ಒಂದಾಗೊದು ಪ್ರೀತಿ
ಪ್ರೀತಿನೇ ಸಾಯಿಸಿ ಬಿಟ್ಟೆಯಲ್ಲ
ನೋವನ್ನು ನಂಗೆ ಬಿಟ್ಟು ಹೋದೆ
ನನ್ನ ನೋಡಿ ನಗುತಿಹೆಯಲ್ಲ
ಹೇಗೆ ನಾನಿನ್ನ ಮರೆಯಲಿ
ದೇವತೆ ನಿನ್ನ ಬಾಳಿನಲ್ಲಿ
ನಿನಿಲ್ಲದೇ ನಾನುಳಿಯಲ್ಲ ಪ್ರೀತಿಯೇ ನನ್ನ ಪಾಲಿಗೆ ಮುಳ್ಳಾಯಿತಲ್ಲ
ನೀನಲ್ಲದೆ ನಾನೇಕೆ ಬದುಕಲಿ ಇನ್ನ
ಕಾಯಲಾರೆನು ನಾ ನಿನ್ನಾ ಪ್ರೀತಿಗೆ
ಪ್ರೀತಿಯ ಮಾತನು ಆಡಿದ್ದು ಮೋಸಕೇ
ಕಾಟವ ಕೊಟ್ಟು ಹೊದಯ
ಕತ್ತಿಗೆ ಸುತ್ತಿದೆಯಾ ಪ್ರೀತಿಯ ಹಾರ
ಇದೇನ ನಿನ್ನ ನಿರ್ದಾರ
ಪ್ರೀತಿ ಮಾತು ಕೇವಲ ನಿನ್ನ ಮಾತಲಿ
ದ್ರೊಹ ಮಾಡೋ ಬಯಕೆ ನಿನ್ನ ಮನದಲಿ

Tuesday 20 September 2011

ನನಗೆ ತೋಚಿದ ಸಾಲುಗಳು..

ಮುತ್ತಿನಂತ ಮಳೆಯಲಿ...
ಕೋಲ್ ಮಿಂಚಿನ ತೆರದಲಿ...
ಕನಸಲಿ ಬಂದು ಮೆರೆವೆ...
ಮರೆವಲೂ ನೆನಪಾಗುವೆ...
ಕಣ್ ಮನ ಸೆಳೆಯುತಲಿ...
ನನ್ನೇಕೆ ಕಾಡುತಲಿರುವೆ...

ಮಿಂಚಲ್ಲೂ ಕಾಣುವೆ...
ಪ್ರತಿಹನಿಯಲೂ ಮೆರೆವೆ...
ಒಲವಿನ ಮಂದಾರವೆ...
ನನ್ನಲೇನು ದ್ವೇಷವೆ...
ಕನಸ ನೆನಪು ಅಳಿಸದೆ...
ನನ್ನೇಕೆ ಕಾಡುತಲಿರುವೆ...

ನೆನಪುಗಳ ನೆನಪಲ್ಲಿ...
ಬಂದು ನೀ ಚೆಲ್ಲಿದೆ ಇಲ್ಲಿ...
ನಿನ್ನ ಪ್ರೀತಿಯ ಓಕುಳಿ...
ಕಾಡದಾಗಿದೆ ದಾರಿ ಓ ಮನವೆ...
ಸೋತೆನು ನಾನು ನಿನಗಿಲ್ಲಿ...
ಸೋತರು ನನ್ನೇಕೆ ಕಾಡುತಲಿರುವೆ...

Saturday 17 September 2011

ನನಗೆ ತೋಚಿದ ಸಾಲುಗಳು..

ನನ್ನವಳು ಇಂದು ನನ್ನಜೊತೆ ಇಲ್ಲ...
ನಾ ನಂಬಿದ ಗೆಳತಿ ಕೈ ಕೊಟ್ಟಳಲ್ಲ...
ಆ ದೇವರಿಗಂತೂ ಕರುಣೆ ಇಲ್ಲ...
ಮನಸಿನೊಂದಿಗಿನ ಚೆಲ್ಲಾಟ ಸಲ್ಲ...
ಹಂಚದಾದೆಯಲ್ಲೇ ಪ್ರೀತಿಯ ಬೆಲ್ಲ...
ಕಾಯುತಲಿರುವ ಈ ನಿನ್ನ ನಲ್ಲ...
ನೀನಿರದೇ ನನ್ನ ಬಾಳಲ್ಲೇನು ಇಲ್ಲ...


ಮನಸ ಸೆಳೆದೆ ನಿನ್ನ ಮೊದಲ ನೋಟದಿಂದ...
ಪ್ರೀತಿಸಿದೆ ನಿನ್ನ ಕಂಡ ದಿನದಂದು...
ಪ್ರೀತಿಯಿಂದ ನಾ ನಿನ್ನ ಕನಸಕಂಡು...
ಬಯಸಿದೆ ಮನದೊಡತಿಯ ಆಗಲೆಂದು...
ಹೃದಯದಿ ಜಾಗವಿದೆ ನಿನಗೆಂದೆಂದು...
ಕಾಯ್ದಿರಿಸುವೆ ಜಾಗಗವ ಮರುಜನ್ಮಕೆಂದು...
ವಿದಿಯು ಆಟವಾಡಿತು ನನ್ನ ಬಾಳಿನಲ್ಲಿಂದು...
ಕರೆಯಲು ಬಂದೆಯಾ ನಿನ್ನ ಮದುವೆಗೆಂದು...

Thursday 15 September 2011

ನನಗೆ ತೋಚಿದ ಸಾಲುಗಳು..

ಅ ಶಶಿಯಾ ಕಳೆಯು ನಿನ್ನಯಾ ವದನದಿ...
ಬಂದಿಯಾದೆನು ನಾ ನಿನ್ನಯಾ ಪ್ರೇಮದಿ...
ಪ್ರೇಮದಾ ನಿವೇದನೆ ಮಾಡಿದೇ ಮನಸಲಿ...
ಹೇಳಲಾರೆನು ನಾ ನಿನ್ನಯಾ ಎದುರಲಿ...

ನೀನಾಡೋ ಮರುಳು ಮರುಳಾಟದಲಿ...
ಕಳೆದು ಹೋದೆನು ನಾನು ನನ್ನಲಿ...
ನಿನ್ನ ಪ್ರೇಮಧಾರೆಯ ಸುರಿಸು ನನ್ನಲಿ...
ಮೂಡಲಿ ಪ್ರೀತಿಯು ನಿನ್ನಯಾ ಮನದಲಿ...

ಏತಕೆ ಬಂದೆ ನಿನೇಕೆ ನನ್ನ ಬಾಳಲಿ...
ಸಿಲುಕಿಕೊಂಡೆನು ನಾ ಪ್ರೀತಿಯಾ ಮಾಯೆಯಲಿ...
ನೀಡು ಅನುಮತಿಯನು ನನಗಿಂದು...
ಪ್ರೀತಿ ಮಾಡಲು ನಿನ್ನ ಎಂದೆಂದು...

ಕಾಯುತ ಕುಳಿತಿಹೆ ನಿನ್ನಯಾ ದಾರಿಗೆ...
ಸಿಗದಾಯಿತೆ ಬರಲು ನಿನಗೆ ಸಾರಿಗೆ...
ಬೀರಲಾರೆಯಾ ನನ್ನಲಿ ಪ್ರೀತಿಯಾ ಹೂನಗೆ...
ಮಾಡಬೆಕೆಂದಿಹೆ ನಿನ್ನ ನನ್ನ ಮನಸಲ್ಲಿ ಮೆರವಣಿಗೆ...

ಕಾಣವಾ ಕನಸಲೆಲ್ಲ ನೀನೇ ತುಂಬಿರುವೆ...
ಮನದಲಿ ಎಂದು ನನಗೆ ನೀ ಜಾಗ ಕೊಡುವೆ...
ನಿನಗಾಗಿ ಜನುಮ ಜನುಮ ಕಾಯುತಲಿರುವೆ...
ಕಣ್ಣಾ ಮುಚ್ಚಾಲೆಯಾಡುತ ಯಾಕೆ ಕಾಯಿಸುತಿರುವೆ...

Wednesday 14 September 2011

ನನಗೆ ತೋಚಿದ ಸಾಲುಗಳು..

ಮನಸೆಂಬ ಮುಂಗಾರಲ್ಲಿ...
ಪ್ರೀತಿಯೆಂಬ ಮಳೆಯಲ್ಲಿ...
ಆ ಮೋಡಗಳ ಮರೆಯಲ್ಲಿ...
ಅಡಗೋ ಚಂದಿರನ ತೆರದಲ್ಲಿ...
ಮೈ ಮರೆಸೊ ನಿನ್ನ ನಗುವಲ್ಲಿ...


ಪ್ರೇಯಸಿಯ ನೆನಪಲ್ಲಿ...
ಭೂ ತಾಯೀ ಮಡಿಲಲ್ಲಿ...
ತುಸುಮೆಲ್ಲ ಬಿಸುವ ತಂಗಾಳೀಲಿ...
ಗಗನದ ಚುಕ್ಕಿಯ ನೋಡುತಲಿ...
ನಿನ್ನ ನೆನಪಲಿ ಕನಸ ಕಾಣುತಲಿ...


ಕಾಡುತಿರುವೆ ಬಂದು ನನ್ನಲ್ಲಿ...
ಕನಸೆಂಬ ಓಕುಳಿ ಚಲ್ಲಿ...
ಆಗು ನನ್ನ ಬದುಕಲಿ ರಂಗವಲ್ಲಿ...
ಸದಾ ನೀನಿದ್ದರೆ ಬಳಿಯಲ್ಲಿ...
ಸ್ವರ್ಗ ಕಾಣುವೆ ನಾ ಭುವಿಯಲ್ಲಿ...


ಕಾದಿರುವೆನು ನಾ ನಿನ್ನ ನೆನಪಲ್ಲಿ...
ನೆಪವೇಕೆ ಬರಲು ನಿನಗಿಲ್ಲಿ...
ಕಾಪಾಡುವೆ ನಿನ್ನ ನನ್ನೆದೆಯಲ್ಲಿ...
ಬಳಲುತಿಹೆ ನಿನ್ನ ನೆನಪ ಮೆಲಕಲ್ಲಿ...
ತಿಳಿಯೆನು ನಾ ಅಂತದೇನಿದೆ ನಿನ್ನಲಿ...


ಬಾ ನೀ ನನ್ನ ಬಾಳಲ್ಲಿ...
ಕಾಡುತಿರುವೆ ಮನದಲ್ಲಿ...
ಮನಸೆಂಬ ಕನ್ನಡಿಯಲ್ಲಿ...
ಪ್ರೀತಿ ಎಂಬ ಬೆಳಕ ಚಲ್ಲಿ...
ಓ ಗೆಳತಿ ಬಾ ನನ್ನ ಕನಸಲ್ಲಿ...

Tuesday 13 September 2011

ನನಗೆ ತೋಚಿದ ಸಾಲುಗಳು.

ನೆನಪಿನಲ್ಲೆ ನೆನಪಾಗೆ...
ನೆನಪುಗಳೇ ಪ್ರೇಮವಾಗೆ...
ನೆನಪಲೇ ಉಳಿವಾಗೆ...
ನನಗವಳ ನೆನಪಾಗೆ...
ಮನದಿ ಬೇಸರವಾಗೆ...


ನೆನಪಲ್ಲೆ ನೀ ಅಳಿವಾಗೆ...
ಮಗುವಂತೆ ನಾ ಅಳುವಾಗೆ...
ಅಳಿವೆನು ನಿನ್ನ ಪ್ರೀತಿಯಾಗೆ...
ಆಳುತಿರುವೆ ನಿನ್ನ ಮನದಾಗೆ...
ನೆಲೆಸಿರುವೆ ನನ್ನ ಉಸಿರಾಗೆ...

ಕನಸಲ್ಲಿ ನೇನಪಾಗೆ...
ಉಸಿರಿಗೆ ಪೆಸರಾಗೆ...
ಪೆಸರಿಗೆ ಸ್ಪೂರ್ತಿಯಾಗೆ...
ನಾನೇ ನೀನಾಗೆ...
ನನ್ನಲೋಮ್ಮೆ ಒಂದಾಗೆ...

ಬಯಸಿದೆ ನಿ ಬರಲೆನ್ನ ಎದೆಯಾಗೆ...
ಏಕೆ ಬರದಾದೆ ನನ್ನ ಬಾಳಿನಾಗೆ...
ಒಮ್ಮೆ ಬಾ ನನ್ನ ಜೀವನದಾಗೆ...
ಕಂಡೆನಾನಿನ್ನ ಚಂದ್ರನಾಗೆ...
ಬಾ ಸಾಕು ಒಂದು ಚುಕ್ಕಿಯಾಂಗೆ...

Saturday 10 September 2011

ನನಗೆ ತೋಚಿದ ಸಾಲುಗಳು.

ಮನಸಾರೆ ಮನಸೆಳೆದ
ಮಾನಸ ಗೆಳತಿ ನೀ...
ಮನದಾಳದಿ ನೆನಪಾಗೆ
ಸಂದೆಶ ಕಳಿಸುವೆ ನೀ...

ಅಂದಾಯಿತು ನನಗೆ
ನಿನ್ನಯಾ ಪರಿಚಯ...
ಕಾಯುತಾ ಕುಳಿತೆನು
ನಿ ಬರುವುದೇ ಸಂಶಯ...

ಯಾಕೆ ಕದ್ದೆ ಮನಸನ್ನ
ನೀ ಒಬ್ಬಳು ಕಳ್ಳಿಯ ಹಾಗೆ...
ಕಳೆಯುತಿರುವೆ ದಿನವ
ಕನಸಲ್ಲಿ ನಿನ್ನ ನೊಡುತ ಹೀಗೆ...

ಕಾಡುತಿರುವೆ ನೀನೇಕೆ
ಮನದಾಸೆ ತಿಳಿಯದೆ...
ವೇದನೆಯಿಂದ ಬಳಲುತಿಹೆ
ಮನವು ಕಾಡುತಲಿದೆ...

ನೀ ಬರುವ ದಾರಿಗಾಗಿ...
ಕಾಣುತಿರುವೆ ಕನಸನೀಗ...
ಆ ದಾರಿಯೇ ದೂರಾದಾಗ...
ಉಳಿದೆ ನೀ ಬರಿ ನೆನಪಾಗಿ...

Saturday 3 September 2011

ನನಗೆ ತೋಚಿದ ಸಾಲುಗಳು

ಆ ಮೋಡ ಈ ಗಾಳಿ ನನ್ನ ಪ್ರೀತಿಗೆ
ಅರ್ಥ ಹೇಳದೆ ಮಳೆಯಾಗಿ ಬೀಸಿ ಹೋಗಿದೆ
ನೀನಿಲ್ಲದೆ ಈ ಪ್ರೀತಿ ವ್ಯರ್ಥವಾಗಿದೆ
ನನ್ನ ನೋವು ನಿನಗಿಂದು ಅರ್ಥವಾಗದೇ

ನಿನ್ನೆಸರೆ ನನ್ನುಸಿರು
ನಿನ್ನೊಲವೆ ನನ್ನ ಗೆಲವು
ನಿನಗಾಗಿ ನನ್ನ ಪ್ರೀತಿ
ನೀನೇನೆ ನನ್ನೊಡತಿ


ಆ ಮೋಡ ಈ ಗಾಳಿ ನನ್ನ ಪ್ರೀತಿಗೆ
ಅರ್ಥ ಹೇಳದೆ ಮಳೆಯಾಗಿ ಬೀಸಿ ಹೋಗಿದೆ

ನಿನ್ಯರೋ ನಾನ್ಯಾರೋ
ಇದನ್ನ ಹೇಳೋರ್ಯಾರೋ
ನನ್ನೊಲವ ನೀ ಅರಿಯೆ
ನನ್ ಪ್ರೀತಿಯ ನೀ ಸವಿಯೇ

ಆ ಮೋಡ ಈ ಗಾಳಿ ನನ್ನ ಪ್ರೀತಿಗೆ
ಅರ್ಥ ಹೇಳದೆ ಮಳೆಯಾಗಿ ಬೀಸಿ ಹೋಗಿದೆ

ಓ ಪ್ರೀತಿಯೇ ಈ ರೀತಿಯೇ
ಎಲ್ಲೋದ್ರು ನೀನು ಕಾಣ್ತಿಯೇ
ಹಗಲಲ್ಲು, ಇರುಳಲ್ಲು
ಕಣ್ ಮುಚ್ಚಲು ಕಣ್ತೆರೆಯಲು ಎಲ್ಲೆಲ್ಲೂ

ಆ ಮೋಡ ಈ ಗಾಳಿ ನನ್ನ ಪ್ರೀತಿಗೆ
ಅರ್ಥ ಹೇಳದೆ ಮಳೆಯಾಗಿ ಬೀಸಿ ಹೋಗಿದೆ

ಎಲ್ಲೆಲ್ಲು ನೀನಿರಲು
ನನ್ನಲ್ಲೂ ನೀ ಬರಲು
ನೀನೇನೆ ನನ್ನ ಪ್ರಾಣಾ
ನೀನಿಲ್ಲದೆ ಅದು ಮೌನ

ಆ ಮೋಡ ಈ ಗಾಳಿ ನನ್ನ ಪ್ರೀತಿಗೆ
ಅರ್ಥ ಹೇಳದೆ ಮಳೆಯಾಗಿ ಬೀಸಿ ಹೋಗಿದೆ

ಓ ಮನಸೇ ನೀ ನೆನಸೆ
ಅವಳನ್ನೇ ನೀ ನೆನಸೆ
ಓ ಹೃದಯಾ ನೀ ಹೇಳೆಯಾ
ಅವಳನ್ನು ನೀ ಮರೆಯುವೆಯ

ಆ ಮೋಡ ಈ ಗಾಳಿ ನನ್ನ ಪ್ರೀತಿಗೆ
ಅರ್ಥ ಹೇಳದೆ ಮಳೆಯಾಗಿ ಬೀಸಿ ಹೋಗಿದೆ

ನನ್ನ ಕನಸು

ಕೆಲವೊಂದು ಕನಸುಗಳು ತುಂಬಾ ಸೊಗಸಾಗಿರುತ್ತದೆ. ಅಂತಹ ಒಂದು ಕನಸಿನ ವರ್ಣನೆ.

ಅದೋಂದು ದಿನ ಮುಂಜಾನೆಯ 5 ಗಂಟೆಯ ಸಮಯ. ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಯಾರೋ ಒಬ್ಬ ಕಿಟಕಿಯನ್ನು ತೆರೆದ. ಕಿಟಕಿಯಿಂದ ಹೊರಗಡೆ ದೃಷ್ಟಿ ಹಾಯಿಸಿದಾಗ ಸುತ್ತ ಹಚ್ಚಹಸಿರಿನಿಂದ ಕಂಗೊಳಿಸುತ್ತ ಇರುವ ಬೆಟ್ಟಗಳನ್ನು ನೋಡಿ ಮನಸ್ಸು ತಡೆಯಲೇ ಇಲ್ಲ.
ಕೂಡಲೆ ಬಸ್ಸಿನ ಚಾಲಕನಲ್ಲಿ ಬಸ್ಸನ್ನು ನಿಲ್ಲಿಸಲು ಹೇಳಿ ನಿಂತ ಕೂಡಲೇ ಕೇಳಕ್ಕೆ ಜಿಗಿದು ಬೆಟ್ಟದತ್ತ ಓಡಿದೆ. ಚಳಿಗಾಲದ ದಿನವಾಗಿದ್ದರಿಂದ ನೆಲ ಕಾಣದಷ್ಟು ಮಂಜು ಕಟ್ಟಿತ್ತು. ಹಾಗೇ ಮುಂದೆ ಸಾಗಿದೆ. ಆಗತಾನೇ ಎದ್ದು ಹಸಿವಾಗಿದೆ ತಿಂಡಿಕೊಡಮ್ಮ ಎನ್ನೊತರದಿ ಕೂಗುತ್ತಿದ್ದ ಪುಟ್ಟ ಹಕ್ಕಿಮರಿಗಳ ಕಲರವ, ಬೆಳಗಿನ ಆಹಾರ ಅರಸಿ ಹೊರಟ ಪಕ್ಷಿಗಳ ಗುಂಪು, ಅಲ್ಲಲ್ಲಿ ಸಂಗೀತದ ಸ್ವರದಂತೆ ಕೇಳಿಬರುತ್ತಿದ ಪಕ್ಷಿಗಳ ಕಲರವ. ಆಗಾಗ ಮೈ ಜುಂ ಎನಿಸುವಂತೆ ಬೀಸುವ ತಂಗಾಳಿ ಇಂತ ಪರಿಸರ ನೋಡಿ ಸ್ವರ್ಗವೇ ಭುವಿಗಿಳಿದಿದೆಯೋ ಅಂತ ಭಾಸವಾಯಿತು. ಹಾಗೇ ಮುಂದಕ್ಕೆ ಸಾಗಿದೆ. ಬಾಯಾರಿಕೆ ಅಯಿತು, ಸುತ್ತಲೂ ಅರಸಿದೆ ಒಂದು ನದಿ ಜುಳುಜುಳು ನಾದದ ಜೊತೆ ಪ್ರಶಾಂತವಾಗಿ ಹರಿಯುತ್ತಿತ್ತು. ಹೊಗಿ ನೀರು ಕುಡಿದೆ. ನೀರೊ ಅಮೃತವೋ ಅಂತ ತಿಳಿಯಲಿಲ್ಲ. ಹಾಗೆಯೇ ಸುತ್ತಲೂ ಕಣ್ಣಾಡಿಸಿದೆ ಆಗ ನದಿಯಾಚೆ ಒಂದು ಮರದಲ್ಲಾದ ಅದ್ಬುತ ಹೂ ಒಂದು ನನ್ನ ಮನಸೆಳೆಯಿತು. ಬಾ ಎಂದು ನನ್ನ ಕೂಗಿದಂತಾಗಿ ಹೇಗೊ ಭಗೀರತ ಪ್ರಯತ್ನ ಮಾಡಿ ನದಿ ದಾಟಿ ಮರವನ್ನ ಏರುವ ಸಮಯದಿ ಕಾಲು ಜಾರಿ ಕೆಳಗೆ ಬಿದ್ದೆ.

ಎದ್ದು ನೋಡಿದಾಗ ನಾ ಬಿದ್ದಿದ್ದು ಮರದಿಂದಲ್ಲ ನಮ್ಮ ಮನೆ ಮಂಚದಿಂದ ಅಂತ ತಿಳಿಯಿತು. ಇದು ನನಗೆ ಕಂಡ ಕನಸಾದರೂ ಮಾನವ ಪರಿಸರವನ್ನು ನಾಶ ಮಾಡುತ್ತಿದ್ದರೆ ಮುಂದಿನ ಪೀಳಿಗೆ ಸುಂದರ ಪರಿಸರವನ್ನು ಕನಸಲ್ಲಿ ನೋಡಬೇಕಾಗುವುದು ಎಂಬುದು ವಿಪರ್ಯಾಸ.

ನನಗೆ ತೋಚಿದ ಸಾಲುಗಳು

ಮನಸಿನ ಮರುಳಾಟದಲಿ
ಹೃದಯದ ಅಂತರಾಳದಲಿ
ಪ್ರೇಮಾಂಕುರದ ಕನಸಲ್ಲಿ
ಕಂಡೆ ನಾನೊಂದು ಮಿಂಚು
ಅದು ಪ್ರೀತಿಯ ಮುಂಗಾರಿನ ಮಿಂಚು ||1||


ಸೌಂದರ್ಯ ಸಾಗರದಿ
ನಿನ್ನೆದೆಯ ಬಾನ್ದಳದಿ
ಈ ಸುಂದರ ಪರಿಸರದಿ
ಬೀಗುವೇ ನಾನು ಘರ್ವದಿ
ಮಲೆನಾಡಿನ ಮಾದುರ್ಯದಿ ||2||

ಅಂದು ಕಂಡೆನಾ ನಿನ್ನನು
ಮತ್ತೆ ಕಾಣಲು ಕಾಯುತಿರುವೆನು
ಮಂದಾರ ಪುಷ್ಪವು ನೀನು
ನಿನ್ನ ನೆನಪಲ್ಲಿ ಆದೆ ನಾನು
ಪದ ಪದ ಕೂಡಿಸೊ ಕಬ್ಬಿಗನು ||3||


ನಿನ್ನ ಪ್ರೀತಿಯ ಮೆಲಕಲಿ
ಕನಸಿನ ನೆನಪಿನ ಸುಳಿಯಲಿ
ಮನಸಿನ ಪುಟ ಪುಟದಲಿ
ಸುಂದರ ಭಾವನೆಯ ಬಯಲಲಿ
ನನಗೆ ತೋಚಿದ ಬರಹಗಳಲಿ ||4||


ಕಾಯುತಲಿರುವೆನು ನನ್ನಾಕೆ ದಾರಿಗೆ
ತಣ್ಣೀರಿಟ್ಟಳು ಆಕೆ ನನ್ನಾಯಾ ಆಸೆಗೆ
ಮನವು ಕಲುಕಿತಂದು ಅವಳ ಮಾತಿಗೆ
ಆಯಿತು ಆಗ ನನಗೆ ಚಳಿಗಾಲದಿ ಬೇಸಿಗೆ
ಆಗದಾಯಿತು ಇಂದು ನನ್ನ ಅವಳ ಬೆಸುಗೆ ||5||


ತುಸುಮೆಲ್ಲ ನಗೆಯ ಬೀರಿ ಸೆಳೆದಳು ಮನವನ್ನು
ಪಟ ಪಟ ಮಾತಿಗೆ ಕಳೆದುಕೊಂಡೆ ನಾನೇ ನನ್ನನ್ನು
ನೀನೇ ಬರಬೇಕಿದೆ ನನ್ನ ಜೀವನಕಿನ್ನು
ಏತಕೆ ಚಿಂತೆ ನನ್ನ ಬಾಳಲಿ ಬರಲು ನಿನಗಿನ್ನು
ಒಮ್ಮೆ ಹೇಳಲಾರೆಯಾ ಓ ನನ್ನ ಚಿನ್ನು ||6||

ಪ್ರೀತಿಯ ಮೆಲಕಲಿ ನೆನಪುಗಳು ನೂರೆಂಟು
ಮನಸಿನ ಭಾವದಲಿ ಭಾಷೆಗಳು ಹತ್ತೆಂಟು
ಬರೆದ ಪ್ರೇಮಪತ್ರ ನನ್ನೆದೆಯಲ್ಲಿ ಉಂಟು
ಆ ದೇವರು ಬರೆದಿರುವ ಹಣೆಬರಹ ಹೀಗುಂಟು
ಆತನೇ ಕಟ್ಟಿರುವ ನಮ್ಮ ಮಿಲನಕೆ ಬ್ರಹ್ಮಗಂಟು ||7||