Sunday 25 December 2011

ಸಂಗಾತಿಯಾಗು ಬಾ

ನಿಲ್ಲು ನಿಲ್ಲೆಲೆ ನಲ್ಲೆ ಓ ಚೆಲುವೆ ಪಂಚಮಿ
ಒಮ್ಮ ತಿರುಗಿ ಬಾರೆ ನಾನೊಬ್ಬ ಬಡಪ್ರೇಮಿ
ನಿ ನನ್ನ ಮನವ ಕದ್ದ ಗೆದ್ದ ಪೌರ್ಣಮಿ
ನಿನ್ನ ದನಿಯ ಇಂಚರ ಕೇಳುವಾಸೆ ನಂಗೆ ಮಾನಿನಿ
ನಿನ್ನ ಕಡೆಯ ನಿರ್ದಾರವ ತಿಳಿಸು ಒಮ್ಮೆ ಯಾಮಿನಿ

ನಿನ್ನ ಅಂದವ ಕಾಣುತ
ಬಾನ ಶಶಿಯು ಇಂದು
ಮರೆಯಾದನು ಮೋಡದಲಿ
ಮುಖ ಮರೆಸಿ ನಾಚುತ
ನಗುತಿರುವೆನಾ ಕನಸ ಕಾಣುತ

ಕಂಠ ನಿನ್ನದು ಕೋಗಿಲೆಯಂತೆ
ನಿಂತೆ ನಾ ನಿನ್ನ ಗಾನ ಕೇಳುತ
ಕೋಗಿಲೆ ಮಂಕಾಯಿತು ನಾಚುತ
ಕೇಳುತ ಅದು ಮೌನವ ತಾಳಿತು
ಬಂದು ಹಾಡಲಾರೆನೆಂದು ಹೇಳಿತು

ನಿಲ್ಲು ನಿಲ್ಲೆಲೆ ನೀಲವೇಣಿ
ಕನಸಲಿ ಕಾಡೊ ಕಾಮಿನಿ
ನನ್ನ ಬಾಳ ಬೆಳಗುವ ರಾಣಿ
ಬಾರೆ ಬೇಗ ಓ ಮಾನಿನಿ
ಬಾ ನನ್ನ ಮಂದಾಕಿನಿ

ಮಿಂಚತೆ ನೀ ಕಾಣುತ ನನ್ನ ಕಾಡುತ
ಬಳ್ಳಿಯಂತೆ ನೀ ಬಾಗುತ
ನಡೆಯಲಿ ಬೆಡಗಿ ನೀ ಬಳುಕುತ
ಗೆಜ್ಜೆಯಾ ಹೆಜ್ಜೆಯಲಿ ಕೇಳುತಿಹುದು
ನನಗಿಲ್ಲಿ ಪ್ರೀತಿಯ ಪ್ರಣಯನಾದ

ಓರೆಗಣ್ಣಿನ ಕುಡಿ ನೋಟದಿ
ನನ್ನ ನೀ ನೋಡಿದಂದು
ಬಾಳಲಿ ಬೀಸಿತು ತಂಪು ತಂಗಾಳಿ
ಮೋಸದಾಟವಾಡೆ ನೀ ಪ್ರೇಮದಿ
ತಂಗಾಳಿ ಬಿಸಿಯಾಗಿ ಆಯಿತು ಬಿರುಗಾಳಿ

ಪ್ರೇಮದ ನೆನಪು ಮನ ಕೊರೆದಿದೆ
ಕಾಣದ ಜ್ವಾಲೆ ಕಾಡುತಿದೆ
ನಡುಗುತ ನಾ ಹಾಡಿದೆ
ಏಕೆ ನೀ ನನ್ನೊಡನಾಡಿದೆ
ಪ್ರೇಮದ ಕಣ್ಣುಮುಚ್ಚಾಲೆ

ಪ್ರೀತಿ ಸಿಂಹಾಸನ ಏರಿ ಕುಳಿತ ನಿನಗೆ
ಪ್ರೇಮದ ಸೇವಕನು ನಾನಾಗಿಹೆ
ಆದರೆ ನರಕದ ನಾಯಕಿಯೇಕೆ ನೀನಾಗಿಹೆ
ಕಾರ್ಕೋಟಕ ವಿಷವನು ನೀಡದೇ
ಬಾಳಲಿ ಅಮೃತವಾಹಿನಿಯಾಗಿ ಸಿಗುವೆಯಾ

ಪ್ರೀತಿ ಉಸಿರು ಕಟ್ಟಿದೆ ಇಲ್ಲಿ
ವಿನಾಶದ ಸುಳಿಗೆ ಸಿಲುಕಿಹೆ ನಾ
ವಿಷದ ಕೂಪಕೆ ತಳ್ಳದೆ ಬಾ
ವಿವೇಕದ ಗಡಿಯ ಮೀರಹೆ ನೀ
ವಿವಾಹ ಜೀವನ ಪೂಜೆಗೆ ಬಾ

No comments:

Post a Comment