Sunday, 25 December 2011

ನನ್ನಾಕೆ ನೆನಪಲ್ಲಿ

ಅಂದೆನ್ನ ಬದುಕಲಿ
ನಿಶ್ಚಯದ ದಿನದಲಿ
ನೋಡಿದ ನಿನ್ನ ರೂಪವು
ಚಿರವಾಗಿ ಚಿತ್ತದಿ ಉಳಿದಿದೆ
ಬಂದು ಸೇರೇ ಭಾವಿ ಸಂಗಾತಿ

ಬಾಯೆನ್ನ ಮನದನ್ನೆ
ಬಾಇಲ್ಲಿ ಮುದ್ದಿನ ಕನ್ಯೆ
ಬಾಬೇಗ ಓ ಸುಮತಿ
ಬಾರೆ ಉಷೆಯ ಗೆಳತಿ
ಬಾ ಭಾವಿ ಸಂಗಾತಿ

ಬಾರೆ ಮುತ್ತಿನ ಚಂಡೆ
ಬಾಇಲ್ಲಿ ಮಲ್ಲಿಗೆ ದಂಡೆ
ಬಾ ಮದನನ ಬಿಲ್ಲೆ
ಬಾ ಸೌಂದರ್ಯದ ಮಾಟಗಾತಿ

ಬಾರೆ ಭಾವಿ ಸಂಗಾತಿ

ಬಾಯೆನ್ನ ಕಲ್ಯಾಣಿ
ಬಾ ಬೇಗೆನ್ನ ರಾಣಿ
ಬಂದು ತೋರೆ ಕರುಣೆ
ಕಾದಿರುವೆ ಬಾಯೆನ್ನ ರತಿ
ಬಾ ಬಾರೆ ಭಾವಿ ಸಂಗಾತಿ

ಮೂಡಣದ ತುದಿಯಲ್ಲಿ
ರವಿರಷ್ಮಿಯ ಬೆಳಕಲ್ಲಿ
ಮೂಡುತಿಹುದು ನಿನ್ನಬಿಂಬವು
ಚಡಪಡಿಕೆಯೆನ್ನ ಪರಿಸ್ತಿತಿ
ಬಾಬಾರೆ ಭಾವಿ ಸಂಗಾತಿ

ಶಶಿಯ ಕಳೆಯಲಿ ರವಿಯ ಹೊಳಪಂತೆ
ಪಳಪಳನೆ ಹೊಳೆಯುವಂತಿಹುದು ನಿನ್ನ ವದನವು
ಚಿಟಪಟ ಬೀಳುವ ಇಬ್ಬನಿಯ ಸ್ಪರ್ಷವು
ನಿನ್ನ ನೆನಪ ಮೆಲಕು ಮಾಡುತಿಹುದು
ಕಾಯುತಿರುವೆ ಬಾಬಾರೆ ಭಾವಿ ಸಂಗಾತಿ

No comments:

Post a Comment