Saturday 24 December 2011

ನನಗೆ ತೋಚಿದ್ದು ಇಲ್ಲಿ ಗೀಚಿದ್ದು

ಇಬ್ಬನಿಯ ತಬ್ಬಿದ ಮಂಜನು
ಸೀಳಿ ಧರೆಗಿಳಿದ ಬೆಳ್ಳಿಕಿರಣ
ಅರಳಿನಿಂತ ಹೂವನು ತಬ್ಪಿ
ಇಬ್ಬನಿಯಿತ್ತ ಮುತ್ತು ಪ್ರೇಮ

ಬಿಸಿಲಿಗೆ ಬೆಂದು ಕೆಂಪಾಗಿ
ಧರೆಗೆ ತಂಪೆರೆವ ವರ್ಷಧಾರೆಯ
ಹನಿ ನೀರಿಂದೊಮ್ಮಿದ
ಮಣ್ಣಿನ ಘಮ ಪ್ರೇಮ

ಹಸುವಿನ ಕೇಚ್ಚಲಲ್ಲಿ ಕರು ಹಾಲುಣ್ಣುತಿರಲು
ಆಗಾಗ ತಿರುಗಿ ನೋಡುವ
ಆಕಳ ಕಣ್ಣಲ್ಲಿಚಿಮ್ಮುವ
ಮಮತೆ ವಾತ್ಸಲ್ಯ ಪ್ರೇಮ

ಪೂರ್ತಿ ಮಾತುಬಾರದ ಹಸುಳೆ
ಕಿಲಕಿಲನೆ ನಗುತಲಿ
ತನ್ನ ತೊದಲ ಮಾತಲಿ ಕರೆವ
ಅಮ್ಮನೆಂಬ ಕೂಗುಪ್ರೇಮ

ಅಕ್ಷಿ ನೋಟಗಳು ಬೆರೆತಾಗ
ತುಟಿಯಂಚಲಿ ಮಿಂಚಿ
ವಿನಿಮಯವಾದ ಒಲವಿನ
ಮುಗುಳ್ನಗೆ ಪ್ರೇಮ

ಪದಪುಂಜಗಳಿಗೆ ನಿಲುಕದೆ
ಎದೆಯಲ್ಲಿಯೇ ಉಳಿದ
ನೂರಾರು ಮಾತುಗಳು
ಬೆಚ್ಚನೆ ಬಾವದ ಲಹರಿಯುಪ್ರೇಮ

ಗೆಳತಿಯ ಬಯಸಿದ ನನ್ನಯ
ಮನದ ಪ್ರೇಮವನ್ನಾಕೆಯು
ತಿರಸ್ಕರಿಸೆ ಮೂಡಿದವು ನನ್ನಲಿ
ಈ ಕೆಳಗಿನ ಸಾಲುಗಳು

ನಿನ್ನಂದಕಿಲ್ಲ ನನ್ನಲೇನೂ ಮಾತು
ಪರಿಪರಿಯಾದ ನಿನ್ನಮಾತಿಗೆ ಸೋತು
ಸಪ್ನದಿ ಕಾಣೊ ನಿನ್ನೀಪರಿಯ ರೂಪ
ಆದರೆನ್ನ ಮನವೇನು ಮಾಡಿತ್ತೆ ಪಾಪ

ಬೆಟ್ಟ ಸುತ್ತಿ ಗಿರಿಯ ಬಳಸಿ
ಬಂದೆ ನಾನಿನ್ನ ಸೇರಲು
ಸೆರಲಿಲ್ಲ ಮನಸು ನಿನ್ನಲಿ
ಮರೆತೆಯ ನನ್ನ ಪ್ರೀತಿಯ

ಹಗಲನಾರಿಸಿ ಇರುಳು ನೆನೆಸಿ
ನಿನ್ನ ಹೃದಯ ನಾ ಮುಟ್ಟಲು
ಬಿಸಿಲಿನಲ್ಲಿ ಬಿರುಗಾಳಿ ಸಿಕ್ಕಿ
ಸಿಗದಾಯಿತಲ್ಲೆ ಪ್ರೀತಿ ಮೆಟ್ಟಿಲು

ಅಂದವೊಂದಿರುವ ಕಲ್ಲುಮನದ ಅಂಗನೆಯು
ನೀನೆಂದು ನನಗಿಂದು ಅರ್ಥವಾಯಿತು
ಒಲ್ಲದಾಕೆ ಮನಸಿನ ಕುರೂಪವೆ
ಮರೆಯಲವಳನು ದಾರಿಯಾಯಿತು

No comments:

Post a Comment