Monday 28 November 2011

ಒಂದು ಕನಸು

ಮನದೊಡತಿ ನೆನಪಲಿ ಮರುಗಿರಲು
ಭುವಿಯಲ್ಲಿ ಅಂಬರಾಗಿ ಮಲಗಿರಲು
ಬಾನಲ್ಲಿ ಅಂತಕನು ಕಂಡಿರಲು
ಈಳ್ಯವಿತ್ತು ಯನ್ನನವನು ಕರೆದಿರಲು

ರಾಹುಕಾಲವು ಶುರುವಾಗಿರಲು
ಕಾಲ ನನ್ನೆದುರು ನಿಂತಿರಲು
ಕಬರ ತೆಗೆಯಲು ಕಬಲ ಕೇಳುತಿರಲು
ಮೈನಡುಗುತ ಸೀತಾಳ ಹರಿಯಲು

ಕಾಲ ಸೋಲ ಪಿಡಿದಿರಲು
ಯನ್ನ ಸನಿಹ ಬಂದಿರಲು
ಕೊರಳಲಿ ಹಲಗಹರಿದಂತಾಗಲು
ಕಾಲಹೌರರ ಹುಡದಿ ಕೇಳಿರಲು

ಮನದಿ ನಡುಕ ಹುಟ್ಟಿರಲು
ಉಳಿವು ಅಗಾಯವಾಗಿರಲು
ದೃಡಮನದಿ ಇಳೆಗೆನಾ ಹಾರಿರಲು
ಮಂಚದಿಂದ ನಾಕೆಳಗೆ ಬಿದ್ದಿರಲು

ಇದು ಕನಸೆಂದು ನಾನರಿಯಲು
ನನ್ನ ಗೆಳೆಯನಿಗೆ ಪೇಳಲು
ಆತ ಮುಸಿಮುಸಿ ನಕ್ಕಿರಲು
ಇದ ಬರೆವ ಹಂಬಲ ಹೆಚ್ಚಿರಲು

ಈ ಪರಿಯಲಿ ನಾ ಬರೆದಿರುವೆ
ಓದುವಿರೆಂದು ಭಾವಿಸಿರುವೆ
ಸಲಹೆಗಳಿಗಾಗಿ ಕಾದಿರುವೆ
ತಪ್ಪುಗಳಿದ್ದರೆ ತಿದ್ದುವೆ

Friday 25 November 2011

ನನಗೆ ತೋಚಿದ ಸಾಲುಗಳು

ಚಿತ್ತದಿ ಚಿತ್ರಬರೆದ ಚಲುವೆ ನೀನಾರೆ
ಎತ್ತ ನೊಡಿದರತ್ತ ಕಾಣುವ ಸ್ವಪ್ನ ನೀನಾರೆ
ಖಗಳೆಂದುಕೊಂಡೆ ನಿನ್ನನಾ ಅಪ್ಸರೆ
ಚಿತ್ತದಿ ನೊವು ನೀ ಖಗವಾಗಿ ಚುಚ್ಚಿರೆ
ಮತ್ತೆ ಏಕೋ ನಿನ್ನ ನೋಡೊತವಕ ಹೆಚ್ಚಿರೆ
ಸತ್ತೆ ಎಂದುಕೊ ನನ್ನಾಸೆಗೆ ನೀ ಕಿಚ್ಚು ಹಚ್ಚಿರೆ

ಗಗನದ ತಿಂಗಳಂತಿಹುದು ನಿನ್ನಯಾ ಸಿಂಧೂರ
ಮದನನೇ ತಂದಿಟ್ಟ ನೀ ಸೌಂದರ್ಯದ ಆಗರ
ಧರಣಿಯಲಿ ಸರಿಸಮರಿಲ್ಲ ನೀಸುಂದರ ತಾವರೆ
ಜಗದೇಕ ಸುಂದರಿ ನಿನ್ನಂದಕಂದೇ ಮರುಳಾಗಿಹೆ
ಮನಕಲುಕಿದ ನಿನಗಿಂದು ಮನದಾಸೆ ಪೇಳುವೆ
ಈ ಸುಮದ ಬೆಂಬಿದ್ದ ನಾ ಪ್ರೀತಿಯಾ ಬ್ರಮರವೆ

ಕೋಪದಿ ನೀನು ನನ್ನಲಿ ಮುನಿದಿರೆ
ತಾಪವು ಮನದಿ ಚುಚ್ಚುತ ಕಾಡಿರೆ
ಶಾಪವೊ ಏನೊ ಎಂದುನಾ ಅರಿಯೆ
ಛಾಪನು ಒತ್ತಿದ ನೀಮನದಿ ಸೆಳೆಯೆ
ಜಪವೆ ನಿನ್ನದು ಒಡಲಲಿ ಚಲುವೆ
ಪಾಪವೇನು ತಿಳಿಯೆನಾ ನನ್ನಾ ಒಲವೆ
ವ ಸಂ ತ
ವರುಣ್ ಸಂಜನಾ ತರುಣ್ ಎಂಬವರ ತ್ರಿಕೋನ ಪ್ರೇಮಕಥೆ

ಕಾಲೇಜ್ ಲೈಪ್ ಇಸ್ ಗೋಲ್ಡನ್ ಲೈಪ್ ಅಂತ ಯಾರೋ ಮಹಾನುಭಾವರು ಹೇಳಿದ್ದಾರೆ.. ಹಾಗಂತ ನಾನೀಗ ಹೇಳೋ ಕಥೆ ಕಾಲೇಜ್ ಲವ್ ಸ್ಟೊರಿ ಅಲ್ಲ.. ಇದು ಕ್ಯೂಟ್ ಲವ್ ಸ್ಟೋರಿ.. smsgupshup.com ನ ಶುರುಮಾಡಿದ ಪುಣ್ಯಾತ್ಮ ಯಾರಂತ ಗೊತ್ತಿಲ್ಲ.. ಅದೊಂದು ಸ್ನೇಹಿತರ ಸಂದೇಶಗಳ ಕೊಂಡಿ. ಇದರಲ್ಲಿ ಎನಿದೆ ಏನಿಲ್ಲ ಅಂತ ಒಂದೇ ಮಾತಲ್ಲಿ ಹೇಳಬೇಕಂದರೆ ಅಪರಿಚಿತರನ್ನ ಪರಿಚಿತರನ್ನಾಗಿಸಿ ಅವರನ್ನು ಆಪ್ತರನ್ನಾಗಿಸೊ ಸೊಶಿಯಲ್ ನೆಟವರ್ಕಗಳ ತರ ಕೇವಲ SMSಗಳ ಮಾದ್ಯಮ.. ಇಲ್ಲಿ ಅನೇಕ ಸ್ನೇಹಜೀವಿಗಳಿದ್ದಾರೆ. ಅನೇಕ ಪ್ರೇಮಕಾವ್ಯಗಳಿವೆ.. ಕೆಲವು ಅಸೂಯೆ ಮತ್ಸರಗಳಿದೆ.. ಒಂದೇ ಒಂದು Mobile number ದುರ್ಬಳಕೆಗೆ ರಕ್ಷಣೆ ಮಾತ್ರ ಇಲ್ಲ.. ಇದನ್ನು ಉಪಯೋಗಿಸುವವರು ತಮ್ಮ ಬುದ್ದಿ ಹಿಡಿತದಲ್ಲಿಟ್ಟುಕೊಳ್ಳಬೇಕು..

ಇದನ್ನ ಬಳಸಿ ಸಂಪೂರ್ಣ ಪಳಗಿದ್ದ ನಮ್ಮ ಕಥಾನಾಯಕ ತರುಣ್ ಗೆ ನಾಯಕಿ ಸಂಜನಾ ಪರಿಚಯವಾಗುತ್ತದೆ..ಪರಿಚಯವಾಗುತ್ತದೆ ಇಬ್ಬರೂ ಬಹುಬೇಗ ಆತ್ಮೀಯರಾದರು. ಸಾಹಿತ್ಯಗಾರನಾದ ತರುಣ್ ಗಾಯಕಿಯಾದ ಸಂಜನಾ ಉತ್ತಮ ಗೆಳೆಯರಾದ್ರು. ಇತ್ತ ನಮ್ಮ ಇನ್ನೊಬ್ಬ ಕಥಾನಾಯಕ ವರುಣ್ ನಮ್ಮ ತರುಣ್ ನ ಆಪ್ತಮಿತ್ರ. ಹಾಗೂ ಬಾಲ್ಯ ಸ್ನೇಹಿತ. ಮಿತ್ರರೆಂದರೆ ಹೀಗಿರಬೇಕು ಅಂತ ಬೆಟ್ಟುಮಾಡಿ ತೋರಿಸುವಂತಿತ್ತು ಇವರ ಸ್ನೇಹ.ಅಂತರ್ಜಾಲದಲ್ಲಿ ನಿಪುಣನಾಗಿದ್ದ ವರುಣ್ ಗೆ ಇಮೆಲ್ ಮೂಲಕ ಸಂಜನಾ ಪರಿಚಯವಾಗಿದ್ದಳು. ಮಾತುಗಾರರಾಗಿದ್ದ ಇಬ್ಬರೂ ಆತ್ಮೀಯರಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ.ಇತ್ತ ಗಾಯಕಿಯ ದ್ವನಿಮಾಧುರ್ಯ ಕೇಳುತ್ತ ತರುಣ್ ಸಂಜನಾಗೆ ಮನಸೋತಿದ್ದ. ಒಂದು ದಿನ ಅವಳಲ್ಲಿ ಮಾತನಾಡುವ ಸಂದರ್ಬದಲ್ಲಿ ಆಕೆ ಹೇಳಿದ ಮಾತಿಗೆ ಪ್ರೋತ್ಸಾಹಿತಗೊಂಡು ತರುಣ್ ತನ್ನ ಪ್ರೇಮನಿವೇದನೆ ಮಾಡಿದ. ಆಕೆ ಹೇಳಿದ ಮಾತು "ನಿನ್ನ ಮದುವೆ ಆಗೋ ಹುಡುಗಿ ತುಂಬಾ ಅದ್ರುಷ್ಟಮಾಡಿದಾಳೆ"ಅಂತ. ನಮ್ಮ ತರುಣ್ "ಆಕೆ ನೀನೆ ಯಾಕೆ ಆಗಬಾರದು" ಅಂತ ಕೇಳಿದ..ಆಕೆ ಏನೂ ಉತ್ತರಿಸದೇ ದೂರವಾಣಿ ಸಂಪರ್ಕ ಖಡಿತಗೊಳಿಸಿದಳು..



ಮುಂದುವರಿಯುವುದು..................

Thursday 24 November 2011

ನನಗೆ ತೋಚಿದ ಸಾಲುಗಳು

ನನ್ನಾಕೆಯಾ ನೆನಪು

ನೀಲಿಯ ಬಾನಲಿ ನಲಿವ ಸಾರಂಗ ನೀ..
ಶಶಿಯ ಮನಸ ಸೂರೆಗೈದ ಚಕೋರಿ ನೀ..
ಕಡಲ ಒಡಲ ಆಳದಿ ಅವಿತ ಮುತ್ತು ನೀ..
ಮನದಿ ಮುದವ ನೀಡುವ ಪ್ರೀತಿ ನೀ..

ಮದನ ಮೂರುತಿ ನೋಡಿ ನಾಚುವಂತ ಚಂದವು..
ನಿನ್ನ ನೋಡಿದಂದು ಆಯಿತು ಮನವು ಮಂದವು..
ರತಿ ರೂಪಿಣಿ ನಿನ್ನದು ಅಪ್ಸರೆಯಂತಾ ರೂಪವು..
ಜನುಮ ಜನುಮದಲ್ಲೂ ಕಾಣೆ ಇಂತಹ ಚಲುವು..

ಗೀಚೋ ರೇಗೆಗೆ ಕಾವ್ಯರೂಪ ನೀಡಿದೇ..
ಬಾಳಿನಲ್ಲಿ ಬಂದು ನನ್ನನೇಕೆ ಕಾಡಿದೆ..
ಭೂತದಲ್ಲಿ ಕಂಡು ಭವಿಷ್ಯವನ್ನೇ ಮರೆತೆನಾ..
ಪ್ರೇಮಾಂಮೃತವ ನೀಡಿ ಉಳಿಸು ಪ್ರೀತಿನಾ..

ಮನು ಚರಿತ್ರೆ ಭಾಗ 1

ಮನು ಈ ಕಥೆಯ ಕಥಾನಾಯಕ ಅದಕ್ಕೆ ಮನು ಚರಿತ್ರೆ ಎಂಬ ಶೀರ್ಷಿಕೆ

ನಗುನಗುತಾ ನಲಿ ನಲಿ ಎಂಬಂತೆ ನಲಿಯುವ ಸಮಯ ಬಾಲ್ಯ.. ಅರಿಯದ ಎರಡಂಕಿ ದಾಟದ ವಯಸ್ಸು ಮೋಜು ಮಸ್ತಿಗಳ ಆವಾಸತಾಣ ಎಂಬಂತಿರುತ್ತದೆ.. ಖುಷಿ ಸಂತೋಷ ಪಡುವ ಈ ವಯಸ್ಸಿನಲ್ಲಿ ಮಾನಸಿಕ ಕಷ್ಟ ಅಂದರೇನು ಎಂದು ತಿಳಿಯದ ವಯಸ್ಸಿನಲ್ಲ ನಡೆದ ನೈಜ ಘಟನೆ ತಿಳಿಸಲಿಚ್ಚಿಸುತ್ತೇನೆ..

ಬೋಜನ ಪ್ರಿಯರೆಂಬ ಖ್ಯಾತಿಯ ಹವ್ಯಕರು ಕಲಹಗಳಿಗೂ ಏನೂ ಕಡಿಮೆ ಇಲ್ಲ.. ಆಂತರಿಕ ಕಲಳ ದಾಯಾದಿ ಕದನಗಳ ಅರಿವು ನಿಮಗೆಲ್ಲ ಇದ್ದೇ ಇರುತ್ತದೆ.. ಅಂತಹ ಒಂದು ದಾಯಾದಿ ಕದನದ ವಿವರ ಇಲ್ಲಿದೆ..

ಅದೊಂದು ಮಳೆಗಾಲ. ವರುಣದೇವ ತನ್ನ ಮಡದಿಯೊಂದಿಗೆ ಕಿತ್ತಾಡಿ ಆಕೆ ಮೇಲಿನ ಕೋಪ ನಮ್ಮ ಮೇಲೆ ತೋರಿಸುತ್ತಿದ್ದಾನೊ ಅನ್ನುವ ರೀತಿಯಲ್ಲಿ ಧೋ ಎಂದು ಮಳೆ ಸುರಿಸುತ್ತಿದ್ದ.. ಶರಾವತಿ ನದಿ ಕುರುಕ್ಷೇತ್ರದಿಂದ ಹರಿಯುತಿದೆಯೋ ಎಂಬಂತೆ ಕೆಂಪು ನೀರಿಂದ ತುಂಬಿ ಹರಿಯುತ್ತಿತ್ತು.. ಅದೊಂದು ಪುಟ್ಟ ಗ್ರಾಮ. ಅಲ್ಲಿ 1೦ ಹವ್ಯಕರ ಮನೆಗಳಿವೆ.. ಹೊರ ನೋಟಕ್ಕೆ ಆಪ್ತಮಿತ್ರರಂತೆ ಕಾಣುವ ವ್ಯಕ್ತಿಗಳೂ ಹಿತಶತ್ರುಗಳಾಗಿರುತ್ತಾರೆ.. ವಿಷಯ ಹೇಳೋಕೆ ಇಷ್ಟೆಲ್ಲ ಪೀಟಿಕೆ ಬೇಕಾ ಅಂತ ನೀವೆಲ್ಲ ಯೋಚಿಸುತ್ತಿದ್ದಿರೆಂದು ನನಗೆ ಗೊತ್ತು.. ಆದರೆ ವಿಷಯಕ್ಕೆ ಪೀಟಿಕೆ ಬೇಡವೇ..??

ಊರಿಗೊಂದು ಚೌಡೇಶ್ವರಿ ದೇಗುಲ. ಅಲ್ಲಿ ಪ್ರತೀ ಮನೆಯವರೂ ಪೂಜೆಸಲ್ಲಿಸುವುದಲ್ಲಿನ ಪದ್ದತಿ.. ಅದೊಂದು ಕರಾಳ ಭಾನುವಾರ. ಪೂಜೆಗೆ ದಾಯಾದಿ ಎರಡು ಮನೆಯವರೂ ಕೂಡಿಬಂದಿದ್ದರು.. ಪೂಜೆಯೇನೋ ಸಾಂಘವಾಗಿ ನೆರವೇರಿತು. ಪ್ರಸಾದ ಮೊದಲು ತಮಗೆ ಬೇಕೆಂದು ಜಗಳ ಶುರುವಾಯಿತು.. ಹೊಡೆದಾಟವಾಗಿ ಕಲವರಿಗೆ ಗಾಯಗಳಾದ ನಂತರ ಜಗಳ ನಿಂತಿತು..

ಇದೇ ಸಮಯದಿ ಜಗಳವಾಡಿದ ಒಂದು ಕುಟುಂಬ ನಮ್ಮ ಮನುವಿನದ್ದು.. ಮನೆಯವರೆಲ್ಲ ಆಸ್ತಿಕರಾಗಿದ್ದ ಕಾರಣ ಪೂಜೆಯ ಪ್ರಸಾದ ಇಲ್ಲದೇ ಊಟಮಾಡದೇ ಹಾಗೆ ಕುಳಿತಿದ್ದರು.. ಆಗ ಮನು ಕೇವಲ ಮೂರು ವರ್ಷದ ಬಾಲಕ. ತನ್ನ ತಾಯೀ ಬಳಿ ಹೋಗಿ ಹಸಿವಾಗಿದೆ ಊಟ ಬಡಿಸುವಂತೆ ವಿಜ್ನಾಪಿಸಿದ.. ಆದರೆ ತಾಯಿ ಮನದಲ್ಲೇನಿತ್ತೋ ಗೊತ್ತಿಲ್ಲ ಒಮ್ಮೆಗೆ ಮಗನನ್ನು ಎತ್ತಿಕೊಂಡು ಎಲ್ಲೋ ಹೊರಟಳು.. ಇದನ್ನ ನೋಡಿದ ಮನುವಿನ ಸೋದರತ್ತೆ ಯಾಕೆ ಏನಾಯ್ತು ಅಂತ ತಿಳಿಯಲು ಅವರನ್ನು ಹಿಂಬಾಲಿಸಿದಳು.. ಮನುವಿನ ತಾಯಿ ತುಂಬಿ ಹರಿಯುತ್ತಿದ್ದ ನದಿಯಬಳಿ ಬಂದು ಮಗನನ್ನು ನದಿಗೆ ಎಸೆಯುವ ಕೊನೆ ಕ್ಷಣದಲ್ಲಿ ಮನುವಿನ ಸೊದರತ್ತೆ ಆತನನ್ನು ಕಾಪಾಡಿ ಮನೆಗೆ ಕರೆತಂದಳು...

ಆದರೆ ತಾಯಿಯ ಈ ಕೃತ್ಯಕ್ಕೆ ಇನ್ನೂ ಕಾರಣ ತಿಳಿದಿಲ್ಲ

ಇಂತಾ ತಾಯಂದಿರೂ ಇರುತ್ತಾರಾ..?

Sunday 20 November 2011

ನನಗೆ ತೋಚಿದ ಸಾಲುಗಳು

ಬೇಡಿ ಬೇಡಿನಾ ಪ್ರೀತಿಸಿದೆ
ಕಾಡಿ ಕಾಡಿ ನಾ ಯಾಚಿಸಿದೆ
ಆದರೂ ಆಗದೆ ನಮ್ಮ ಪ್ರೀತಿಯಾ ಸಂಗಮ ||1||

ಹುಡುಗಿ ಬಾರೇ ಬೇಗ ನೀನು
ಮನದಿ ಕೂಗಿ ಕರೆಯುವೆನು
ನೊಟದಿ ಮೋಡಿ ಮಾಡಿ ನೀನು ಮನದೀ ಕಾಡಿದೆ ||2||

ಎಲ್ಲಾ ಮರೆತೆ ಪ್ರೇಮದಿ ತರಳೆ
ಎದೆಯಾ ಬಿಚ್ಚಿ ತೋರಲೇ
ಹಾಡೇ ಮನಸೆ ಎಲ್ಲದಕ್ಕೂ ನೀನೆ ಕಾರಣ ಬೇಲೂರಬಾಲೆ ||3||

ಯಾವುದೊ ಕನಸ ನೆನಪಲಿ
ನೀನನ್ನ ಕಾಡೊ ಪರಿಯಲಿ
ಯಾಕೆ ಹೀಗೆ ಕಾದು ಕೂರುವೆ ತಿಳಿಸು ನನಗೆ ಬಾಲೇ ||4||

ಒಂದು ಕಣ್ಣೀರ ಬಿಂದು
ಜಾರಿ ಬೇಸರದಿ ಇಂದು
ಆಗಿದೆ ಪಂಚಮಿ ನಮ್ಮ ಬಾಳಿಗೆ ಪೌರ್ಣಮಿ ||5||

ಜಂಟಿಯಾಗಿ ಕುಳಿತಿರು ಹಾಗೆ
ಒಂಟಿ ಕನಸ ಕಂಡೆನು ಹೀಗೆ
ಮೆಚ್ಚು ನನ್ನ ಪ್ರೀತಿಯ ಮನಸಕೆಡಿಸಿದಹಾಗೇ ||6||

ನೆನ್ನೆ ಮೊನ್ನೆ ಕಾಣಿಸಲಿಲ್ಲ ಇಂದು ನೀನೆ ಮನದೊಳಗೆಲ್ಲ ನಿನ್ನ ಬಿಟ್ಟು ಬೇರೆ ಯಾರನೆ ಪ್ರೀತಿಸಲಾಗದು ||7||

ಒಮ್ಮ ಕಣ್ಮುಚ್ಚಿಕೊಂಡು
ನಿನ್ನನ್ನಲ್ಲಿ ಕಂಡು
ಮರೆತೇ ನನ್ನೆನಾ ಪ್ರೇಮಿಸೇ ನನ್ನನು ||8||

Sunday 13 November 2011

ನನಗೆ ತೋಚಿದ ಸಾಲುಗಳು

ಓ ಮನಸೇ ಓ ಮನಸೇ
ಬೇರೆ ಏನೂ ಬೇಕಿಲ್ಲ
ಪ್ರಿತಿ ಏಕೆ ಸಿಕ್ಕಿಲ್ಲ
ಹೇಳು ಮನಸೆ ಕಾಡೋ ಕನಸೇ

ಜನುಮ ಜನುಮದಲ್ಲೂ
ಸಂಗಾತಿ ನೀನೆ ಎಲ್ಲೆಲ್ಲೂ
ಮನವೆಂಬ ಅರಮನೆಯಲ್ಲೆ
ಇರು ರಾಣಿಯಂತೆ ನಲ್ಲೆ

ಮನದ ಮುಗಿಲಿನಲ್ಲಿ
ಪ್ರೀತಿ ಬೆಳಕ ಚೆಲ್ಲಿ
ಎದೆಯ ನೋವು ನೂರು
ನೀನಿರದ ಪ್ರೀತಿ ಚೂರು ಚೂರು

Saturday 12 November 2011

ನನಗೆ ತೋಚಿದ ಸಾಲುಗಳು

ಒಂದು ಮಾತಲಿ ಹತ್ತೆಂಟು ನೆನಪಲಿ
ಹತ್ತಿ ಉರಿಯಿತೆ ಪ್ರೇಮವೆಂಬಾ ಜ್ಯೊತಿಯು
ನನ್ನ ಮನದಾ ದುಗುಡ ತಿಳಿಯೆ ನೀನಿಂದು
ಒಂದು ಮಾತಲಿ ಹತ್ತೆಂಟು ನೆನಪಲಿ ||

ಪ್ರೀತಿಸಿದರೆ ಪ್ರೇಮಾನುಭವ
ಪ್ರೀತಿಗೆ ಸಾವೆಂಬುದು ಅಸಂಬವ
ಮನಸೆಂದರೆ ಪ್ರೇಮವೆಂಬ ಮಾಯೆ
ಕನಸಲ್ಲೂ ಕಾಡುವುದು ನಿನ್ನ ಪ್ರೀತಿ ಛಾಯೆ ||

ಜನುಮ ಜನುಮದಲ್ಲೂ ನೀನೆಂದು ನನ್ನವಳೆ
ಮನಸಿನ ಅಂಗಳದಿ ಮಳೆಬಿಲ್ಲಂತೆ ಬಂದವಳೇ
ಏಳೇಳು ಜನ್ಮದಲಿ ನನಗಾಗಿ ಜನಿಸಿದವಳೆ ನನ್ನೊಳಗೆ ನಾನಾಗಿ ಇರುವವಳೇ||

ಓ ಚಲುವೆಯೆ ಪ್ರೇಮಾಂಕುರ ಬೀರಿ ನನ್ನ ಬಾಳ ಜೀವನದಿಯಾಗಿ
ಬಾ ಪ್ರೀತಿಯೇ ಕಾಣದ ಕನಸ ಲೋಕದಿ ಇರುವುದೆಲ್ಲ ನಿನಗಾಗಿ
ಮುಂದಿರುವ ಎಲ್ಲ ಜನುಮ ಜನುಮದಿ ಇರು ನೀ ನನಗಾಗಿ
ಕಾಯುವೇನು ಕೊನೆವರೆಗೂ ಎಂದೆಂದೂ ನಿನ್ನ ಪ್ರೀತಿಗಾಗಿ ||

Thursday 10 November 2011

ನನಗೆ ತೋಚಿದ ಸಾಲುಗಳು

ಕೇಳೇ ಚಲುವೇ ಪಂಚಮಿ

ನಿನೇ ನನಗೆ ಪೌರ್ಣಮಿ
ಪ್ರೀತಿಗೆ ನಾ ಚಿರರುಣಿ
ನೃತ್ಯ ಚಲುವೆ ರೂಪಿಣಿ
ನಲಿಯುತ ಬಾರೇ ಮಾನಿನಿ

ಕೇಳೇ ಚಲುವೇ ಪಂಚಮಿ

ಚಳಿಯಲಿ ಗಡಗಡ
ಮನದಲಿ ದುಗುಡ
ಎದೆಯಲಿ ದಡಬಡ
ಇರಲು ಪ್ರಿಯೆ ಸಂಗಡ

ಕೇಳೇ ಚಲುವೇ ಪಂಚಮಿ

ರವಿ ನಿನ್ನ ಕಂಡನೊ
ಮುದದಿ ಭುವಿಗಿಳಿದನೊ
ಎಂತಾ ಹೊಳಪು ವದನವು
ನೊಡಾಯ್ತು ಹೃದಯದಿ ಕದನವು

ಕೇಳೇ ಚಲುವೇ ಪಂಚಮಿ

ಪಂಚಮದ ಇಂಚರದ ಕೊಗಿಲೆ
ನನ್ನ ಮನವ ಕದ್ದರಿವ ಚಲುವೆ
ನಿನ್ನಯ ಪ್ರೀತಿಯ ಮಾಡಲೆ
ತಿಳಿಸು ಉತ್ತರವ ಚಲುವೆ

ಕೇಳೇ ಚಲುವೇ ಪಂಚಮಿ

Monday 7 November 2011

ನನಗೆ ತೋಚಿದ ಸಾಲುಗಳು

ಏಕೆ ಕಾಡುತಿರುವೆ ಚಲುವೆ
ಮಾಯವಾಗಿದೆ ನನ್ನಾ ಮನವೆ
ಅಂದು ಉರಿಬಿಸಿಲಲು ತಂಪನಿತ್ತ ಚಲುವೆ
ಯಾಕೆ ನನ್ನಮೇಲೆ ಮುನಿಯುತಿರುವೆ ||

ಕೋಟಿ ವರುಷದ ಫಲವೋ ನನಗೆ ನೀ ಸಿಕ್ಕಿದೆ
ಕಾಣೆನಾ ಏನು ಶಾಫವೋ ಮನವ ನೀ ಚುಚ್ಚಿದೆ
ಬಾಳದಾರಿಯಲಿಂದು ನೆನಪುಗಳು ಬರದಾಗಿದೆ
ನಿನ್ನ ಕಾಯುತಲಿ ನನ್ನ ಹೃದಯ ಬರಿದಾಗಿದೆ ||

ಏಕೋ ಏನನೂ ಕಾಣೆ ನಾನು
ಮನದಿ ದುಗುಡವು ಏನೇನೋ
ಕಣ್ಣ ರೆಪ್ಪೆಯಂತೆ ಕಾಯುವೆ ನಿನ್ನನು
ತೆರೆದು ಬಾ ಮನದ ಪುಟ ಪುಟವನು ||