Friday 25 November 2011

ನನಗೆ ತೋಚಿದ ಸಾಲುಗಳು

ಚಿತ್ತದಿ ಚಿತ್ರಬರೆದ ಚಲುವೆ ನೀನಾರೆ
ಎತ್ತ ನೊಡಿದರತ್ತ ಕಾಣುವ ಸ್ವಪ್ನ ನೀನಾರೆ
ಖಗಳೆಂದುಕೊಂಡೆ ನಿನ್ನನಾ ಅಪ್ಸರೆ
ಚಿತ್ತದಿ ನೊವು ನೀ ಖಗವಾಗಿ ಚುಚ್ಚಿರೆ
ಮತ್ತೆ ಏಕೋ ನಿನ್ನ ನೋಡೊತವಕ ಹೆಚ್ಚಿರೆ
ಸತ್ತೆ ಎಂದುಕೊ ನನ್ನಾಸೆಗೆ ನೀ ಕಿಚ್ಚು ಹಚ್ಚಿರೆ

ಗಗನದ ತಿಂಗಳಂತಿಹುದು ನಿನ್ನಯಾ ಸಿಂಧೂರ
ಮದನನೇ ತಂದಿಟ್ಟ ನೀ ಸೌಂದರ್ಯದ ಆಗರ
ಧರಣಿಯಲಿ ಸರಿಸಮರಿಲ್ಲ ನೀಸುಂದರ ತಾವರೆ
ಜಗದೇಕ ಸುಂದರಿ ನಿನ್ನಂದಕಂದೇ ಮರುಳಾಗಿಹೆ
ಮನಕಲುಕಿದ ನಿನಗಿಂದು ಮನದಾಸೆ ಪೇಳುವೆ
ಈ ಸುಮದ ಬೆಂಬಿದ್ದ ನಾ ಪ್ರೀತಿಯಾ ಬ್ರಮರವೆ

ಕೋಪದಿ ನೀನು ನನ್ನಲಿ ಮುನಿದಿರೆ
ತಾಪವು ಮನದಿ ಚುಚ್ಚುತ ಕಾಡಿರೆ
ಶಾಪವೊ ಏನೊ ಎಂದುನಾ ಅರಿಯೆ
ಛಾಪನು ಒತ್ತಿದ ನೀಮನದಿ ಸೆಳೆಯೆ
ಜಪವೆ ನಿನ್ನದು ಒಡಲಲಿ ಚಲುವೆ
ಪಾಪವೇನು ತಿಳಿಯೆನಾ ನನ್ನಾ ಒಲವೆ

3 comments:

  1. ಜಗದೇಕ ಸುಂದರಿ ನಿನ್ನಂದಕಂದೇ ಮರುಳಾಗಿಹೆ..??
    ಅವಳಂದಕ್ಕೆ ಮರುಳಾಗುವ ಬದಲು..
    ಅವಳ ಮನಿಸಿನಂದಕೆ ಮರುಳಾಗಬಾರದಿತ್ತೇ ಭಾಸ್ಕರ..?? :))

    ಸುಂದರ ವಿನೂತನ ಕವಿತೆ ರಚನೆ..
    ಸೊಗಸಾಗಿದೆ..!
    ಹೀಗೆ ಸದಾ ಹರಿದು ಬರುತಿರಲಿ ನಿಮ್ಮಿಂದ ಕಾವ್ಯ ರಸಧಾರೆ..! :)

    ReplyDelete
  2. ಸುಂದರವಾದ ಭಾವನೆಯೊಂದಿಗೆ ಮಧುರವಾದ ಅನುಭವ ನೀಡಿ ಮನ ಸಂತೋಷ ಪಡಿಸುವಂತೆ ಮೂಡಿದೆ ಕವನ.

    ReplyDelete