Thursday 24 November 2011

ಮನು ಚರಿತ್ರೆ ಭಾಗ 1

ಮನು ಈ ಕಥೆಯ ಕಥಾನಾಯಕ ಅದಕ್ಕೆ ಮನು ಚರಿತ್ರೆ ಎಂಬ ಶೀರ್ಷಿಕೆ

ನಗುನಗುತಾ ನಲಿ ನಲಿ ಎಂಬಂತೆ ನಲಿಯುವ ಸಮಯ ಬಾಲ್ಯ.. ಅರಿಯದ ಎರಡಂಕಿ ದಾಟದ ವಯಸ್ಸು ಮೋಜು ಮಸ್ತಿಗಳ ಆವಾಸತಾಣ ಎಂಬಂತಿರುತ್ತದೆ.. ಖುಷಿ ಸಂತೋಷ ಪಡುವ ಈ ವಯಸ್ಸಿನಲ್ಲಿ ಮಾನಸಿಕ ಕಷ್ಟ ಅಂದರೇನು ಎಂದು ತಿಳಿಯದ ವಯಸ್ಸಿನಲ್ಲ ನಡೆದ ನೈಜ ಘಟನೆ ತಿಳಿಸಲಿಚ್ಚಿಸುತ್ತೇನೆ..

ಬೋಜನ ಪ್ರಿಯರೆಂಬ ಖ್ಯಾತಿಯ ಹವ್ಯಕರು ಕಲಹಗಳಿಗೂ ಏನೂ ಕಡಿಮೆ ಇಲ್ಲ.. ಆಂತರಿಕ ಕಲಳ ದಾಯಾದಿ ಕದನಗಳ ಅರಿವು ನಿಮಗೆಲ್ಲ ಇದ್ದೇ ಇರುತ್ತದೆ.. ಅಂತಹ ಒಂದು ದಾಯಾದಿ ಕದನದ ವಿವರ ಇಲ್ಲಿದೆ..

ಅದೊಂದು ಮಳೆಗಾಲ. ವರುಣದೇವ ತನ್ನ ಮಡದಿಯೊಂದಿಗೆ ಕಿತ್ತಾಡಿ ಆಕೆ ಮೇಲಿನ ಕೋಪ ನಮ್ಮ ಮೇಲೆ ತೋರಿಸುತ್ತಿದ್ದಾನೊ ಅನ್ನುವ ರೀತಿಯಲ್ಲಿ ಧೋ ಎಂದು ಮಳೆ ಸುರಿಸುತ್ತಿದ್ದ.. ಶರಾವತಿ ನದಿ ಕುರುಕ್ಷೇತ್ರದಿಂದ ಹರಿಯುತಿದೆಯೋ ಎಂಬಂತೆ ಕೆಂಪು ನೀರಿಂದ ತುಂಬಿ ಹರಿಯುತ್ತಿತ್ತು.. ಅದೊಂದು ಪುಟ್ಟ ಗ್ರಾಮ. ಅಲ್ಲಿ 1೦ ಹವ್ಯಕರ ಮನೆಗಳಿವೆ.. ಹೊರ ನೋಟಕ್ಕೆ ಆಪ್ತಮಿತ್ರರಂತೆ ಕಾಣುವ ವ್ಯಕ್ತಿಗಳೂ ಹಿತಶತ್ರುಗಳಾಗಿರುತ್ತಾರೆ.. ವಿಷಯ ಹೇಳೋಕೆ ಇಷ್ಟೆಲ್ಲ ಪೀಟಿಕೆ ಬೇಕಾ ಅಂತ ನೀವೆಲ್ಲ ಯೋಚಿಸುತ್ತಿದ್ದಿರೆಂದು ನನಗೆ ಗೊತ್ತು.. ಆದರೆ ವಿಷಯಕ್ಕೆ ಪೀಟಿಕೆ ಬೇಡವೇ..??

ಊರಿಗೊಂದು ಚೌಡೇಶ್ವರಿ ದೇಗುಲ. ಅಲ್ಲಿ ಪ್ರತೀ ಮನೆಯವರೂ ಪೂಜೆಸಲ್ಲಿಸುವುದಲ್ಲಿನ ಪದ್ದತಿ.. ಅದೊಂದು ಕರಾಳ ಭಾನುವಾರ. ಪೂಜೆಗೆ ದಾಯಾದಿ ಎರಡು ಮನೆಯವರೂ ಕೂಡಿಬಂದಿದ್ದರು.. ಪೂಜೆಯೇನೋ ಸಾಂಘವಾಗಿ ನೆರವೇರಿತು. ಪ್ರಸಾದ ಮೊದಲು ತಮಗೆ ಬೇಕೆಂದು ಜಗಳ ಶುರುವಾಯಿತು.. ಹೊಡೆದಾಟವಾಗಿ ಕಲವರಿಗೆ ಗಾಯಗಳಾದ ನಂತರ ಜಗಳ ನಿಂತಿತು..

ಇದೇ ಸಮಯದಿ ಜಗಳವಾಡಿದ ಒಂದು ಕುಟುಂಬ ನಮ್ಮ ಮನುವಿನದ್ದು.. ಮನೆಯವರೆಲ್ಲ ಆಸ್ತಿಕರಾಗಿದ್ದ ಕಾರಣ ಪೂಜೆಯ ಪ್ರಸಾದ ಇಲ್ಲದೇ ಊಟಮಾಡದೇ ಹಾಗೆ ಕುಳಿತಿದ್ದರು.. ಆಗ ಮನು ಕೇವಲ ಮೂರು ವರ್ಷದ ಬಾಲಕ. ತನ್ನ ತಾಯೀ ಬಳಿ ಹೋಗಿ ಹಸಿವಾಗಿದೆ ಊಟ ಬಡಿಸುವಂತೆ ವಿಜ್ನಾಪಿಸಿದ.. ಆದರೆ ತಾಯಿ ಮನದಲ್ಲೇನಿತ್ತೋ ಗೊತ್ತಿಲ್ಲ ಒಮ್ಮೆಗೆ ಮಗನನ್ನು ಎತ್ತಿಕೊಂಡು ಎಲ್ಲೋ ಹೊರಟಳು.. ಇದನ್ನ ನೋಡಿದ ಮನುವಿನ ಸೋದರತ್ತೆ ಯಾಕೆ ಏನಾಯ್ತು ಅಂತ ತಿಳಿಯಲು ಅವರನ್ನು ಹಿಂಬಾಲಿಸಿದಳು.. ಮನುವಿನ ತಾಯಿ ತುಂಬಿ ಹರಿಯುತ್ತಿದ್ದ ನದಿಯಬಳಿ ಬಂದು ಮಗನನ್ನು ನದಿಗೆ ಎಸೆಯುವ ಕೊನೆ ಕ್ಷಣದಲ್ಲಿ ಮನುವಿನ ಸೊದರತ್ತೆ ಆತನನ್ನು ಕಾಪಾಡಿ ಮನೆಗೆ ಕರೆತಂದಳು...

ಆದರೆ ತಾಯಿಯ ಈ ಕೃತ್ಯಕ್ಕೆ ಇನ್ನೂ ಕಾರಣ ತಿಳಿದಿಲ್ಲ

ಇಂತಾ ತಾಯಂದಿರೂ ಇರುತ್ತಾರಾ..?

No comments:

Post a Comment