Friday, 30 December 2011

ದ್ವೀಪದಲ್ಲಿ ದೀಪಧರ

ಆಕಾಶದ ಬುಡ ತುದಿ ನೋಡ್ತಾ boat ಚಲಿಸಲು ಡ್ರೈವರ್ ಶ್ರೀದರ ಮುಂದಾದ. ಅಷ್ಟರಲ್ಲಿ ದೂರದಲ್ಲ ಯಾರೊ ಕಿರುಚಿದಂತೆ ಭಾಸವಾಗಲು boat ನಲ್ಲಿದ್ದ ಶ್ರೀಧರ ಹಾಗೂ ಪ್ರದೀಪ ಇಬ್ಬರೂ ತಿರುಗಿ ನೋಡಿದರು ಆಗ ನೌಕೆಯ ಚಾಲಕ ಶ್ರೀಧರನ ತಂದೆ ಒಂದು ತಾಯತವನ್ನ ಕೈಗೆ ಕಟ್ಟಿ ಎಚ್ಚರ ನೀವು ಹೋಗುತ್ತಿರುವ ಪುಷ್ಕರಣೀ ದ್ವೀಪ ಸಂಚಾರೀ ಆತ್ಮಗಳ ಆವಾಸ ಸ್ತಾನ ಏನೇ ಕಂಡರೂ ಅದು ಕೇವಲ ಮಾಯೆ ಕೇವಲ ಕ್ಷಣಿಕ ಅದೊಂದು ಮಾಯಾಬಜಾರ್ ಇಂದ್ದಂತೆ ಅಂತ ಫಿಟಿಂಗ್ ಇಟ್ರು ಆದ್ರೆ ಶ್ರೀಧರ ಮತ್ತು ಪ್ರದೀಪ ಅಂತ ಮಾತಿಗೆಲ್ಲ ತಲೆಕೆಡಿಸಿಕೊಳ್ಳೊ ಜಾಯಮಾನದವರಲ್ಲ ಏನೇ ಬಂದರೂ ಜಗ್ಗದೇ ಕುಗ್ಗದೇ ತಮ್ಮ ಮನದಾಳದಲ್ಲಿ ಅಡಗಿರುವ ಕನಸಿನಲ್ಲಿ ಉತ್ತುಂಗಕ್ಕೇರಿದ ಆಸೆಯೊಂದರ ಹುಡುಕಾಟಕ್ಕೆ ಪುಷ್ಕರಣಿ ಎನ್ನುವ ಕುಖ್ಯಾತ ದ್ವೀಪವೊಂದಕ್ಕೆ ತೆರಳುತ್ತಿದ್ದಾರೆ. ಹೇಳೋಕೆ ಮರ್ತಿದ್ದೆ ಬೆಂಗಳೂರಿಂದ ಹೊರಟ ಇವರು ಅಂಡಮಾನ್ ಗೆ ಬಂದು ಅಲ್ಲಿ ಬೊಟ್ ತಗೊಂಡು ಪುಷ್ಕರಣೀ ದ್ವೀಪಕ್ಕೆ ಹೊರಟಿದ್ದಾರೆ. ಹಸಿರು ಬಣ್ಣದ ಹವಳವೊಂದು 20 ಕೋಟಿ ಬೆಲೆಬಾಳುತ್ತೆ ಅದು ಕೇವಲ ಪುಷ್ಕರಣೀ ದ್ವೀಪದಲ್ಲಿ ಸಿಗುತ್ತೆ ಅಂತ ವಿದೇಶಿ ವ್ಯಾಪಾರ ಕಂಪನಿಯೊಂದು ಆಸೆ ಹುಟ್ಟಿಸಿದ ಹಿನ್ನೆಲೆಯಲ್ಲಿ ಇವರೀರ್ವರೂ ನೌಕಾಯಾನ ಮಾಡಬೇಕಾಗಿ ಬಂದಿದೆ.

boat ಮುಂದಕ್ಕೆ ಸಾಗಿದಂತೆ ಪ್ರದೀಪ ಟೈಂ ಪಾಸ್ ಗೆ you tube ನಲ್ಲಿ ಏನೊ ನೋಡ್ತಾ ಯರ್ರಾಬಿರ್ರಿ ನಗ್ತಾ ಇದ್ದ. ಏನು ಅಂತ ಶ್ರೀಧರ ಕೇಳ್ದಾಗ smile ಕೊಡ್ತಾ ಟಾಮೆಂಜರಿ ಅಂದ ಶ್ರೀಧರ್ ಗೆ ನಗು ತಡಿಯೋಕೆ ಅಗದೇ "ಪಾಪಾ ಚಿಕ್ಕ ಮಗು ಅಲ್ವಾ ನೋಡು ನೋಡು ಮಾಡೋಕ್ ಬೇರೆ ಕೆಲಸ ಇಲ್ಲ ಇಲಿ ಬೆಕ್ಕಿನಾಟ ನೋಡ್ತಾನಂತೆ" ಅಂದ. ಸುಮಾರು ದೂರ ಹೊದ ನೌಕೆ ಇದ್ದಕ್ಕಿದ್ದಂತೆ stop ಆಯಿತುಅಲ್ಲಿ ಮೊಬೈಲ್ ಸಿಗ್ನಲ್ ಕೈಕೊಟ್ಟಿತು. ಇತ್ತ ಪ್ರದೀಪಂಗೆ ಟಾಮೆಂಜರಿ ನೋಡೋಕೆ ಆಗದೆ ಚಡಪಡಿಸುತ್ತಿದ್ದ ಅವನನ್ನ ನೋಡಿದ ಶ್ರೀಧರ ಕೋಪಗೊಂಡು "ಅಯ್ಯೊ ಲೆ ಇಲ್ಲಿ ನಮ್ ಗಾಡಿ ಕೆಟ್ಟು ನಿಂತಿದೆ ನಿನ್ ನೋಡಿದ್ರೆ ಹಾಳಾದ್ ಬೆಕ್ ಇಲಿ ಹಿಡಿತಿರೊ ಆಟ ನೋಡ್ತಿಯಾ" ಅದಕ್ಕೆ ಪ್ರದೀಪ " ಏನ್ ಮಾಡ್ಬೇಕು ಅಂತೀಯ ಕೆಳಗಿಳಿದು ತಳ್ಳಬೇಕಾ" ಅದಕ್ಕೆ ಶ್ರೀಧರ "ನಿನ್ನ ಕರಕೊಂಡು ಬರೋ ಬದ್ಲು ನಮ್ ಅಪ್ಪನ್ನ ಕರಕೊಂಡು ಬಂದ್ರೆ ನಾಲ್ಕು ಮಂತ್ರ ಉದರಿಸಿ ಗಾಡಿ ಸರಿ ಮಾಡ್ತಿದ್ರೋ ಏನೊ" ಪ್ರದೀಪ "ನಂಬರ್ ಕೊಡು ಪೋನ್ ಮಾಡಿ ಕರಸ್ತೀನಿ" ಶ್ರೀಧರ "ಹೂ ಬೆನ್ನಿಗೆ ಕಟ್ಟಕೊಂಡು ಬಂದಿದ್ದೀಯ ನೋಡು ಮೊಬೈಲ್ ಸಿಗ್ನಲ್ ಟವರ್ ನ ಪೋನ್ ಮಾಡ್ತಾನಂತೆ ಪೋನು" ಪ್ರದೀಪ " ಸ್ವಲ್ಪ ಸೈಡಿಗ್ ಜರಗು ನಾನೊಂದ್ ಕೈ ನೋಡ್ತೀನಿ " ಇದ್ದಕ್ಕಿದ್ದಂತೆ boat ( ನೌಕೆ ) ಸ್ಟಾರ್ಟ್ ಆಯಿತು ಪ್ರದೀಪ "ನೋಡು ಹೇಂಗೆ ನಾವ್ ಎಲ್ಲಾ ಕೆಲಸಾನು ಗೊತ್ತು ಬೆಂಗಳೂರ್ ಏರ್ ಪೊರ್ಟನಲ್ಲಿ ಹೊರಡೋವಾಗ ಹೇಳಿದ್ದು ನೆನಪಿದ್ಯಾ ನಾನೊಂತರ ಸಕಲ ಕಲಾ ವಲ್ಲಭ ಇದ್ದಂಗೆ"

ಶ್ರೀದರ "ಆಯಿತಪ್ಪಾ ಮಹಾನುಭಾವ ಕವಿ ಮಹೋದಯ ಅಲ್ಲಿ ಸೂರ್ಯ ಮುಳಗೋ ಟೈಂ ಆಯಿತು ಹೋಗಿ ಏನಾದ್ರೂ ಗೀಚ್ಕೊಳ್ತಾ ಕೂತ್ಕೊ" ಅದಕ್ಕೆ ಪ್ರದೀಪ good evening ಅಂತ ವಿಷ್ ಮಾಡಿ ಪ್ಲಾಸ್ಕ್ ನಲ್ಲಿ ಇದ್ದ ಕಾಫಿಯನ್ನ ಕಫ್ ಗೆ ಹಾಕಿ ಪೇನ್ ಪೇಪರ್ ತಕೊಂಡು ಡೆಕ್ ಗೆ ಬಂದ ನಮ್ ಪ್ರದೀಗೆ ಕವಿತೆ ಬರೆಯೋ ಹವ್ಯಾಸ ಇತ್ತು. ಇದ್ದಕ್ಕಿದ್ದಂತೆ ವಾಯುದೇವ ತನ್ನ ಹೆಂಡತಿ ಜೊತೆ ಜಗಳಮಾಡ್ಕೊಂಡು ಬಂದನೊ ಅನ್ನೋತರ ಜೋರಾಗಿ ತನ್ನ ಪ್ರಥಾಪ ತೋರಿಸೋಕೆ start ಮಾಡಿದ. ಸಮುದ್ರದ ಅಲೆಗಳು ನಾಹೆಚ್ಚು ನಾಹೆಚ್ಚು ಅನ್ನೋತರ ಹೈಜಂಪ್ ಮಾಡ್ತಾ ಶೋಯೆಬ್ ಅಕ್ತರ್ ನ ಬೌಲಿಂಗ್ ನ ಬಾಲ್ ಸ್ಪೀಡ್ ನಲ್ಲಿ boatಗೆ ಬಡಿಯೀತು. control ತಪ್ಪಿ ಕೆಳಕ್ಕೆ ಬಿದ್ದ ನಮ್ಮ ಶ್ರೀಧರ ಸಮುದ್ರದ ಉಪ್ಪುನೀರಿನ ಟೇಸ್ಟ್ ನೋಡಿ ಕೂಗಿದ ಪ್ರದೀ help. ಅದನ್ನ ನೋಡಿದ ಪ್ರದೀಪ ಹಗ್ಗ ತಂದು ಕೆಳಕ್ಕೆ ಹಾಕಿದ ಆದರೆ ಗಾಳಿ ಸ್ಪೀಡ್ ಗೆ ಅಲೆಗಳು ಬಟ್ಟೆ ಒಗೆಯೋ ತರ ಶ್ರೀದರನನ್ನ boat ಡಿಕ್ಕಿ ಹೊಡಿಸ್ತಾ ಇತ್ತು. ಇದರಿಂದ ಅವನ ಮೈಮೇಲೆ ಅಲ್ಲಲ್ಲಿ ನಾಯಿಕಚ್ಚಿದ ತರ ಮೈಪರಚಿ ಹೋಗಿ ರಕ್ತ ಡ್ಯಾಮ್ ನಲ್ಲಿ ಬಿಟ್ಟ ನೀರನಂತೆ ಸಮುದ್ರಕ್ಕೆ ಬೀಳ್ತಾಇತ್ತು. ಹಾಗಾಗಿ ಹಗ್ಗ ಹಿಡ್ಕೊಳ್ಳೊ power ನಮ್ ಶ್ರೀ ಗೆ ಇರಲಿಲ್ಲ ಅದಕ್ಕೆ ಪ್ರದಿ ದೊಡ್ಡ ಮನಸ್ಸುಮಾಡಿ ಬೋಟ್ ನ ಕಂಬವೊಂದಕ್ಕೆ ಹಗ್ಗ ಕಟ್ಟಿ ತಾನೇ ನಿಧಾನವಾಗಿ ಕೆಳಗಿಳಿದ. ಕೈ ಕೊಟ್ಟು ಹೇಗೋ ಸರ್ಕಸ್ ಮಾಡಿ ಶ್ರೀನ ಕರಕೊಂಡು ಬೋಟ್ ಮೊಲೆ ತಂದ. ಶ್ರೀಗೆ ಮಾತಾಡೋ ಶಕ್ತಿನೂ ಇರಲಿಲ್ಲ. ಆದರೆ ವಾಯುದೇವನ ಗಾಳಿ ಸ್ಪೀಡ್ ಗೆ ಬೋಟ್ ತಂತಾನೆ ಪುಷ್ಕರಣಿ ಬಳಿ ಬಂದಿತ್ತು ಕೆಲದೂರ ಮಾತ್ರ ಬಾಕಿ ಇತ್ತು ಪ್ರದಿ "ಅಂತೂ ಕತ್ತಲಾಗೋದ್ರೊಳಗೆ ನೆಲ ಸಿಕ್ತಾ ಇದೆ ನಮ್ ಪುಣ್ಯ ಶ್ರೀ ನೋಡೋ ಸಕ್ಕತ್ತಾಗಿದೆ ಕಣೋ ದ್ವೀಪ" ಅಂದ ಅದಕ್ಕೆ ಶ್ರೀ "ನಾನಿಲ್ಲಿ ಯಮನ ಜೊತೆ ಜೂಟಾಟ ಆಡ್ತಿದಿನಿ ನಿಂಗೆ ಆದ್ವೀಪನೆ ಹೆಚ್ಚಾಯಿತಾ ಮೊದ್ಲು ಆ ಮೆಡಿಕಲ್ ಕಿಟ್ ಕೊಡು ಪ್ರಾಣ ಹೋಗ್ತಿದೆ" ಅಂದ ಅಂತೂ ನಮ್ಮ BOAT ಪುಷ್ಕರಣಿಗೆ ಬಂದು ಸೇರ್ತು. ಅದೇ ಟೈಂಗೆ ಸರಿಯಾಗಿ ನಮ್ಮ ರವಿಮಾಮ ಟಾಟಾ ಮಾಡ್ತಾ ನಾಳೆ ಸಿಕ್ತೀನಿ ಅಂತ ಹೇಳ್ತಾ ಇದ್ದಾಗ್ಲೇ ಚಂದಾಮಾಮ ಶರಪಂಜರ ಕಲ್ಪನಾ ಸ್ಟೈಲ್ ನಲ್ಲಿ ನಾಬಂದೆ ನಾಬಂದೆ ಅಂತ ಹೇಳ್ತಾ ಬೆಳ್ಳಿಬಟ್ಟಳಂತೆ ಕಾಣಿಸ್ಕೊಂಡ.. ಇಬ್ಬರೂ 1 ಮರಕ್ಕೆ ಟೆಂಟ್ ಕಟ್ಟಿ ಮಲಗೊ ಸ್ಕೆಚ್ ಹಾಕಿ ಬೋಟ್ ನಿಂದ ಇಳಿದರು. ದ್ವೀಪ ನೋಡ್ತಾ ನೋಡ್ತಾ ಪ್ರದಿ "ಭೂಮಿಗಿಳಿದ ಸ್ವರ್ಗವೋ ದೇವಲೋಕದ ಇಂದ್ರನಾಸ್ತಾನ ಅಮರಾವತಿಯೋ" ಅಂತ ಕುಯ್ಯೋಕೆ ಸ್ಟಾರ್ಟ್ ಮಾಡಿದ್ದನ್ನ ನೋಡಿ ಶ್ರೀ ಸಿಟ್ಟಿನಿಂದ "ಹಾಗೇ ಆ ಸ್ವರ್ಗದಲ್ಲಿ ರಂಬೆ ಊರ್ವಶಿ ಯಾರಾದ್ರೂ ಇದಾರ ನೋಡಿ ಅವ್ರಿಗೆ ಕಾಳ ಹಾಕು ಆರಾಮಾಗಿ ಸ್ವರ್ಗದಲ್ಲೇ ಜೀವನ ಪೂರ್ತಿ ಇರಬಹುದು ಮೊದ್ಲು ಆ ಹಗ್ಗ ತಗೊ ಟೆಂಟ್ ಕಟ್ಟಬೇಕು ರಾತ್ರಿ ಮಲಗೋದು ನಂಗೆ ಅಭ್ಯಾಸ" ಅಂದ ಇಬ್ಬರೂ ಸೇರಿ ಟೆಂಟ್ ಕಟ್ಟಿದ್ರು. ಬೆಂಗಳೂರಿನ MTR ಹೊಟೆಲ್ ನಿಂದ ತಂದಿದ್ದ ಚಪಾತಿ ಒಳ್ಳೆ ಮರದ ತುಂಡಿನ ತರ ಆಗಿತ್ತು. ಬೇರೆ ಏನು ಇಲ್ಲಾಂತ ಅದನ್ನೇ ತಿಂದರು ಮಲಗಬೇಕು ಅನ್ನೋವಷ್ಟರಲ್ಲಿ ದೂರದಲ್ಲಿ ಒಂದು ಬಾಳೆಮರ ಕಂಡಿತು ಪ್ರದಿ ಜೋರಾಗಿ ಓಡಿಹೋಗಿ ಬಾಳೆಗೊನೆ ಕಟ್ ಮಾಡಿ ತಗೊಂಡ್ ಬಂದು ಅಂದ "ಪುಣ್ಯ ಬಟ್ರಕೈನ ಒಣಕಲು ಚಪಾತಿ ಮಾತ್ರ ಅಂದ್ಕೊಂಡಿದ್ದೆ ಸ್ಪೆಶಲ್ ಬನಾನಾ ಸಿಕ್ತು ಬೇಕೇನೊ ಶ್ರೀ" ಅಂದ ಅದಕ್ಕೆ ಶ್ರೀಧರ "ಏನ್ ಕಣಿ ಕೇಳ್ತೀಯಾ ಒಂದ್ 10 ಹಣ್ಣ ಕೊಡು ಚಪಾತಿ ಹೊಟ್ಟೆ ಒಳಗೆ ಡಾನ್ಸಮಾಡ್ತಿದೆ" ಅಂದ. ಇಬ್ಬರೂ ಬಾಳೆ ಹಣ್ಣನ್ನ ತಿಂದು ನಾಳೆ ಹವಳ ಹುಡ್ಕಬೇಕು ಅಂತ ಮಾತಾಡ್ಕೊಂಡು ಹಾಸಿಗೆಹಾಕ್ಕೊಂಡು ಮರದಡಿ ಕಟ್ಟಿದ್ದ ಟೆಂಟ್ ನಲ್ಲಿ ಮಲಗಿದ್ರು. ಚಳಿ ಸ್ವಲ್ಪ ಜಾಸ್ತಿ ಇತ್ತು ಅದಕ್ಕೆ ಎದುರಿಗೆ ಬಿದ್ದಿದ್ದ ನಾಲ್ಕು ಕಟ್ಟಿಗೆ ತಕೊಂಡು ಬೆಂಕಿ ಹಾಕಿ ಮಲಗಿದ್ರು ಸುಖವಾಗಿ ಮಲಗಿದ್ದ ಇವರಿಗೇನ ಗೊತ್ತು ಮುಂದೆ ಬರೊ ಆಪತ್ತು ಅದು ಪುಷ್ಕರಣೀ ದ್ವೀಪ ಅಂತ ಅವರು ಮರತಿದ್ರೋ ಅಥವಾ ಮೊಂಡು ದೈರ್ಯವೊ ಬಿಸಿರಕ್ತದ ಉತ್ಸಾಹವೊ ಗೊತ್ತಿಲ್ಲ. ಆದರೆ ಅವರ ನಿದ್ರೆ ಕೇವಲ ಕ್ಷಣಿಕ ಆಗಿತ್ತು

ಮುಂದುವರೆಯುವುದು

No comments:

Post a Comment