Saturday, 17 September 2011

ನನಗೆ ತೋಚಿದ ಸಾಲುಗಳು..

ನನ್ನವಳು ಇಂದು ನನ್ನಜೊತೆ ಇಲ್ಲ...
ನಾ ನಂಬಿದ ಗೆಳತಿ ಕೈ ಕೊಟ್ಟಳಲ್ಲ...
ಆ ದೇವರಿಗಂತೂ ಕರುಣೆ ಇಲ್ಲ...
ಮನಸಿನೊಂದಿಗಿನ ಚೆಲ್ಲಾಟ ಸಲ್ಲ...
ಹಂಚದಾದೆಯಲ್ಲೇ ಪ್ರೀತಿಯ ಬೆಲ್ಲ...
ಕಾಯುತಲಿರುವ ಈ ನಿನ್ನ ನಲ್ಲ...
ನೀನಿರದೇ ನನ್ನ ಬಾಳಲ್ಲೇನು ಇಲ್ಲ...


ಮನಸ ಸೆಳೆದೆ ನಿನ್ನ ಮೊದಲ ನೋಟದಿಂದ...
ಪ್ರೀತಿಸಿದೆ ನಿನ್ನ ಕಂಡ ದಿನದಂದು...
ಪ್ರೀತಿಯಿಂದ ನಾ ನಿನ್ನ ಕನಸಕಂಡು...
ಬಯಸಿದೆ ಮನದೊಡತಿಯ ಆಗಲೆಂದು...
ಹೃದಯದಿ ಜಾಗವಿದೆ ನಿನಗೆಂದೆಂದು...
ಕಾಯ್ದಿರಿಸುವೆ ಜಾಗಗವ ಮರುಜನ್ಮಕೆಂದು...
ವಿದಿಯು ಆಟವಾಡಿತು ನನ್ನ ಬಾಳಿನಲ್ಲಿಂದು...
ಕರೆಯಲು ಬಂದೆಯಾ ನಿನ್ನ ಮದುವೆಗೆಂದು...

1 comment:

  1. ಕವಿತೆಗಳು ಚೆನ್ನಾಗಿದ್ದು ಭಾಸ್ಕರ ಹೆಗ್ಡೇರೆ.. ಆದ್ರೆ ನೀವು ಇನ್ನೊಂದು ಚೂರೇ ಚೂರು ತಾಳ್ಮೆಯಿಂದ ಬರದ್ರೆ ಇನ್ನೂ ಚೆನ್ನಾಗಾಗ್ತು ಕವಿತೆಗಳು ಅನಿಸ್ತು ನಂಗೆ.. ನಾ ಹೇಳಿದ್ದೇನಾದ್ರೂ ತಪ್ಪಾಗಿದ್ರೆ, ಬೇಜಾರಾಗಿದ್ರೆ ಕ್ಷಮಿಸಿ..

    ReplyDelete