Wednesday 25 January 2012

ಒಮ್ಮೆ ಬಾರೆ

ಮಿಂಚಿ ಮರೆಯಾಗುವ ಚೆಲುವೆ ನಿನ್ನ
ಅಂಚೆ ವಿಳಾಸವನಾದರೂ ತಿಳಿಸೆ
ಮುಂಚಿನಿಂದಲೂ ಹೇಳ ಬಯಸಿಹೆ
ಕೊಂಚ ಕಡಿಮೆ ಧೈರ್ಯ ನನಗೆ

ಹೃದಯ ವೀಣೆಯೊಳು
ಮೌನರಾಗ ಮೀಟಿದೆ
ಇಂಪಾದ ರಾಗಕ್ಕೆ
ತಂಪಾಗಿ ಒಮ್ಮೆ ಬಾರೆ

ಸೊಂಪಾದ ಕಂಠದಿಂದ
ಮಂಪರು ಬರಿಸಿದ
ಕಂಪನು ಸೂಸುತ ಪ್ರೇಮದಿ
ಚಂಪಾ ನೀ ಬಾರೆ

ನನ್ನಾ ಕವನಕೆ ಪಲ್ಲವಿಯಾದಂತೆ
ಚರಣಕೊಂದು ಪ್ರೀತಿ ಭಾವ ನೀಡೆ
ತಾಳ ತಪ್ಪುವುದರೊಳಗೆ ನನ್ನ ತಪ್ಪ ತಿಳಿಸೆ
ಹಾಳು ಮನಸಿನ ಪ್ರೇಮದಾಸೆಯ ಉಳಿಸೆ

1 comment:

  1. ಹಾಳು ಮನಸ್ಸಲ್ಲ..ಮುಗ್ದ ಮನಸ್ಸು...
    ಚೆನ್ನಾಗಿದೆ......ಮಿಂಚಿ ಮರೆಯಾದ ನಿಮ್ಮ ಚೆಲುವೆಗೆ ಈ ಕವನ ತಲುಪಲಿ..

    ReplyDelete