Wednesday, 25 January 2012

ನಿನಗಂದು ಮರುಳಾದೆನು

ಜುಮು ಜುಮು ಚಳಿಯಲಿ
ಬಿಸಿ ಬಿಸಿ ಬಯಕೆಯಲಿ
ಹಸಿ ಹಸಿ ಕನಸುಗಳಲಿ
ಮಾಸಿ ಹೋಗದ ನಿನ್ನ ನೆನಪಲಿ
ಬರೆಯುತಿರುವೀ ಕವೆತೆಯಲಿ

ಮುಂದೆ ಬಾಗುತ ಅತ್ತಿತ್ತ ಹಾರುತ
ಆಗಾಗ ನಾಚುತ ಪುನಃ ಪುನಃ ನೋಡುತ
ಬಂದು ಬಂದು ಮುತ್ತನು ಕೊಡುತಿಹ
ನಿನ್ನ ಮುಂಗುರುಳಾಂದಕೆ ನಾ
ನಿನಗಂದು ಮರುಳಾದೆನು

ಚಿಲಿಪಿಲಿ ಕಲರವದ ನಡುವಲಿ
ಬೆಚ್ಚನೆಯ ಬಿಸಿಯುಸಿರ ಜೊತೆಯಲಿ
ಮನದಿಚ್ಚೆಯಂತೆ ನೀ ಹಾಡುತಿರುವ
ಮೌನರಾಗವನು ಕೇಳುತಲಿ ನಾನು
ನಿನಗಂದು ಮರುಳಾದೆನು

ಬೆಳ್ಳಂಬೆಳಗ್ಗೆ ಬಾನಂಚಲ್ಲಿ
ಮುಗಿಲ ಸಾಲನು ಸೀಳಿ ಬರುತಿಹ
ಸೂರ್ಯರಷ್ಮಿಯ ಬೆಳಕಂತಾ
ನಿನ್ನ ನಗುವ ಕಂಡು ನಾನು
ನಿನಗಂದು ಮರುಳಾದೆನು

ಲತೆಗಳೆಲ್ಲ ಗಾಳಿಗಲುಗಾಡಿದಂತೆ
ನಿನ್ನ ನಡಿಗೆಯ ಕಂಡೆ ನಾನು
ಮುಂಗಾರಲ್ಲಿ ಕಾರ್ಮೋಡ ಕವಿದಾಗ
ಸುರಿವ ಮಳೆಯಂದೆ ಸುರಿಸು ನೀ
ನನಗಿಂದು ಪ್ರೇಮಾಮೃತವನು

1 comment:

  1. ಪ್ರೇಮಿಯ ಮನದಾಳದ ತುಡಿತ ಚೆನ್ನಾಗಿ ಮೂಡಿ ಬಂದಿದೆ..

    ReplyDelete