Saturday 3 September 2011

ನನಗೆ ತೋಚಿದ ಸಾಲುಗಳು

ಮನಸಿನ ಮರುಳಾಟದಲಿ
ಹೃದಯದ ಅಂತರಾಳದಲಿ
ಪ್ರೇಮಾಂಕುರದ ಕನಸಲ್ಲಿ
ಕಂಡೆ ನಾನೊಂದು ಮಿಂಚು
ಅದು ಪ್ರೀತಿಯ ಮುಂಗಾರಿನ ಮಿಂಚು ||1||


ಸೌಂದರ್ಯ ಸಾಗರದಿ
ನಿನ್ನೆದೆಯ ಬಾನ್ದಳದಿ
ಈ ಸುಂದರ ಪರಿಸರದಿ
ಬೀಗುವೇ ನಾನು ಘರ್ವದಿ
ಮಲೆನಾಡಿನ ಮಾದುರ್ಯದಿ ||2||

ಅಂದು ಕಂಡೆನಾ ನಿನ್ನನು
ಮತ್ತೆ ಕಾಣಲು ಕಾಯುತಿರುವೆನು
ಮಂದಾರ ಪುಷ್ಪವು ನೀನು
ನಿನ್ನ ನೆನಪಲ್ಲಿ ಆದೆ ನಾನು
ಪದ ಪದ ಕೂಡಿಸೊ ಕಬ್ಬಿಗನು ||3||


ನಿನ್ನ ಪ್ರೀತಿಯ ಮೆಲಕಲಿ
ಕನಸಿನ ನೆನಪಿನ ಸುಳಿಯಲಿ
ಮನಸಿನ ಪುಟ ಪುಟದಲಿ
ಸುಂದರ ಭಾವನೆಯ ಬಯಲಲಿ
ನನಗೆ ತೋಚಿದ ಬರಹಗಳಲಿ ||4||


ಕಾಯುತಲಿರುವೆನು ನನ್ನಾಕೆ ದಾರಿಗೆ
ತಣ್ಣೀರಿಟ್ಟಳು ಆಕೆ ನನ್ನಾಯಾ ಆಸೆಗೆ
ಮನವು ಕಲುಕಿತಂದು ಅವಳ ಮಾತಿಗೆ
ಆಯಿತು ಆಗ ನನಗೆ ಚಳಿಗಾಲದಿ ಬೇಸಿಗೆ
ಆಗದಾಯಿತು ಇಂದು ನನ್ನ ಅವಳ ಬೆಸುಗೆ ||5||


ತುಸುಮೆಲ್ಲ ನಗೆಯ ಬೀರಿ ಸೆಳೆದಳು ಮನವನ್ನು
ಪಟ ಪಟ ಮಾತಿಗೆ ಕಳೆದುಕೊಂಡೆ ನಾನೇ ನನ್ನನ್ನು
ನೀನೇ ಬರಬೇಕಿದೆ ನನ್ನ ಜೀವನಕಿನ್ನು
ಏತಕೆ ಚಿಂತೆ ನನ್ನ ಬಾಳಲಿ ಬರಲು ನಿನಗಿನ್ನು
ಒಮ್ಮೆ ಹೇಳಲಾರೆಯಾ ಓ ನನ್ನ ಚಿನ್ನು ||6||

ಪ್ರೀತಿಯ ಮೆಲಕಲಿ ನೆನಪುಗಳು ನೂರೆಂಟು
ಮನಸಿನ ಭಾವದಲಿ ಭಾಷೆಗಳು ಹತ್ತೆಂಟು
ಬರೆದ ಪ್ರೇಮಪತ್ರ ನನ್ನೆದೆಯಲ್ಲಿ ಉಂಟು
ಆ ದೇವರು ಬರೆದಿರುವ ಹಣೆಬರಹ ಹೀಗುಂಟು
ಆತನೇ ಕಟ್ಟಿರುವ ನಮ್ಮ ಮಿಲನಕೆ ಬ್ರಹ್ಮಗಂಟು ||7||

1 comment:

  1. ಸುಮಾರು ಸಮಯದ ನಂತರ ಬರೆದಿಹ ಒಳ್ಳೆ ಪ್ರಯತ್ನ ಭಾಸ್ಕರ್ :-) ಆದರೆ "ಘರ್ವ" ದ ಬದಲು "ಗರ್ವ" , "ಮಾದುರ್ಯ" ದ ಬದಲು "ಮಾಧುರ್ಯ" ಆಗನೇಕಿತ್ತೇನೋ ಅನ್ನೋದು ನನ್ನ ಅನಿಸಿಕೆ :-)

    ReplyDelete