Wednesday 21 December 2011

ಸೊಲ್ಲ ನೀ ಕೇಳೆ

ನಿಲ್ಲು ನಿಲ್ಲೆಲೆ ಸಲ್ಪ
ಸೊಲ್ಲ ನಿ ಕೇಳೆ
ಇಲ್ಲಿ ನಿ ಬಂದು
ಬೆಲ್ಲದಂತ ಮಾತಾಡೆ
ನಲ್ಲ ನಾನಿನಗಾಗಿ
ಎಲ್ಲೆಲ್ಲಿ ಹುಡುಕಿದೆ
ಮೆಲ್ಲ ನಿ ಬಂದು
ಸೊಲ್ಲ ನಿ ಕೇಳೆ

ಭವ್ಯ ಪ್ರೆಮ ಮಂಟಪದಿ
ದಿವ್ಯ ಜ್ಯೋತಿ ನಿ
ಕಾವ್ಯ ಬರೆಸುವ ಕಾಮಿನಿ
ಸುಶ್ರಾವ್ಯ ಕಂಟದಿ
ಪ್ರಿಯಕರ ನನ್ನ ಕರೆಯೆ
ಹಿತಕರ ನುಡಿಯ ನೀನಾಡದಿರೆ
ಸಂಚಕಾರ ನನ್ನೀ ಹೃದಯಕೆ
ಕೊಂಚ ಪ್ರೀತಿಯ ಸೊಲ್ಲ ನಿ ಕೇಳೆ

ರವಿ ನಿನ್ನ ಕಂಡನಂತೆ
ಕವಿಯಾಗಿ ಹೋದನಂತೆ
ಸವಿಯಾದ ನಿನ್ನ ಮಾತಕೇಳಿದಂದೆ
ಸೆರೆಯಾಗಿ ಹೋದನಂತೆ
ಉರಿಯೇಕೊ ಎದೆಯಲೆಂದು
ಮರಿಪ್ರೇಮ ಅಳುತಿದೆಯಿಂದು
ಅರಿತು ನೀನಿಲ್ಲಿ ಬಂದು
ಸಲ್ಪ ಸೊಲ್ಲ ನೀ ಕೇಳೇ

1 comment:

  1. ನಿಲ್ಲು ನಿಲ್ಲೆಲೆ ಸಲ್ಪ
    ಸೊಲ್ಲ ನಿ ಕೇಳೆ
    ಇಲ್ಲಿ ನಿ ಬಂದು
    ಬೆಲ್ಲದಂತ ಮಾತಾಡೆ
    ನಲ್ಲ ನಾನಿನಗಾಗಿ
    ಎಲ್ಲೆಲ್ಲಿ ಹುಡುಕಿದೆ
    ಮೆಲ್ಲ ನಿ ಬಂದು
    ಸೊಲ್ಲ ನಿ ಕೇಳೆ

    ನಲ್ಲನ ಪ್ರೇಮ, ಪ್ರಾಸಬದ್ದವಾಗಿ ಹಿತವಾಗಿ ಮೂಡಿಬಂದಿದೆ...

    ReplyDelete