Tuesday, 31 January 2012

ದ್ವೀಪದಲ್ಲಿ ದೀಪಧರ ಭಾಗ 4

ಜೈ ಬಜರಂಗ ಭಲಿ ಜಯ ಗಣೇಶಾಯ ನಮಃ ಶಿವನೇ ಭಯಹರನೇ ಗಂಗಾಧರನೇ

ಏನಿಲ್ಲ ಶಾಕ್ ಆಗೋದೇನು ಬೇಡ ಭೂತದ ಕಥೆ ಅಲ್ವಾ ಅದಕ್ಕೆ ದೇವರ ನೆನಪುಮಾಡ್ಕೊಳೋಣ ಅಂತ ನೀವು ರೆಡಿ ನಾ ಕಥೆ ಓದೋಕೆ ಹ ಹ ಅರ್ಥ ಆಯ್ತು ಮುಂದುವರಿಸ್ತೀನಿ.

ಮೊಬೈಲ್ ಕಾಲ್ ಗಳಿಗೆ ದಿಕ್ಬಂದನ ಹಾಕೋಕಾಗಲ್ಲ ಅಂತ ಅದಕ್ಕೆ ಮೋಡರ್ನ ಭೂತಗಳು ಫೋನ್ ಮತ್ತು ಕಂಪ್ಯೂಟರ್ ನ ಬಳಸಿಕೊಳ್ತಾ ಇದೆ

ದಿಕ್ಬಂಧನ ಹಾಕಿದ ಮಂತ್ರವಾದಿ ಹಳೇ ಕಾಲದ ಕಿತ್ತೋಗಿರೊ ಯಮಃ ಗಾಡಿ ಡುರ್ ಗುರ್ ಅನ್ನೋತರ ಏನೇನೋ ಬಯ್ಯೋಕೆ ಶುರು ಮಾಡ್ದ ಬಯ್ಯೋಕೆ ಅಂದ್ರೆ ಮಂತ್ರ ಹೇಳೋಕೆ ಅಂತ ನಾನು ಪ್ರೀತಿಯಿಂದ ಇಟ್ಟ ಹೆಸರು ಈ ಪ್ರೀತಿ ಯಾರು ಅಂತಾ ಕೇಳ್ಬೇಡಿ ನಂಗೂ ಗೊತ್ತಿಲ್ಲ. ಮಂತ್ರ ಹೇಳ್ತಾಇದ್ದ ಮಂತ್ರವಾದಿ ಮೊಬೈಲ್ ನೋಡಿ ಕೊಡೋಕೆ ಹೇಳ್ದಾ ಅಷ್ಟರಲ್ಲಿ ಫೋನ್ ಬಂತು ಯಾಕೊ ಗೊತ್ತಿಲ್ಲ ಶ್ರೀ ಗೆ ಧೈರ್ಯ ಬಂದುಬಿಟ್ಟಿತ್ತು ಅದೇ ಉತ್ಸಾಹದಿಂದ ಫೋನ್ ರಿಸೀವ್ ಮಾಡ್ದ " HAI ಮಚ್ಚಾ ಹೌ ಆರ್ ಯು ಓ ಮಂತ್ರವಾದಿ ಕರೆಸಿದೀಯಾ ಯಾರ್ ಬಂದ್ರೂ ನಂಗೆ ನೋ ಪ್ರೊಬ್ಲೆಮ್ ನಾನು ಸೇಡು ತೀರಿಸಿಕೊಂಡೇ ಹೋಗೋದು ನನ್ನ ಕೆಲಸಕ್ಕೆ ಯಾವನ್ ಮೂಗು ತೋರೀಸಿದ್ರೂ ಕೆಲಸ ಆಗೇ ಆಗುತ್ತೆ ನೀನು ರೆಡಿಯಾಗು ಹ ಹೇಳೋಕೆ ಮರ್ತಿದ್ದೆ ಇನ್ನ 4 ದಿನ ನಿನ್ನ ಬರ್ತ್ ಡೆ ಇದ್ಯಲ್ಲಾ ಅದೇ ದಿನಾ ನಿನ್ನ ಸಾಯಿಸ್ತೀನಿ ಅದು ಹೇಗೆ ಬಚಾವಾಗ್ತೀಯೋ ನೋಡೆಬಿಡೋಣ I WILL KILL U ಹಹಹಹಹ" ಅಂತ ವಿಕಾರವಾಗಿ ನಗ್ತಾ ಫೋನ್ ಕಟ್ ಆಯ್ತು. ಸ್ವಲ್ಪ ಟೆನ್ಸ್ ಆದ್ರೂ ಸುದಾರಿಸ್ಕೊಂಡ ಶ್ರೀ ಮೊಬೈಲ್ ನ ಮಂತ್ರವಾದಿಗೆ ಕೊಟ್ಟ ಮಂತ್ರವಾದಿ ಮಂತ್ರಹೇಳ್ತಾ ಅದಕ್ಕೆ ಕುಂಕುಮ ಅರಿಶಿನ ಹಚ್ಚಿ ಮೇಕಪ್ ಮಾಡೋಕೆ ಶುರು ಮಾಡ್ದ..

ಆದರೆ ಆ ಮಂತ್ರವಾದಿಗೆ ಒಂದು ವಿಷ್ಯ ಗೊತ್ತಿರಲಿಲ್ಲ ಅನ್ಸುತ್ತೆ ಮೊಬೈಲ್ ಗೆ ಪೂಜೆ ಮಾಡೋ ಬದರು ಬ್ಯಾಟರಿ ಸಿಮ್ ತೆಗೆದು ಬಿಸಾಕಿದ್ರೆ ಸಾಕಾಗಿತ್ತು ಅಂತ ಹೋಗ್ಲಿ ಬಿಡಿ ನಮಗ್ಯಾಕೆ ಪೇಮೆಂಟ್ ಕೊಡೋದು ಶ್ರೀ ನ ತಂದೆ ನಾವಲ್ಲವಲ್ಲ. ಕುಂಕುಮ ಇಟ್ಟ ಫೋರ್ಸ್ ಅಂತ ಕಾಣುತ್ತೆ 2 ನಿಮಿಷಕ್ಕೆ 100 ಮೆಸೆಜ್ ಬಂತು ಒಂದು ಕ್ಷಣ ಮಂತ್ರವಾದಿ ಕೂಡ ಶಾಕ್ ಆದ ನಂತರ ಚೇತರಿಸಿಕೊಂಡು ಇದು ಸಾಮಾನ್ಯ ಭೂತ ಅಲ್ಲ ಅದು ಭಾರಿ ಫವರ್ ಪುಲ್ ಅಂತ ಹೇಳಿ ನಿಮ್ಮ ಮನೆಯ ಎಲ್ಲಾ ಬಾಗಿಲು ತೋರಿಸಿ ಅಂತ ಮನೆ ನೋಡೋಕೆ ಹೋದ ಅಲ್ಲಿ 1 ಬಾಗಿಲು ನೋಡಿ ಇದು ಇಲ್ಲಿ ಇರಬಾರದಿತ್ತು ಅಲ್ಲಿ ಇರಬೇಕಿತ್ತು ಅಂತ ಒಳ್ಳೆ ಮೇಸ್ತ್ರಿ ( ಸಣ್ಣ ಮನೆ ಕಟ್ಟೋ ಇಂಜಿನಿಯರ್ ) ತರ ಕುಯ್ಯೋಕೆ ಶುರು ಮಾಡಿದ.. ಹಾಗೇ ಮುಂದೆ ಹೋಗಿ ಮನೆಯ ಹೊರಗಡೆ ಎಂಟೂ ದಿಕ್ಕಿಗೆ ನಿಂಬೆ ಹಣ್ಣನ್ನ ಹೂತು ಹಾಕಿ ಮನೆ ಬಾಗಿಲುತಳಿಗಳಿಗೆ ಮೆಣಸಿನ ಕಾಯಿ ಕಟ್ಟಿದ ಮೋಸ್ಟಲಿ ದೆವ್ವಕ್ಕೆ ಖಾರ ಅಂದ್ರೆ ಭಯ ಇರುತ್ತೋ ಏನೊ.. ಹಾಗೇ ದೇವರ ಕೋಣೆಗೆ ಬಂದು ನಾನು ಇಲ್ಲಿ ಜಪ ಮಾಡ್ತಾ ಇರ್ತೀನಿ ಅಗತ್ಯ ಇದ್ರೆ ಕರೀರಿ ಅಂತ ಜಪ ಮಾಡ್ತಾ ಕೂತ..

ಇತ್ತ ಶ್ರೀ ಸ್ಟಾರ್ಟ ಮಾಡಿ ಸಮುದ್ರದಲ್ಲಿ ಬಿಟ್ಟಿದ್ದ ಬೊಟು ಅಂಡಮಾನ್ ಪೋಲೀಸರು ಹಿಂಬಾಲಿಸಿ ಪುಷ್ಕರಣಿ ತಲುಪಿದರು ಅಲ್ಲಿ ಸಿಕ್ಕ ಪ್ರದಿ ಯ ಪಾಸ್ ಪೋರ್ಟ ನೋಡಿ ಬೆಂಗಳೂರಿನ ಪೋಲೀಸರಿಗೆ ತನಿಕೆಯನ್ನ ವರ್ಗಾಯಿಸಿದರು ಆದರೆ ಪ್ರದಿ ಶವ ಅವರಿಗೆ ಸಿಗಲಿಲ್ಲ 24 ಹವಳಗಳು ಫೋಲೀಸರ ವಶವಾಯಿತು...

ವಶಪಡಿಸಿಕೊಂಡ ಹವಳಗಳನ್ನ ಪೋಲೀಸರೇ ಲಪಟಾಯಿಸಲು ಹೊಂಚುಹಾಕಿದ್ರು. ಆದರೆ ಈ ಭಾರಿ ಹವಳಗಳನ್ನ ಕಾಯುತ್ತಾ ಇರೋದು ಹಾವಲ್ಲ ಹಾವಿನ ಬದಲಾಗಿ ಹವಳ ಕಾಯ್ತಾ ಇರೋದು ನಮ್ಮ ಪ್ರದೀ...

ಇತ್ತ ಕನ್ನಡ ಸಿನಿಮಾದಲ್ಲಿ ಆವಿಶ್ಕಾರಿ ನಿರ್ದೇಶಕ ಎಂದು ಬಿರುದು ಪಡೆದಿದ್ದ ಕುಮಾರ್ ಪುಷ್ಕರಣಿಯಲ್ಲಿ ಶೂಟಿಂಗ್ ಮಾಡೋ ಪ್ಲೇನ್ ಹಾಕಿಕೊಂಡು ಅಲ್ಲಿಗೆ ಹೋದ ಆದರೆ ಅದು ಈ ಭಾರಿ ನಿರ್ಜನವಾಗಿರಲಿಲ್ಲ ಅಲ್ಲಿ ನಮ್ಮ ಪ್ರದಿ ಒಂದು ಚಿಂಪಾಜಿ ಜೊತೆ ಮರಕೋತಿ ಆಟ ಆಡ್ತಾ ಇದ್ದ ಅಂಡಮಾನ್ ಭಾಷೆ ಅಲ್ಪಸ್ವಲ್ಪ ಕಲಿತಿದ್ದ ಕುಮಾರ್ ದೀಪು ಬಳಿಹೊಗಿ ಏನೋ ಅಂದ ಅದು ಅವನಿಗೆ ಅರ್ಥವಾಗದೇ ಅಂದರೆ ಏನು ಅಂತ ಕೇಳಿದ ಕನ್ನಡ ಭಾಷೆನ ದೀಪು ಬಾಯಲಿ ಕೇಳಿದಾಗ ಕುಮಾರ್ ಗೆ ಮೈ ಎಲ್ಲ ಒಂದು ಕ್ಷಣ ರೋಮಾಂಚನ ಆಯಿತು ಸುದಾರಿಸಿಕೊಂಡು ವಿವರ ಕೇಳೋಕೆ ಶುರು ಮಾಡ್ದ ದೀಪು a to z plash back ಹೇಳ್ದ ಕುಮಾರ್ ಗೆ ವಿಷಯ ತಿಳಿದು ಕರ್ನಾಟಕ ಕ್ಕೆ ಕರಕೊಂಡು ಹೋಗೋದಾಗಿ ಹೇಳ್ದ 2 ದಿನ ಶೂಟಿಂಗ್ ಮುಗಿಸಿ ಅಲ್ಲಿಂದ ಹೊರಟರು...



ನಿಮಗೆ ಕಾಡುತ್ತಿರುವ ಕೆಲ ಅನುಮಾನಗಳು

1 ಫೋನ್ ಮಾಡಿ ಹೆದರಿಸಿದವರು ಯಾರು ?

2 ಪ್ರದಿ ಬದುಕಿದ್ದು ಹೇಗೆ ?

3 ಸಾಯೋ ಸ್ಥಿತಿಯಲ್ಲಿದ್ದ ಪ್ರದಿ ನ ಶ್ರೀ ಹಾಗೆ ಬಿಟ್ಟು ಬಂದಿದ್ದು ಏಕೆ ?

4 ಫೋನ್ ಮಾಡುತ್ತಿದ್ದ ಹುಡುಗಿ ಯಾರು ?


ಇತ್ಯಾದಿಗಳಿಗೆ ಉತ್ತರ ಮುಂದಿನ ಭಾಗದಲ್ಲಿ ಕಾಯುತ್ತಿರಿ....

@ " ಅರ್ಪಣೆ " @

ದೇಶ ಕಾಯೋ ಯೋದರು
ನಮ್ಮ ಕಾಯೋ ದೇವರು
ಅವರನು ಹೆತ್ತ ತಂದೆ ತಾಯಂದಿರು
ದೇವರಿಗಿಂತಾ ದೊಡ್ಡವರು ||

ಎಷ್ಟೋ ಜನರ ಬಾಳು
ಇಂತಹುದೇ ಗೋಳು
ಇಂತಹ ದುಖಃದಿ ನೊಂದು ಬೆಂದವರಿಗೆ
ಈ ಕವನಾರ್ಪಣೆ ಮಾಡುವ ಬಯಕೆಯು ||


ತಪ್ಪಿದ್ದರೆ ತಿಳಿಸಿ.....


ಸುತ್ತಿ ಸುತ್ತಿ ಬರುತಲಿದೆ ಕಾಲಚಕ್ರವು
ಮತ್ತೆ ಮತ್ತೆ ಕಾಡುತಿದೆ ಪುತ್ರ ಶೋಕವು
ಅತ್ತು ಅತ್ತು ಸೋತಿದೆ ಹೆತ್ತ ಜೀವವು
ಎತ್ತ ಎತ್ತ ಸಾಗಿದರು ನೆನಪುಗಳು ಕಾಡುವವು ||

ಸ್ವತಂತ್ರ ಭಾರತ ಸುಭದ್ರ ದೇಶವು
ಶತ್ರು ರಾಷ್ಟ್ರಕೆ ನಮ್ಮಲಿ ಕೋಪವು
ನಮ್ಮಲಿ ಇರದ ಧರ್ಮ ಬೇಧವು
ಅವರಿಗೆ ಇಂದು ಬೇಕಿಹುದು ||

ದೇಶದ ಮೇಲಿನ ಭಕ್ತಿಯು ಹೆಚ್ಚಿ
ದೇಶವ ಕಾಯುವ ಕೆಲಸವ ಮೆಚ್ಚಿ
ಮಗನನು ಯೋಧನ ಕೆಲಸಕೆ ಹಚ್ಚಿ
ಕಾಡಿಹುದಿಂದು ನೆನಪುಗಳು ಮನವನು ಚುಚ್ಚಿ ||

ಅರಿಯ ರಾಷ್ಟ್ರದ ಕಪಟವ ಅರಿಯದೆ
ಗಡಿಯ ಕಾಯುತ ಮಡಿದನು ಅಂದೇ
ಇನಿಯನ ನೆನಪಲಿ ಇರುವಳವನ ಮಡದಿ
ರಾಷ್ಟ್ರದಿ ಸಿಗದಾಗಿದೆ ಸಾವಿಗೂ ಸಿಂಪತಿ ||

ದೇಶ ಭಕುತಿಯು ದೇಶಕೇ ಬೇಡವೇ ?
ಬ್ರಷ್ಟಾಚಾರವೇ ನಿಮ್ಮಯ ಊಟವೇ ?
ಜನರನು ಕಾಡುವ ಅಧಿಕಾರದ ತಾಪವೇ ?
ಇದು ನಿಜವಾಗಿಯೂ ಗಾಂದಿ ಜನಿಸಿದ ರಾಷ್ಟ್ರವೇ ? ||

ಇದನ್ನ ಹೇಳುತಿಹುದು ಹಣದಾಸೆಗೆಂದಲ್ಲ
ನಿಮ್ಮ ಮೊಸಳೆಗಣ್ಣಿನ ಸಂತಾಪವೂ ಬೇಕಿಲ್ಲ
ಸತ್ತ ಮಗನ ಶವವ ಕೊಡದ ನಿಮಗೆಲ್ಲ
ನಮ್ಮ ದುಗುಡದ ಮಾತು ಮನ ಮುಟ್ಟಲ್ಲ ||

Monday, 30 January 2012

ದ್ವೀಪದಲ್ಲಿ ದೀಪಧರ ಭಾಗ 3

ಇಷ್ಟೊತ್ತು ಓದಿದ್ದು ಬರೀ ಪರಿವಿಡಿ ಮಾತ್ರ ಮುಂದೆ ಓದೋದು ರಕ್ತಕಾರೋ ಯುದ್ದಕಾಂಡದ ಒಂದೊಂದು ಪುಟಗಳನ್ನ

ಓ ಶಾಕ್ ಆದ್ರಾ ಸುಮ್ನೆ ಪಿಲ್ಮ ಡೈಲಾಗ್ ನೆನಪಾಯಿತು ಹೇಳದೆ ಅಷ್ಟೆ. ಇರಿ ವಿಷ್ಯಕ್ಕೆ ಬರ್ತೀನಿ

ದೊಡ್ಡ ಹಾವು ಕಂಡಾಗ ಉಸಿರೇ ನಿಂತಿತ್ತು ನಮ್ಮ ದೀಪು ಶ್ರೀ ಇಬ್ರಿಗೂ. ಏನು ಮಾಡೋದು ಅಂತಾ ಗೊತ್ತಾಗ್ಲಿಲ್ಲ. ಆದರೆ ಹಾವು ಒಳ್ಳೆ ಮೂಡ್ ನಲ್ಲಿ ಇತ್ತು ಅನ್ಸುತ್ತೆ ಅಲ್ಲೆ ಪಕ್ಕದಲ್ಲಿ ಇದ್ದ ಬಂಡೆ ಸಂದಿಯಲ್ಲಿ ನುಸುಳಿ ಹೋಯಿತು. ಒಂದೆಡೆ ಆಶ್ಚರ್ಯ ಇನ್ನೊಂದೆಡೆ ಆತಂಕ ಅಂತೂ ಬದುಕಿದ್ವಿ ಅನ್ನೋ ಸಣ್ಣ ಸಂತೋಷ ಕೂಡ ಕಾಣಿಸ್ತು ಇಬ್ಬರಲ್ಲಿ. ಅಷ್ಟರಲ್ಲಿ ಮತ್ತೆ ಮೋಹಿನಿ ಫೋನ್ ಬಂತು. ಮೋಹಿನಿ ಅಂತ ಯಾಕೆ ಹೇಳ್ತಾಇದೀನಿ ಅಂತ ಯೋಚನೆ ಮಾಡ್ತಿದೀರ ಅಲ್ಲಿ ಸಿಗ್ನಲ್ ಇಲ್ಲದೇ ಫೋನ್ ಬರುತ್ತೆ ಸೋ ಮೋಹಿನಿ ಅಂತ ಹೇಳ್ದೆ ಅಷ್ಟೆ. ಫೋನ್ ಬಡ್ಕೊಂಡ ನಂತರ ಇಬ್ಬರೂ ಗಾಬರಿಯಿಂದ ಫೋನ್ ರಿಸೀವ್ ಮಾಡಿ ಸ್ಪೀಕರ್ ಆನ್ ಮಾಡ್ತಾರೆ ಆಗ ಅಲ್ಲಿಂದ " ಹಾಯ್ ಶ್ರಿ ಹಾಯ್ ದೀಪು ಅದು ನಿಗೂಡ ಗುಹೆ ಅಲ್ಲಿಂದ ತಪ್ಪಿಸ್ಕೋಬೇಕೆಂದ್ರೆ ಆ ಹಾವು ಹೋದ ದಾರೀಲಿ ಹೋಗಿ" ಅಂತ ಫೋನ್ ಕಟ್ ಆಯಿತು. ಫೊನ್ ಕಾಲ್ ನ ಸೂಚನೆಯಂತೆ ಅಲ್ಲಿನ ಬಂಡೆ ಸರಿಸಿ ಒಳಗೆ ಹೋಗೋಣ ಅಂತ ಇಬ್ಬರೂ ಮಾತಾಡಿಕೊಂಡು ಬಂಡೆನ ಸರಿಸಿಸೋಕೆ ಶುರುಮಾಡಿದ್ರು. ಹಾಗೇ ಯಶಸ್ವಿಯಾಗಿ ಬಂಡೆನ ಸರಿಸಿ ಗುಹೆಯ ಒಳಗೆ ಹೋದರು. ದಟ್ಟ ಕತ್ತಲು ಕಪ್ಪು ಗುಹೆ ಆಗಿದ್ದರಿಂದ ಮೊಬೈಲ್ ಟಾರ್ಚ ಆನ್ ಮಾಡಿದರು ಮೊಬೈಲ್ ನ ಮಂದಬೆಳಕಿನಲ್ಲೆ ಮುಂದೆನಡೆದರು. ಸಾಗುತ್ತಾ ಸಾಗುತ್ತಾ 2 ಕಿಲೋಮೀಟರ್ ಗಳಷ್ಟು ದೂರ ಬಂದರು ಅಲ್ಲಿ ಎದುರಿಗೊಂದು ನದಿ ಹರಿಯುತ್ತು ನದಿಯಲ್ಲಿ ಕೇವಲ ಮೊಣಕಾಲಷ್ಟು ಮಾತ್ರ ನೀರಿತ್ತು. ನೀರು ಸ್ಪೀಡಾಗಿ ಕೂಡ ಹರಿಯುತ್ತಿರಲಿಲ್ಲ. ಅಲ್ಪ ಸ್ವಲ್ಪ ಅಂಜುತ್ತಾ ಇಬ್ಬರೂ ನದಿ ದಾಟಿದರು. ಆಶ್ಚರ್ಯ ಏನಂದ್ರೆ ಮೈ ಕೊರೆಯುವ ಚಳಿ ಇದ್ದರೂ ನದಿಯಲ್ಲಿ ಸ್ನಾನಕ್ಕೆ ಕಾಯಿಸಿಟ್ಟ ಹದದಲ್ಲಿ ಬಿಸಿನೀರು ಹರಿತಾ ಇತ್ತು ಅದನ್ನ ಗಮನಿಸಿ ಇಬ್ಬರೂ ಒಮ್ಮೆ ದಂಗಾದರು. ಚೇತರಿಸಿಕೊಂಡು ಮುಂದಕ್ಕೆ ಸಾಗಿದರು. ಮುಂದೆ ಹೋದರೆ ದಾರಿ ಎರಡು ಕವಲಾಗಿತ್ತು. ಹಾಗೇ ಒಂದು ದಾರಿ ಸ್ವಲ್ಪ ಒದ್ದೆ ಇತ್ತು ನದಿ ನೀರಲ್ಲಿ ಒದ್ದೆಯಾದ ಹಾವು ಇದೇ ದಾರಿಲಿ ಹೋಗಿದೆ ಅಲ್ಲೆ ದಾರಿ ಸಿಗಬಹುದು ಅಂತ ಇಬ್ಬರೂ ಅದೇ ದಾರಿಲಿ ಮುಂದೆ ಹೊದರು. ಆದರೆ ಗುಹೆ ಸ್ವಲ್ಪ ದೂರ ಮಾತ್ರ ಇತ್ತು ಮುಂದೆ ದಾರಿ ಕಾಣದೆ ಚಿಂತಿಸತೊಡಗಿದರು ಆಗ ಶ್ರಿ ಹೇಳಿದ "ಹುಡುಕು ಏನಾದ್ರು ದಾರಿ ಇದ್ದೇ ಇರುತ್ತೆ ಯಾಕಂದ್ರೆ ಹಾವು ಇಲ್ಲಿಂದ ವಾಪಸ್ ಹೋಗಿಲ್ಲ ಸೊ ಟ್ರೈ ಮಾಡೋಣ ಸ್ವಲ್ಪ ಹುಡುಕೋಣ" ಓಕೆ ಅಂದ ಪ್ರದಿ. ಇಬ್ರೂ ಹುಡುಕೋಕೆ ಶುರು ಮಾಡಿದ್ರು ಅಷ್ಟರಲ್ಲಿ ಮೊಬೈಲ್ ಬ್ಯಾಟರಿ ಕಾಲಿಆಗಿ ಸ್ವಿಚ್ ಆಪ್ ಆಯಿತು ಸುತ್ತಲೂ ದಟ್ಟ ಕತ್ತಲು. ದಾರಿ ಹುಡುಕೋಣ ಅಂದರೂ ಗ್ರಹಚಾರ ಕೈ ಕೊಟ್ಟಿತು ಪಾಪ ನಮ್ಮ ಹುಡ್ಗರಿಗೆ ಆದರೆ ಕತ್ತಲಲ್ಲೂ ದಾರಿ ದೀಪ ಕಂಡಂತೆ ಒಂದು ಕಡೆ ಏನೋ ಬೆಳಕು ಕಂಡಿತು. ಹತ್ತಿರ ಹೋದ ಇಬ್ಬರೂ ಸ್ವಲ್ಪ ಮಣ್ಣು ಸರಿಸಿ ನೋಡಿದರೆ ಅದು ಅವರು ಹುಡುಕಿಕೊಂಡು ಬಂದಿದ್ದ ಹವಳವಾಗಿತ್ತು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಅಂತ ಖುಷಿ ಪಡ್ತಾ ಸಿಕ್ಕ 11 ಹವಳಗಳನ್ನೂ ಜೋಬಿಗಿಳಿಸಿ ಒಂದೊಂದು ಹವಳವನ್ನು ದಾರಿ ಕಾಣಲು ಕೈಲಿ ಹಿಡಿದು ಹಿಂದಕ್ಕೆ ಬರತೊಡಗಿದರು ಕವಲಾದ ದಾರಿಯ ಇನ್ನೊಂದು ಬದಿಗೆ ಸಾಗಿದಂತೆ ಬೆಳಕು ಕಾಣಲಾರಂಭಿಸಿತು. ಸೂರ್ಯ ಎಲ್ಲರಿಗೂ ಹಾಯ್ ಅಂತ ಮೇಲೆ ಬರುತ್ತಿದ್ದಿದ್ದೂ ಕಂಡಿತು.

ಅಸಾಧ್ಯವಾದದ್ದನ್ನ ಸಾಧಿಸಿ ಬಿಟ್ವಿ ಅಂತ ಇಬ್ರೂ ಖುಷಿಲಿ ಮೆರಿತಾ ಇದ್ರು ನೇರವಾಗಿ ತಮ್ಮ ಮುರಿದು ಬಿದ್ದಿದ್ದ ಟೆಂಟ್ ಬಳಿ ಹೋಗಿ ಬಟ್ಟೆ ಪ್ಯಾಕ್ ಮಾಡೋಕೆ ಶುರುಮಾಡಿದ್ರು. ಆಗ ಖುಷಿಯಿಂದ ಶ್ರಿ ಡೇರಿಮಿಲ್ಕ ಚಾಕ್ಲೇಟ್ ಕೊಟ್ಟು ಪ್ರದಿ ಅಂದ ಪ್ರದಿ ತಕೊಂಡು ತಿನ್ನೋಕೆ ಶುರುಮಾಡ್ದ "ನಾನು ಬೋಟ್ ಹತ್ರ ಇರ್ತೀನಿ" ಅಂತ ಶ್ರೀ ಅಲ್ಲಿಂದ ಹೊರಟ. ಇತ್ತ ಯಾಕೋ ಉಸಿರು ಕಟ್ಟಿದಂತಾಗಿ ಎದೆ ಹಿಡ್ಕೊಂಡು ಪ್ರದಿ ಕೆಳಗೆ ಬಿದ್ದ. ಶ್ರೀ ಬಂದು ನೋಡೋವಷ್ಟರಲ್ಲಿ ಉಸಿರು ನಿಂತಿತ್ತು. ಪ್ರದಿ is no more......

ಶ್ರೀ ಏನಾಯಿತು ಅಂತ ಗೊತ್ತಾಗದೇ ಬೋಟ್ ಗೆ ಹೋಗಿ ಬೋಟ್ ಸ್ಟಾರ್ಟ ಮಾಡಿ ಹೊರಟ ಸುಮಾರು ಅಂಡಮಾನ್ ಬಳಿ ಬಂದಿದ್ದ ಶ್ರಿ ಒಮ್ಮ ತಿರುಗಿ ಬೋಟ್ ನ ಡೆಕ್ ನೋಡಿದಾಗ ಶಾಕ್ ಆದ ಯಾಕಂದ್ರೆ ಡೆಕ್ ನ ಮೇಲೆ ನಮ್ಮ ಹಾವುಸ್ವಾಮಿ ಗೊರಕೆ ಹೊಡಿತಾ ಇತ್ತು. ಆದರೆ ಇವನ ಪುಣ್ಯ ಅಂತ ಕಾಣುತ್ತೆ ಅದಕ್ಕೆ ಎಚ್ಚರ ಆದ್ರೆ ಇವನ ಗತಿ.... ಅಂತೂ ಇಂತೂ ಜೀವ ಕೈಲಿ ಹಿಡ್ಕೊಂಡು ಸಮುದ್ರ ದಾಟಿ ಅಂಡಮಾನ್ ಗೆ ಬಂದು ಮುಟ್ಟಿದ. ಹಾವು ಎದ್ದರೆ ಕಷ್ಟ ಅಂತ ಬೋಟ್ ಸ್ಟಾರ್ಟ ಮಾಡಿ ಸಮುದ್ರಕ್ಕೆ ಬಿಟ್ಟ ಶ್ರೀ ಏರ್ ಪೋರ್ಟಕಡೆ ಧಾವಿಸಿದ. ಆದರೆ ತಾನು ತಂದ ಹವಳಗಳನ್ನ ಹೇಗೋ ಬೋಟ್ ನಲ್ಲೆ ಬಿಟ್ಟು ಬಿಟ್ಟಿದ್ದ.. ವಾಪಸ್ ಹೋಗೋಕೆ ಭಯ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬೆಂಗಳೂರಿಗೆ ಹೊರಟ. ಬೆಂಗಳೂರಿಗೆ ಬಂದು ಮನೆಯಲ್ಲಿ ಯಾರ್ ಜೊತೆನು ಮಾತಾಡದೇ ತಾರಸಿ ಮೇಲೆ ಹೋಗಿ ಉಯ್ಯಾಲೆ ಮೇಲೆ ಮಲಗಿದ. ಏನೇನೊ ಕಲ್ಪಿಸಿಕೊಂಡು ಸುಮ್ಮ ಸುಮ್ಮನೆ ಚೀರುತ್ತಾ ಇದ್ದ ಶ್ರೀ ನ ನೋಡಿ ಅವನ ತಂದೆ ದೆವ್ವ ನೋಡಿ ಹೆದರಿಕೊಂಡು ಬಂದಿರಬೇಕು ಮಂತ್ರವಾದಿ ಕರಸೋಣ ಅಂತ ಮಂತ್ರವಾದಿಗೆ ಫೋನ್ ಮಾಡಿದ್ರು. ಮಂತ್ರವಾದಿ 2 ದಿನ ಬಿಟ್ಟು ಬರ್ತೀನಿ ಅಂದ. ಆದರೆ ಇಲ್ಲಿ ವಿಷಯ ಗಂಭೀರವಾಗಿತ್ತು..

ಏನಂದ್ರೆ ಆಗ ಫೋನ್ ರಿಂಗ್ ಆಯಿತು. ಫೋನ್ ನೋಡಿ ಶ್ರೀ ಹೆದರಿ ಮೂಲೆ ಸೇರದ. ಶ್ರೀ ತಾಯಿ ಫೋನ್ ರಿಸೀವ್ ಮಾಡಿ ಶ್ರೀ ಗೆ ಕೊಟ್ಟಳು. ಅಲ್ಲಿಂದ " ಲೇ ಮಚ್ಚಾ ಏನೊ ಗಡತ್ತಾಗಿ ಪೋಟ್ ಕೊಂಡು ( ತಿಂದು ಕೊಂಡು ) ಮನೆಲಿ ಪಾಚ್ಕೊಂಡಿದೀಯಾ ಲೋ ಮಾತಾಡೋ ಮಗಾ" ಆ ದ್ವನಿ ಇನ್ನಷ್ಟು ಭಯ ಪಡಿಸ್ತು. ಅಷ್ಟರಲ್ರ ಶ್ರೀ ತಾಯಿ "ಶ್ರೀಗೆ ಏನೋ ಆಗಿದೆ ಬಂದಾಗಿಂದ ಗರ ಬಡಿದೋರ ತರ ಕೂತಿದಾನೆ ಏನ್ ನೋಡಿದ್ರೂ ಹೆದರಿಕೊಳ್ತಾನೆ ಏನ್ ಮಾಡೋದು ಅಂತಾನೆ ಗೊತ್ತಾಗ್ತಾ ಇಲ್ಲ"ಫೋನ್ ನಲ್ಲಿ ಹೇಳಿದ್ಲು. ಆಗ ಆ ವ್ಯಕ್ತಿ " ಹೆದರ್ಕೋಬೇಡಿ ಅಮ್ಮ ಎಲ್ಲಾ ಸರಿ ಹೋಗುತ್ತೆ ಏನೂ ತಲೆಗೆ ಹಚ್ಕೋಬೇಡಿ" ಅಂತ ಫೋನ್ ಕಟ್ ಮಾಡಿದ..
ಕಂಗಾಲಾಗಿದ್ದ ಶ್ರೀ ನ ಸಮಾಧಾನ ಪಡಿಸುತ್ತಾ ಅವನ ತಾಯಿ "ಯಾಕೊ ನಿನ್ನ ಫ್ರೆಂಡ್ ಕಾಲ್ ಗೆ ಇಷ್ಟೊಂದು ಹೆದರ್ತಾ ಇದಿಯಾ ಏನಾಯ್ತು ಅಂತ ಹೇಳೊ" ಅಂತ ಕೇಳಿದ್ಲು ಆದರೆ ಶ್ರೀ ಏನೂ ಮಾತಾಡ್ದೆ ತನ್ನ ರೂಮ್ ಗೆ ಹೋಗಿ ಬಾಗಿಲು ಹಾಕಿ ಚಿಲಕ ಹಾಕಿಕೊಂಡ.. ಹೀಗೆ ಎರಡು ದಿನ ಕಳೆದು ಮಂತ್ರವಾದಿ ಶ್ರೀ ಗೆ ಹಿಡಿದಿರೋ ಭೂತ ಬಿಡಿಸೋಕೆ ಶ್ರೀ ನ ತಂದೆ ಕರೆದುಕೊಂಡು ಬಂದ. ಮಂತ್ರವಾದಿ ಶ್ರೀ ನ ಬಳಿ ಬಂದು ನೀನು ಯಾರು ಅಂದ
ಅದಕ್ಕೆ ಉತ್ತರವಾಗಿ ಶ್ರೀ ತನ್ನ ಫೋನ್ ನಲ್ಲಿ ಇದ್ದ ಪ್ರದಿ ಫೋಟೋನ ತೋರಿಸ್ದ. ಯಾಕೆ ಬಂದಿದೀಯ ಅಂತ ಮಂತ್ರವಾದಿ ಕೇಳ್ದಾ. ಅದಕ್ಕೆ ಶ್ರಿ ತನ್ನ ಫೋನ್ ಗೆ ಪ್ರದಿ ಸೆಲ್ ನಿಂದ ಬಂದ ಮೆಸೇಜ್ ನ ತೋರಿಸ್ದ ಅದರಲ್ಲಿ I WILL KILL U ಅಂತ ಬರೆದಿತ್ತು. ಮೆಸೇಜ್ ಬಂದಿದ್ದ ಹತ್ತು ನಿಮಿಷದ ಹಿಂದೆ ಮಾತ್ರ. ಪುಷ್ಕರಣಿ ಎಂಬ ಪ್ರೇತಗಳ ಆವಾಸ ದ್ವೀಪದಲ್ಲಿ ಪ್ರದಿ ಸತ್ತು ಈಗಾಗಲೆ 2 ದಿನ ಕಳೆದಿದೆ ಅನ್ನೋದು ನೆನಪಿರಲಿ. ಮಂತ್ರವಾದಿ ಇದೆಲ್ಲ ಭೂತ ಅಲ್ಲ ಯಾರೋ ಹೆದರಿಸೋಕೆ ಮಾಡಿದಾರೆ ಅಂತ ಹೇಳ್ದ. ಅದಕ್ಕೆ ಶ್ರಿ ಪ್ರದಿ ಸತ್ತೋಗಿದಾನೆ ಅಂದ. ಆಗ ಶ್ರೀ ನ ತಂದೆ ಅವರು ಪುಷ್ಕರಣಿಗೆ ಹೋಗಿದ್ದ ವಿಷಯ ಹಾಗೂ ತಾನು ಮಗನಿಗೆ ತಾಯತ ಕಟ್ಟಿ ಕಳಿಸಿದ್ದೆ ಅದಕ್ಕೆ ಆತ ಬದುಕಿ ಬಂದ ಅಂತ ಹೇಳಿದ್ದು ಕೇಳಿ ಸ್ವಲ್ಪ ಅನುಮಾನ ಬಂತು ಪ್ರದಿ ಭೂತ ಆಗಿ ಶ್ರೀ ನ ಕಾಡ್ತಾ ಇರಬೇಕು ಅಂತ ಅಂದ್ಕೊಂಡು ಶ್ರೀ ಹಾಗೂ ಅವನ ಮನೆಗೆ ಅಷ್ಟದಿಗ್ಬಂದನ ಹಾಕಿದ ಆದರೆ ಆತನಿಗೇನು ಗೊತ್ತು ಪಾಪ...

ಮುಂದುವರಿಯುವುದು...

Sunday, 29 January 2012

ಕನಸೊಂದರಲ್ಲಿ

ಕಂಡೆ ನಾ ಕನಸೊಂದರಲಿ ಕನಸನ್ನ
ಅರಿಯೆ ನಾ ಬಣ್ಣಿಸಲಿ ಆ ಕನಸನ್ನ
ಊಹಿಸಲಾರೆನಾ ಪದತೋಚದೇ ಪರದಾಡೊ ಸ್ಥಿತಿಯನ್ನ
ಕನಸು ವಿನಾ ಕಾರಣ ಸೆಳುವುದೇತಕೆ ಮನಸನ್ನ

ಕನಸಲ್ಲಿ ಸುಳಿದವನೇಕ ನೆನಪುಗಳು ಸುತ್ತ
ಕಾಡುವುದಿಲ್ಲಿ ಕನಸುಗಳು ನೆನಪನ್ನ ಹೊತ್ತು
ಸಾಗುತಿದೆ ಆಸೆಗಳು ಕನಸಿನೂರಿನತ್ತ

ಒಂದೇ ಬಾವದ ನೆನಪುಗಳ ಕಂತೆ ಪೋಣಿಸುವಾಗ
ಸಂತೆಗಳಲಿ ಹೊಂಚು ಹಾಕಿದಂತೆ ಕನಸುಗಳಿರುವಾಗ
ನೆನಪಿನ ಆಸೆಗಳ ಮೂಟೆ ಹಂಚುವುದೇತಕೆ ಜೊತೆಗೆ
ಬರುವೆ ನಾ ನೆನಪಿನ ಕನಸಿನೂರಿಗೆ

Saturday, 28 January 2012

ಒಂದರಿಂದ ಹತ್ತು

ಒಂದುದಿನ ನಾನು
ಒಂದು ಸುಂದರಿಯ ಕಂಡೆ
ಒಂದು ಮಾತೂ ಆಡದೆ
ಒಂದೇ ನೊಟಕೆ ಸೋತೆ

ಎರಡು ಕಣ್ಣನು ತುಂಬುತ
ಎರಡು ಕಿವಿಯಲಿ ಗುಂಯ್ಗುಟ್ಟುತ
ಎರಡು ಕೈಯನು ಕೊಟ್ಟು ಹೋದೆಯಾ?
ಎರಡು ನಾಲಿಗೆಯಂತ ಮಾತು ಸರಿಯಾ?

ಮೂರು ಹೊತ್ತು ನಿನ್ನ ಸ್ಮರಣೆಯು
ಮೂರು ಶಬ್ದವ ಹೇಳೋ ಬಯಕೆಯು
ಮೂರು ಗಂಟನು ಕಟ್ಟುವಿಚ್ಚೆಯು
ಮೂರು ಅಕ್ಷರದ ಜೀವನ ಸಾಗಿಸುವಾಸೆಯು

ನಾಲ್ಕು ವೇದದ ಆಣೆ ಮಾಡದೆ
ನಾಲ್ಕು ಮಾತನೂ ಆಡದೆ
ನಾಲ್ಕು ಸಾಲಿನ ಪದ್ಯ ಬರೆದು
ನಾಲ್ಕು ಜನಮೆಚ್ಚುವಂತೆ ವರಿಸುವೆ

ಪಂಚ ಕೋಟಿ ತಾರೆಯಂದದಿ
ಪಂಚ ಇಂದ್ರಿಯವನ್ನ ಸೆಳೆಯುತ
ಪಂಚಾಂಮೃತದಂತ ಮಾತ
ಹೇಳಲು
ಪಂಚಾಂಗವ ಏತಕೆ ನೊಡುವೆ?

ಆರು ಋತುಗಳು ಎದುರು ನಿಂತರು
ಆರು ಜನರನು ಕರೆದು ತಂದರು
ಆರು ಅರಗಿನ ಮನೆಯ ಸುಟ್ಟರು
ಆರದಿರುವ ಪ್ರೇಮಜ್ಯೋತಿ ಕೊಡುವೆಯಾ

ಏಳು ಸಾಗರದಾಚೆ ನೀನಿರಲು
ಏಳು ಲೋಕದಿ ಯಾರು ತಡೆದರು
ಏಳು ಬಾರಿ ಭೂಮಿ ಬಿರಿದರು
ಏಳು ಹೆಜ್ಜೆಯ ತುಳಿಯುವಿಚ್ಚೆಯು

ಎಂಟು ಅಕ್ಷರ ಪ್ರೀತಿ ಮಾತನು
ಎಂಟು ಗಳಿಗೆ ಮೊದಲು ಹೇಳಲು
ಎಂಟು ದಿಕ್ಕುಗಳ ಕಣ್ಣ ತಪ್ಪಿಸಿ
ಎಂಟುದಳದ ಪುಷ್ಪವ ನಾ ಕೊಡುವೆ

ನವ ಶಕ್ತಿಯರ ಹಾರೈಕೆಯಿರಲು
ನವ ಗ್ರಹಗಳು ಕಾಟ ಕೊಟ್ಟರೂ
ನವ ವರುಷ ಬರುವ ಮೋದಲೆ
ನವರಸದಿ ರಂಜಿಸಿ ಮನದಿ ಅರ್ಚಿಸಿದೆ

ಹತ್ತು ಸುಂದರ ಕನಸ ಕಂಡೆನು
ಹತ್ತು ಸಾರಿ ಹೇಳಿ ಸೋತೆನು
ಹತ್ತು ಚರಣದ ಕವಿತೆ ಬರೆದೆನು
ಹತ್ತು ಬಾರಿ ಅತ್ತು ಕೂತೆನು

ನಿಲ್ಲದೋಡಿದ ಚಲುವೆ ನೀನು
ನಿನ್ನ ಹುಡುಕುತಿಹ ಪ್ರೇಮಿ ನಾನು


ಸಹಾಯ ಪ್ರದೀಪ ಹೆಗಡೆ

ಪ್ರೇಯಸಿ

ಸೊಂಪಾದ ನಿನ್ನ ಹೆರಳು
ತಂಪಾನಿಲ ಬೀಸಲು
ಮೆಲ್ಲನತ್ತಿತ್ತ ಹಾರಿತು
ನನ್ನ ಮನವದನ್ನ ಕಂಡಿತು
ಆಗ ಅದು ಪ್ರೀತಿಯಲಿ ಬಿತ್ತು

ನಯನದಿ ಮಂದಹಾಸ ಬೀರುತ
ಕುಡಿಗಣ್ಣ ನೋಟದಲೆ ನನ್ನ ಕೊಲ್ಲುತ
ತಿರುಗದೆ ಎಲ್ಲಿ ಸಾಗುತಿರುವೆ ಓಡುತಾ

ಮನದಲಿ ನೆನೆದಾಗ ನೆನಪಿನ ಮಯೂರ
ನನಗೆ ನೀ ಸಿಗದಾದಾಗ ಬಾಳೇ ಕಠೋರ
ಏನೇ ಆದರು ನನ್ನ ಪ್ರೀತಿ ಎಂದೂ ಅಮರ

Thursday, 26 January 2012

ಕಾಡುತಿರುವೆ ಹೀಗೆಕೆ

ಮನದ ನೆನಪಲ್ಲೇ ಉಸಿರಾಡಿ
ಬದುಕೆಲ್ಲವೂ ಬರಗಾಲಮಾಡಿ
ನೀ ಕಾಡುತಿರುವೆ ಹೀಗೆಕೆ

ಮನದಿ ಪ್ರೀತಿಯು ಅಲೆಯೆಬ್ಬಿಸಿ
ಎದೆಯೆಲ್ಲಿ ಕೊಲಾಹಲ ಸೃಷ್ಟಿಸಿ
ನೀ ಕಾಡುತಿರುವೆ ಹೀಗೆಕೆ

ತಂಗಾಳಿಯೇ ಬಿಸಿಯಾಗಿದೆ
ನೋವಿಂದು ಅತಿಯಾಗಿದೆ
ನೀ ಕಾಡುತಿರುವೆ ಹೀಗೇಕೆ

ಪಾನಿಪುರಿಯಂಗಡಿ

ದಾರಿಯಲ್ಲಿ ಕಂಡಿತು ತಳ್ಳುವ ಗಾಡಿ
ಅದು ಮಾಡಿತು ಏನೋಮೋಡಿ
ನೀರೂರಿತು ಅದನ್ನ ನೋಡಿ
ಯಾಕಂದರೆ ಅದು ಪಾನಿಪುರಿಯಂಗಡಿ

ಬಳಿಗೆ ಹೋಗಿ ನಿಂತೆ ನಾನು
ಏಷ್ಟು ಬೇಕೆಂದು ಕೇಳಿದ ಅವನು
ಮಾಡಲು ಹೇಳಿದೆ ಬಟ್ಟಲು ಎರಡುನ್ನು
ತಯಾರಿಸಿದ ಬಿಸಿಬಿಸಿಯಾಗಿ ಅವನು

ನೋಡುವಾಗಲೆ ಬಾಯಲ್ಲಿ ಬಂತು ನೀರು
ತಿಂದಾಗ ಕಣ್ಣಲ್ಲೂ ಬಂತು ನೀರು
ಆಗಿತ್ತು ಅದು ತುಂಬಾ ಖಾರ
ಮಾಡಿತು ಅದು ನನ್ನೊಂದಿಗೆ ಸಮರ

ಸಹಿಸಲಾಗದೆ ಸ್ವಲ್ಪ ಸಿಹಿಯ ಹಾಕಿಸಿಕೊಂಡೆ
ಸಿಹಿಯಾದ ಪಾನಿಪುರಿ ಬಾಯೊಳು ನಗುವುದಕಂಡೆ
ಎರಡು ಬಟ್ಟಲ ಗಬಗಬನೆ ತಿಂದೆ
ಅವನಲ್ಲಿ ಮತ್ತೊಂದು ಬೇಕು ಎಂದೆ

ನನ್ನಲಿ ಹಣದ ಕೊರತೆ ಅಂದು ಇತ್ತು
ಹಿಂತಿರುಗಿ ಬಂದೆ ಆತನಿಗೆ ಇಪ್ಪತ್ತು ರೂಪಾಯಿಯಿತ್ತು
ನೆನಪಾಗುತ್ತಲೇ ಇತ್ತು ಪಾನಿಪುರಿ ಗಮ್ಮತ್ತು
ಇಂದು ಏರಿತು ಅದರ ನೆನಪಿನ ಮತ್ತು

ನೆನಪುಗಳು

ನೀನು ದೂರ ಹೋದಾಗ
ಜೇನು ಕಚ್ಚಿ ಹಾರಿದಂತೆ
ನಿನು ಕನಸಲಿ ಬಂದಾಗ
ತುಂಟ ಲಜ್ಜೆ ಕೆಣಕುವಂತೆ
ನಿನ್ನ ನೆನಪುಗಳು ಕವಿದಾಗ
ತುಟಿಯ ಬಿಚ್ಚಿ ಹಾಡಿದಂತೆ
ನೀನು ಮೆಲ್ಲನೆ ನಡೆವಾಗ
ಕಾಲ ಹೆಜ್ಜೆ ಕುಣಿಯುವಂತೆ

ನೀನು ಮಾತನಾಡುವಾಗ
ವಸಂತದ ಕೋಗಿಲೆಂತೆ
ನೀನು ಓಡುವುದು ಕಂಡಾಗ
ಮಯೂರವು ನಾಚಿತಂತೆ
ನೀನು ನಗುತಿರುವಾಗ
ಮುಗಿಲುಕರಗಿ ಮಳೆಯಾಯಿತಂತೆ
ನೀ ಮುಂದೆ ಸಾಗುವಾಗ
ಹಿಂತೆ ಬರುವರು ಎಲ್ಲ ಹುಚ್ಚರಂತೆ
ಒಮ್ಮೆ ನೋಡೆಯಾ ತಿರುಗಿ
ಎಂಬುದೇ ನನ್ನ ಚಿಂತೆ

ಹೆಣ

ಶ್ವೇತ ವಸ್ತ್ರವ ಹೊದೆಸಿರಲು
ನಾಸಿಕದೊಳು ಹತ್ತಿ ಇಟ್ಟಿರಲು
ಕರೆವರು ಅದನ್ನು ಹೆಣವೆಂದು

ಎದುರಲಿ ಮಡಿಕೆಯೊಳು ಕೆಂಡ ತುಂಬಿರಲು
ಬಿದಿರ ರಥದೊಳು ಹಾಯಾಗಿ ಮಲಗಿರಲು
ಕರೆವರು ಅದನ್ನು ಹೆಣವೆಂದು

ಅಕ್ಕಿಯ ಕಾಳು ಬಾಯೊಳು ಇರಲು
ಹೆಕ್ಕಲು ಚಿಲ್ಲರೆ ಬದಿಯಲಿ ಚೆಲ್ಲಿರಲು
ಕರೆವರು ಅದನ್ನು ಹೆಣವೆಂದು

ಬೆರಳನು ಜೋಡಿಸಿ ದಾರವ ಕಟ್ಟಿರಲು
ಸಂಬಂಧಿಗಳು ಅಳುತ ಕುಳಿತಿರಲು
ಕರೆವರು ಅದನ್ನು ಹೆಣವೆಂದು

ಸುಡಲೆಂದು ಅಗ್ನಿದೇವನು ಕಾದಿರಲು
ಗಂಗೆಯು ಶುದ್ಥವ ಮಾಡಿರಲು
ಭಸ್ಮವಾಗುತಿರುವ ಅದನ್ನು ಹೆಣವೆನ್ನುವರು

Wednesday, 25 January 2012

ಊಟ

ಊಟಕ್ಕೆ ಕೂತಾಗ
ಸಾಂಬಾರು ತಂದಾಗ
ಬಿಸಿಯಾಗಿ ಇದ್ದಾಗ
ಬಾಯ್ಸಟ್ಟು ಹೋಯಿತೀಗ||

ಅಡುಗೆಯ ನೋಡುವಾಗ
ವಿಧ ವಿಧ ತರ ಇರುವಾಗ
ಸಿಹಿತಿನಿಸು ಕಂಡಾಗ
ಬಾಯ್ನೀರು ಬಂದಾಗ
ಜಾಮೂನು ಕರೆದಾಗ
ರುಚಿನೋಡ ಹೋದಾಗ
ಮನತಡೆಯದೆ ಇರುವಾಗ
ತಿನಲು ಬಾಯೀ ತೆರೆದಾಗ
ಬಂದೆಯ ತಿನ್ನಲು ಜಾಂಗೀರ||

ಜೇನಂತ ಜಾಂಗೀರಲ್ಲಿ
ಸಿಹಿಯಾದ ತಿಂಡಿಲಿ
ಸವಿತಿನ್ನೋ ಆಸೇಲಿ
ಶುಗರಿರೋದು ನೆನಪಿರಲಿ
ಊಟವಿದು ಹಗಲಲ್ಲಿ
ಇರುವುದೇ ತಿನಿಸು ರಾತ್ರೀಲಿ
ಇಲ್ಲವಾದಲ್ಲಿ ನೋವೆಲ್ಲಿ ನಲಿವೆಲ್ಲಿ
ಹೇಳಬಾರದಿತ್ತು ಈ ವಿಷಯ ನಿನ್ನಲ್ಲಿ
ಬಾಬಾರೊ ಮಿತ್ರ ನಾನಿರೋದು ಛತ್ರ||

ಮದ್ವೇಯ ಛತ್ರದಲ್ಲಿ
ಮದ್ಯಾನ್ಹ ಊಟದಲ್ಲಿ
ಸಿಹಿತಿನಿಸು ಸಿಹಿಯಾಗಿ
ಅಡುಗೇಯು ರುಚಿಯಾಗಿ
ತಿನಿಸೆಲ್ಲ ಬರಿದಾಗಿ
ಮತ್ತೊಮ್ಮೆ ರೆಡಿಯಾಗಿ
ಕನಸಲ್ಲು ನೆನಪಾಗಿ
ನಿದ್ರೇಯು ಬರದಾಗಿ
ಬಿಸಿಯಿರಲಿ ತಂಪಿರಲಿ
ಸಿಹಿಯಿರಲಿ ಕಹಿಯಿರಲಿ
ತಿನ್ನುವಷ್ಟು ತಿನ್ನೋಣ ಬಾರಾ||

ಊಟಕ್ಕೆ ಕೂತಾಗ
ಸಾಂಬಾರು ತಂದಾಗ
ಬಿಸಿಯಾಗಿ ಇದ್ದಾಗ
ಬಾಯ್ಸಟ್ಟು ಹೋಯಿತೀಗ||

ನಿನಗಂದು ಮರುಳಾದೆನು

ಜುಮು ಜುಮು ಚಳಿಯಲಿ
ಬಿಸಿ ಬಿಸಿ ಬಯಕೆಯಲಿ
ಹಸಿ ಹಸಿ ಕನಸುಗಳಲಿ
ಮಾಸಿ ಹೋಗದ ನಿನ್ನ ನೆನಪಲಿ
ಬರೆಯುತಿರುವೀ ಕವೆತೆಯಲಿ

ಮುಂದೆ ಬಾಗುತ ಅತ್ತಿತ್ತ ಹಾರುತ
ಆಗಾಗ ನಾಚುತ ಪುನಃ ಪುನಃ ನೋಡುತ
ಬಂದು ಬಂದು ಮುತ್ತನು ಕೊಡುತಿಹ
ನಿನ್ನ ಮುಂಗುರುಳಾಂದಕೆ ನಾ
ನಿನಗಂದು ಮರುಳಾದೆನು

ಚಿಲಿಪಿಲಿ ಕಲರವದ ನಡುವಲಿ
ಬೆಚ್ಚನೆಯ ಬಿಸಿಯುಸಿರ ಜೊತೆಯಲಿ
ಮನದಿಚ್ಚೆಯಂತೆ ನೀ ಹಾಡುತಿರುವ
ಮೌನರಾಗವನು ಕೇಳುತಲಿ ನಾನು
ನಿನಗಂದು ಮರುಳಾದೆನು

ಬೆಳ್ಳಂಬೆಳಗ್ಗೆ ಬಾನಂಚಲ್ಲಿ
ಮುಗಿಲ ಸಾಲನು ಸೀಳಿ ಬರುತಿಹ
ಸೂರ್ಯರಷ್ಮಿಯ ಬೆಳಕಂತಾ
ನಿನ್ನ ನಗುವ ಕಂಡು ನಾನು
ನಿನಗಂದು ಮರುಳಾದೆನು

ಲತೆಗಳೆಲ್ಲ ಗಾಳಿಗಲುಗಾಡಿದಂತೆ
ನಿನ್ನ ನಡಿಗೆಯ ಕಂಡೆ ನಾನು
ಮುಂಗಾರಲ್ಲಿ ಕಾರ್ಮೋಡ ಕವಿದಾಗ
ಸುರಿವ ಮಳೆಯಂದೆ ಸುರಿಸು ನೀ
ನನಗಿಂದು ಪ್ರೇಮಾಮೃತವನು

ಒಮ್ಮೆ ಬಾರೆ

ಮಿಂಚಿ ಮರೆಯಾಗುವ ಚೆಲುವೆ ನಿನ್ನ
ಅಂಚೆ ವಿಳಾಸವನಾದರೂ ತಿಳಿಸೆ
ಮುಂಚಿನಿಂದಲೂ ಹೇಳ ಬಯಸಿಹೆ
ಕೊಂಚ ಕಡಿಮೆ ಧೈರ್ಯ ನನಗೆ

ಹೃದಯ ವೀಣೆಯೊಳು
ಮೌನರಾಗ ಮೀಟಿದೆ
ಇಂಪಾದ ರಾಗಕ್ಕೆ
ತಂಪಾಗಿ ಒಮ್ಮೆ ಬಾರೆ

ಸೊಂಪಾದ ಕಂಠದಿಂದ
ಮಂಪರು ಬರಿಸಿದ
ಕಂಪನು ಸೂಸುತ ಪ್ರೇಮದಿ
ಚಂಪಾ ನೀ ಬಾರೆ

ನನ್ನಾ ಕವನಕೆ ಪಲ್ಲವಿಯಾದಂತೆ
ಚರಣಕೊಂದು ಪ್ರೀತಿ ಭಾವ ನೀಡೆ
ತಾಳ ತಪ್ಪುವುದರೊಳಗೆ ನನ್ನ ತಪ್ಪ ತಿಳಿಸೆ
ಹಾಳು ಮನಸಿನ ಪ್ರೇಮದಾಸೆಯ ಉಳಿಸೆ

ಪ್ರೇಮ ಜ್ಯೊತಿ

ಬಾಳ ಪಯಣದಿ ಕೈಯ ಹಿಡಿಯದೆ
ಹಾಳು ಹೃದಯದಿ ಪ್ರೀತಿ ತುಂಬಿದೆ
ಆಳು ಎನ್ನುತ ದೂರ ತಳ್ಳಿದೆ
ಹೇಳು ನಿನ್ನಲಿ ಕರುಣೆ ಇಲ್ಲವೆ

ಉಸಿರು ನೀನೆಂದು ತಿಳಿದ ಪ್ರೇಮವ
ಹಸಿರು ಮಾಡು ಓ ನನ್ನ ಚಲುವೆ
ಕೆಸರಲ್ಲೆ ಕಮಲ ಬೆಳೆವುದು
ಪೆಸರ ಪೇಳಿ ಪ್ರೇಮ ಬೆಳೆಸೆ

ಕೋಟಿ ತಾರೆಯ ಅಂದವು ನಿನ್ನದು
ಸಾಟಿ ಯಾರೂ ಇಲ್ಲದಂದವು
ಸಹಪಾಠಿಯಾಗು ಬಾ ನಿ ಬಾಳಲಿ
ದೀವಟಿಯಾಗಿ ಪ್ರೀತಿ ಬೆಳಗೆಲೆ

ನನ್ನ ಕಲ್ಪನೆ

ಭೂರಮೆಯ ರಮಿಸಲೆಂದು
ನೇಸರನು ಭಾನರಥವೇರಿ ಬಂದು
ಭುವಿಗೆ ತಲೆಭಾಗಿ ನಿಂದು
ಪ್ರೇಮ ಭಿಕ್ಷೆಯ ಕೋರಲು
ನಗುನಗುತಾ ಇಳೆ ಒಲ್ಲೆಯೆಂದಳು

ಮನನೊಂದ ದಿನಕರನು ಸೋದರನ ಕರೆದು
ನಡೆದ ವಿಷಯವನರುಹಿ ಅಳಲು
ಅಗ್ರಜನ ಸಂತೈಸಿ ಹೇಳಿದ ಚಂದಿರ
"ಪ್ರೀತಿ ಪ್ರೇಮವ ನಂಬದಿರು ಸೋದರ
ಅದು ಕಳೆದುಕೊಂಡಿದೆ ನೈಜ ಆಕಾರ"

ಇತ್ತ ಅತ್ತಿತ್ತ ನೋಡುತ್ತಿದ್ದ ಇಳೆಯು
ಶಶಿಯ ರೂಪರಾಶಿಯನು ಕಂಡಳು
ತಿಂಗಳಾಂದಕೆ ಮನಸೋತು ಕೂಗಿ ಕೇಳಿದಳು
"ನಿನ್ನ ಪ್ರೇಮವ ಬಯಸುತಿರುವೆನು ನಾ
ನಿನ್ನ ಉತ್ತರಕೆ ಉತ್ತರದಿ ಕಾದಿರುವೆನು ನಾ"

ಒಮ್ಮೆ ಚಂದಿರನತ್ತಿತ್ತ ನೋಡಲು
ರವಿಯ ಕಣ್ಣೀರಿಂದ ತುಂಬಿತ್ತು ಕಡಲು
ಪ್ರೀತಿ ಬೇಡವೆಂದಿತು ಮನದ ಒಡಲು
ಆದರೂ ಕೇಳದೆ ಸಿಡಿಯಿತು ಪ್ರೀತಿಯಾ ಸಿಡಿಲು
ಸೇರಬೇಕೆನಿಸಿತು ಧರೆಯಾ ಮಡಿಲು

ಉತ್ತರವ ತಿಳಿಸದೇ ಉಳಿದನು ಚಂದಿರ
ಸೋದರನ ಮೆಚ್ಚಿದನು ಧಿನಕರ
ಸ್ನೇಹಿತೆಯಾಗೆ ಉಳಿದಳು ವಸುಂಧರ
ತುಂಬುತಿದೆ ಇಂದಿಗೂ ಅವರ ಸ್ನೇಹ ಭಂಡಾರ
ಇದನ್ನ ಕಲ್ಪನೆಯೊಳು ಕಂಡ ನಾನು 'ಭಾಸ್ಕರ'

Tuesday, 3 January 2012

ಭಾಗ 2 ದ್ವೀಪದಲ್ಲಿ ದೀಪಧರ



ರಾತ್ರಿ ಇಬ್ಬರೂ ಗಡಗಡ ನಡುತ್ತಾ ಇದ್ರು ಎಷ್ಟು ಚಳಿ ಇತ್ತು ಅಂದರೆ ಹಿಮದಮೇಲೆ ಮಲಗಿದ ಹಾಗೆ ಇತ್ತು. ಚಳಿಲೂ ನಡುಗುತ್ತಾ ಸುಖನಿದ್ರೆನ ಕಷ್ಟಪಟ್ಟು ಮಾಡ್ತಾ ಇದ್ರು. ಆಗ ಇದ್ದಂತೆ ಚಳಿ ಜಾಸ್ತಿ ಆಯಿತು. ನಮ್ಮ ದೀಪು ಎದ್ದು ಬೆಂಕಿಬಳಿ ಹೋಗಿ ಕುತ್ಕೊಂಡ. ಗಡಗಡ ನಡುಗುತ್ತಾ ಇದ್ದಾಗ ಇದ್ದಕ್ಕಿದ್ದಂತೆ ಮೊಬೈಲ್ ಜೋಬಿನಲ್ಲಿ ಡಾನ್ಸಮಾಡೋಕೆ ಶುರು ಮಾಡ್ತು. ಹೇಳೋಕೆ ಮರ್ತಿದ್ದೆ ದೀಪುಗೆ ಮೊಬೈಲ್ ನ ವೈಬ್ರೇಷನ್ ನಲ್ಲಿ ಇಡೋ ದೊಡ್ಡ ಕಾಯಿಲೆ ಇತ್ತು. ಇದ್ದಕ್ಕಿದ್ದಂತೆ ಮೊಬೈಲ್ ಕರೆಯುತ್ತಾ ಇರೋದು ನೋಡಿ ದೀಪು ಜೋಬಿಂದ ಎತ್ತಿ ನೋಡ್ತಾನೆ ಒಂದು ಫೋನ್ ಬರ್ತಿದೆ. ಸಿಗ್ನಲ್ ಇಲ್ಲ ಒಂದುಕ್ಷಣ ಗಾಬರಿಯಾದ ದೀಪು ಚೇತರಿಸ್ಕೊಂಡು ಕಾಲ್ ರಿಸೀವ್ ಮಾಡ್ದಾ ಅಲ್ಲಿಂದ ಒಂದು ಇಂಪಾದ ಹುಡುಗಿಯ ದ್ವನಿ "hai sweet heart how r u? ಓ ಚೆನ್ನಾಗಿದ್ದೀಯ ಅಂತ ಗೊತ್ತು ಆದರೆ ಮುಂದೆ ಇರೋಕೆ ಆಗಲ್ಲ ನಿನಗೆ ನೀನೇ ಶತ್ರು ನೆನಪಿರಲಿ ಆದಷ್ಟು ಬೇಗ ಇಲ್ಲಿಂದ ಹೊರಟುಹೋಗು ಇಲ್ಲಾಂದ್ರೆ ನಿನ್ನ ಸಾಯಿಸಿಬಿಡ್ತಾರೆ i want to help u but i cant because" ಅಂತ ಕಾಲ್ ಕಟ್ ಆಯಿತು ಗಡಗಡ ಚಳಿಲೂ ಕಾವೇರಿ ನೀರಿನ ತರ ಬೆವರು ದೀಪು ಮೈನಿಂದ ಹರಿಯೋಕೆ ಶುರುವಾಯ್ತು. ನಂಬರ್ ಗೆ ತಿರುಗಿ ಕಾಲ್ ಮಾಡೋಣ ಅಂದ್ರೆ ನೆಟ್ ವರ್ಕ್ ಇಲ್ಲ ಬಾಯಿ ತೊದಲೋಕೆ ಶುರವಾಯಿತು ಶ್ರೀ ಅಂತ ಜೋರಾಗಿ ಕಿರುಚಿದ ನಿದ್ದೆ ಮಾಡ್ತಿದ್ದ ಶ್ರಿ ನಿದಾನ ಎದ್ದ.
ಕಣ್ಣುಜ್ಜಿಕೊಳ್ಳುತ್ತಾ "ಏನೋ ನಿನ್ ಕಾಟ ನಿದ್ರೆ ಮಾಡೋಕು ಬಿಡಲ್ವಲ್ಲೊ" ಅಂದ ದೀಪು ಆಗ ಕಾಲ್ ಸಮರಿ ತೋರಿಸಿ ವಿಷ್ಯ ಎಲ್ಲಾ ಹೇಳ್ದಾ. ಶ್ರೀಗೂ ಭಯ start ಆಯಿತು ಆದ್ರೂ ದೈರ್ಯ ತಂದಕೊಂಡು "network ಇಲ್ಲದೇ ಕಾಲ್ ಹೇಗೊ ಬರುತ್ತೆ ಸುಮ್ನೆ ಹೆದರ್ಕೊಬೇಡ ಸುಮ್ನಿರು ಅಂದ" ಅಷ್ಟರಲ್ಲಿ ಇವರು ಮಲಗಿದ್ದ ಜಾಗದ ಮೇಲೆ ಮರ ಮುರಿದು ಬಿತ್ತು. ಆಗ ದೀಪು "oh my god ಲೇ ನೋಡು ಅಲ್ಲಿ ನಾವೇನಾದ್ರು ಮಲಗಿದ್ರೆ ಏನಾಗ್ತಿತ್ತು ಅಂತ ಪುಣ್ಯ ಬಚಾವಾದ್ವಿ ಜೈ ಮಂಕಾಳಮ್ಮ" ಅಂದ ಆಗ ಸರಿಯಾಗಿ 12 ಗಂಟೆ ಟೈಂ. ಹುಣ್ಣಿಮೆ ಚಂದ್ರ ಪಳಪಳ ಹೊಳಿತಾ ಇದ್ದ ಹಾಗಾಗಿ ಬೆಳಕು ಬೇಕಾಡಷ್ಟು ಇತ್ತು. ಮರ ಎತ್ತಿ ಟೆಂಟ್ ಸರಿಮಾಡ್ಬೇಕು ಅಂತ ಹೋಗಿ ಮರ ಎತ್ತೋಕೆ ಶುರುಮಾಡಿದ್ರು. ಆಗ ಮರದಲ್ಲಿದ್ದ ಜೇನುಹುಳ ಕಚ್ಚೋಕೆ ಬಂತು. ಅದನ್ನ ನೋಡಿ ಇಬ್ಬರೂ ಓಡೋಕೆ ಶುರು ಮಾಡಿದ್ರು ಇಬ್ಬರೂ ಬೇರೆ ಬೇರೆಕಡೆ ಓಡಿದ್ರು. ಓಡ್ತಾ ಓಡ್ತಾ ಶ್ರಿ ಒಂದು ಹೊಂಡದೊಳಗೆ ಬಿದ್ದ. ಇತ್ತ ದೀಪು ಒಂದು ಗಾರ್ಡನ್ ಗೆ ಬಂದ. ಗಾರ್ಡನ್ ನಲ್ಲಿ ಬೇಕಾಡಷ್ಟು ಹೂ ಹಣ್ಣಿನ ಗಿಡ ಇತ್ತು. ನೋಡ್ತಾ ನೋಡ್ತಾ ಒಂದು ಅಣಬೆ ( ನಾಯಿಕೊಡೆ ) ಮೇಲೆ ಕಾಲಿಟ್ಟ. ಆಗ ಕರಂಟ್ ಶಾಕ್ ತರ ಶಾಕ್ ಹೊಡಿತು ಒಂದು ಸಲ ಮೈ ಕೊಡವಿಕೊಂಡು ಮತ್ತೆ ಆ ಅಣಬೆ ಹತ್ರ ಹೋಗಿ ಕೈಲಿ ಮುಟ್ಟಿದ ಆಗ್ಲೂ ಶಾಕ್ ಹೊಡಿತು. ಏನಪ್ಪಾ ಆಶ್ಚರ್ಯ ಅಣಬೆ ಶಾಕ್ ಹೊಡೆಯುತ್ತೆ ಅಂತ ಯೋಚನೆ ಮಾಡ್ತಾ ಇದ್ದಾಗ ಮತ್ತೆ ಪೋನ್ ಜುಮ್ ಜುಮ್ ಅನ್ನೋಕೆ ಶುರುವಾಯ್ತು.
ಮತ್ತೆ ಭಯದಿಂದ ಕಾಲ್ ರಿಸೀವ್ ಮಾಡ್ದ ಆಗ "hello dear ಆ ಅಣಬೆನಲಿ ಇಲೆಕ್ಟ್ರಾನ್ಸ ಇದೆ ಹಾಗಾಗಿ ನೀನು ಮುಟ್ಟಿದ್ರೆ ಶಾಕ್ ಹೊಡೆಯುತ್ತೆ. ನೀನು ಮೋದಲನೇದಾಗಿ ಈ ದ್ವೀಪಕ್ಕೆ ಬಂದು ತಪ್ಪು ಮಾಡ್ದೆ ಇಲ್ಲಿ ಎಲ್ಲಾ ಇದೆ ಆದ್ರೆ ಮಾನವರಿಲ್ಲ ಹಾಗೆ ನಿನ ಎಡಗಡೆ ಕಾಣ್ತಾಇರೊ ಮಾವಿನ ಮರ ನರಭಕ್ಷಕ ಅದು ಅದು" ಅಂತ ಪೋನ್ ಕಟ್ ಆಯಿತು ಅಷ್ಟರಲ್ಲಿ ಗಾಳಿಗೆ ಆ ಮಾವಿನ ಮರ ಅಲ್ಲಾಡೋಕೆ ಶುರುವಾಯ್ತು. ಅದನ್ನ ನೋಡಿ ಭಯಪಟ್ಟ ದೀಪು ಅಲ್ಲಿಂದ ಓಡೋಕೆ ಶುರು ಮಾಡ್ದ. ಓಡ್ತಾ ಓಡ್ತಾ ಶ್ರೀ ಬಿದ್ದಿದ್ದ ಹೊಂಡದಲ್ಲಿ ಬಂದು ಬಿದ್ದ. ಶ್ರೀ ಹೇಳ್ದ "ನೀನು ಬಿದ್ಯಾ ಮೇಲಕ್ಕೆ ಹೋಗೋಕೆ ದಾರಿನೇ ಇಲ್ಲ ಏನೊ ಮಾಡೋದು ಇವಾಗ" ಅಂದ ಜೋರಾಗಿ ಉಸಿರು ಬಿಡುತ್ತಾ ದೀಪು ಹೇಳ್ದಾ "ಏನಾದ್ರೂ ದಾರಿ ಇದ್ದೇ ಇರುತ್ತೆ ಕಣೋ" ಅಂತ ಹೇಳ್ತಾ ಇದ್ದಾಗ ಒಂದು ನಾಗರಹಾವು ಬುಸ್ ಅಂತು 12 ಅಡಿ ಉದ್ದ ಅಗಲ ಆಳ ಇರೋ ಹೊಂಡದಲ್ಲಿ 10 ಅಡಿ ಉದ್ದದ ಹಾವು ಕಂಡು ಇಬ್ಬರ ಉಸಿರು ನಿಲ್ಲೋದು ಮಾತ್ರ ಬಾಕಿ ಇತ್ತು ಹಾವು ಆಪ್ತರಕ್ಷಕ ಪಿಲ್ಮನಲ್ಲಿ ಇರೊ ಹಾವಿನ ತರ ಇತ್ತು. ಇವರ ಪುಣ್ಯಾನೊ ಅಥವಾ ಆ ಹಾವಿಗೆ ಒಳ್ಳೆ ಬುದ್ದಿ ಇತ್ತೋ ಗೊತ್ತಿಲ್ಲ ಅಲ್ಲೆ ಪಕ್ಕದ ಬಂಡೆ ಒಳಗೆ ನುಸುಳಿ ಹೊಯಿತು ಬರೋಬರಿ 5 ಅಡಿ ಅಷ್ಟು ದಪ್ಪದ ಹಾವು ಏನೂ ಮಾಡದೆ ಬಿಟ್ಟಿದ್ದು ಆಶ್ಚರ್ಯಕರವಾಗಿತ್ತು ಇಬ್ಬರಿಗೂ ನಾವೇನ್ ಕನಸು ಕಾಣ್ತಾಇದ್ದೀವೇನೋ ಅನ್ನೊವಷ್ಟು ಆಶ್ಚರ್ಯ ಅಷ್ಟರಲ್ಲಿ ಮತ್ತೆ ಪೋನು ಜಿಂಗ್ ಚಕ್ ಜಿಂಗ್ ಚಕ್ ಅಂತ ದೀಪುಮತ್ತೆ ಭಯದಿಂದ ಕಾಲ್ ರಿಸೀವ್ ಮಾಡ್ದ ಆಗ "hello dear ಆ ಅಣಬೆನಲಿ ಇಲೆಕ್ಟ್ರಾನ್ಸ ಇದೆ ಹಾಗಾಗಿ ನೀನು ಮುಟ್ಟಿದ್ರೆ ಶಾಕ್ ಹೊಡೆಯುತ್ತೆ. ನೀನು ಮೋದಲನೇದಾಗಿ ಈ ದ್ವೀಪಕ್ಕೆ ಬಂದು ತಪ್ಪು ಮಾಡ್ದೆ ಇಲ್ಲಿ ಎಲ್ಲಾ ಇದೆ ಆದ್ರೆ ಮಾನವರಿಲ್ಲ ಹಾಗೆ ನಿನ ಎಡಗಡೆ ಕಾಣ್ತಾಇರೊ ಮಾವಿನ ಮರ ನರಭಕ್ಷಕ ಅದು ಅದು" ಅಂತ ಪೋನ್ ಕಟ್ ಆಯಿತು ಅಷ್ಟರಲ್ಲಿ ಗಾಳಿಗೆ ಆ ಮಾವಿನ ಮರ ಅಲ್ಲಾಡೋಕೆ ಶುರುವಾಯ್ತು. ಅದನ್ನ ನೋಡಿ ಭಯಪಟ್ಟ ದೀಪು ಅಲ್ಲಿಂದ ಓಡೋಕೆ ಶುರು ಮಾಡ್ದ. ಓಡ್ತಾ ಓಡ್ತಾ ಶ್ರೀ ಬಿದ್ದಿದ್ದ ಹೊಂಡದಲ್ಲಿ ಬಂದು ಬಿದ್ದ. ಶ್ರೀ ಹೇಳ್ದ "ನೀನು ಬಿದ್ಯಾ ಮೇಲಕ್ಕೆ ಹೋಗೋಕೆ ದಾರಿನೇ ಇಲ್ಲ ಏನೊ ಮಾಡೋದು ಇವಾಗ" ಅಂದ ಜೋರಾಗಿ ಉಸಿರು ಬಿಡುತ್ತಾ ದೀಪು ಹೇಳ್ದಾ "ಏನಾದ್ರೂ ದಾರಿ ಇದ್ದೇ ಇರುತ್ತೆ ಕಣೋ" ಅಂತ ಹೇಳ್ತಾ ಇದ್ದಾಗ ಒಂದು ನಾಗರಹಾವು ಬುಸ್ ಅಂತು 12 ಅಡಿ ಉದ್ದ ಅಗಲ ಆಳ ಇರೋ ಹೊಂಡದಲ್ಲಿ 10 ಅಡಿ ಉದ್ದದ ಹಾವು ಕಂಡು ಇಬ್ಬರ ಉಸಿರು ನಿಲ್ಲೋದು ಮಾತ್ರ ಬಾಕಿ ಇತ್ತು ಹಾವು ಆಪ್ತರಕ್ಷಕ ಪಿಲ್ಮನಲ್ಲಿ ಇರೊ ಹಾವಿನ ತರ ಇತ್ತು.

ಮುಂದುವರಿಯುವುದು