Wednesday 25 January 2012

ಊಟ

ಊಟಕ್ಕೆ ಕೂತಾಗ
ಸಾಂಬಾರು ತಂದಾಗ
ಬಿಸಿಯಾಗಿ ಇದ್ದಾಗ
ಬಾಯ್ಸಟ್ಟು ಹೋಯಿತೀಗ||

ಅಡುಗೆಯ ನೋಡುವಾಗ
ವಿಧ ವಿಧ ತರ ಇರುವಾಗ
ಸಿಹಿತಿನಿಸು ಕಂಡಾಗ
ಬಾಯ್ನೀರು ಬಂದಾಗ
ಜಾಮೂನು ಕರೆದಾಗ
ರುಚಿನೋಡ ಹೋದಾಗ
ಮನತಡೆಯದೆ ಇರುವಾಗ
ತಿನಲು ಬಾಯೀ ತೆರೆದಾಗ
ಬಂದೆಯ ತಿನ್ನಲು ಜಾಂಗೀರ||

ಜೇನಂತ ಜಾಂಗೀರಲ್ಲಿ
ಸಿಹಿಯಾದ ತಿಂಡಿಲಿ
ಸವಿತಿನ್ನೋ ಆಸೇಲಿ
ಶುಗರಿರೋದು ನೆನಪಿರಲಿ
ಊಟವಿದು ಹಗಲಲ್ಲಿ
ಇರುವುದೇ ತಿನಿಸು ರಾತ್ರೀಲಿ
ಇಲ್ಲವಾದಲ್ಲಿ ನೋವೆಲ್ಲಿ ನಲಿವೆಲ್ಲಿ
ಹೇಳಬಾರದಿತ್ತು ಈ ವಿಷಯ ನಿನ್ನಲ್ಲಿ
ಬಾಬಾರೊ ಮಿತ್ರ ನಾನಿರೋದು ಛತ್ರ||

ಮದ್ವೇಯ ಛತ್ರದಲ್ಲಿ
ಮದ್ಯಾನ್ಹ ಊಟದಲ್ಲಿ
ಸಿಹಿತಿನಿಸು ಸಿಹಿಯಾಗಿ
ಅಡುಗೇಯು ರುಚಿಯಾಗಿ
ತಿನಿಸೆಲ್ಲ ಬರಿದಾಗಿ
ಮತ್ತೊಮ್ಮೆ ರೆಡಿಯಾಗಿ
ಕನಸಲ್ಲು ನೆನಪಾಗಿ
ನಿದ್ರೇಯು ಬರದಾಗಿ
ಬಿಸಿಯಿರಲಿ ತಂಪಿರಲಿ
ಸಿಹಿಯಿರಲಿ ಕಹಿಯಿರಲಿ
ತಿನ್ನುವಷ್ಟು ತಿನ್ನೋಣ ಬಾರಾ||

ಊಟಕ್ಕೆ ಕೂತಾಗ
ಸಾಂಬಾರು ತಂದಾಗ
ಬಿಸಿಯಾಗಿ ಇದ್ದಾಗ
ಬಾಯ್ಸಟ್ಟು ಹೋಯಿತೀಗ||

1 comment:

  1. ಸರಳ ಸುಂದರ ಕವಿತೆ..... ಹಿರಿಯ ಕಿರಿಯರೆಲ್ಲರಿಗೂ ಇಷ್ಟವಾಗುವ ತೆರದಲ್ಲಿ ಇರುವ ಕವಿತೆ....ಚೆನ್ನಾಗಿದೆ...

    ReplyDelete